ಸ್ವರ್ಣವಲ್ಲೀ ಶ್ರೀಗಳಿಂದ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಭಗವದ್ಗೀತಾ ಅಭಿಯಾನ

ಕಾರವಾರ: ಜಗತ್ತಿನ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭಗವಂತನ ಬಂಧನದಲ್ಲಿಯೇ ಇದ್ದಾರೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನುಡಿದರು. ಸ್ವರ್ಣವಲ್ಲೀ ಮಠದಿಂದ ರಾಜ್ಯಾದ್ಯಂತ ಹಮ್ಮಿಕೊಂಡ ಭಗವದ್ಗೀತಾ ಅಭಿಯಾನದ ಭಾಗವಾಗಿ ಕಾರವಾರದ ಜಿಲ್ಲಾ ಕಾರಾಗೃಹದಲ್ಲಿಯೂ ಭಗವದ್ಗೀತಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ … Continued

ಹುಬ್ಬಳ್ಳಿ: ಸಿದ್ಧಾರೂಢ ಮಠದ ಕೆರೆಯಲ್ಲಿ ಮುಳುಗಿ ಯುವಕ ಸಾವು

ಹುಬ್ಬಳ್ಳಿ: ಶ್ರೀ ಸಿದ್ದಾರೂಢರ ಹಾಗೂ ಶ್ರೀ ಗುರುನಾಥರೂಢರ ಮೂರ್ತಿಗೆ ಅಲಂಕಾರ ಹಾಗೂ ಪೂಜೆ ಸಲ್ಲಿಸಲು ಹೋದ ಯುವಕನೊಬ್ಬ ಸಿದ್ಧಾರೂಢ ಮಠದ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಉಮೇಶಪ್ಪ ಜಾಲಿಹಾಳ (21) ಎಂದು ಗುರುತಿಸಲಾಗಿದೆ. ಇಂದು, ಮಂಗಳವಾರ ಬೆಳಗ್ಗೆ ಮಠದ ಕೆರೆಯ ಮಧ್ಯದಲ್ಲಿರುವ ಸಿದ್ದಾರೂಢ … Continued

ಕೋಳಿಗೆ ಅರ್ಧ ಟಿಕೆಟ್ ದರ ಕೊಟ್ಟು ಹೈದರಾಬಾದ್​ನಿಂದ ಗಂಗಾವತಿಗೆ ಪ್ರಯಾಣಿಸಿದ ವ್ಯಕ್ತಿ..!

ಕೊಪ್ಪಳ: ಪ್ರಯಾಣಿಕರೊಬ್ಬರು ತನ್ನ ಕೋಳಿಗೂ ಅರ್ಧ ಟಿಕೆಟ್ ದರ ಕೊಟ್ಟು ಪ್ರಯಾಣಿಸಿದ ವಿದ್ಯಮಾನವೊಂದು ಕೊಪ್ಪಳ ಜಿಲ್ಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕೆಎಸ್ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬರು ಹೈದರಾಬಾದ್​ನಿಂದ ಬರುವಾಗ ಕೋಳಿಯನ್ನೂ ಕರೆದುಕೊಂಡು ಬಂದಿದ್ದರು. ಅವರು ಗಂಗಾವತಿಗೆ ಸಾಕಿದ ಕೋಳಿಗೂ 463 ರೂಪಾಯಿ ಟಿಕೆಟ್ ದರ ನೀಡಿ ಪ್ರಯಾಣಿಸಿದ್ದಾರೆ. ಸರ್ಕಾರಿ ಬಸ್​ಗಳಲ್ಲಿ ಸಾಕು ಪ್ರಾಣಿಗಳಿಗೆ ಟಿಕೆಟ್ ಖರೀದಿಸುವ … Continued

15 ದಿನಗಳಲ್ಲಿ ಆಫ್ರಿಕನ್ ದೇಶಗಳಿಂದ ಮುಂಬೈಗೆ ಬಂದಿಳಿದ 1,000 ಪ್ರಯಾಣಿಕರು: ಆದ್ರೆ ಬಿಎಂಸಿ ಬಳಿ 466 ಜನರ ಪಟ್ಟಿ ಮಾತ್ರ ಲಭ್ಯ..!

ನವದೆಹಲಿ: ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರ ಪತ್ತೆಯಾದ ಆಫ್ರಿಕನ್ ದೇಶಗಳಿಂದ ಕಳೆದ 15 ದಿನಗಳಲ್ಲಿ ಕನಿಷ್ಠ 1,000 ಪ್ರಯಾಣಿಕರು ಮುಂಬೈಗೆ ಬಂದಿಳಿದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈ ನಾಗರಿಕ ಸಂಸ್ಥೆಯು ಇದುವರೆಗೆ ಪಟ್ಟಿಯನ್ನು ಸ್ವೀಕರಿಸಿದ 466 ಪ್ರಯಾಣಿಕರಲ್ಲಿ ಕನಿಷ್ಠ 100 ಪ್ರಯಾಣಿಕರ ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸಿದೆ ಎಂದು ಅವರು ಹೇಳಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ … Continued

ಓಮಿಕ್ರಾನ್ ಕೋವಿಡ್‌ ರೂಪಾಂತರ ಡೆಲ್ಟಾಕ್ಕಿಂತ 6 ಪಟ್ಟು ಹೆಚ್ಚು ಹರಡುತ್ತದೆಯಂತೆ…!

ನವದೆಹಲಿ : ಹೊಸದಾಗಿ ಹೊರಹೊಮ್ಮಿದ ರೂಪಾಂತರ B.1.1.529 ಓಮಿಕ್ರಾನ್‌ ಕೋವಿಡ್‌ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಆರು ಪಟ್ಟು ಹೆಚ್ಚು ಹರಡುತ್ತದೆ ಎಂದು ತಜ್ಞರು ಸೂಚಿಸಿದ್ದಾರೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಮೊನೊಕ್ಲೋನಲ್ ಎಂಟಿಬಾಡಿ ಥೆರಪಿ ಅಥವಾ ಕಾಕ್ಟೈಲ್ ಚಿಕಿತ್ಸೆಯು ಡೆಲ್ಟಾ ಪ್ಲಸ್ ರೂಪಾಂತರದಂತಹ ಓಮಿಕ್ರಾನ್ ರೂಪಾಂತರದ ವಿರುದ್ಧ ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಐಜಿಐಬಿ (IGIB)ಯ ಸಂಶೋಧನಾ ತಜ್ಞರಾದ ಮರ್ಸಿ ರೋಫಿನಾ … Continued

ಬೆಂಗಳೂರು: ಬೆಳ್ಳಂಬೆಳಿಗ್ಗೆ ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ದಾಳಿ..!

ಬೆಂಗಳೂರು: ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಅಧಿಕಾರಗಳು ಇಂದು (ಮಂಗಳವಾರ) ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ. ಜೈಲಿನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿರುವ ಆರೋಪದ ಮೇಲೆ ಮತ್ತು ಮೊಬೈಲ್, ಗಾಂಜಾ, ಇತರೆ ವಸ್ತುಗಳ ಪೂರೈಕೆ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಈ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಗಾಂಜಾ ಮತ್ತು ಗಾಂಜಾ ಸೇದುವ … Continued

ಹಾವೇರಿ: ಕೊಬ್ಬರಿ ಹೋರಿ ಬೆದರಿಸುವ ಹಬ್ಬದಲ್ಲಿ ಅನಾಹುತ; ಹೋರಿ ದಾಳಿಯಿಂದ 9 ಜನರಿಗೆ ಗಾಯ

ಹಾವೇರಿ: ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದ ಕೊಬ್ಬರಿ ಹೋರಿ ಬೆದರಿಸುವ ಹಬ್ಬದ ಸ್ಪರ್ಧೆಯಲ್ಲಿ ಹೋರಿ ತಿವಿದು ಒಂಬತ್ತು ಜನರಿಗೆ ಗಾಯವಾಗಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ರಾಮದಲ್ಲಿ ಈ ಬಾರಿ ಗ್ರಾಮಸ್ಥರು ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಿದ್ದರು. ಬೈಕ್, ಫ್ರಿಜ್‌ ಸೇರಿದಂತೆ ವಿವಿಧ ಬಗೆಯ ಬಹುಮಾನಗಳನ್ನು ಇಡಲಾಗಿತ್ತು. ಹಾವೇರಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆ ಸೇರಿದಂತೆ … Continued

ಭಾರತದಲ್ಲಿ 6,990 ಹೊಸ ಕೋವಿಡ್ -19 ಪ್ರಕರಣಗಳು ದಾಖಲು, ಇದು ನಿನ್ನೆಗಿಂತ 15.9% ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 6,990 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ 15.9% ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಇದರೊಂದಿಗೆ ಕಳೆದ 24 ಗಂಟೆಗಳಲ್ಲಿ ಒಟ್ಟುಪ್ರಕರಣ 3,45,87,822ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 190 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 4,68,980 ಕ್ಕೆ ತಲುಪಿದೆ.ಭಾರತದ … Continued

ಮದುವೆ ಹಾಲ್‍ಗೆ ಬೆಂಕಿ ಬಿದ್ರೂ ತಲೆಕೆಡಿಸಿಕೊಳ್ಳದೆ ಊಟದಲ್ಲಿಯೇ ಮಗ್ನರಾಗಿದ್ದ ಅತಿಥಿಗಳು..! ವೀಕ್ಷಿಸಿ

ಮುಂಬೈ: ಮದುವೆ ಹಾಲ್‍ಗೆ ಬೆಂಕಿ ಬಿದ್ದರೂ ಅದನ್ನು ನಿರ್ಲಕ್ಷಿಸಿದ ಅತಿಥಿಗಳು ಭೋಜನ ಸವಿಯುವುದರಲ್ಲೇ ತಲ್ಲೀನರಾಗಿದ್ದ ಘಟನೆ ಮಹಾರಾಷ್ಟ್ರ ಥಾಣೆಯಲ್ಲಿ ನಡೆದಿದೆ. ಥಾಣೆ ಜಿಲ್ಲೆಯ ಭಿವಂಡಿ ಸಮೀಪದ ಅನ್ಸಾರಿ ಮದುವೆ ಹಾಲ್‍ನಲ್ಲಿ ಭಾನುವಾರ ರಾತ್ರಿ ಬೆಂಕಿ ಹೊತ್ತಿಕೊಂಡಿತ್ತು. ಮದುವೆ ಹಾಲ್ ಸಮೀಪದ ಸ್ಟೋರ್ ರೂಮಿನಿಂದ ಬೆಂಕಿ ಹರಡಿದೆ ಎನ್ನಲಾಗಿದೆ. ಜೊತೆಗೆ ಪಕ್ಕದಲ್ಲೇ ನಿಲ್ಲಿಸಿದ್ದ ಹಲವಾರು ದ್ವಿಚಕ್ರ ವಾಹನಗಳು … Continued

ದಕ್ಷಿಣ ಆಫ್ರಿಕಾದಿಂದ ಚಂಡೀಗಢಕ್ಕೆ ಬಂದ ಪ್ರಯಾಣಿಕನಿಗೆ ಕೊರೊನಾ ಸೋಂಕು ದೃಢ

ಚಂಡೀಗಢ: ದಕ್ಷಿಣ ಆಫ್ರಿಕಾದಿಂದ ಚಂಡೀಗಢಕ್ಕೆ ಬಂದಿರುವ 39 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೊನಾ ದೃಢಪಟ್ಟಿದೆ ಎಂದು ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್ 21ರಂದು ದಕ್ಷಿಣ ಆಫ್ರಿಕಾದಿಂದ ಚಂಡೀಗಢಕ್ಕೆ ಆಗಮಿಸಿದ ಪ್ರಯಾಣಿಕನಿಗೆ ವಿಮಾನ ನಿಲ್ದಾಣದಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್ ಬಂದಿತ್ತು. ನಂತರ ಅವರನ್ನು ಮನೆ ಪ್ರತ್ಯೇಕತೆಯಲ್ಲಿ ಇರಿಸಲಾಗಿತ್ತು. 7 ದಿನಗಳ ಬಳಿಕ ಮತ್ತೆ … Continued