ಕರ್ನಾಟಕದಲ್ಲಿ ಲಾಕ್‌ಡೌನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ರೆ ಕಠಿಣ ಕ್ರಮ: ಡಾ.ಸುಧಾಕರ

ಬೆಂಗಳೂರು: ದೇಶದೆಲ್ಲೆಡೆ ರೂಪಾಂತರಿ ವೈರಸ್ ಒಮಿಕ್ರಾನ್ ಭೀತಿ ಉಂಟಾಗಿದ್ದು, ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ರಾಜ್ಯದಲ್ಲಿ ಲಾಕ್‌ಡೌನ್ ಎಂಬುದು ಸುಳ್ಳು ಸುದ್ಧಿ ಈ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸಲಾಗುತ್ತದೆ. ಜನತೆ ಆತಂಕಕ್ಕೀಡಾಗುವ ಅವಶ್ಯಕತೆಯಿಲ್ಲ .ಲಾಕ್‌ಡೌನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು … Continued

ಕೈವಾರದಲ್ಲಿ ನಡೆಯಿತು ಅಪರೂಪದ ಮದುವೆ.. ಗಮನ ಸೆಳೆದ ಕುಳ್ಳ-ಕುಳ್ಳಿಯ ವಿವಾಹ..!

ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಶ್ರೀ ಕ್ಷೇತ್ರದಲ್ಲಿ ಭಾನುವಾರ ನಡೆದ ಮದುವೆಯೊಂದು ಎಲ್ಲರ ಗಮನ ಸೆಳೆದಿದೆ. ದೇವಸ್ಥಾನಕ್ಕೆ ಬಂದವರು ನೂತನ ವಧು ವರರಿಗೆ ಆಶಿರ್ವಾದ ಮಾಡಿ ನೂರು ಕಾಲ ಚೆನ್ನಾಗಿರಲಿ ಎಂದು ನಗುತ್ತಲೇ ಹಾರೈಸಿದ್ದಾರೆ. ಈ ಮುದುವೆ ವಿಶೇಷವೇನೆಂದರೆ ಿದು ಕುಳ್ಳ-ಕುಳ್ಳಿಯ ಮದವೆ. ಟಿ ದಾಸರಹಳ್ಳಿ ಮೂಲದ ಹಾಗೂ ಎನ್‌ಜಿಒದಲ್ಲಿ ಕೆಲಸ ಮಾಡುತ್ತಿರುವ … Continued

ಈ ಪುಟ್ಟ ಪೋರಿಯ ಅದ್ಭುತ ಜಿಮ್ನಾಸ್ಟಿಕ್ಸ್‌ ಕಸರತ್ತು ನೋಡಿದ್ರೆ ಕ್ಲೀನ್‌ ಬೌಲ್ಡ್‌ ಆಗ್ತೀರಾ..! ವೀಕ್ಷಿಸಿ

ಈ ಪುಟಾಣಿಯ ಜಿಮ್ನಾಸ್ಟಿಕ್‌ ಕಸರತ್ತು ನೀಡಿದವರು ಬೆರಗಾಗಲೇಬೇಕು, ತಲೆದೂಗಲೇಬೇಕು. ಹಾಗಿದೆ ಈ ಪೋರಿಯ ಕಸರತ್ತು…! ಈ ಪುಟಾಣಿ ಜಿಮ್ನಾಸ್ಟಿಕ್‌ ಪ್ರತಿಭೆಯ ವಿಡಿಯೊ ನಮ್ಮನ್ನು ಕ್ಷಣಾರ್ಧದಲ್ಲಿ ಸೆಳೆದು ಬಿಡುತ್ತಾಳೆ. ಅದ್ಭುತ ಜಿಮ್ನಾಸ್ಟಿಕ್ ಕೌಶಲ್ಯಗಳನ್ನು ಪ್ರದರ್ಶಿಸುವ ಈ ವಿಡಿಯೊವನ್ನು ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 1.11 ನಿಮಿಷದ ಈ ಕ್ಲಿಪ್‌ನಲ್ಲಿ ಪುಟಾಣಿ … Continued

ಕೆನರಾ ಕ್ರೆಡಿಟ್ ಸೌಹಾರ್ದ ಸಂಘಕ್ಕೆ ೧.೨೯ ಲಕ್ಷ ರೂ. ಲಾಭ

ಕುಮಟಾ: ಕೆನರಾ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ವಾರ್ಷಿಕ ಸಭೆಯು ಬಗ್ಗೋಣದ ಲಯನ್ಸ್ ಭವನದಲ್ಲಿ ನಡೆಯಿತು. ಸಹಕಾರಿ ಸಂಘದ ಅಧ್ಯಕ್ಷರಾದ ಡಾ.ಜಿ.ಜಿ.ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘವು ೨೦೨೦-೨೧ ರಲ್ಲಿ ೧೨೯೭೦೧ ರೂ.ಗಳಷ್ಟು ಲಾಭ ಮಾಡಿದೆ. ಲಾಕ್ ಡೌನ್ ಇತ್ಯಾದಿ ಸಮಸ್ಯೆಯ ಮಧ್ಯೆಯೂ ಸಂಘವು ಲಾಭಗಳಿಸಿದ್ದು ಸಂತಸದ ವಿಷಯವಾಗಿದೆ. ಜನರು ಆರ್ಥಿಕ ಅಭಿವೃದ್ಧಿ ಹೊಂದಬೇಕಾದರೆ ಹಣಕಾಸು … Continued

ಭಾರತದಲ್ಲಿ 8,309 ಹೊಸ ಕೋವಿಡ್-19 ಪ್ರಕರಣಗಳು ದಾಖಲು, ಇದು ನಿನ್ನೆಗಿಂತ 5.3% ಕಡಿಮೆ

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 8,309 ಹೊಸ ಕೋವಿಡ್-19 ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ 5.3% ಕಡಿಮೆಯಾಗಿದೆ. ಇದು ಒಟ್ಟು ಪ್ರಕರಣವನ್ನು 3,45,80,832 ಕ್ಕೆ ಒಯ್ದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 236 ಸಾವುಗಳು ವರದಿಯಾಗಿದ್ದು, ಒಟ್ಟು ವರದಿಯಾದ ಸಾವಿನ ಸಂಖ್ಯೆಯನ್ನು 4,68,790 ಕ್ಕೆ ಹೆಚ್ಚಿಸಿದೆ. ಭಾರತದ ಚೇತರಿಕೆ ದರವು ಈಗ 98.34% ರಷ್ಟಿದೆ. … Continued

ಬಸ್-ಫಾರ್ಚುನರ್ ಕಾರು ಢಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು

ವಿಜಯಪುರ: ಸಾರಿಗೆ ಸಂಸ್ಥೆಯ ಬಸ್ ಹಾಗೂ ಫಾರ್ಚುನರ್ ಕಾರು ಮಧ್ಯೆ ಮುಖಾಮುಖಿ ಡಿಕ್ಕಿಯಲ್ಲಿ, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ. ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಭಾನುವಾರ ರಾತ್ರಿ ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಜುಮನಾಳ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ಮೃತರಲ್ಲಿ ಜಿಲ್ಲೆಯ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅವರ … Continued

ಮೊಸಳೆ ಪ್ರತಿಮೆ ಎಂದು ಭಾವಿಸಿ ನೀರಿಗಿಳಿದ ವ್ಯಕ್ತಿ ಮೇಲೆ ಮೊಸಳೆ ದಾಳಿ, ತೋಳಿಗೆ ಗಾಯ..ದೃಶ್ಯ ವಿಡಿಯೊದಲ್ಲಿ ಸೆರೆ

68 ವರ್ಷದ ವ್ಯಕ್ತಿಯೊಬ್ಬರ ಮೇಲೆ ಬೃಹತ್ ಮೊಸಳೆ ದಾಳಿ ಮಾಡಿದ್ದು, ಗಾಯಗೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯು ವ್ಯಕ್ತಿ ತನ್ನ ಜನ್ಮದಿನದಂದು ಫಿಲಿಪೈನ್ಸ್‌ನ ಕಗಾಯನ್ ಡಿ ಓರೊ ಸಿಟಿಯಲ್ಲಿರುವ ಅಮಯಾ ವ್ಯೂ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಭೇಟಿ ನೀಡಿದಾಗ ಸಂಭವಿಸಿದೆ. ಹಂಚಿಕೊಂಡಿರುವ ವಿಡಿಯೊದಲ್ಲಿ, ವ್ಯಕ್ತಿಯು ಮೊಸಳೆಯ ಪ್ರತಿಮೆ ಎಂದು ತಪ್ಪಾಗಿ ಭಾವಿಸುವ ಮೂಲಕ … Continued

ರಿಲಯನ್ಸ್ ಜಿಯೋ ಪ್ರಿಪೇಯ್ಡ್ ದರ 20% ಹೆಚ್ಚಳ; ಹೊಸ ಯೋಜನೆಗಳು ಡಿಸೆಂಬರ್ 1ರಿಂದ ಜಾರಿಗೆ

ನವದೆಹಲಿ: ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಸುಂಕವನ್ನು ಶೇ.20ರಷ್ಟು ಹೆಚ್ಚಿಸಿದೆ. ಪರಿಷ್ಕೃತ ದರಗಳು ಡಿಸೆಂಬರ್ 1 ರಿಂದ ಜಾರಿಗೆ ಬರಲಿವೆ ಎಂದು ಜಿಯೋ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಹೊಸ ಅನಿಯಮಿತ ಯೋಜನೆಗಳು 1 ಡಿಸೆಂಬರ್, 2021 ರಂದು ಕಾರ್ಯಗತವಾಗಲಿದೆ. ಅಸ್ತಿತ್ವದಲ್ಲಿರುವ ಎಲ್ಲಾ ಟಚ್‌ ಪಾಯಿಂಟ್‌ಗಳು ಮತ್ತು ಚಾನಲ್‌ಗಳಿಂದ ಆಯ್ಕೆ ಮಾಡಬಹುದು ಎಂದು … Continued

ಜಲಾಶಯದ ನೀರಿನಲ್ಲಿ ಆಟವಾಡುತ್ತಿದ್ದಾಗ ಕೊಚ್ಚಿಹೋದ ನಾಲ್ವರು…!

ತುಮಕೂರು: ಕುಣಿಗಲ್ ತಾಲೂಕಿನ ಗಡಿಭಾಗದಲ್ಲಿನ ಮಾರ್ಕೋನಹಳ್ಳಿ ಜಲಾಶಯದ ಕೋಡಿ ನೀರಿನಲ್ಲಿ ಆಟವಾಡಲು ಹೋದ ನಾಲ್ವರು ಕೊಚ್ಚಿ ಹೋದ ದುರಂತ ಘಟನೆ ಭಾನುವಾರ ನಡೆದಿದೆ. ಪರ್ವಿನ್‍ತಾಜ್ (23) ಮತ್ತು ಸಾದೀಯ(17) ರಾಜು(23) ಮತ್ತು ಅಪ್ಪು(20) ನೀರಿನಲ್ಲಿ ಕೊಚ್ಚಿಹೋಗಿರುವ ಮೃತದುರ್ದೈವಿಗಳು. ಜಲಾಶಯದ ಕೋಡಿ ನೀರಿನಲ್ಲಿ ಆಟವಾಡಲು ಹೋದ ನಾಲ್ವರು ಕೊಚ್ಚಿ ಹೋಗಿದ್ದಾರೆ. ಮಾಕೋರ್ನಹಳ್ಳಿ ಜಲಾಶಯವು ತುಂಬಿಕೊಂಡಿರುವ ಹಿನ್ನಲೆಯಲ್ಲಿ ಜಲಾಶಯಕ್ಕೆ … Continued

14 ರಾಜ್ಯಗಳ 30% ಕ್ಕಿಂತ ಹೆಚ್ಚು ಮಹಿಳೆಯರು ಗಂಡಂದಿರು ಹೊಡೆಯುವುದನ್ನು ಸಮರ್ಥಿಸುತ್ತಾರೆ…!

ನವದೆಹಲಿ: ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NHFS) ಪ್ರಕಾರ, 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 14 ರಲ್ಲಿ 30 ಪ್ರತಿಶತದಷ್ಟು ಮಹಿಳೆಯರು ಕೆಲವು ಸಂದರ್ಭಗಳಲ್ಲಿ ಪುರುಷರು ತಮ್ಮ ಹೆಂಡತಿಯನ್ನು ಹೊಡೆಯುವುದನ್ನು ಸಮರ್ಥಿಸುತ್ತಾರೆ..! ಆದರೆ ಕಡಿಮೆ ಶೇಕಡಾವಾರು ಪುರುಷರು ಅಂತಹ ನಡವಳಿಕೆಯನ್ನು ತರ್ಕ ಬದ್ಧಗೊಳಿಸಿದ್ದಾರೆ…!! NHFS-5 ಪ್ರಕಾರ, ತೆಲಂಗಾಣ (84%), ಆಂಧ್ರಪ್ರದೇಶ (84%) ಮತ್ತು … Continued