ಸಿಬಿಎಸ್‌ಇ-ಜೆಇಇ ಪರೀಕ್ಷೆ ದಿನಾಂಕದಲ್ಲಿ ಕ್ಲ್ಯಾಶ್‌: ವಿದ್ಯಾರ್ಥಿಗಳಿಗೆ ಆತಂಕ

ಸಿಬಿಎಸ್ಇ 12 ನೇ ತರಗತಿ ವಿದ್ಯಾರ್ಥಿಗಳು ಐಐಟಿ ಜಂಟಿ ಪ್ರವೇಶ ಪರೀಕ್ಷೆಯೊಂದಿಗೆ (ಜೆಇಇ ಮುಖ್ಯ) ತಮ್ಮ ಬೋರ್ಡ್ ಪರೀಕ್ಷೆಗಳ ದಿನಾಂಕಗಳ ಘರ್ಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜೀವಶಾಸ್ತ್ರ-ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನ ಗುಂಪುಗಳನ್ನು ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಇದು ವಿಶೇಷವಾಗಿ ಕಷ್ಟವಾಗಿದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಫೆಬ್ರವರಿ 2 ರಂದು ಸಿಬಿಎಸ್‌ಇ 12 ನೇ … Continued

ಸೆಲ್ಫಿ ಹುಚ್ಚಿಗೆ ದಂಪತಿ ಸಾವು

ಹಾಸನ: ಸೆಲ್ಫಿ ಹುಚ್ಚಿಗೆ ನವದಂಪತಿಗಳಿಬ್ಬರು ಜೀವ ಕಳೆದುಕೊಂಡಿದ್ದಾರೆ. ಕೃತಿಕಾ ಹಾಗೂ ಅರ್ಥೇಶ ದಂಪತಿ ಹೇಮಾವತಿ ನದಿಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಬೈಕ್‌ ಮೇಲೆ ದಂಪತಿ ಹೆಂಡತಿಯ ತವರಿಗೆ ಹೋಗುವಾಗ ದಾರಿ ಮಧ್ಯೆ ನದಿಯ ದಡದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರ್ಘಟನೆ ಸಂಭವಿಸಿದೆ. ನವವಿವಾಹಿತರ ಮಧ್ಯೆ ಜಗಳ ನಡೆದಿರುವುದು ಕಂಡುಬಂದಿಲ್ಲ. ಕಾಲು ಜಾರಿ ನದಿಯಲ್ಲಿ ಬಿದ್ದಿರಬಹುದು ಎಂದು … Continued

ಸೆನೆಟ್ ದೋಷಾರೋಪಣೆ ವಿಚಾರಣೆಗೆ ಟ್ರಂಪ್‌ ಹಾಜರಾಗಲ್ಲ

ವಾಷಿಂಗ್ಟನ್‌: ಅಮೆರಿಕದ ರಾಜಧಾನಿಯಲ್ಲಿ ನಡೆದ ಗಲಭೆಗೆ ಪ್ರಚೋದನೆ ನೀಡಿದ ಕುರಿತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಸೆನೆಟ್ ದೋಷಾರೋಪಣೆ ವಿಚಾರಣೆಗೆ ಸಾಕ್ಷ್ಯ ನುಡಿಯುವಂತೆ ಕೋರಿದ್ದು, ಮಾಜಿ ಅಧ್ಯಕ್ಷರು ಯಾವುದೇ ಸಾಕ್ಷ್ಯ ಹೇಳುವುದಿಲ್ಲ ಎಂದು ಟ್ರಂಪ್‌ ಸಲಹೆಗಾರರು ತಿಳಿಸಿದ್ದಾರೆ. ಟ್ರಂಪ್‌ರ ಸಾಕ್ಷ್ಯವನ್ನು ಒತ್ತಾಯಿಸಲು ಡೆಮೋಕ್ರಾಟ್‌ಗಳಿಗೆ ಅಧಿಕಾರವಿಲ್ಲದಿದ್ದರೂ, ಜನವರಿ 6 ರಂದು ನಡೆದ ಹಿಂಸಾತ್ಮಕ ಘಟನೆಗಳಿಗೆ ಟ್ರಂಪ್‌ರನ್ನು … Continued

ಸಂಯಮದಿಂದ ವರ್ತಿಸಲು ಸರ್ಕಾರ-ರೈತರಿಗೆ ವಿಶ್ವಸಂಸ್ಥೆ ಮನವಿ

ನವದೆಹಲಿ: ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ಹಾಗೂ ಭಾರತೀಯ ಅಧಿಕಾರಿಗಳು ಮನವ ಹಕ್ಕುಗಳಿಗೆ ಧಕ್ಕೆಯಾಗದಂತೆ ಸಂಯಮದಿಂದ  ನಡೆದುಕೊಳ್ಳಬೇಕೆಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ. ಎಲ್ಲರಿಗೂ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ “ಸಮನಾದ ಪರಿಹಾರಗಳನ್ನು” ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಶಾಂತಿಯುತ ಸಭೆ ಮತ್ತು ಅಭಿವ್ಯಕ್ತಿಗೆ ಮಾನವ ಹಕ್ಕುಗಳನ್ನು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ರಕ್ಷಿಸಬೇಕು ಎಂದು ವಿಶ್ವಸಂಸ್ಥೆಯ ಮಾನವ … Continued

ನಡ್ಡಾ ಪೋಸ್ಟರ್‌ ಕಿತ್ತಿದ್ದಕ್ಕೆ ಬಿಜೆಪಿ-ಟಿಎಂಸಿ ಆರೋಪ ಪ್ರತ್ಯಾರೋಪ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ‘ಪರಿವರ್ತನ ರಥಯಾತ್ರೆ’ ಗಿಂತ ಮುಂಚೆ ಮಾಲ್ಡಾದಲ್ಲಿ ಬಿಜೆಪಿ ಪಕ್ಷದ  ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ. ಈ ಘಟನೆಗೆ ಆಡಳಿತಾರೂಢ ಟಿಎಂಸಿ ಸರ್ಕಾರವೇ ಇದಕ್ಕೆ ಕಾರಣ ಎಂದು ಬಿಜೆಪಿ ಆರೋಪಿಸಿದೆ, ಆದರೆ, ತಮ್ಮ ಪಕ್ಷದ ಮುಖಂಡರ ಮಧ್ಯದ ಭಿನ್ನಾಭಿಪ್ರಾಯಗಳಿಂದಾಗಿ ಬಿಜೆಪಿಯವರೇ ನಡ್ಡಾ ಅವರ ಪೋಸ್ಟರ್‌ಗಳನ್ನು ಕಿತ್ತು ಹಾಕಿದ್ದಾರೆ ಎಂದು … Continued

ತಿಂದ ಇಡ್ಲಿ ದುಡ್ಡು ಕೇಳಿದ್ದಕ್ಕೆ ವ್ಯಾಪಾರಿ ಹತ್ಯೆ

ಥಾಣೆ(ಮಹಾರಾಷ್ಟ್ರ): ಇಲ್ಲಿನ ಮೀರಾ ರಸ್ತೆಯಲ್ಲಿ ರಸ್ತೆ ಪಕ್ಕದಲ್ಲಿ ಇಡ್ಲಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯನ್ನು ಮೂವರು ಗ್ರಾಹಕರು ಹತ್ಯೆ ಮಾಡಿದ ಘಟನೆ ನಡೆದಿದೆ. ಮೃತನನ್ನು ವೀರೇಂದ್ರ ಯಾದವ್ ಎಂದು ಗುರುತಿಸಲಾಗಿದೆ. ಆತ ಇಡ್ಲಿ ಮಾರಾಟ ಮಾಡುತ್ತಿದ್ದ. ಮೂವರು ಗ್ರಾಹಕರು ಅವರ ರಸ್ತೆ ಬದಿಯ ಡಬ್ಬಾ ಅಂಗಡಿಗೆ ಬಂದು 20 ರೂ. ಬಾಕಿ ಇದೆ ಎಂದು ಜಗಳ ತೆಗೆದರು. … Continued

ಬ್ರಿಟನ್‌ನಲ್ಲಿ ಕೊರೋನಾ ರೂಪಾಂತರದ ವಿರುದ್ಧ ಅಸ್ಟ್ರಾಜೆನೆಕಾ ಪರಿಣಾಮಕಾರಿ

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆಅಸ್ಟ್ರಾಜೆನೆಕಾ ಬ್ರಿಟನ್‌ನಲ್ಲಿ ಮೊದಲು ಪತ್ತೆಯಾದ ಹೊಸ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ, ಲಸಿಕೆಯನ್ನು ಅಭಿವೃದ್ಧಿಪಡಿಸಿದ ಆಕ್ಸ್‌ಫರ್ಡ್ ಸಂಶೋಧಕರ ಪ್ರಕಾರ, ಹೊಸ ವೈರಸ್ ರೂಪಾಂತರಗಳಲ್ಲಿ ಇದು ಪರಿಣಾಮಕಾರಿಯಾಗಿದೆ. ನವೆಂಬರ್‌ನಲ್ಲಿ ಯುಕೆಯಲ್ಲಿ ಮೊದಲ ಬಾರಿಗೆ ಹೊಸ ವೈರಸ್‌ ರೂಪಾಂತರ ಪತ್ತೆಯಾಗಿತ್ತು. ವೈರಸ್‌ನ ಹೊಸ ರೂಪಾಂತರ ಶೀಘ್ರವಾಗಿ ಹರಡುತ್ತದೆ. ಹೊಸ ಲಸಿಕೆ ರೋಗದ ಹರಡುವಿಕೆಯನ್ನು … Continued

ವರದಕ್ಷಿಣೆ ಕಿರುಕುಳ: ಪತಿ ವಿರುದ್ಧ ಮಹಿಳಾ ಐಪಿಎಸ್‌ ಅಧಿಕಾರಿ ದೂರು

ಬೆಂಗಳೂರು: ರಾಜ್ಯದ ಹಿರಿಯ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಪತಿ ಮತ್ತು ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ನೀಡುತ್ತಿರುವ ಬಗ್ಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ತಮ್ಮ ಪತಿ ಐಎಫ್ಎಸ್ ಅಧಿಕಾರಿ ನಿತಿನ್ ಸುಭಾಷ್  ಸೇರಿದಂತೆ ಏಳು ಜನರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು … Continued

ದಾಖಲೆ ಇಲ್ಲದ ೧.೪೭ ಕೋಟಿ ರೂ. ಹಣ ವಶಕ್ಕೆ

ದಾವಣಗೆರೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಬೇನಾಮಿ ಹಣ ಪತ್ತೆಯಾಗಿದ್ದು, ಅಜಾದ್ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಕೆಆರ್ ರಸ್ತೆಯ ಗ್ಯಾಲಕ್ಸಿ ಶಾದಿ ಮಹಲ್ ಬಳಿಯಲ್ಲಿ ಈ ಹಣ ಪತ್ತೆಯಾಗಿದ್ದು, ಸ್ವಿಫ್ಟ್ ಕಾರಿನಲ್ಲಿ ಸಾಗಿಸುತ್ತಿದ್ದ 1.47 ಕೋಟಿ ರೂ.ಮೌಲ್ಯದ ಹಣವನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ. ಗ್ಯಾಲಕ್ಸಿ ಶಾದಿ ಮಹಲ್ ಬಳಿ ಎಎಸ್‍ಐ … Continued

ಕಿಸಾನ್‌ ವಿಶೇಷ ರೈಲು

ಅಗರ್ತಾಲ: ದೇಶದ ಈಶಾನ್ಯ ಪ್ರದೇಶಗಳ ರೈತರು ಮತ್ತು ಸಾಗಣೆದಾರರ ಅನುಕೂಲಕ್ಕಾಗಿ ಈಶಾನ್ಯ ಗಡಿನಾಡು ರೈಲ್ವೆ (ಎನ್‍ಎಫ್‍ಆರ್) ಕಿಸಾನ್ ವಿಶೇಷ ರೈಲುಗಳನ್ನು ಫೆ.11 ರಿಂದ ಅಗರ್ತಾಲದಿಂದ ಹೌರಾ ಮತ್ತು ಸೀಲ್ಡಾವರೆಗೆ ಓಡಿಸಲು ರೈಲ್ವೆ ಇಲಾಖೆ  ನಿರ್ಧರಿಸಿದೆ. ಕಿಸಾನ್ ವಿಶೇಷ ರೈಲು ಪ್ರತಿ ಗುರುವಾರ ವಾರಕ್ಕೊಮ್ಮೆ 19.15 ಗಂಟೆಗೆ ಅಗರ್ತಾಲದಿಂದ ಹೊರಟು ಶನಿವಾರ ಸೀಲ್ಡಾ ತಲುಪಲಿದೆ. ಧರ್ಮಾನ್ ನಗರ, … Continued