ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹತಾಶ ದೃಶ್ಯಗಳು.. ನೂರಾರು ಜನರು ಬಲವಂತವಾಗಿ ವಿಮಾನಗಳ ಪ್ರವೇಶ..ಗುಂಡಿನ ದಾಳಿಯಲ್ಲಿ ಕನಿಷ್ಠ 5 ಮಂದಿ ಸಾವು; ವಿಡಿಯೋ ನೋಡಿ

ನವದೆಹಲಿ:ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಭಯ ಮತ್ತು ಭೀತಿ ಆವರಿಸಿದೆ. ಏಕೆಂದರೆ ಅಮೆರಿಕ ಭದ್ರತಾ ಪಡೆಗಳು ದೇಶದಿಂದ ಹೊರಹೋಗಲು ಆರಂಭಿಸಿದ ಒಂದೆರಡು ವಾರಗಳಲ್ಲಿ ತಾಲಿಬಾನ್ ದೇಶವನ್ನು ನಾಟಕೀಯವಾಗಿ ಸ್ವಾಧೀನಪಡಿಸಿಕೊಂಡ ನಂತರ ಜನರು ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕಾಬೂಲ್‌ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 5 ಜನರು ಮೃತಪಟ್ಟಿದ್ದಾರೆ ಮತ್ತು … Continued

ಮೂಡಿಗೆರೆ: ಕಾರಿನ ಮೇಲೆ ಕಾಡಾನೆ ದಾಳಿ; ನಾಲ್ವರಿಗೆ ಗಂಭೀರ ಗಾಯ

ಚಿಕ್ಕಮಗಳೂರು: ಚಲಿಸುತ್ತಿದ್ದ ಓಮ್ನಿ ಕಾರೊಂದರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಗಂಭೀರ ಗಾಯಗೊಂಡ ಘಟನೆ ಮೂಡಿಗೆರೆ ತಾಲೂಕಿನ ಕುಂದೂರು ಬಳಿ ರವಿವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಚಂದ್ರೇಗೌಡ, ಅವರ ಪತ್ನಿ ಮೋಹಿನಿ, ಪುತ್ರ ಅವನೀಶ, ಮತ್ತು ಸಂಬಂಧಿಕರಾದ ರಾಜಮ್ಮ ಎಂದು ಗುರುತಿಸಲಾಗಿದೆ. ಈ ಪೈಕಿ … Continued

ಮೇಘಾಲಯ ಸಿಎಂ ಮನೆಗೆ ಪೆಟ್ರೋಲ್‌ ಬಾಂಬ್‌ ಎಸೆತ: ಭುಗಿಲೆದ್ದ ಹಿಂಸಾಚಾರ ಗೃಹ ಸಚಿವ ರಾಜೀನಾಮೆ

ಶಿಲ್ಲಾಂಗ್‌: ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಖಾಸಗಿ ನಿವಾಸಕ್ಕೆ ಭಾನುವಾರ ರಾತ್ರಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ವಾಹನಗಳಲ್ಲಿ ಬಂದಿರುವ ದಾಳಿಕೋರರು ಪೆಟ್ರೋಲ್‌ ತುಂಬಿದ್ದ ಎರಡು ಬಾಟಲಿಗಳನ್ನು ಸಂಗ್ಮಾ ಅವರ ಖಾಸಗಿ ಆವರಣಕ್ಕೆ ಎಸೆದು ಪರಾರಿಯಾಗಿದ್ದಾರೆ. ಒಂದನ್ನು ಮನೆಯ ಮುಂಭಾಗಕ್ಕೂ, ಮತ್ತೊಂದು ಬಾಟಲಿಯನ್ನು ಮನೆಯ ಹಿಂಭಾಗಕ್ಕೆ ಎಸೆಯಲಾಗಿದೆ. ಸ್ಥಳದಲ್ಲಿದ್ದ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸಿದ್ದಾರೆ. … Continued

ಭಾರತದಲ್ಲಿ 32,937 ಹೊಸ ಕೋವಿಡ್ -19 ಪ್ರಕರಣಗಳು ದಾಖಲು..ಕೇರಳದ ಪಾಲು 56.42% ..!

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತವು 32,937 ಹೊಸ ಕೋವಿಡ್ -19 ಪ್ರಕರಣಗಳನ್ನು ಮತ್ತು 417 ಸಾವುಗಳನ್ನು ದಾಖಲಿಸಿದೆ. ಸೋಮವಾರ ಬೆಳಿಗ್ಗೆ 8 ರ ಹೊತ್ತಿಗೆ, ಭಾರತದ ಸಕ್ರಿಯ ಪ್ರಕರಣ 3,81,947 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 35,909 ರೋಗಿಗಳು ಚೇತರಿಸಿಕೊಂಡಿದ್ದುಸಕ್ರಿಯ ಪ್ರಕರಣಗಳು 3,389 … Continued

ತಾಲಿಬಾನ್ ಸ್ವಾಧೀನದ ನಂತರ ಆತಂಕದಲ್ಲಿ ಅಫ್ಘಾನ್‌ ತೊರೆಯಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನರು: ನೋಡಿ..!

ತಾಲಿಬಾನ್ ಭಾನುವಾರ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಸೋಮವಾರ ಕಾಬೂಲ್ ವಿಮಾನ ನಿಲ್ದಾಣಕ್ಕೆ ಜನರ ಸಾಗರವೇ ಧಾವಿಸುತ್ತಿರುವುದನ್ನು ಕಾಣಬಹುದು, ಸ್ಥಳೀಯ ಪತ್ರಕರ್ತ ಚಿತ್ರೀಕರಿಸಿದ ವಿಡಿಯೋ ತುಣುಕಿನಲ್ಲಿ ಜನರು ಭಯಭೀತರಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುಂಡಿನ ಸದ್ದು ಕೂಡ ಕೇಳಿಸಿತು. ಸ್ಥಳಾಂತರಿಸುವ ಪ್ರಕ್ರಿಯೆಯ ನಡುವೆ, ಉಗ್ರಗಾಮಿ ಗುಂಪು ಭಾನುವಾರ ಅಧಿಕಾರ ವಹಿಸಿಕೊಂಡಿದ್ದರಿಂದ … Continued

ಬೆಂಗಳೂರಿನ ಮನೆಯಲ್ಲಿ ತಡರಾತ್ರಿ ನಿಗೂಢ ಸ್ಫೋಟ: ದಂಪತಿಗೆ ಗಾಯ

ಬೆಂಗಳೂರು: ಬೆಂಗಳೂರಿನ ವಿಜಯನಗರದ ಹಂಪಿನಗರದ ಮನೆಯೊಂದರಲ್ಲಿ ಭಾರಿ ಸ್ಫೋಟದಿಂದ ದಂಪತಿ ಗಾಯಗೊಂಡ ಘಟನೆ ನಡೆದಿದೆ. ತಡರಾತ್ರಿ 12.45ರ ಸುಮಾರಿಗೆ 2 ಮಹಡಿ ಕಟ್ಟಡದಲ್ಲಿ ಈ ಸ್ಫೋಟ ಸಂಭವಿಸಿದೆ. ಹಂಪಿನಗರದ ಎರಡು ಅಂತಸ್ತಿನ ಮನೆಯೊಂದರ ಮೊದಲ ಮಹಡಿಯಲ್ಲಿ ತಡರಾತ್ರಿ 12.45ರ ಸುಮಾರಿಗೆ ನಿಗೂಢ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಸೂರ್ಯನಾರಾಯಣ ಶೆಟ್ಟಿ, ಪತ್ನಿ ಪುಷ್ಪಾವತಮ್ಮ ವೃದ್ಧ ದಂಪತಿ ಗಾಯಗೊಂಡಿದ್ದು, … Continued

ಮಹಿಳೆಯರಿಗೆ ಸ್ವಾತಂತ್ರ್ಯ: ತಾಲಿಬಾನ್ ಮಾತು ನಂಬುತ್ತಿಲ್ಲ ಅಫಘನ್‌ ಮಹಿಳೆಯರು, ಅಮೆರಿಕ ಬಗ್ಗೆ ಆಕ್ರೋಶ

ಕಾಬೂಲ್: ಅಫಘಾನಿಸ್ತಾನದ ಪ್ರಜಾಸತ್ತಾತ್ಮ ಸರ್ಕಾರ ಅಧಿಕೃತವಾಗಿ ಪತನಗೊಂಡಿದ್ದು ತಾಲಿಬಾನ್ ಉಗ್ರರು ರಾಷ್ಟ್ರ ರಾಜಧಾನಿಯ ಅಧ್ಯಕ್ಷರ ಅರಮನೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ತಾಲಿಬಾನ್ ಉಗ್ರರ ಆಡಳಿತವನ್ನು ಈ ಹಿಂದೆ ಐದು ವರ್ಷ (1996ರಿಂದ 2001) ಅನುಭವಿಸಿರುವ ಅಫಘನ್ ಪ್ರಜೆಗಳು ಅಕ್ಷರಶಃ ದಿಗ್ಭ್ರಾಂತರಾಗಿದ್ದಾರೆ. ತಮ್ಮನ್ನು ಈ ಸ್ಥಿತಿಗೆ ದೂಡಿದ ಅಮೆರಿಕದ ಬಗ್ಗೆ ಅವರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ … Continued

ತಾಲಿಬಾನ್‌ಗೆ ತಲೆಬಾಗುವ ಪ್ರಶ್ನೆಯೇ ಇಲ್ಲ: ಅಫ್ಘಾನಿಸ್ತಾನದ ಉಪಾಧ್ಯಕ್ಷ ಸಲೇಹ್‌

ತಾಲಿಬಾನ್ ಭಾನುವಾರ ಕಾಬೂಲ್‌ನಲ್ಲಿರುವ ಅಧ್ಯಕ್ಷೀಯ ಅರಮನೆಯ ನಿಯಂತ್ರಣವನ್ನು ಪಡೆದುಕೊಂಡಿದೆ ಎಂದು ಹೇಳಿಕೊಂಡ ನಂತರ, ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರು ಯಾವುದೇ ಸಂದರ್ಭದಲ್ಲಿಯೂ ತಾಲಿಬಾನಿಗೆ ಎಂದಿಗೂ ತಲೆಬಾಗುವುದಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. “ನನ್ನ ನಾಯಕ ಅಹ್ಮದ್ ಶಾ ಮಸೂದ್, ಕಮಾಂಡರ್, ಲೆಜೆಂಡ್ ಮತ್ತು ಗೈಡ್. ಅವರ ಆತ್ಮ ಮತ್ತು ಪರಂಪರೆಗೆ ನಾನು ದ್ರೋಹ ಮಾಡುವುದಿಲ್ಲ. ನನ್ನ … Continued

ಹೈಟಿಯಲ್ಲಿ ಪ್ರಬಲ ಭೂಕಂಪನ : ಮೃತರ ಸಂಖ್ಯೆ 724 ಕ್ಕೇರಿಕೆ

ಹೈಟಿ : ದ್ವೀಪ ರಾಷ್ಟ್ರ ಹೈಟಿಯ ಕರಾವಳಿ ಪ್ರದೇಶದಲ್ಲಿ ಶನಿವಾರ ಸುನಾಮಿ ಭೀತಿಯ ನಡುವೆಯೇ 7.2 ರಷ್ಟು ತೀವ್ರತೆಯಷ್ಟು ಭೂಕಂಪ ಸಂಭವಿಸಿದ್ದು, ಮೃತಪಟ್ಟವರ ಸಂಖ್ಯೆ 724ಕ್ಕೇರಿದೆ ಎಂದು ವರದಿಯಾಗಿದೆ. ಕೆರಿಬಿಯನ್ ರಾಷ್ಟ್ರ ಹೈಟಿಯಲ್ಲಿ ಪ್ರಬಲ ಭೂಕಂಪನದಿಂದ ಸುಮಾರು 724 ಜನರು ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ 724 ಕ್ಕೇರಿದ್ದು, ಅವಶೇಷಗಳಡಿ ಸಿಲುಕಿರುವವರ … Continued

ವೇದ ಘೋಷ ,ಬ್ರಹ್ಮಸ್ಫೋಟದೊಂದಿಗೆ ಮಹಾಸಮಾಧಿ ಹೊಂದಿದ ಶ್ರೀರಾಮಾನಂದ ಅವಧೂತರು

ಕುಮಟಾ; ಶನಿವಾರ ರಾತ್ರಿ ಬ್ರಹ್ಮೀಭೂತರಾದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದಿವಗಿ ಮಠದ ಅವಧೂತ ಪರಂಪರೆಯ ಶ್ರೀರಾಮಾನಂದರು ಭಾನುವಾರ ಯತಿಪರಂಪರೆಯಂತೆ ಮಹಾಸಮಾಧಿ ಹೊಂದಿದರು. ಸ್ವಾಮೀಜಿ ಶನಿವಾರ ರಾತ್ರಿ ಮುಕ್ತಿಹೊಂದಿದ್ದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ಭಾನುವಾರದಂದು ಶ್ರೀಮಠದಲ್ಲಿ ಮುಂಜಾನೆಯಿಂದಲೇ ಶ್ರೀರಾಮಾನಂದರ ಸಮಾಧಿ ಪ್ರಕ್ರಿಯೇ ಆರಂಭವಾಗಿತ್ತು. ಬೆಳಿಗ್ಗೆ ಸಾವಿರಾರು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು. … Continued