ಉತ್ತರ ಪ್ರದೇಶ ಚುನಾವಣೆ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ..!

ಹಾಪುರ(ಉತ್ತರ ಪ್ರದೇಶ): ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇದಲ್ಲಿ ಛಜರ್ಸಿ ಟೋಲ್ ಪ್ಲಾಜಾ ಬಳಿ ತನ್ನ ವಾಹನದ ಮೇಲೆ ಕನಿಷ್ಠ 3-4 ಸುತ್ತು ಗುಂಡುಗಳನ್ನು ಹಾರಿಸಲಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಗುರುವಾರ ಆರೋಪಿಸಿದ್ದಾರೆ. ಎಐಎಂಐಎಂ ಮುಖ್ಯಸ್ಥರು ಉತ್ತರಪ್ರದೇಶದ ಮೀರತ್‌ನ ಕಿಥೌರ್‌ನಲ್ಲಿ ಚುನಾವಣಾ ಸಂಬಂಧಿತ ಕಾರ್ಯಕ್ರಮದ ನಂತರ ದೆಹಲಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಮೀರತ್‌ನ … Continued

ಗಾಲ್ವಾನ್ ಘರ್ಷಣೆಯಲ್ಲಿ ಪಾಲ್ಗೊಂಡ ಸೈನಿಕನಿಗೆ ಜ್ಯೋತಿ ಹೊತ್ತೊಯ್ಯುವ ಹೊಣೆ ನೀಡಿದ ಚೀನಾ: ಭಾರತದ ರಾಜತಾಂತ್ರಿಕರಿಂದ ಬೀಜಿಂಗ್ ಒಲಿಂಪಿಕ್ಸ್ ಬಹಿಷ್ಕಾರ

ನವದೆಹಲಿ: ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಅಥವಾ ಸಮಾರೋಪ ಸಮಾರಂಭದಲ್ಲಿ ಭಾರತೀಯ ರಾಯಭಾರಿ ಭಾಗವಹಿಸುವುದಿಲ್ಲ. 2022ರ ಚಳಿಗಾಲದ ಒಲಿಂಪಿಕ್ಸ್‌ಗೆ ಚೀನಾ ಗಾಲ್ವಾನ್ ಸೈನಿಕನಿಗೆ ಜ್ಯೋತಿ ಹೊತ್ತೊಯ್ಯುವ ಜವಾಬ್ದಾರಿ ನೀಡಿದೆ ಎಂಬ ವರದಿಗಳ ನಂತರ ಚೀನಾ ಒಲಿಂಪಿಕ್ಸ್ ಅನ್ನು ರಾಜಕೀಯಗೊಳಿಸಲು ಆಯ್ಕೆ ಮಾಡಿಕೊಂಡಿರುವುದು ವಿಷಾದನೀಯ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಹೇಳಿದ್ದಾರೆ. 2020 … Continued

ಪ್ರಧಾನಿ ಮೋದಿ ಸೇನಾ ಸಮವಸ್ತ್ರ ಧರಿಸಿದ ಪ್ರಕರಣ: ಪ್ರಧಾನಿ ಕಚೇರಿಗೆ ನೋಟಿಸ್‌ ಜಾರಿ ಮಾಡಿದ ಉತ್ತರ ಪ್ರದೇಶ ಕೋರ್ಟ್‌

ನವದೆಹಲಿ: ಕಳೆದ ವರ್ಷ ಕಾಶ್ಮೀರಕ್ಕೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇನಾ ಸಮವಸ್ತ್ರವನ್ನು ಧರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಸಂಬಂಧಿಸಿದಂತೆ ಪ್ರಧಾನಿ ಕಚೇರಿಗೆ ಪ್ರಯಾಗ್‌ರಾಜ್‌ನ ಜಿಲ್ಲಾ ನ್ಯಾಯಾಲಯವು ನೋಟಿಸ್‌ ಜಾರಿಗೊಳಿಸಿದೆ. ಈ ಕುರಿತು ದೈನಿಕ್‌ ಭಾಸ್ಕರ್‌ ಪತ್ರಿಕೆ ವರದಿ ಮಾಡಿದ್ದು ವಕೀಲ ರಾಕೇಶ್‌ನಾಥ್‌ ಪಾಂಡೆ ಎನ್ನುವವರು ಸಿಆರ್‌ಪಿಸಿ ಸೆಕ್ಷನ್‌ 156(3)ರ ಅಡಿ ದಾಖಲಿಸಿರುವ … Continued

ಕಾರವಾರ: ಡೆತ್ ನೋಟ್ ಬರೆದಿಟ್ಟು ಹೊಟೇಲಿನಲ್ಲಿ ಸಹಾಯಕ ಕಮಿಷನರ್ ಕಚೇರಿ ನೌಕರ ಆತ್ಮಹತ್ಯೆ

ಕಾರವಾರ: ನಗರದ ಉಪ ವಿಭಾಗಾಧಿಕಾರಿಗಳ ಕಚೇರಿ ನೌಕರನೋರ್ವ ಖಾಸಗಿ ಹೊಟೇಲಿನ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ಹೊನ್ನಾವರ ಮೂಲದ ಈಶ್ವರ ಭಟ್ಟ (38) ನೇಣಿಗೆ ಶರಣಾದ ಎಂದು ಗುರುತಿಸಲಾಗಿದೆ. ಇವರು ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನನ್ನ ಅನಾರೋಗ್ಯದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಸಾವಿಗೆ ನಾನೇ … Continued

ಗೇಟ್‌ 2022 ಪರೀಕ್ಷೆ ಮುಂದೂಡುವ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸ್ನಾತಕೋತ್ತರ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಲು ನಡೆಸಲಾಗುವ ಗೇಟ್‌ -2022 ಪರೀಕ್ಷೆ ಮುಂದೂಡಿಕೆಗೆ ಕೋರಿ ಸಲ್ಲಿಸಲಾಗಿದ್ದ ಮನವಿಗಳನ್ನು ಸುಪ್ರೀಂ ಕೋರ್ಟ್‌ ಗುರುವಾರ ವಜಾಗೊಳಿಸಿದೆ. ಇದು ಸರ್ಕಾರದ ನೀತಿನಿರೂಪಣೆಯ ಭಾಗವಾಗಿದ್ದು ಸರ್ಕಾರದ ಪ್ರಾಧಿಕಾರಿಗಳು ಈ ಬಗ್ಗೆ ನಿರ್ಧಾರ ಮಾಡಬೇಕು. ಇದರಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಮಾಡಿದರೆ ಗೊಂದಲಕ್ಕೆ ಕಾರಣವಾಗಲಿದೆ ಎಂದು ನ್ಯಾ. ಡಿ ವೈ ಚಂದ್ರಚೂಡ್‌, ನ್ಯಾ. … Continued

ಮ್ಯಾಜಿಕ್ ಟ್ರಿಕ್ ನೋಡಿ ನಂತರ ದಿಗ್ಭ್ರಮೆಗೊಂಡ ಮೃಗಾಲಯದ ಕೋತಿ…! ದೃಶ್ಯ ವಿಡಿಯೊದಲ್ಲಿ ಸೆರೆ

ಮ್ಯಾಜಿಕ್ ತಂತ್ರಗಳು ಎಲ್ಲಾ ವಯಸ್ಸಿನವರನ್ನೂ ವಿಸ್ಮಯಗೊಳಿಸುತ್ತದೆ. ಮಕ್ಕಳಾಗಿರಲಿ ಅಥವಾ ದೊಡ್ಡವರಾಗಿರಲಿ, ಯಾರಾದರೂ ತಮ್ಮ ಕಿವಿಯಿಂದ ನಾಣ್ಯವನ್ನು ತೆಗೆದರೆ, ಅವರು ಸಂತೋಷದಿಂದ ಚಪ್ಪಾಳೆ ತಟ್ಟುತ್ತಾರೆ. ಆದರೆ ಈಗ ಮೆಕ್ಸಿಕೋದ ಮೃಗಾಲಯದ ಮಂಗವೊಂದು ಇದೇ ರೀತಿಯ ಅಭಿವ್ಯಕ್ತಿಯನ್ನು ಪ್ರದರ್ಶಿಸಿದ್ದು, ಅದರ ವಿಡಿಯೊ ವೈರಲ್ ಆಗುತ್ತಿದೆ. ಜಾದೂ ನೋಡಿದ ಮಂಗನ ಆಶ್ಚರ್ಯಕರ ಮುಖವು ನಿಮ್ಮ ಅಚ್ಚರಿಗೂ ಕಾರಣವಾಗುತ್ತದೆ. ಆರಂಭದಲ್ಲಿ ಟಿಕ್‌ಟಾಕ್‌ನಲ್ಲಿ … Continued

ಏನಿದು ಅ(ವ್ಯ)ವಸ್ಥೆ…ಕಾರಿನ ಹೆಡ್‌ಲೈಟ್‌ಗಳ ಬೆಳಕಿನಲ್ಲಿ 12ನೇ ತರಗತಿಯ ಪರೀಕ್ಷೆ ಬರೆದ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು..!

ಪಾಟ್ನಾ: ಕಾರಿನ ಹೆಡ್‌ಲೈಟ್‌ಗಳ ಬೆಳಕಿನಲ್ಲಿ ಪರೀಕ್ಷೆ ಬರೆದಿರುವ ವಿಚಿತ್ರ ಘಟನೆ ನಡೆದಿದೆ. ಮಂಗಳವಾರ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ 12 ನೇ ತರಗತಿ (ಮಧ್ಯಂತರ) ಪರೀಕ್ಷೆಯನ್ನು ಕಾರ್ ಹೆಡ್‌ಲೈಟ್‌ನಲ್ಲಿ ಬರೆದಿದ್ದಾರೆ. ಈ ಸಂಬಂಧ ಪೂರ್ವ ಚಂಪಾರಣ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿರ್ಷತ್ ಕಪಿಲ್ ಅಶೋಕ್ ಅವರು ಮಹಾರಾಜ್ … Continued

ಶಾಲಾ-ಕಾಲೇಜುಗಳಿಗೆ ಯಾರೂ ಹಿಜಾಬ್, ಕೇಸರಿ ಶಾಲು ಧರಿಸಿ ಬರುವಂತಿಲ್ಲ: ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು : ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಎಂದು ಈಗಾಗಲೇ ಶಿಕ್ಷಣ ಸಚಿವರು ಹೇಳಿದ್ದಾರೆ. ಧರ್ಮಾಚರಣೆಗೆ ಚರ್ಚ್, ಮಸೀದಿ, ಮಂದಿರಗಳಿವೆ. ಶಾಲೆಗಳಲ್ಲಿ ಹಿಜಾಬ್‌, ಕೇಸರಿ ಶಾಲು ಬೇಡ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ‌. ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಾಲೆಗಳಲ್ಲಾದರೂ ಮಕ್ಕಳು ದೇಶದ ಐಕ್ಯತೆ ಬಗ್ಗೆ ಸಂಸ್ಕಾರ ಪಡೆಯಬೇಕು. ಎಲ್ಲರೂ ಕೂಡಾ ಈ ಬಗ್ಗೆ … Continued

ಕುಂದಾಪುರ: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕಾಲೇಜ್‌ ಒಳಗೆ ಪ್ರವೇಶ ನಿರಾಕರಣೆ

ಕುಂದಾಪುರ: ಉಡುಪಿ ಹಿಜಾಬ್ ವಿವಾದ ಈಗ ಕುಂದಾಪುರ ಸರಕಾರಿ ಕಾಲೇಜಿನಲ್ಲಿಯೂ ಪ್ರತಿಧ್ವನಿಸಿದ್ದು ಇಂದು, ಗುರುವಾರ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ತರಗತಿಗೆ ಪ್ರವೇಶ ನಿರಾಕರಿಸಿದ್ದಾರೆ. ಹಿಜಾಬ್ ಧರಿಸಿ ಕಾಲೇಜಿಗೆ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಂಶುಪಾಲರು ಕಾಲೇಜಿನ ಗೇಟ್ ಬಳಿ ತಡೆದಿದ್ದಾರೆ.ಸರ್ಕಾರದ ಸುತ್ತೋಲೆಯಂತೆ ಹಿಜಾಬ್‌ ಇಲ್ಲದೆ ತರಗತಿಗೆ ಬರುವಂತೆ ಸೂಚನೆ ನೀಡಿದ್ದಾರೆ. ಈ … Continued

ಹಾವು ತಪ್ಪಿಸಲು ಹೋಗಿ ತುಂಗಾ ನಾಲೆಗೆ ಬಿದ್ದ ಕಾರು; ಪತ್ನಿ ಸಾವು, ಪತಿ ಪಾರು

ಶಿವಮೊಗ್ಗ : ಗಾಜನೂರು ಬಳಿ ದಾರಿಗೆ ಅಡ್ಡಬಂದ ಹಾವನ್ನು ತಪ್ಪಿಸಲು ಹೋಗಿ ಕಾರೊಂದು ತುಂಗಾ ಎಡದಂಡೆ ನಾಲೆಗೆ ಬಿದ್ದುಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಚಾಲನೆ ಮಾಡುತ್ತಿದ್ದ ಪತಿ ಚೇತನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುರುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನೀರಿನಲ್ಲಿ ಮುಳುಗಿ ಸುಷ್ಮಾ( 28) ಎಂಬವರು ಮೃತಪಟ್ಟಿದ್ದು ಪತಿ ಚೇತನಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. … Continued