ರೈತರ ಪ್ರತಿಭಟನೆ: ವಿದೇಶಿಯರ ಹಸ್ತಕ್ಷೇಪಕ್ಕೆ ಕೇಂದ್ರ ಆಕ್ಷೇಪ

ನವ ದೆಹಲಿ: ನೂತನ ಕೃಷಿ ಮಸೂದೆಗಳನ್ನು ಖಂಡಿಸಿ ನಡೆಯುತ್ತಿರುವ ರೈತರ ಹೋರಾಟದ ಕುರಿತು ಕೆಲ ವಿದೇಶಿಯರು ಹೇಳಿಕೆ ನೀಡಿದ್ದನ್ನು ಭಾರತ ಖಂಡಿಸಿದೆ. ಖ್ಯಾತ‌  ಪಾಪ್‌ ಗಾಯಕಿ‌ ರಿಹಾನಾ ಹಾಗೂ ಪರಿಸರ ಹೋರಾಟಗಾರರಾದ ಗ್ರೆಟಾ ಥಂಬರ್ಗ್‌ ರೈತರ ಹೋರಾಟಕ್ಕೆ ಬೆಂಬಲ ನೀಡಿದ ಮರುದಿನ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. ಕೆಲ ಸ್ವ ಹಿತಾಸಕ್ತಿ ಹೊಂದಿದ ಗುಂಪುಗಳು ತಮ್ಮ … Continued

ಎನ್‌ಸಿಪಿಗೆ ಬಿಜೆಪಿ ಶಾಸಕನ ೫ ಕೋಟಿ ರೂ. ದೇಣಿಗೆ !

ಮುಂಬೈ: ಶರದ್‌ ಪವಾರ್‌ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ೨೦೧೯-೨೦ನೇ ಸಾಲಿನಲ್ಲಿ ೫೯.೯೪ ಕೋಟಿ ರೂ. ಪಕ್ಷದ ದೇಣಿಗೆ ಸಂಗ್ರಹ ಮಾಡಿದ್ದು, ಕಳೆದ ವರ್ಷ ಪಕ್ಷ ಕೇವಲ ೧೨.೦೫ ಕೋಟಿ ರೂ. ದೇಣಿಗೆ ಸಂಗ್ರಹಿಸಿತ್ತು. ಶಿವಸೇನಾ, ಕಾಂಗ್ರೆಸ್‌ ನೊಂದಿಗೆ ಮಹಾ ವಿಕಾಸ ಅಗಾಢಿ ಸರಕಾರ ನಡೆಸುತ್ತಿರುವ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿಗೆ ಹಣ ಹರಿದು … Continued

ಟ್ವಿಟರ್‌ಗೆ ಕೇಂದ್ರದ ನೋಟಿಸ್‌

ನವದೆಹಲಿ: ರೈತರ ನರಮೇಧ ಎಂಬಂತೆ ತಪ್ಪು ಮಾಹಿತಿಯಿರುವ ಹ್ಯಾಷ್ ಟ್ಯಾಗ್ ಹೊಂದಿರುವ ಖಾತೆಗಳನ್ನು ತೆಗೆದು ಹಾಕುವಂತೆ ಕೇಂದ್ರ ಸರಕಾರ ಮೈಕ್ರೊ ಬ್ಲಾಗಿಂಗ್‌ ಸೈಟ್‌ ಟ್ವಿಟರ್‌ಗೆ ನೊಟೀಸ್‌ ನೀಡಿದ್ದು, ಆದೇಶ ಪಾಲನೆಗೆ ತಪ್ಪಿದರೆ ದಂಡ ವಿಧಿಸುವ ಎಚ್ಚರಿಕೆ ನೀಡಿದೆ. ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ತಂತ್ರಜ್ಞಾನ-೨೦೦೦ರ ಕಾಯ್ದೆಯ ೬೯ ಎ ಅನುಚ್ಛೇದದಡಿ ತುರ್ತು ಮಧ್ಯಂತರ … Continued

ಬ್ಯಾರಿಕೇಡ್‌ ತೆರವು ಮಾಡದಿದ್ದರೆ ಮಾತುಕತೆಯಿಲ್ಲ: ರೈತ ಸಂಘಟನೆ

ನವ ದೆಹಲಿ: ದೆಹಲಿ ಗಡಿಯಲ್ಲಿ ಪೊಲೀಸರು ರಸ್ತೆಗಳಲ್ಲಿ ನಿರ್ಮಿಸಿದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವವರೆಗೆ ಹಾಗೂ ಇಂಟರ್‌ನೆಟ್‌ ಸೇವೆಯ ತಡೆಯನ್ನು ತೆರವುಗೊಳಿಸುವವರೆಗೆ ಕೇಂದ್ರ ಸರಕಾರದೊಂದಿಗೆ ಯಾವುದೇ ಔಪಚಾರಿಕ ಮಾತುಕತೆ ನಡೆಸುವುದಿಲ್ಲ ಎಂದು ರೈತ ಹೋರಾಟದ ನೇತೃತ್ವ ವಹಿಸಿದ ಸಂಯುಕ್ತ ಕಿಸಾನ್‌ ಮೋರ್ಚಾ ತಿಳಿಸಿದೆ. ಭಾರತೀಯ ಕಿಸಾನ್‌ ಯೂನಿಯನ್‌ ಮುಖಂಡ ರಾಕೇಶ ಟಿಕಾಯತ್‌,  ಪೊಲೀಸರು ಬ್ಯಾರಿಕೇಡ್‌ ಹಾಕುವ ಮೂಲಕ ರೈತರ … Continued

ಕೊರೋನಾ: ಭಾರತ, ಅಮೆರಿಕ ಸೇರಿ ೨೦ ದೇಶಗಳ ನಾಗರಿಕರಿಗೆ ಸೌದಿ ನಿರ್ಭಂಧ

ಕೊರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೌದಿ ಅರೆಬಿಯಾ ಭಾರತ ಹಾಗೂ ಅಮೆರಿಕ ಸೇರಿದಂತೆ 20 ದೇಶಗಳ ನಾಗರಿಕರು ತನ್ನ ದೇಶಕ್ಕೆ ಆಗಮಿಸುವುದನ್ನು  ಮಂಗಳವಾರದಿಂದ ನಿಷೇಧಿಸಿದೆ. ಈ “ತಾತ್ಕಾಲಿಕ ನಿಷೇಧ” ರಾಜತಾಂತ್ರಿಕರು, ಸೌದಿ ನಾಗರಿಕರು,  ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಅನ್ವಯಿಸುವುದಿಲ್ಲ ಎಂದು ಎಎಫ್‌ಪಿ ವರದಿ ಮಾಡಿದೆ. ಆದರೆ ಇದು ಸೌದಿ … Continued

ತಾಂತ್ರಿಕ ಸಮಸ್ಯೆ: ಐಟಿಐ ವಿದ್ಯಾರ್ಥಿಗಳ ಪರೀಕ್ಷೆಗೆ ತೊಡಕು

ಬೆಂಗಳೂರು: ತಾಂತ್ರಿಕ ತೊಂದರೆಯಿಂದಾಗಿ ಐಟಿಐ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗುವ ಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ೧೭೫೦ಕ್ಕೂ ಹೆಚ್ಚು ಐಟಿಐ ಕಾಲೇಜುಗಳಿದ್ದು, ೧ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿದೆ. ಕಳೆದ ವರ್ಷ ಜುಲೈ-ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಕೊವಿಡ್‌ ಕಾರಣದಿಂದ ಮುಂದೂಡಲಾಗಿತ್ತು. ೨೦೨೦ರ ನವಂಬರ್‌ನಲ್ಲಿ ಪ್ರಾಯೋಗಿಕ ಹಾಗೂ ಎಂಜಿನೀಯರಿಂಗ್‌ ಡ್ರಾಯಿಂಗ್‌ ಪರೀಕ್ಷೆಗಳನ್ನು ನಡೆಸಲಾಗಿದೆ. ಉಳಿದ ವಿಷಯಗಳ ಪರೀಕ್ಷೆಗಳನ್ನು ಆನ್‌ಲೈನ್‌ … Continued

ವಿಶ್ವದಲ್ಲಿ ಈಗ ಸ್ತನ ಕ್ಯಾನ್ಸರ್‌ ಹೆಚ್ಚು

ನವ ದೆಹಲಿ: ಶ್ವಾಸಕೋಶ ಕ್ಯಾನ್ಸರ್‌ ಹಿಂದಿಕ್ಕಿದ ಸ್ತನ ಕ್ಯಾನ್ಸರ್‌ ಅತಿ ಹೆಚ್ಚು ಕಾಣಿಸಿಕೊಳ್ಳುವ ಕ್ಯಾನ್ಸರ್‌ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಎರಡು ದಶಕಗಳ ಹಿಂದೆ ಶ್ವಾಸಕೋಶ ಕ್ಯಾನ್ಸರ್‌ ಸಾಮಾನ್ಯವಾಗಿತ್ತು, ಆದರೆ ಈಗ ಅದು ದ್ವಿತೀಯ ಸ್ಥಾನ ತಲುಪಿದೆ. ಕರುಳಿನ ಕ್ಯಾನ್ಸರ್‌ ತೃತಿಯ ಸ್ಥಾನದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್‌ ತಜ್ಞ ಡಾ. … Continued

ಬಿಜೆಪಿ ಸರ್ಕಾರ ಕೆಟ್ಟು ನಿಂತಿರುವ ಡಕೋಟಾ ಬಸ್:ಸಿದ್ದರಾಮಯ್ಯ

ಬೆಂಗಳೂರು:  ರಾಜ್ಯದಲ್ಲಿ ಸರ್ಕಾರ ಸತ್ತಿದೆ. ಈ ಸರ್ಕಾರ ಕೆಟ್ಟು ನಿಂತಿರುವ ಡಕೋಟಾ ಬಸ್ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ  ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಿ,   ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ್‌ಶೆಟ್ಟರ್ ಅವರು ಸರ್ಕಾರ ಟೇಕ್ … Continued

ಬೋಗಸ್‌ ಬಿಲ್‌ ತೆಗೆದುಕೊಂಡಿದ್ದರೆ ತನಿಖೆ:ಕಾರಜೋಳ

ಬೆಂಗಳೂರು: ಯಾವುದೇ ಕೆಲಸ ಮಾಡದೆ ಬೋಗಸ್ ಬಿಲ್ ಮಾಡಿ ತೆಗೆದುಕೊಂಡಿದ್ದರೆ ಇಲಾಖೆಯ ಉನ್ನತಾಧಿಕಾರಿಗಳಿಂದ ತನಿಖೆ ಮಾಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಧಾನ ಪರಿಷತ್ತಿಗೆ ತಿಳಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ಆ ವರ್ಗದ ಮನೆಗಳಿಂದ ಹಿಡಿದು ಶಾಲೆ, ಮಾರುಕಟ್ಟೆ, ದೇವಾಲಯದವರೆಗೂ ರಸ್ತೆ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಅವರು ಹೋಗಿ ಬರುವ ಶಾಲೆ, … Continued

ದೆಹಲಿ ಘರ್ಷಣೆ: ದೀಪ ಸಿಧು ಮಾಹಿತಿ ಕೊಟ್ಟವರಿಗೆ ೧ ಲಕ್ಷ ರೂ. ಬಹುಮಾನ

ನವ ದೆಹಲಿ:  ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಸಂದರ್ಭದಲ್ಲಿ  ರೈತರ  ಪ್ರತಿಭಟನೆ ವೇಳೆ  ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಟ, ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಹಾಗೂ ಇತರ ಮೂವರ  ಮಾಹಿತಿ ನೀಡಿದವರಿಗೆ ಪೊಲೀಸರು ಒಂದು ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ.ಇದಲ್ಲದೆ ಬೂಟಾ ಸಿಂಗ್, ಸುಖ್‍ದೇವ್ ಸಿಂಗ್ ಹಾಗೂ ಮತ್ತಿಬ್ಬರ ಸುಳಿವು ನೀಡಿದವರಿಗೆ ಐವತ್ತು ಸಾವಿರ ರೂ.ಗಳ  … Continued