ಕೋವಾಕ್ಸಿನ್ ಬೂಸ್ಟರ್ ಡೋಸ್ ಕೋವಿಡ್-19 ಹೊಸ ರೂಪಾಂತರಗಳ ವಿರುದ್ಧ ದೀರ್ಘಾವಧಿ ರೋಗನಿರೋಧಕ ಶಕ್ತಿ ನೀಡುತ್ತದೆ: ಅಧ್ಯಯನ

ನವದೆಹಲಿ: ಭಾರತದ ಸ್ಥಳೀಯ ಲಸಿಕೆ ಕೊವ್ಯಾಕಿಸಿನ್‌ (Covaxin (BBV152)) ತಯಾರಕರಾದ ಭಾರತ್ ಬಯೋಟೆಕ್, ಇತ್ತೀಚಿನ ಅಧ್ಯಯನದಲ್ಲಿ ಕೊವ್ಯಾಕ್ಸಿನ್‌ ಬೂಸ್ಟರ್ ಡೋಸ್ ಕೋವಿಡ್‌-19 ನ ಹೊಸ ರೂಪಾಂತರಗಳ ವಿರುದ್ಧ ರೋಗನಿರೋಧಕ ಶಕ್ತಿಯ ನಿರಂತರತೆಯನ್ನು ತೋರಿಸಿದೆ ಎಂದು ಸಾಬೀತಾಗಿದೆ ಎಂದು ಹೇಳಿದೆ. ಭಾರತ್ ಬಯೋಟೆಕ್ ಮತ್ತು ದೇಶಾದ್ಯಂತದ ಇತರರ ಸಹಯೋಗದೊಂದಿಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) … Continued

ಚಂದ್ರಶೇಖರ ಜೋಶಿ, ಶಿವಶಂಕರೇಗೌಡ ಸೇರಿದಂತೆ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳ ಹುದ್ದೆಗೆ ಐವರ ಹೆಸರು ಶಿಫಾರಸ್ಸು ಮಾಡಿದ ಸುಪ್ರೀಂ ಕೋರ್ಟ್‌ ಕೊಲಿಜಿಯಂ

ಬೆಂಗಳೂರು: ಐವರು ನ್ಯಾಯಾಧೀಶರನ್ನು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿದೆ. ರಾಜ್ಯ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಟಿ ಜಿ ಶಿವಶಂಕರೇಗೌಡ ಮತ್ತು ಹಾಲಿ ಬೆಂಗಳೂರಿನ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಧೀಶರಾಗಿರುವ ಚಂದ್ರಶೇಖರ ಮೃತ್ಯುಂಜಯ ಜೋಶಿ, ಬೆಂಗಳೂರಿನ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಅನಿಲ್‌ … Continued

ರಾಜ್ಯದಲ್ಲಿ ದೈನಂದಿನ ಕೊರೊನಾ ಪ್ರಕರಣ ಮತ್ತಷ್ಟು ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದೆ. ರಾಜ್ಯದಲ್ಲಿ ಇಂದು ಬುಧವಾರ ಹೊಸದಾಗಿ 1,478 ಕೊರೊನಾ ಪ್ರಕರಣಗಳು ದಾಖಲಾಗಿವೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ. ಇದೇವೇಳೆ ರಾಜ್ಯದಲ್ಲಿ 1,229 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ಮಂಗಳವಾರ ರಾಜ್ಯದಲ್ಲಿ 1,151 ಪ್ರಕರಣಗಳು ವರದಿಯಾಗಿತ್ತು. ಇಂದು 327 ಕೇಸ್ ಹೆಚ್ಚಳಗೊಂಡು 1,478ಕ್ಕೆ ಏರಿಕೆ … Continued

ಬಿ ರಿಪೋರ್ಟ್​ ಹಾಕಿ ಅನ್ಯಾಯ ಮಾಡಿದರು…ನನ್ನ ಗಂಡನ ಸಾವಿಗೆ ನ್ಯಾಯ ಸಿಕ್ಕಿಲ್ಲ: ಸಂತೋಷ​ ಪಾಟೀಲ​ ಪತ್ನಿ ಅಳಲು

ಬೆಳಗಾವಿ: ಗುತ್ತಿಗೆದಾರ ಸಂತೋಷ​ ಪಾಟೀಲ ಆತ್ಮಹತ್ಯೆ ಪ್ರಕರಣ ಸಂಬಂಧ ಉಡುಪಿ ಪೊಲೀಸರು ಜನಪತ್ರಿನಿಧಿಗಳ ನ್ಯಾಯಲಯಕ್ಕೆ ಬಿ ರಿಪೋರ್ಟ್​ ಸಲ್ಲಿಸಿದ್ದಾರೆ. ಈ ಬಗ್ಗೆ ಸಂತೋಷ ಪಾಟೀಲ ಅವರ ಪತ್ನಿ ಪ್ರತಿಕ್ರಿಯೆ ನೀಡಿದ್ದು, ಪ್ರಕರಣ ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ. ನನ್ನ ಗಂಡ ಸಂತೋಷ ಪಾಟೀಲ ಸಾವಿಗೆ ನ್ಯಾಯ ಸಿಕ್ಕಿಲ್ಲ. ತನಿಖೆ ಮೇಲೆ ಪ್ರಭಾವ ಬೀರಿದ್ದಾರೆ. ಪೊಲೀಸರು … Continued

ಬ್ರಿಟನ್‌ ಪ್ರಧಾನಿ ರೇಸ್‌: ಅಂತಿಮ ಸುತ್ತಿನಲ್ಲೂ ಮೊದಲಿಗರಾದ ರಿಷಿ ಸುನಕ್‌, ಈಗ ಅಂತಿಮವಾಗಿ ಇಬ್ಬರ ನಡುವೆ ಸ್ಪರ್ಧೆ

ಲಂಡನ್:‌ ಭಾರತೀಯ ಮೂಲದ ಸಂಸದ ಹಾಗೂ ಬ್ರಟನ್ನಿನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಮತ್ತು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಬ್ರಿಟನ್‌ ಪ್ರಧಾನಿ ಹುದ್ದೆಗೆ ಅಗ್ರ ಎರಡು ಸ್ಪರ್ಧಿಗಳಾಗಿ ಹೊರಹೊಮ್ಮಿದ್ದಾರೆ. ಕೊನೆಯ ಸುತ್ತಿನ ಮತದಾನದಲ್ಲಿ ಸುನಕ್ 137 ಮತಗಳನ್ನು ಪಡೆದು ತಮ್ಮ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಲಿಜ್ ಟ್ರಸ್ 113 ಮತಗಳನ್ನು ಪಡೆದಿದ್ದು, ಇವರಿಬ್ಬರು ಈಗ … Continued

ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ: ಈಶ್ವರಪ್ಪ ವಿರುದ್ಧ ಬಿ ರಿಪೋರ್ಟ್‌ ಸಲ್ಲಿಕೆ

ಬೆಂಗಳೂರು: ರಾಜಕೀಯವಾಗಿ ಕೋಲಾಹಲ ಸೃಷ್ಟಿಸಿದ್ದ ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರ ವಿರುದ್ಧ “ಬಿʼ ರಿಪೋರ್ಟ್‌ ಸಲ್ಲಿಸಲಾಗಿದೆ. ತನಿಖೆ ನಡೆಸಿದ ಪೊಲೀಸರು ಜನಪ್ರತಿನಿಧಿಗಳ ಕೋರ್ಟ್‌ಗೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ಈಶ್ವರಪ್ಪ-ಸಂತೋಷ್ ಮುಖಾಮುಖಿ ಭೇಟಿಯಾಗಿರಲಿಲ್ಲ ಎಂದು ಬಿ ರಿಪೋರ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಏಪ್ರಿಲ್​ … Continued

ಶಿರೂರು: ಭೀಕರ ಅಪಘಾತದಲ್ಲಿ ಟೋಲ್​ ಗೇಟ್​ನಲ್ಲಿ ಆ್ಯಂಬುಲೆನ್ಸ್ ಪಲ್ಟಿ, ನಾಲ್ವರ ಸಾವು

ಬೈಂದೂರು: ಭೀಕರ ಅಪಘಾತದಲ್ಲಿ ಅತೀ ವೇಗದಿಂದ ಬಂದ ಅಂಬುಲೈನ್ಸ್ ನಿಯಂತ್ರಣ ತಪ್ಪಿದ ಪರಿಣಾಮ ಶಿರೂರು ಟೋಲ್ ಸಮೀಪದ ಕಂಬಕ್ಕೆ, ಡಿಕ್ಕಿ ಹೊಡೆದು ಪಲ್ಟಿಯಾಗಿ ನಾಲ್ವರು ಸಾವಿಗೀಡಾಗಿದ್ದಾರೆ. ಟೋಲ್‌ ಸಿಬ್ಬಂದಿಯೂ ಗಂಭೀರವಾಗಿ ಗಾಯಗೊಂಡಿದ್ದಾರೆ. ದೂರದಿಂದ ಆಂಬುಲೆನ್ಸ್ ಬರುತ್ತಿದ್ದ ಸದ್ದು ಕೇಳಿ ಟೋಲ್​ ಗೇಟ್​ನಲ್ಲಿದ್ದ ಮೂವರು ಆಂಬುಲೆನ್ಸ್ ಸರಾಗವಾಗಿ ಹೋಗಲೆಂದು ಮಳೆಯಲ್ಲೇ ಹೊರಗೆ ಓಡಿ ಬಂದು ಬ್ಯಾರಿಕೇಡ್​​ಗಳನ್ನು ತೆಗೆಯುತ್ತಿದ್ದಾಗ … Continued

100 ಕೋಟಿ ರೂ. ಕೊಟ್ರೆ ಮಹಾರಾಷ್ಟ್ರ ಶಾಸಕನಿಗೆ ಕ್ಯಾಬಿನೆಟ್ ಸ್ಥಾನದ ಆಫರ್ ನೀಡಿದ ಗ್ಯಾಂಗ್‌: ದೂರು ದಾಖಲಿಸಿದ ಶಾಸಕ; ನಾಲ್ವರ ಬಂಧನ

ಮುಂಬೈ: ಶಾಸಕರೊಬ್ಬರಿಂದ 100 ಕೋಟಿ ರೂಪಾಯಿ ಕೊಟ್ಟರೆ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವ ಸ್ಥಾನ ಕೊಡಿಸುವುದಾಗಿ ಹೇಳಿ ವಂಚಿಸಲು ಯತ್ನಿಸಿದ್ದ ನಾಲ್ವರ ಗ್ಯಾಂಗ್‌ ಅನ್ನು ಸುಲಿಗೆ ನಿಗ್ರಹ ದಳ ಬಂಧಿಸಿದೆ. ಹೊಸದಾಗಿ ರಚನೆಯಾದ ಮಹಾರಾಷ್ಟ್ರ ಸರ್ಕಾರದಲ್ಲಿ ಖಾತೆಗಳ ಮರುಹಂಚಿಕೆ ಊಹಾಪೋಹಗಳ ಮಧ್ಯೆ ಈ ಪ್ರಕರಣ ಬೆಳಕಿಗೆ ಬಂದಿದೆ. ದೌಂಡ್‌ನ ಬಿಜೆಪಿ ಶಾಸಕ ರಾಹುಲ್ ಕುಲ್ ಅವರು ತಮ್ಮ … Continued

ಕಡೆಗಣಿಸಿದ ಆರೋಪ: ಉತ್ತರ ಪ್ರದೇಶ ಸಿಎಂ ಯೋಗಿ ಸಂಪುಟಕ್ಕೆ ರಾಜೀನಾಮೆ ನೀಡಿದ ಸಚಿವ..?! ಮತ್ತೊಬ್ಬ ಸಚಿವರಿಗೆ ವರ್ಗಾವಣೆ ಬಗ್ಗೆ ಅಸಮಾಧಾನ

ಲಕ್ನೊ: ತಮ್ಮ ಆದೇಶಗಳನ್ನು ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವು ಜಲಶಕ್ತಿ ಇಲಾಖೆಯ ರಾಜ್ಯ ಸಚಿವ (MoS) ದಿನೇಶ್ ಖತಿಕ್ ಬುಧವಾರ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಹಸ್ತಿನಾಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಖತಿಕ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ … Continued

ಉಪ್ಪುಂದ: ಚಾಕಲೇಟ್ ಗಂಟಲಲ್ಲಿ ಸಿಲುಕಿ 6 ವರ್ಷದ ಬಾಲಕಿ ಸಾವು

ಬೈಂದೂರು: ಚಾಕೊಲೇಟ್​ ತಿನ್ನುವಾಗ ಪ್ಲಾಸ್ಟಿಕ್‌ ಕವರ್​ ಸಮೇತ ನುಂಗಿದ 1ನೇ ತರಗತಿ ವಿದ್ಯಾರ್ಥಿನಿ ಸ್ಥಳದಲ್ಲೇ ಉಸಿರುಗಟ್ಟಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬವಳಾಡಿ ಗ್ರಾಮದಲ್ಲಿ ಸಂಭವಿಸಿದೆ. ಮೃತ ಬಾಲಕಿಯನ್ನು ಬೈಂದೂರು ತಾಲೂಕು ಬವಳಾಡಿ ಮೂಲದ ಸಮನ್ವಿ (6) ಎಂದು ಗುರುತಿಸಲಾಗಿದೆ. ಬಾಲಕಿ ಉಪ್ಪುಂದ ಸ್ಥಳೀಯ ಆಂಗ್ಲ ಮಾಧ್ಯಮ ಸ್ಕೂಲ್‌ನ 1ನೇ ತರಗತಿ … Continued