ಭಾರತದ ಮಾನವ ಸಹಿತ ಉಪಗ್ರಹ ಉಡಾವಣೆ: ಮೆನು ಸಿದ್ಧ

ಬೆಂಗಳೂರು: ಬಾಹ್ಯಾಕಾಶದಲ್ಲಿ ಭಾರತದಲ್ಲಿ ಮೊದಲ ಮಾನವ ಸಹಿತ ಉಪಗ್ರಹ ಉಡಾವಣೆಯಾದಾಗ ಅಲ್ಲಿ ಗಗನಯಾನಿಗಳಿಗೆ ಬೆಳಗ್ಗೆ ಇಡ್ಲಿ, ಉಪ್ಪಿಟ್‌, ಊಟಕ್ಕೆ ಬಿರಿಯಾನಿ, ಪುಲಾವ್‌ ಹಾಗೂ ರಾತ್ರಿ ಊಟಕ್ಕೆ ಕೂರ್ಮಾ ಹಾಗೂ ಚಪಾತಿ…..ವೈವಿಧ್ಯಮಯ ಮೆನು ಸಿಗಲಿದೆ. ಭಾರತೀಯ ಸೈನಿಕರಿಗೆ ಆಹಾರೋತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಮೈಸೂರು ಮೂಲಕ ಡಿಫೆನ್ಸ್‌ ಫುಡ್‌ ರಿಸರ್ಚ್‌ ಲ್ಯಾಬೊರೇಟರಿ ಗಗನಯಾನಿಗಳ ಮೆನುವನ್ನು ಅಂತಿಮಗೊಳಿಸಿದೆ. ಇದಲ್ಲದೇ ಕಡಲೆ ಹಿಟ್ಟಿನ … Continued

ತಪೋವನ: ಜನರ ರಕ್ಷಣೆಗೆ ಮುಂದುವರಿದ ಪ್ರಯತ್ನ

ಹಿಮಬಂಡೆ ಕುಸಿದಿದ್ದರಿಂದ ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನ ಹೈಡ್ರಲ್‌ ಪ್ರಾಜೆಕ್ಟ್‌ ಸುರಂಗದಲ್ಲಿ ಸಿಲುಕಿದ ಜನರನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರೆದಿದ್ದು, ರಾತ್ರಿಯಿಡಿ ಸರಕು ಅವಶೇಷಗಳನ್ನು ತೆಗೆಯಲಾಗಿದೆ. ೨.೫ ಕಿ.ಮೀ. ಉದ್ದದ ಸುರಂಗದಲ್ಲಿ ಸುಮಾರು ೩೫ ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಚಮೋಲಿಯ ಸುರಂಗದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ, ಮಂಗಳವಾರ ದಾರಿ ತೆರವುಗೊಳಿಸಲು ಸಾಧ್ಯವಾಗಬಹುದು ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ … Continued

ಆರು ಪತ್ರಕರ್ತರ ಬಂಧನಕ್ಕೆ ತಡೆಯಾಜ್ಞೆ

ನವದೆಹಲಿ: ರೈತರ ಪ್ರತಿಭಟನೆಯಲ್ಲಿ ಸಿಖ್‌ ವ್ಯಕ್ತಿಯೊಬ್ಬನ ಸಾವಿನ ಕುರಿತ ಟ್ವೀಟ್‌ ಕುರಿತು ದಾಖಲಾದ ಪ್ರಕರಣಗಳಲ್ಲಿ ಕಾಂಗ್ರೆಸ್‌ ಶಾಸಕ ಶಶಿ ತರೂರ್‌ ಹಾಗೂ ರಾಜದೀಪ್‌ ಸರದೇಸಾಯಿ ಸೇರಿದಂತೆ ಆರು ಪತ್ರಕರ್ತರ ಬಂಧನಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರ ನ್ಯಾಯಪೀಠ ಬಂಧನಕ್ಕೆ ತಡೆಯಾಜ್ಞೆ ನೀಡಿದೆ. ತರೂರ್‌, ರಾಜದೀಪ್‌ ಸರದೇಸಾಯಿ, ಮೃಣಾಲ್‌ ಪಾಂಡೆ, … Continued

ರಾಮ್‌ ತೇರಿ ಗಂಗಾ ಮೈಲಿ ಖ್ಯಾತಿಯ ರಾಜೀವ ಕಪೂರ್‌ ಇನ್ನಿಲ್ಲ

ರಾಮ್‌ ತೇರಿ ಗಂಗಾ ಮೈಲಿ ಖ್ಯಾತ ಹಿಂದಿ ಚಿತ್ರದ ನಟ ರಾಜೀವ ಕಪೂರ ನಿಧನರಾಗಿದ್ದಾರೆ. ೫೮ರ ಹರೆಯದ ರಾಜೀವ ಕಪೂರ್‌ ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾಜಕಪೂರ-ಕೃಷ್ಣಾ ದಂಪತಿಯ ಅವರ ಕಿರಿಯ ಪುತ್ರರಾಗಿದ್ದ ರಾಜೀವ ಕಪೂರ್‌, ರಿಷಿ ಕಪೂರ ಹಾಗೂ ರಣಧೀರ ಕಪೂರ ಅವರ ಸೋದರರಾಗಿದ್ದರು. 1983 ರಲ್ಲಿ ಏಕ್ ಜಾನ್ ಹೈ ಹಮ್ ಚಿತ್ರದೊಂದಿಗೆ ಬಾಲಿವುಡ್‌ಗೆ … Continued

ಬಿಟ್‌ ಕಾಯಿನ್‌ನಲ್ಲಿ ೧.೫ ಹೂಡಿಕೆ ಮಾಡಿದ ಟೆಸ್ಲಾ

ವಿದ್ಯುತ್‌ ಕಾರು ಉತ್ಪಾದನಾ ಸಂಸ್ಥೆ ಟೆಸ್ಲಾ ಕ್ರಿಪ್ಟೊಕರೆನ್ಸಿ ಬಿಟ್‌ಕಾಯಿನ್‌ (ಬಿಟಿಸಿ)ದಲ್ಲಿ ೧.೫ ಬಿಲಿಯನ್‌ ಡಾಲರ್‌ ಹೂಡಿಕೆ ಮಾಡಲು ಮುಂದಾಗಿದೆ. ಎಲೋನ್‌ ಮಸ್ಕ್‌ ಅವರ ಸಂಸ್ಥೆ ಟೆಸ್ಲಾ ಡಿಜಿಟಲ್‌ ಕರೆನ್ಸಿಯಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿದ ನಂತರ ಬಿಟ್‌ ಕಾಯಿನ್‌ ಪ್ರತಿ ಬಿಟಿಸಿಗೆ ೪೭,೫೧೩ ಡಾಲರ್‌ ಮುಟ್ಟಿದೆ. ಕಂಪನಿಯು ಒಂದು ಹಂತದಲ್ಲಿ ಬಿಟಿಸಿಯನ್ನು ಕರೆನ್ಸಿಯಾಗಿ ಸ್ವೀಕರಿಸುತ್ತದೆ ಎಂದು ಅಂದಾಜಿಸಲಾಗಿದೆ. … Continued

ರಾಕೇಶ ಅಸ್ತಾನೆಗೆ ಸಿಬಿಐ ಕ್ಲೀನ್‌ಚಿಟ್‌

ನವ ದೆಹಲಿ: ಸ್ಟರ್ಲಿಂಗ್ ಬಯೋಟೆಕ್ ಲಂಚ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿ ಮತ್ತು ಪ್ರಸ್ತುತ ಎನ್‌ಸಿಬಿ ಮುಖ್ಯಸ್ಥ ರಾಕೇಶ್ ಅಸ್ತಾನಾಗೆ ಕ್ಲೀನ್ ಚಿಟ್ ನೀಡಿದೆ. ಸಿಬಿಐ ಮುಖ್ಯಸ್ಥ ಹುದ್ದೆಗೆ ಮುಂಚೂಣಿಯಲ್ಲಿರುವ ಶ್ರೀ ಅಸ್ತಾನಾ, ಸಂದೇಸರ ಸಹೋದರರು ನಿರ್ವಹಿಸುತ್ತಿರುವ ಸ್ಟರ್ಲಿಂಗ್‌ ಬಯೋಟೆಕ್‌ ಅವ್ಯವಹಾರದಲ್ಲಿ ಹಣ ಪಡೆದುಕೊಂಡಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ. ಕೈಬರಹದ ಡೈರಿಗಳಲ್ಲಿ, … Continued

ಪ್ರಧಾನಿಯವರೇ ನಾವು ಆಂದೋಳನ ಜೀವಿಯಾಗಲು ಹೆಮ್ಮೆ ಪಡುತ್ತೇವೆ, ಯಾಕೆಂದರೆ ಇದು ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದೆ 

ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ರಾಜ್ಯಸಭೆಯಲ್ಲಿ ಭಾಷಣ ಮಾತನಾಡಿದ ಸಂರ್ಭದಲ್ಲಿ ಬಳಸಿದ “ಆಂದೋಳನ ಜೀವಿʼ ಎಂಬ ಪದ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ಸಂದರ್ಭದಲ್ಲಿ ನೂತನ ಕೃಷಿ ಕಾನೂನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಬಗ್ಗೆ ಪ್ರಸ್ತಾಪಿಸುವ ಸಂರ್ಭದಲ್ಲಿ ಈಗ ʼಆಂದೋಳನ ಜೀವಿʼಗಳು ನಾಯಿಕೊಡೆಗಳಂತೆ ತಲೆಎತ್ತುತ್ತಿದ್ದಾರೆ ಹಾಗೂ ಎಲ್ಲಿ ಯಾವುದೇ … Continued

ಮೋದಿ-ಬಿಡೆನ್‌ ಮಾತುಕತೆ: ಇಂಡೋ ಪೆಸಿಫಿಕ್‌ ಪ್ರದೇಶದ ಸುರಕ್ಷತೆಗೆ ಒತ್ತು

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅಮರಿಕ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ಮಾತನಾಡಿದರು. ಬಿಡೆನ್ ಜನವರಿ 20ರಂದು ಅಧಿಕಾರ ವಹಿಸಿಕೊಂಡ ನಂತರ ಇದು ಇಬ್ಬರು ನಾಯಕರ ನಡುವಿನ ಮೊದಲ ಸಂಭಾಷಣೆಯಾಗಿದೆ. ನಾವು ಪ್ರಾದೇಶಿಕ ಸಮಸ್ಯೆಗಳು ಮತ್ತು ನಮ್ಮ ಹಂಚಿಕೆಯ ಆದ್ಯತೆಗಳನ್ನು ಚರ್ಚಿಸಿದ್ದೇವೆ. ಹವಾಮಾನ ಬದಲಾವಣೆಯ ವಿರುದ್ಧ ನಮ್ಮ ಸಹಕಾರವನ್ನು ಹೆಚ್ಚಿಸಲು ನಾವು … Continued

ಕೆಂಪುಕೋಟೆ ಹಿಂಸಾಚಾರ: ಕೊನೆಗೂ ದೀಪ್‌‌ಸಿಧು ಸೆರೆ, ೭ ದಿನ ಪೊಲೀಸ್‌ ಕಸ್ಟಡಿಗೆ

ನವ ದೆಹಲಿ: ಗಣರಾಜ್ಯೋತ್ಸವದಂದು ರೈತರ ಪ್ರತಿಭಟನೆ ವೇಳೆ ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ಆರೋಪಿ ಎಂದು ಹೆಸರಿಸಲಾಗಿರುವ ಪಂಜಾಬಿ ನಟ-ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಅವರನ್ನು ದೆಹಲಿ ಪೊಲೀಸ್ ವಿಶೇಷ ಕೋಶವು ಮಂಗಳವಾರ ಬೆಳಿಗ್ಗೆ ಬಂಧಿಸಿದೆ. ಅವರನ್ನು  ದೆಹಲಿ ಮೆಟ್ರೊಪಅಲಿಟಿನ್‌ ನ್ಯಯಾಲಯಕ್ಕೆ ಹಾಜರುಪಡಿಸಲಾಗಿದ್ದ ಅವರನ್ನು ಕೋರ್ಟ್‌  ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಕೆಂಪು ಕೋಟೆಯಲ್ಲಿ … Continued

ಕೆಂಪುಕೋಟೆ ಹಿಂಸಾಚಾರ: ಜೆಪಿಸಿ ತನಿಖೆಗೆ ಕಾಂಗ್ರೆಸ್‌ ಒತ್ತಾಯ

ನವ ದೆಹಲಿ: ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ಪೆರೇಡ್ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಸೋಮವಾರ ಒತ್ತಾಯಿಸಿದರು. ಹಾಗೂ ಸ್ಮಾರಕವನ್ನು ‘ಅಪವಿತ್ರಗೊಳಿಸಲು’ ಸರ್ಕಾರವು ಸುಸಂಘಟಿತ ಸಂಚು ಮಾಡಿದೆ ಎಂದು ಆರೋಪಿಸಿದರು. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಚರ್ಚೆಯಲ್ಲಿ … Continued