ಕಾರವಾರ: ಕೆಡಿಪಿ ಸಭೆಯಲ್ಲಿ ಸಚಿವದ್ವಯರ ಸಮ್ಮುಖದಲ್ಲೇ ಬಿಜೆಪಿ ಶಾಸಕರಿಬ್ಬರ ವಾಕ್ಸಮರ..!

ಕಾರವಾರ: ಕಾರವಾರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವರೆದುರೇ ಬಿಜೆಪಿ ಶಾಸಕರು ಪರಸ್ಪರ ವಾಗ್ವಾದ ಮಾಡಿಕೊಂಡ ವಿದ್ಯಮಾನ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವರಾದ ಶಿವರಾಮ ಹೆಬ್ಬಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಸಮ್ಮುಖದಲ್ಲೇ ನೆರೆ ಪರಿಹಾರ ಅನುದಾನ ವಿಚಾರಕ್ಕಾಗಿ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ್ … Continued

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ

ನವದೆಹಲಿ: ಟಾಟಾ ಸನ್ಸ್‌ನ ಎರಡನೇ ಸಲ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಶುಕ್ರವಾರ ಮರು ನೇಮಕಗೊಂಡಿದ್ದಾರೆ. ಮರು ನೇಮಕಾತಿಯನ್ನು ಮಂಡಳಿಯು ಅನುಮೋದಿಸಿದೆ ಎಂದು ಟಾಟಾ ಸನ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಫೆಬ್ರವರಿ 11ರಂದು ನಡೆದ ಸಭೆಯಲ್ಲಿ, ಟಾಟಾ ಸನ್ಸ್ ಮಂಡಳಿಯು ಕಳೆದ ಐದು ವರ್ಷಗಳ ಪ್ರಗತಿ ಪರಿಶೀಲಿಸಿತು ಮತ್ತು ಅದರ ಕಾರ್ಯನಿರ್ವಾಹಕ ಅಧ್ಯಕ್ಷ ಎನ್ … Continued

ಹಿಜಾಬ್ ವಿವಾದ: ಕಾಲೇಜುಗಳನ್ನು ಪುನರಾರಂಭಿಸುವ ಬಗ್ಗೆ ಫೆಬ್ರವರಿ 14ರಂದು ನಿರ್ಧಾರ ಸಾಧ್ಯತೆ ಎಂದ ಶಿಕ್ಷಣ ಸಚಿವರು

ಬೆಂಗಳೂರು: ಫೆಬ್ರವರಿ 14 ರಂದು ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳನ್ನು ಪುನರಾರಂಭಿಸುವ ಬಗ್ಗೆ ಸರ್ಕಾರ ನಿರ್ಧರಿಸುವ ಸಾಧ್ಯತೆಯಿದೆ ಎಂದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಶುಕ್ರವಾರ ಹೇಳಿದ್ದಾರೆ.. ಫೆಬ್ರವರಿ 14ರಿಂದ 10ನೇ ತರಗತಿಯ ವರೆಗಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲೆಗಳು ಆರಂಭವಾಗಲಿದ್ದು, ನಂತರ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳಿಗೆ ತರಗತಿಗಳನ್ನು … Continued

ಚಲನಚಿತ್ರ ನಿರ್ದೇಶಕ ರವಿ ಟಂಡನ್ ನಿಧನ : ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಪುತ್ರಿ, ಬಾಲಿವುಡ್‌ ನಟಿ ರವೀನಾ ಟಂಡನ್

ಮುಂಬೈ: ಬಾಲಿವುಡ್‌ ನಟಿ, ರವೀನಾ ಟಂಡನ್ ಅವರ ತಂದೆ ಹಾಗೂ ಖ್ಯಾತ ನಿರ್ದೇಶಕ, ನಿರ್ಮಾಪಕ ಮತ್ತು ಬರಹಗಾರ ರವಿ ಟಂಡನ್ ಅವರು 85ನೇ ವಯಸ್ಸಿನಲ್ಲಿ ಶುಕ್ರವಾರ ನಿಧನರಾದರು. ಅವರ ಅಂತಿಮ ವಿಧಿಗಳನ್ನು ಸಂಜೆ ನೆರವೇರಿಸಲಾಯಿತು. ಪುತ್ರಿ ರವೀನಾ ಟಂಡನ್‌ ಅವರೇ ತಮ್ಮ ತಂದೆಯ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಿದರು ಮತ್ತು ಆಕೆಯ ಸಹೋದರ ರಾಜೀವ್ ಟಂಡನ್ ಮತ್ತು … Continued

ಚರ್ಮಕ್ಕೆ ಚರ್ಮ ತಾಗಿದರೆ ಮಾತ್ರ ಲೈಂಗಿಕ ದೌರ್ಜನ್ಯ ಎಂದು ವಿವಾದಿತ ತೀರ್ಪು ನೀಡಿದ್ದ ಜಡ್ಜ್‌ ರಾಜೀನಾಮೆ

ಮುಂಬೈ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ‘ಲೈಂಗಿಕ ದೌರ್ಜನ್ಯ’ ಎಂದು ವ್ಯಾಖ್ಯಾನಿಸುವ ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಪುಷ್ಪಾ ಗಣೆಡಿವಾಲಾ ಅವರು ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಜಸ್ಟಿಸ್ ಗಣೆಡಿವಾಲಾ ಅವರು ಗುರುವಾರ ತಮ್ಮ ಹೆಚ್ಚುವರಿ ನ್ಯಾಯಾಧೀಶರಾಗಿ ಅಧಿಕಾರಾವಧಿ ಕೊನೆಗೊಳ್ಳುವ ಒಂದು … Continued

6 ವರ್ಷಗಳ ಕಾಲ ಕುತ್ತಿಗೆಗೆ ಸಿಲುಕಿಕೊಂಡಿದ್ದ ಟೈರ್‌ನಿಂದ ಬೃಹತ್‌ ಮೊಸಳೆ ಈಗ ಮುಕ್ತ….ವೀಕ್ಷಿಸಿ

ಪಾಲಿ (ಇಂಡೋನೇಶ್ಯಾ): ಬಳಸಿದ ಮೋಟಾರ್‌ಸೈಕಲ್ ಟೈರ್ ಅನ್ನು ಆರು ವರ್ಷಗಳಿಂದ ಕುತ್ತಿಗೆಗೆ ಸುತ್ತಿಕೊಂಡಿದ್ದ ಹುಚ್ಚು ಮೊಸಳೆಯನ್ನು ಇಂಡೋನೇಷ್ಯಾದ ಪಕ್ಷಿ ಹಿಡಿಯುವವರೊಬ್ಬರು ಅವಿರತ ಪ್ರಯತ್ನದಲ್ಲಿ ಅಂತಿಮವಾಗಿ ಟೈರ್‌ನಿಂದ ಮುಕ್ತಗೊಳಿಸಿದ್ದಾರೆ, ಇದನ್ನು ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳು ಬುಧವಾರ ಒಂದು ಮೈಲಿಗಲ್ಲು ಎಂದು ಶ್ಲಾಘಿಸಿದ್ದಾರೆ. 4.5-ಮೀಟರ್ (14.8-ಅಡಿ) ಉಪ್ಪುನೀರಿನ ಹೆಣ್ಣು ಮೊಸಳೆಯು ಸೆಂಟ್ರಲ್ ಸುಲವೆಸಿಯ ರಾಜಧಾನಿ ಪಾಲುದಲ್ಲಿನ ಜನರಿಗೆ ಐಕಾನ್ … Continued

ದೇಶದ ಹಲವೆಡೆ ಏರ್ ಟೆಲ್ ನೆಟ್ವರ್ಕ್ ಡೌನ್; ಈಗ ಸರಿಪಡಿಸಲಾಗಿದೆ ಎಂದ ಕಂಪನಿ

ನವದೆಹಲಿ: ದೇಶಾದ್ಯಂತ ಏರ್‌ಟೆಲ್ ಬಳಕೆದಾರರು ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಹಲವಾರು ಬಳಕೆದಾರರು ಟ್ವಿಟರ್‌ನಲ್ಲಿ ತಮ್ಮ ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಥಟ್ಟನೆ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ವರದಿ ಮಾಡಿದ್ದಾರೆ. ಹಲವು ಬಳಕೆದಾರರಿಗೆ ತಮ್ಮ ಮೊಬೈಲ್ ಫೋನ್‌ಗಳಿಂದ ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಹ ಸಾಧ್ಯವಾಗಲಿಲ್ಲ. ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಸೇವೆಗಳ ಹೊರತಾಗಿ, … Continued

ಎಸ್‌ಪಿ ನಾಯಕನ ಪ್ಲಾಟ್‌ನಲ್ಲಿ ದಲಿತ ಮಹಿಳೆ ಶವ ಪತ್ತೆ, ಮಾಜಿ ಸಚಿವರ ಮಗನ ಕೈವಾಡದ ಬಗ್ಗೆ ಮೊದಲೇ ಅಖಿಲೇಶ್‌ ಯಾದವ್‌ ಬಳಿ ನ್ಯಾಯಕ್ಕಾಗಿ ಮನವಿ ಮಾಡಿದ್ದ ತಾಯಿ

ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ನಡುವೆ, ಅಖಿಲೇಶ್ ಯಾದವ್ ಸರ್ಕಾರದ ಮಾಜಿ ಸಚಿವರೊಬ್ಬರ ಜಾಗದಲ್ಲಿ ದಲಿತ ಮಹಿಳೆಯ ಶವ ಪತ್ತೆಯಾಗಿದೆ ಎಂಬ ಸುದ್ದಿ ರಾಜ್ಯದಲ್ಲಿ ರಾಜಕೀಯ ಕಾವು ಹೆಚ್ಚಿಸಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಬಿಜೆಪಿ ಮತ್ತು ಬಿಎಸ್ಪಿ ನ್ಯಾಯ ವಿಳಂಬಕ್ಕಾಗಿ ಅವರ ಮೇಲೆ ದಾಳಿ ನಡೆಸಿವೆ. ಶವಪರೀಕ್ಷೆಯಲ್ಲಿ ಯುವತಿಯ ಕತ್ತು ಹಿಸುಕಿ … Continued

ಹಿಜಾಬ್- ಕೇಸರಿ ವಿವಾದ ಬಗೆಹರಿಸಲು ನಾನು ಮಧ್ಯಸ್ಥಿಕೆ ವಹಿಸಲು ಸಿದ್ದ: ಹೊರಟ್ಟಿ

ಹುಬ್ಬಳ್ಳಿ: ಹಿಜಾಬ್- ಕೇಸರಿ ವಿವಾದ ರಾಜಕೀಯಮಯವಾಗಿದ್ದು, ಸಮಸ್ಯೆ ಬಗೆಹರಿಸಲು ನಾನು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಈ ಸಮಸ್ಯೆ ಬಗೆಹರಿಸುವಲ್ಲಿ ಎಡವಿದೆ. ಅದು ತನ್ನ ಜವಾಬ್ದಾರಿಯಿಂದ ಹೊರಳಿಗದೆ‌. ಪ್ರಕರಣದ ಬಗ್ಗೆ ಸರ್ಕಾರಕ್ಕೆ ಗಂಭೀರತೆ ಇಲ್ಲ ಎಂದ ಅವರು ಶಾಲಾ-ಕಾಲೇಜುಗಳಿಗೆ ರಜೆ ಕೊಟ್ಟದ್ದು … Continued

ಹಿಜಾಬ್‌ ವಿವಾದ: ಹೈಕೋರ್ಟ್ ಮಧ್ಯಂತರ ಆದೇಶ ಪ್ರಕಟ..ಆದೇಶದಲ್ಲಿ ಏನಿದೆ..?

ಬೆಂಗಳೂರು: ಕೆಲವು ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ಮಾಡಿರುವ ವಿಚಾರವನ್ನು ನಿರ್ಧರಿಸುವವರೆಗೆ ಹಿಜಾಬ್, ಕೇಸರಿ ಶಾಲು (ಭಾಗ್ವಾ) ಅಥವಾ ಬೇರಾವುದೇ ಧಾರ್ಮಿಕ ವಸ್ತ್ರ ಧರಿಸಿಕೊಂಡು ಕಾಲೇಜಿಗೆ ತೆರಳದಂತೆ ವಿದ್ಯಾರ್ಥಿಗಳಿಗೆ ಆದೇಶಿಸಿ ಕರ್ನಾಟಕ ಹೈಕೋರ್ಟ್‌ ಗುರುವಾರ ಮಧ್ಯಂತರ ಆದೇಶ ಮಾಡಿದೆ. ಆದೇಶದ ಪ್ರತಿಯನ್ನ ಶುಕ್ರವಾರ ಹೈಕೋರ್ಟ್‌ನ ವೆಬ್‌ತಾಣದಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದನ್ನು ನಿಷೇಧಿಸಿ … Continued