ಕೋವಿಡ್‌ ಹೊಸ ರೂಪಾಂತರ ಒಮಿಕ್ರಾನ್ ವೈರಸ್ ಪತ್ತೆ: 3 ದೇಶಗಳಿಂದ ಕರ್ನಾಟಕಕ್ಕೆ ಬರುವವರಿಗೆ ಆರ್‌ಟಿ -ಪಿಸಿಆರ್‌ ಪರೀಕ್ಷೆ ಕಡ್ಡಾಯ

ಬೆಂಗಳೂರು: ವಿದೇಶಗಳಲ್ಲಿ ಹೊಸ ತಳಿಯ ಓಮಿಕ್ರಾನ್ ವೈರಸ್ ಪತ್ತೆ ಹಿನ್ನೆಲೆ ಮೂರು ದೇಶಗಳಿಂದ ರಾಜ್ಯಕ್ಕೆ ಬರುವವರಿಗೆ ಆರ್‌ ಟಿ -ಪಿಸಿಆರ್‌ (RTPCR) ಟೆಸ್ಟ್‌ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ದಕ್ಷಿಣ ಆಫ್ರಿಕಾ, ಹಾಂಕಾಂಗ್‌, ಬೋಟ್ಸ್ವಾನಾದಿಂದ ಬರುವವರಿಗೆ ಆರ್‌ ಟಿ -ಪಿಸಿಆರ್‌ ಟೆಸ್ಟ್‌ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ. 15 ದಿನಗಳ ಹಿಂದೆ ರಾಜ್ಯಕ್ಕೆ ಬಂದಿರುವವರನ್ನೂ ಪತ್ತೆ … Continued

ಮದುವೆಗೆ ಬರಲು ನೋಟಿಸ್‌ ನೀಡಿದ ಮದುಮಕ್ಕಳು…!: ವಕೀಲ ದಂಪತಿ ವಿಶಿಷ್ಟ ಆಮಂತ್ರಣ ಪತ್ರಿಕೆ ನೋಡಿ

ಗುವಾಹತಿ: ವಿವಾಹವು ದಂಪತಿಗಳ ಜೀವನದಲ್ಲಿ ಅತ್ಯಂತ ಸಂತೋಷದಾಯಕ ಸಂದರ್ಭಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ ಅನೇಕ ದಂಪತಿಗಳು ಅದನ್ನು ವಿಶೇಷವಾಗಿಸಲು ಪ್ರಯತ್ನಿಸುತ್ತಾರೆ. ಇದು ಈಗಾಗಲೇ ಮದುವೆಯ ಸೀಸನ್ ಸಹ ಆಗಿರುವುದರಿಂದ ಮತ್ತು ಅನೇಕರ ಟೈಮ್‌ಲೈನ್ ಸಂತೋಷದ ಜೋಡಿಗಳ ವಿವಾಹಪೂರ್ವ ಫೋಟೋಶೂಟ್‌ಗಳಿಂದ ತುಂಬಿರುತ್ತದೆ. ಆದರೆ ಇಲ್ಲಿ ವಿವಾಹ ಫೋಟೋ ಶೂಟ್‌ ಗಳಲ್ಲಲ್ಲ, ಆಮಂತ್ರಣ ಪತ್ರಿಕೆಯಲ್ಲೇ ವಿಶೇಷತೆಯಿದೆ. ಅಸ್ಸಾಂನ ಗುವಾಹತಿಯ ವಕೀಲ … Continued

ಎಸ್ ಡಿಎಂನ ಎಲ್ಲ ಕೋವಿಡ್ ಸಂಪರ್ಕಿತರ ತಪಾಸಣೆ ಪೂರ್ಣ: ಮತ್ತೆ 25 ಜನರಿಗೆ ದೃಢ

ಧಾರವಾಡ: ಸತ್ತೂರಿನ ಎಸ್ ಡಿ ಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶನಿವಾರ ಕೋವಿಡ್ ತಪಾಸಣೆಗೆ ಒಳಗಾಗಿದ್ದ 2217 ಜನರ ಕೋವಿಡ್ ತಪಾಸಣಾ ವರದಿಗಳು ಲಭ್ಯವಾಗಿದ್ದು ,ಇವರಲ್ಲಿ 25 ಜನರಿಗೆ ಮಾತ್ರ ಕೋವಿಡ್ ಸೋಂಕು ದೃಢವಾಗಿದೆ , ಪಾಸಿಟಿವಿಟಿ ದರ ಶೇ.1.12 ರಷ್ಟಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ ತಿಳಿಸಿದ್ದಾರೆ. ಕಳೆದ ಮೂರು ದಿನಗಳ ಅವಧಿಯಲ್ಲಿ ತಪಾಸಣೆ ಮಾಡಲಾಗಿದ್ದ … Continued

ಧಾರವಾಡ ಜೈನ ಮಿಲನದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನ

ಧಾರವಾಡ: ಧಾರವಾಡ ಜೈನ ಮಿಲನ ವತಿಯಿಂದ ಧಾರವಾಡ ಜಿಲ್ಲೆಯಲ್ಲಿ ಓದುತ್ತಿರುವ ಜೈನ, ಬಡ ಪ್ರತಿಭಾವಂತ ಪ್ರಥಮ ವರ್ಷದ ಪಿ.ಯು.ಸಿ, ಪ್ಯಾರಾಮೆಡಿಕಲ್, ಐ.ಟಿ.ಐ, ಡಿಪ್ಲೋಮಾ, ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಸಂಪರ್ಕ ಸಂಖ್ಯೆ, ವಿಳಾಸ, ಇತ್ಯಾದಿ ವಿವರಗಳನ್ನು ನಮೂದಿಸಿದ ವಿನಂತಿ ಅರ್ಜಿಯೊಂದಿಗೆ, ಪ್ರವೇಶ ಶುಲ್ಕ ಪಾವತಿಸಿದ ರಶೀದಿ, ಜಾತಿ, ಆದಾಯ ಪ್ರಮಾಣ … Continued

ಸ್ಕ್ವಾಷ್‌ ನಲ್ಲಿ ಮಲೇಷಿಯನ್ ಓಪನ್ ಗೆದ್ದ ಸೌರವ್ ಘೋಸಲ್ : ಈ ಚಾಂಪಿಯನ್‌ ಶಿಪ್‌ ಗೆದ್ದ ಮೊದಲ ಭಾರತೀಯ

ನವದೆಹಲಿ: ಸ್ಕ್ವಾಷ್ ತಾರೆ ಸೌರವ್ ಘೋಸಲ್ ಶನಿವಾರ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಮಿಗುಯೆಲ್ ರೊಡ್ರಿಗಸ್ ಅವರನ್ನು ಸೋಲಿಸಿ ಮಲೇಷ್ಯಾ ಓಪನ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಎರಡನೇ ಶ್ರೇಯಾಂಕದ ಘೋಸಲ್ ಕೊಲಂಬಿಯಾದ ಅಗ್ರ ಶ್ರೇಯಾಂಕದ ರೊಡ್ರಿಗಸ್ ಅವರನ್ನು 55 ನಿಮಿಷಗಳಲ್ಲಿ 11-7, 11-8 ಮತ್ತು 13-11 ರಿಂದ ಸೋಲಿಸಿದರು ಮತ್ತು ಪ್ರತಿಷ್ಠಿತ … Continued

ಬ್ರಿಟನ್‌ನಲ್ಲಿ ಮೊದಲ ಬಾರಿಗೆ 2 ಹೊಸ ಕೋವಿಡ್ ಸ್ಟ್ರೈನ್ ‘ಓಮಿಕ್ರಾನ್’ ಪ್ರಕರಣ ದೃಢ:ಎರಡಕ್ಕೂ ದಕ್ಷಿಣ ಆಫ್ರಿಕಾ ಸಂಪರ್ಕ..!

ಲಂಡನ್: ಬ್ರಿಟನ್‌ ಶನಿವಾರ ತನ್ನ ಮೊದಲ ಎರಡು ಕೋವಿಡ್ -19 ರ ಹೊಸ ಓಮಿಕ್ರಾನ್‌ ರೂಪಾಂತರದ ಪ್ರಕರಣಗಳನ್ನು ದೃಢಪಡಿಸಿದೆ. ಎರಡೂ ಪ್ರಕರಣಗಳು ದಕ್ಷಿಣ ಆಫ್ರಿಕಾದಿಂದ ಪ್ರಯಾಣಕ್ಕೆ ಸಂಬಂಧಿಸಿವೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. “ನಾವು ವೇಗವಾಗಿ ಚಲಿಸಿದ್ದೇವೆ ಮತ್ತು ಸಂಪರ್ಕ ಪತ್ತೆಹಚ್ಚುವಿಕೆ ನಡೆಯುತ್ತಿರುವಾಗ ವ್ಯಕ್ತಿಗಳು ಸ್ವಯಂ-ಪ್ರತ್ಯೇಕವಾಗಿದ್ದಾರೆ” ಎಂದು ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಸಾಜಿದ್ … Continued

ಕೋವಿಡ್‌ ಹೊಸ ರೂಪಾಂತರಿ ಓಮಿಕ್ರಾನ್‌’ ತಡೆಗೆ ಕಟ್ಟೆಚ್ಚರ, ವಿದೇಶಿ ಪ್ರಯಾಣಿಕರ ಮೇಲೆ ತೀವ್ರ ನಿಗಾ, ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ತೆರವು ಮರುಚಿಂತನೆ

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ, ಅತ್ಯಂತ ಅಪಾಯಕಾರಿ ಎನ್ನಲಾದ ಕೋವಿಡ್‌ ಹೊಸ ರೂಪಾಂತರಿ ‘ಓಮಿಕ್ರಾನ್‌’ ಈಗ ವಿಶ್ವದಲ್ಲಿ ಆತಂಕಕ್ಕೆ ಕಾರಣವಾಗಿದೆ. ಭಾರತದಲ್ಲಿ ಈ ತಳಿಯ ವೈರಸ್‌ ಪತ್ತೆಯಾಗಿಲ್ಲವಾದರೂ, ಇದು ಭಾರತಕ್ಕೆ ವ್ಯಾಪಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೊದಲನೇ ಮತ್ತು ಎರಡನೇ ಅಲೆಯಿಂದ ಕಲಿತ ಪಾಠಗಳನ್ನು ಬಳಸಿ ಮೂರನೇ ಅಲೆ ತಡೆಗೆ ಕಾರ್ಯತಂತ್ರ … Continued

ನಾಳೆ ಕರ್ನಾಟಕ ವಿದ್ಯಾವರ್ಧಕ ಸಂಘದ  ತ್ರೈ ವಾರ್ಷಿಕ ಚುನಾವಣೆ :  ಸಂಘ ನಡೆದು ಬಂದ ದಾರಿ-ಒಂದು ಅವಲೋಕನ

(ದಿನಾಂಕ ೨೮-೧೧-೨೦೨೧ ರಂದು ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಇದರ ತ್ರೈ ವಾರ್ಷಿಕ ಚುನಾವಣೆ ನಡೆಲಿದ್ದು, ಆ ನಿಮತ್ತ ಲೇಖನ)   ಕನ್ನಡವನ್ನು ಮಂತ್ರದಂತೆ ಜಪಿಸುತ್ತ ಬಂದಿರುವ ಕರ್ನಾಟಕ ವಿದ್ಯಾವರ್ಧಕ ಸಂಘ ೧೮೯೦ ಜುಲೈ ೨೦ ರಂದು ಧಾರವಾಡದಲ್ಲಿ ಸ್ಥಾಪನೆಯಾಗಿದೆ. ೧೩೧ ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಈ ಸಂಸ್ಥೆ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು … Continued

ಕೋವಿಡ್ ಹೊಸ ರೂಪಾಂತರ ಪತ್ತೆ, ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ : ಸಿಎಂ ಸಭೆ ನಂತರ ರಾಜ್ಯದ ಜನರಿಗೆ ಹೊರಬಿತ್ತು ಸರ್ಕಾರದ ಮಹತ್ವದ ಸೂಚನೆಗಳು

ಬೆಂಗಳೂರು : ಕೋವಿಡ್ 19 , ರೂಪಾಂತರಿ ವೈರಸ್ ಒಮಿಕ್ರಾನ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಹಾಗೂ ರಾಜ್ಯದ ಜನರಿಗೆ ಹಲವಾರು ಸೂಚನೆಗಳನ್ನು ನೀಡಲಾಗಿದೆ. ಈ ಕುರಿತು ಮಾಧ್ಯಮದವರ ಜೊತೆಗೆ ಮಾತನಾಡಿದ ಕಂದಾಯ ಸಚಿವ ಆರ್, ಅಶೋಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸರ್ಕಾರ … Continued

ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 30% ಅರಣ್ಯ ನಿರ್ಮಿಸಿ: ಅಧಿಕಾರಿಗಳಿಗೆ ಸಚಿವ ಉಮೇಶ್ ಕತ್ತಿ ಸೂಚನೆ

ಬೆಂಗಳೂರು: ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಶೇ. 30ರಷ್ಟು ಅರಣ್ಯ ನಿರ್ಮಾಣ ಮಾಡಬೇಕು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಯಾವ ಜಿಲ್ಲೆಯಲ್ಲಿ ಅರಣ್ಯ ನಿರ್ಮಾಣ ಮಾಡಲು ಭೂಮಿ ಇಲ್ಲವೋ, ಆ ಜಿಲ್ಲೆಯಲ್ಲಿನ ಕಂದಾಯ ಇಲಾಖೆ, ಜಲಸಂಪನ್ಮೂಲ ಇಲಾಖೆ ಸೇರಿ ಬೇರೆ ಇಲಾಖೆಗೆ ಒಳಪಡುವ ಭೂಮಿಯನ್ನು ಅರಣ್ಯ ಇಲಾಖೆಗೆ … Continued