ವಿಶೇಷ ಸಾಮರ್ಥ್ಯವುಳ್ಳ ಅಂಗವಿಕಲ ವ್ಯಕ್ತಿಗೆ ತಮ್ಮ ಕಂಪನಿಯಲ್ಲಿ ಕೆಲಸ ನೀಡಿ ಕೊಟ್ಟ ಮಾತು ಉಳಿಸಿಕೊಂಡ ಆನಂದ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಪೋಸ್ಟ್‌ಗಳಿಗಾಗಿ ಟ್ವಿಟರ್‌ನಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಅದರೊಂದಿಗೆ ಅವರು ತಮ್ಮ ಪರೋಪಕಾರಿ ಚಟುವಟಿಕೆಗಳಿಂದ ನೆಟಿಜನ್‌ಗಳ ಹೃದಯದಲ್ಲಿ ಶಾಶ್ವತ ಸ್ಥಾನ ಗಳಿಸಿದ್ದಾರೆ. ಕಳೆದ ವರ್ಷ, ಡಿಸೆಂಬರ್‌ನಲ್ಲಿ, ಮಹೀಂದ್ರಾ ಟ್ವಿಟರ್‌ನಲ್ಲಿ ದೆಹಲಿಯ ಕ್ವಾಡ್ರುಪಲ್ ಅಂಗವಿಕಲನ ಕುರಿತು ‘ವಿಸ್ಮಯಕಾರಿ’ ಪೋಸ್ಟ್‌ ಮಾಡಿದ್ದರು. ಆ ವ್ಯಕ್ತಿಯ ಹೋರಾಟದ ಮನೋಭಾವದಿಂದ ಅವರು ಪ್ರಭಾವಿತರಾದರು ಹಾಗೂ ಆತನಿಗೆ ಸಹಾಯ … Continued

ಗಮನಿಸಿ…ದ್ವಿತೀಯ ಪಿಯು ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ

ಬೆಂಗಳೂರು : 2021-22ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು (Model Question Papers) ಬಿಡುಗಡೆ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್‌ ತಿಳಿಸಿದ್ದಾರೆ. ಟ್ವಿಟ್‌ ಮೂಲಕ ಮಾಹಿತಿ ನೀಡಿರುವ ಸಚಿವರು, “2021-22ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನ ಬಿಡುಗಡೆ … Continued

ಬೆಂಗಳೂರು: 10 ದಿನಗಳಲ್ಲಿ ಎರಡನೇ ಬಸ್‌ನಲ್ಲಿ ಬೆಂಕಿ, ತಯಾರಕರಿಂದ ಸುರಕ್ಷತಾ ಆಡಿಟ್‌ ಕೇಳಿದ ಬಿಎಂಟಿಸಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಎರಡನೇ ಬಸ್‌ಗೆ 10 ದಿನಗಳ ಅವಧಿಯಲ್ಲಿ ಬೆಂಕಿ ಹೊತ್ತಿಕೊಂಡ ನಂತರ, ನಿಗಮವು ತಾನು ಪೂರೈಸಿದ ಎಲ್ಲಾ ಬಸ್‌ಗಳ ಸುರಕ್ಷತೆಯ ಮೌಲ್ಯಮಾಪನವನ್ನು ನಡೆಸುವಂತೆ ತಯಾರಕ ಕಂಪನಿಗೆ ಪತ್ರ ಬರೆದಿದೆ. ಎರಡೂ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಬುಧವಾರ, ದಕ್ಷಿಣ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಬಳಿಯ ನಂದಾ ಟಾಕೀಸ್ ರಸ್ತೆಯ … Continued

ಮಮತಾ ಬ್ಯಾನರ್ಜಿಗೆ ಮುಂಬೈ ಕೋರ್ಟ್​ನಿಂದ ಸಮನ್ಸ್​; ಮಾ.2ರಂದು ವಿಚಾರಣೆಗೆ ಹಾಜರಾಗಲು ಸೂಚನೆ

ಮುಂಬೈ: ಮುಂಬೈ ನ್ಯಾಯಾಲಯ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಸಮನ್ಸ್​ ನೀಡಿದ್ದು, ಮಾರ್ಚ್​ 2ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. 2021ರ ಡಿಸೆಂಬರ್​ನಲ್ಲಿ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಎದ್ದುನಿಂತು ಗೌರವ ತೋರಿಸಲಿಲ್ಲ. ಈ ಮೂಲಕ ರಾಷ್ಟ್ರಗೀತೆಗೆ ಅವಮಾನಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಮನ್ಸ್​ ಜಾರಿ ಮಾಡಿರುವ ನ್ಯಾಯಾಲಯ, … Continued

ಪಂಜಾಬ್ ಚುನಾವಣೆ: ಸಿಎಂ ರೇಸ್‌ನಲ್ಲಿಲ್ಲ, ಹಿಂದೂ ಎಂಬ ಕಾರಣಕ್ಕೆ ತಿರಸ್ಕರಿಸಿದ್ದಕ್ಕೆ ನೋವಾಗಿದೆ-ಕಾಂಗ್ರೆಸ್‌ ನಾಯಕ ಸುನೀಲ್ ಜಾಖರ್

ಪಂಜಾಬ್ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಪೈಪೋಟಿ ಪಕ್ಷದೊಳಗೆ ಬಿರುಕು ಮೂಡಿಸಿದೆ. ಹಿಂದು ಎಂಬ ಕಾರಣಕ್ಕೆ ನನ್ನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ನನ್ನನ್ನು ತಿರಸ್ಕರಿಸಿದ್ದರಿಂದ ಬೇಸರಗೊಂಡಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಸುನೀಲ್ ಜಾಖರ್ ಹೇಳಿದ್ದಾರೆ. ‘ದೆಹಲಿಯಲ್ಲಿ ಕುಳಿತಿರುವ ಸಲಹೆಗಾರರು ಮುಖ್ಯಮಂತ್ರಿ ಹುದ್ದೆಗೆ ಸಿಖ್ ಮುಖ ಸೂಕ್ತ ಎಂದು ಹೇಳಿದ್ದಾರೆ’ ಎಂಬುದು ತನಗೆ ನೋವಾಗಿದೆ ಎಂದು ಜಾಖರ್ ಹೇಳಿದ್ದಾರೆ. “ಪಂಜಾಬ್ … Continued

ಮೃಗಾಲಯದ ಕರಡಿ ಬೋನಿಗೆ 3 ವರ್ಷದ ಮಗುವನ್ನು ಎಸೆದ ಮಹಿಳೆ..! ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ತಾಯಿಯೊಬ್ಬಳು ತನ್ನ 3 ವರ್ಷದ ಮಗುವನ್ನು ಮೃಗಾಲಯದಲ್ಲಿದ್ದ ಕರಡಿ ಬೋನಿಗೆ ಎಸೆದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆ ಉಜ್ಬೇಕಿಸ್ತಾನದ ಮೃಗಾಲಯವೊಂದರಲ್ಲಿ ನಡೆದಿದ್ದು, ಮಗುವನ್ನು ಎತ್ತಿಕೊಂಡಿದ್ದ ಮಹಿಳೆ ಪ್ರವಾಸಿಗರ ಎದುರೇ ಇದ್ದಕ್ಕಿದ್ದಂತೆ ಕೈಯಲ್ಲಿದ್ದ ಹೆಣ್ಣು ಮಗುವನ್ನು ಕರಡಿಯ ಬಳಿ ಎಸೆದಿದ್ದಾಳೆ. ಘಟನೆ ಮೃಗಾಲಯದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಡೈಲಿ ಮೇಲ್ ವರದಿಯ ಪ್ರಕಾರ ಮಹಿಳೆಯ ಮಗುವನ್ನು … Continued

ಕಾರು-ಟ್ರಕ್‌ ಡಿಕ್ಕಿ: ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು, ಮತ್ತಿಬ್ಬರು ಗಂಭೀರ

ಹುಣಸೂರು : ಕಾರು ಮತ್ತು ಟ್ರಕ್ ನಡುವೆ ಬುಧವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹುಣಸೂರು ತಾಲೂಕಿನ ಮೈಸೂರು- ಹಾಸನ ಹೆದ್ದಾರಿಯ ಹೊಸರಾಮನಹಳ್ಳಿ ಬಳಿ ಅಪಘಾತ ನಡೆದಿದ್ದು, ಮೃತರನ್ನು ವಿದ್ಯಾರ್ಥಿಗಳಾದ ಮೌಳೇಶ್ವರ ರೆಡ್ಡಿ ಹಾಗೂ ತೇಜಸ್ ಎಂದು ಗುರುತಿಸಲಾಗಿದೆ. ಇವರು ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ … Continued

ಫೆ.14ರಂದು ಪರಿಷತ್‌ ಸ್ಥಾನಕ್ಕೆ ರಾಜೀನಾಮೆ, ಅಂದೇ ನನ್ನ ಮುಂದಿನ ರಾಜಕೀಯ ನಿರ್ಧಾರ ಪ್ರಕಟ: ಸಿಎಂ ಇಬ್ರಾಹಿಂ

ಮೈಸೂರು: ಫೆಬ್ರವರಿ 14 ರಂದು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅಂದೇ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಹೊಸ ಪಕ್ಷ ಕಟ್ಟುವುದಿಲ್ಲ. ಜನಾಭಿಪ್ರಾಯ ಸಂಗ್ರಹಿಸಿ ಯಾವ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂದು ನಿರ್ಧರಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಅಧ್ಯಾಯ ಮುಗಿದು ಹೋಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ … Continued

ಈಗ ಕುಂದಾಪುರ ಕಾಲೇಜಿನಲ್ಲೂ ಹಿಜಾಬ್ – ಕೇಸರಿ ಶಾಲು ವಿವಾದ

ಕುಂದಾಪುರ: ಕಳೆದ ಕೆಲ ದಿನಗಳಿಂದ ಉಡುಪಿಯಲ್ಲಿನ ಹಿಜಾಬ್ ವಿವಾದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ವಿವಾದ ಹೈಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ಕುಂದಾಪುರದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಹಿಜಾಬ್ ಕೇಸರಿ ಶಾಲು ವಿವಾದ ಭುಗಿಲೆದ್ದಿದೆ. ಬುಧವಾರ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರ ಸಭೆ ವಿಫಲವಾಗಿದೆ. ಕುಂದಾಪುರದ ಜೂನಿಯರ್ ಕಾಲೇಜಿಗೆ (ಸರಕಾರಿ‌ ಪದವಿ … Continued

ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ ರಾವ್ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್​ ರಾವ್​ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಡಾ. ರಾಜ್​ಕುಮಾರ್​ ಸೇರಿದಂತೆ ಅನೇಕ ಸ್ಟಾರ್​ ಕಲಾವಿದರ ಜೊತೆ ಅಶೋಕ್​ ರಾವ್​ ಮಂಗಳವಾರ ರಾತ್ರಿ 12.30ಕ್ಕೆ ಅವರು ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ. ಪತ್ನಿ, ಹಾಗೂ ಮಗನನ್ನು ಅಶೋಕ್​ ರಾವ್​ ಅಗಲಿದ್ದಾರೆ. … Continued