ಅಬಕಾರಿ ನೀತಿ ಸಿಬಿಐ ತನಿಖೆ ಶಿಫಾರಸಿನಲ್ಲಿ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಹೆಸರಿಸಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

ನವದೆಹಲಿ: ಎಎಪಿ ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ನಡುವಿನ ಹೊಸ ಫ್ಲಾಶ್ ಪಾಯಿಂಟ್‌ನಲ್ಲಿ ಶುಕ್ರವಾರ ರಾಜಧಾನಿಯ ಪರಿಷ್ಕೃತ ಅಬಕಾರಿ ನೀತಿ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ. ದೆಹಲಿ ಅಬಕಾರಿ ನೀತಿ 2021-22 ಉಲ್ಲಂಘನೆಗಳು ಮತ್ತು “ಉದ್ದೇಶಪೂರ್ವಕ ಮತ್ತು ಸಮಗ್ರ ಕಾರ್ಯವಿಧಾನದ ಲೋಪಗಳಿಂದ … Continued

ಈ ಪುಟ್ಟ ಹಕ್ಕಿಯ ಬಣ್ಣ ಕ್ಷಣ ಕ್ಷಣಕ್ಕೂ ಬದಲಾಗುತ್ತದೆ…ಇದರಷ್ಟು ಬೆರಗುಗೊಳಿಸುವ ಹಕ್ಕಿ ನೋಡಿರಲಿಕ್ಕಿಲ್ಲ | ಬಣ್ಣ ಬದಲಾಗುವುದನ್ನು ವೀಕ್ಷಿಸಿ

ಪ್ರಕೃತಿಯು ವಿಪುಲವಾದ ಸಂಗತಿಗಳು ಮತ್ತು ವಿದ್ಯಮಾನಗಳು ನಮ್ಮನ್ನು ಸಂಪೂರ್ಣವಾಗಿ ಮಂತ್ರಮುಗ್ಧರನ್ನಾಗಿಸುತ್ತದೆ ಮತ್ತು ವಿಸ್ಮಯಗೊಳಿಸುತ್ತದೆ. ಈಗ ಇಂಥದ್ದೇ ವಿಸ್ಮಯ ಪ್ರದರ್ಶಿಸುವ ವೀಡಿಯೊವೊಂದು ವೈರಲ್‌ ಆಗಿದೆ. ನಮಗೆ ಅಚ್ಚರಿ ಮೂಡಿಸುವ ಹಮ್ಮಿಂಗ್‌ಬರ್ಡ್‌ನ ಕ್ಲಿಪ್ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿದೆ. ಇದರ ವಿಶೇಷತೆಯೆಂದರೆ, ಪಕ್ಷಿಯು ತನ್ನ ತಲೆಯನ್ನು ಅಕ್ಕಪಕ್ಕಕ್ಕೆ ತಿರುಗಿಸಿದಾಗ ಹಕ್ಕಿಯ ಬಣ್ಣ ಬೇರೆಬೇರೆ ಬಣ್ಣಕ್ಕೆ ಬದಲಾಗುತ್ತದೆ. ಈ ಹಕ್ಕಿಯ … Continued

2014 ರಿಂದ ವಿಶೇಷ ದತ್ತು ಏಜೆನ್ಸಿಗಳಲ್ಲಿ 2000ಕ್ಕೂ ಹೆಚ್ಚು ಮಕ್ಕಳು ಸಾವು: ಸರ್ಕಾರ

ನವದೆಹಲಿ: 2014ರಿಂದ ವಿಶೇಷ ದತ್ತು ಸಂಸ್ಥೆಗಳಲ್ಲಿ 2,000 ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಶುಕ್ರವಾರ ತಿಳಿಸಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು 2014 ರಿಂದ 27,085 ಮಕ್ಕಳನ್ನು ದತ್ತು ತೆಗೆದುಕೊಳ್ಳಲಾಗಿದೆ ಎಂದು ಅಂಕಿಅಂಶ ಹಂಚಿಕೊಂಡಿದ್ದಾರೆ. ಅಂಕಿಅಂಶಗಳ ಪ್ರಕಾರ, … Continued

ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಸಹಾಯಕಿ ಮನೆ ಮೇಲೆ ಇ.ಡಿ ದಾಳಿ: 20 ಕೋಟಿ ರೂ. ನಗದು ವಶ

ನವದೆಹಲಿ: ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಸಹಚರರೊಬ್ಬರ ಮನೆಯಿಂದ 20 ಕೋಟಿ ರೂ.ಗಳ ಹಣವನ್ನು ಜಾರಿ ನಿರ್ದೇಶನಾಲಯ ಇಂದು, ಶುಕ್ರವಾರ ವಶಪಡಿಸಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಆಪಾದಿತ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅರ್ಪಿತಾ ಮುಖರ್ಜಿ ಅವರ ಮನೆ ಮೇಲೆ ಇಡಿ ದಾಳಿ ನಡೆಸಿದೆ. ಈ ಮೊತ್ತವು ಎಸ್‌ಎಸ್‌ಸಿ ಹಗರಣದ ಅಪರಾಧದ ಆದಾಯ ಎಂದು … Continued

ರಾಜ್ಯದಲ್ಲಿ ಶುಕ್ರವಾರ 1,562 ಮಂದಿಗೆ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು ಶುಕ್ರವಾರ 1,562 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಹಾಗೂ 1,107 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಯಾವುದೇ ಮರಣ ದಾಖಲಾಗಿಲ್ಲ. ರಾಜಧಾನಿ ಬೆಂಗಳೂರು ನಗರದಲ್ಲಿಯೇ 1,244 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 4.67 ಮತ್ತು ಮರಣ ಶೇ.0.00 ಇದೆ. ಇಂದು, ಶುಕ್ರವಾರ 33,391 ಮಂದಿ … Continued

ನೀರವ್ ಮೋದಿಯ 250 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ

ನವದೆಹಲಿ: ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಸಂಬಂಧಿಸಿದ ಕಂಪನಿಗಳ 253.62 ಕೋಟಿ ರೂ.ಗಳ ಮೌಲ್ಯದ ರತ್ನಗಳು, ಆಭರಣಗಳು ಮತ್ತು ಬ್ಯಾಂಕ್ ಠೇವಣಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ. ಈ ಎಲ್ಲ ಚರಾಸ್ತಿಗಳು ಹಾಂಗ್‌ಕಾಂಗ್‌ನಲ್ಲಿವೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ. ಹಾಂಗ್‌ಕಾಂಗ್‌ನಲ್ಲಿರುವ ನೀರವ್ ಮೋದಿ … Continued

ನ್ಯೂಯಾರ್ಕ್‌ ಗವರ್ನರ್‌ ಚುನಾವಣೆ ಪ್ರಚಾರ ಭಾಷಣದ ವೇಳೆ ಅಮೆರಿಕ ಸಂಸದನ ಮೇಲೆ ಬ್ಲೇಡ್ ವ್ಯಕ್ತಿಯಿಂದ ದಾಳಿ | ವೀಕ್ಷಿಸಿ

ನ್ಯೂಯಾರ್ಕ್: ನ್ಯೂಯಾರ್ಕ್ ಗವರ್ನರ್ ಹುದ್ದೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಅಮೆರಿಕದ ಕಾಂಗ್ರೆಸ್ ಸದಸ್ಯ ಲೀ ಝೆಲ್ಡಿನ್ ಅವರ ಮೇಲೆ ಗುರುವಾರ ಚುನಾವಣಾ ಪ್ರಚಾರದ ವೇಳೆ ಬ್ಲೇಡ್ ಹಿಡಿದ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದಾನೆ. ಪ್ರಚಾರ ಕಾರ್ಯಕ್ರಮವೊಂದರಲ್ಲಿ ಅಮೆರಿಕ ಕಾಂಗ್ರೆಸ್‌ ಪ್ರತಿನಿಧಿ ಲೀ ಝೆಲ್ಡಿನ್ ಅವರನ್ನು ಇರಿಯಲು ಯತ್ನಿಸಿದ ಆರೋಪದ ಮೇಲೆ ಆರೋಪಿಯನ್ನು ಬಂಧಿಸಲಾಯಿತು ಮತ್ತು ಹಲ್ಲೆಯ ಯತ್ನದ … Continued

ತನಗೆ ಪ್ರಾಣ ಬೆದರಿಕೆಯ ಪತ್ರ ಬಂದ ನಂತರ ಮುಂಬೈ ಪೊಲೀಸರಿಂದ ಶಸ್ತ್ರಾಸ್ತ್ರ ಪರವಾನಗಿ ಕೋರಿದ ಬಾಲಿವುಡ್‌ ನಟ ಸಲ್ಮಾನ್ ಖಾನ್

ಮುಂಬೈ: ತಮಗೆ ಜೀವ ಬೆದರಿಕೆ ಬಂದ ನಂತರ ಬಾಲಿವುಡ್‌ ನಟ ಸಲ್ಮಾನ್ ಖಾನ್ ತಮ್ಮ ವೈಯಕ್ತಿಕ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಕೋರಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ. ಸಲ್ಮಾನ್‌ ಖಾನ್ ಅವರು ಮುಂಬೈ ಪೊಲೀಸರಿಗೆ ಶಸ್ತ್ರಾಸ್ತ್ರ ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ಶುಕ್ರವಾರ ವರದಿ ಮಾಡಿದೆ. ಕಳೆದ ತಿಂಗಳು, … Continued

ಶವವಾಗಿ ಪತ್ತೆಯಾದ ತಲಕಳ ಧರ್ಮ ಚಾವಡಿಯ ಸ್ವಾಮೀಜಿ

ಮಂಗಳೂರು: ಶ್ರೀಕೃಷ್ಣ ದೇವಿ ಪ್ರಸಾದ್ ಸ್ವಾಮೀಜಿ (51) ತಮ್ಮ ಆಶ್ರಮ ತಲಕಳ ಧರ್ಮ ಚಾವಡಿಯಲ್ಲಿ ಶುಕ್ರವಾರ (ಜುಲೈ 22) ಶವವಾಗಿ ಪತ್ತೆಯಾಗಿದ್ದಾರೆ.ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸನ್ಯಾಸ ಸ್ವೀಕರಿಸುವ ಮೊದಲು ಶ್ರೀಕೃಷ್ಣ ದೇವಿ ಪ್ರಸಾದ್ ಸ್ವಾಮೀಜಿ ಮುಂಬೈನಲ್ಲಿ ಹೋಟೆಲ್ ಉದ್ಯಮಿಯಾಗಿದ್ದರು. ಪೂರ್ವಾಶ್ರಮದಲ್ಲಿ ದೇವಿಪ್ರಸಾದ್ ಶೆಟ್ಟಿ ಹೆಸರಿನಿಂದ ಗುರುತಿಸಲ್ಪಟ್ಟಿದ್ದು, ಅವರಿಗೆ ಮದುವೆಯಾಗಿದ್ದು, ಪತ್ನಿ ಹಾಗೂ ಮಗಳಿದ್ದಾಳೆ. ನಂತರ … Continued

ರಾಜ್ಯಪಾಲರಾಗಿದ್ದಾಗ 2018ರಲ್ಲಿ ಗ್ರಾಮಸ್ಥರೊಂದಿಗಿನ ದ್ರೌಪದಿ ಮುರ್ಮು ಬುಡಕಟ್ಟು ನೃತ್ಯ ಈಗ ವೈರಲ್‌ | ವೀಕ್ಷಿಸಿ

ನವದೆಹಲಿ: ಒಡಿಶಾದಲ್ಲಿ ಕೌನ್ಸಿಲರ್ ಆಗಿ ರಾಜಕೀಯ ಜೀವನ ಆರಂಭಿಸಿ ಈಗ ಅಧ್ಯಕ್ಷರಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರು ಭಾರತದ ಮೊದಲ ಬುಡಕಟ್ಟು ಅಧ್ಯಕ್ಷೆ ಮತ್ತು ರಭಾರತದ ರಾಷ್ಟ್ರಪತಿಯಾದ ಎರಡನೇ ಮಹಿಳೆಯಾಗಿದ್ದಾರೆ. ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾದ ಯಶವಂತ್ ಸಿನ್ಹಾ ವಿರುದ್ಧ ಸುಲಭ ಜಯ ಗಳಿಸಿದರು. ಗುರುವಾರ ಮುರ್ಮು ಅವರು ಭರ್ಜರಿ ಗೆಲುವನ್ನು … Continued