ಚೀನಾದಿಂದ ಅನೇಕ ದೇಶಗಳೇ ನಾಶವಾಗಿವೆ: 10 ಟ್ರಿಲಿಯನ್ ಡಾಲರ್ ಪರಿಹಾರಕ್ಕೆ ಟ್ರಂಪ್ ಬೇಡಿಕೆ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ವಿರುದ್ಧ ಮತ್ತೆ ಘರ್ಜಿಸಿದ್ದಾರೆ. ಚೀನಾದ ಕೋವಿಡ್-19 ನಿಂದ ದೇಶಗಳೇ ನಾಶವಾಗಿದ್ದು, ಚೀನಾ ಪರಿಹಾರ ನೀಡಬೇಕೆಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಹಿಸಿದ್ದಾರೆ. ಉತ್ತರ ಕ್ಯಾರೋಲಿನಾ ರಿಪಬ್ಲಿಕನ್ ಕನ್ವೆನ್ಷನ್ ನಲ್ಲಿ ಮಾತನಾಡಿರುವ ಟ್ರಂಪ್, ಚೀನಾದ ಕಮ್ಯುನಿಸ್ಟ್ ಪಕ್ಷದಿಂದ ಪರಿಹಾರ ಕೇಳುವುದಕ್ಕೆ ಅಮೆರಿಕ ಹಾಗೂ ವಿಶ್ವಸಮುದಾಯಕ್ಕೆ ಇದು … Continued

ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ನಿರ್ಧಾರಗಳ ವಿರುದ್ಧ ಪ್ರಧಾನಿಗೆ 93 ನಿವೃತ್ತ ಅಧಿಕಾರಿಗಳ ಸಹಿಯುಳ್ಳ ಪತ್ರ

ಕೊಚ್ಚಿ: ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ವಿವಾದಾತ್ಮಕ ನಿರ್ಧಾರಗಳ ವಿರುದ್ಧ ದೇಶದ 93 ನಿವೃತ್ತ ಅಧಿಕಾರಿಗಳು ಸಹಿಯನ್ನು ಕ್ರೂಢೀಕರಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರವನ್ನು ಬರೆಯಲಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಆತಂಕಕಾರಿ ಬೆಳವಣಿಗೆಗಳ ವಿರುದ್ಧ ಹಿರಿಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಲಕ್ಷದ್ವೀಪ ಪ್ರಜೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೊಸ ನಿಯಮಗಳನ್ನು ರೂಪಿಸಲಾಗುತ್ತಿದೆ.ಪ್ರಪುಲ್ ಪಟೇಲ್ ತೆಗೆದುಕೊಳ್ಳುತ್ತಿರುವ … Continued

ಲಸಿಕೆ ಅಧ್ಯಯನದಿಂದ ಒಳ್ಳೆಯ ಸುದ್ದಿ: ಎರಡರಿಂದಲೂ ಉತ್ತಮ ಕಾರ್ಯನಿರ್ವಹಣೆ, ಕೋವಾಕ್ಸಿನ್ನಿಗಿಂತ ಕೋವಿಶೀಲ್ಡ್‌ ಹೆಚ್ಚು ಪ್ರತಿಕಾಯ ಉತ್ಪಾದಿಸುತ್ತದೆ

ಕೋವಿಶೀಲ್ಡ್ ಕೋವಾಕ್ಸಿನ್ ಗಿಂತ ಹೆಚ್ಚಿನ ಪ್ರತಿಕಾಯಗಳನ್ನು ಪ್ರಚೋದಿಸಿತು ಎಂದು ಎರಡು ಕೋವಿಡ್ -19 ಲಸಿಕೆಗಳಲ್ಲಿ ಎರಡನ್ನೂ ಪಡೆದುಕೊಂಡ ವೈದ್ಯರು ಮತ್ತು ದಾದಿಯರನ್ನು ಒಳಗೊಂಡ ಮೊದಲ ಭಾರತೀಯ ಅಧ್ಯಯನದ ಪೂರ್ವ ಮುದ್ರಣದಲ್ಲಿ ಕಂಡುಬಂದಿದೆ . ಡಾ ಎಕೆ ಸಿಂಗ್ ಮತ್ತು ಅವರ ಸಹೋದ್ಯೋಗಿಗಳು ನಡೆಸಿದ ಅಧ್ಯಯನವು ಎರಡೂ ಲಸಿಕೆಗಳು ಉತ್ತಮ ರೋಗನಿರೋಧಕ ಪ್ರತಿಕ್ರಿಯೆಯನ್ನು ತೋರಿಸಿವೆ ಎಂದು ಹೇಳುತ್ತದೆ. … Continued

ಏಮ್ಸ್ ದೆಹಲಿಯಲ್ಲಿ ಸೋಮವಾರದಿಂದ ಕೋವಾಕ್ಸಿನ್‌ಗೆ ಮಕ್ಕಳ ಸ್ಕ್ರೀನಿಂಗ್‌ ಆರಂಭ

ನವ ದೆಹಲಿ: ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಸೋಮವಾರದಿಂದ ಕೋವಿಡ್ -19 ಲಸಿಕೆ ‘ಕೋವಾಕ್ಸಿನ್’ ನ ಕ್ಲಿನಿಕಲ್ ಪ್ರಯೋಗಗಳಿಗಾಗಿ ಮಕ್ಕಳನ್ನು ಪರೀಕ್ಷಿಸಲು ಪ್ರಾರಂಭಿಸುತ್ತದೆ ಎಂದು ಮೂಲಗಳು ತಿಳಿಸಿವೆ. 12 ರಿಂದ 18 ವರ್ಷ ವಯಸ್ಸಿನ ಮಕ್ಕಳ ಮೇಲೆ ಇತ್ತೀಚೆಗೆ ಪರೀಕ್ಷೆಗಳನ್ನು ಪ್ರಾರಂಭಿಸಿದ ಏಮ್ಸ್ ಪಾಟ್ನಾ ನಂತರ ದೆಹಲಿಯ ಏಮ್ಸ್ ಕ್ಲಿನಿಕಲ್ … Continued

78 ಕೋಟಿ ರೂ. ಮೌಲ್ಯದ ಹೆರಾಯಿನ್ ಕಳ್ಳಸಾಗಣೆ: ಇಬ್ಬರು ಮಹಿಳೆಯರ ಬಂಧನ

ಹೈದರಾಬಾದ್‌: ಜೂನ್ 5 ಮತ್ತು 6 ರಂದು ಉಗಾಂಡಾ ಮತ್ತು ಜಾಂಬಿಯಾದ ಇಬ್ಬರು ಪ್ರಯಾಣಿಕರಿಂದ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಸುಮಾರು 12 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.ಅದರ ಮೌಲ್ಯ78 ಕೋಟಿ ರೂ.ಗಳು ಅಂದಾಜಿಸಲಾಗಿದೆ. ಡಿಆರ್‌ಐ (ಕಂದಾಯ ಗುಪ್ತಚರ ನಿರ್ದೇಶನಾಲಯ) ಅಧಿಕಾರಿಗಳು ಚೆಕ್-ಇನ್ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ತಡೆದು ಬ್ಯಾಗೇಜ್‌ನಿಂದ ಸುಮಾರು 12 ಕೆ.ಜಿ ಹೆರಾಯಿನ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. … Continued

3 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೊರೊನಾವಾಕ್ ಕೋವಿಡ್‌-19 ಲಸಿಕೆಗೆ ಚೀನಾ ಅನುಮತಿ

ಬೀಜಿಂಗ್: 3 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಚೀನಾದ ಸಂಸ್ಥೆ ಸಿನೋವಾಕ್ ತಯಾರಿಸಿದ ಕೋವಿವಾಕ್ -19 ಲಸಿಕೆ ತುರ್ತು ಬಳಕೆಗೆ ಚೀನಾ ಅನುಮತಿ ನೀಡಿದೆ ಎಂದು ಸಿನೋವಾಕ್ ಅಧ್ಯಕ್ಷ ಯಿನ್ ವೀಡಾಂಗ್ ಹೇಳಿದ್ದಾರೆ. ಆದರೆ ಲಸಿಕೆಯನ್ನು ಯಾವಾಗ (ತುರ್ತು) ಬಳಕೆಗೆ ತರಲಾಗುವುದು, ಮತ್ತು ಗುಂಪಿನಲ್ಲಿ ಯಾವ ವಯಸ್ಸಿನಿಂದ ಪ್ರಾರಂಭವಾಗಬೇಕೆಂಬುದನ್ನು ಇನ್ನೂ ನಿರ್ಧರಿಸಲಾಗಿಲ್ಲ” ಎಂದು ಅವರನ್ನು ಉಲ್ಲೇಖಿಸಿ … Continued

ಕರ್ನಾಟಕದಲ್ಲಿ ಜಿಲ್ಲಾ ನೋಂದಣಿ, ಉಪನೊಂದಣಿ ಕಚೇರಿ ತೆರೆಯಲು ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಕೆಲವೊಂದು ಸರ್ಕಾರಿ ಕಚೇರಿಗಳನ್ನು ತೆರೆಯಲು ಅನುಮತಿ ನೀಡಿದೆ. ರಾಜ್ಯದ ಎಲ್ಲಾ ರಿಜಿಸ್ಟ್ರಾರ್ ಕಚೇರಿಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದು, ಕೊರೊನಾ ಮಾರ್ಗಸೂಚಿ ಅನುಸರಿಸಿ ರಿಜಿಸ್ಟ್ರಾರ್ ಕಚೇರಿಗಳನ್ನು … Continued

ದೈತ್ಯ ಡೈನೋಸಾರ್ ಅಸ್ಥಿಪಂಜರ ಚೀನಾದಲ್ಲಿ ಪತ್ತೆ.. 26 ಅಡಿ ಜುರಾಸಿಕ್ ದೈತ್ಯದ 70% ಅಸ್ಥಿಪಂಜರ ಅಖಂಡ…!

ನೈಋತ್ಯ ಚೀನಾದ ಪ್ಯಾಲಿಯಂಟೋಲಜಿಸ್ಟ್‌ಗಳು ಜುರಾಸಿಕ್ ಅವಧಿಯಿಂದ 70 ಪ್ರತಿಶತದಷ್ಟು ಪಳೆಯುಳಿಕೆ ಪತ್ತೆ ಮಾಡಿದ್ದಾರೆ ಮತ್ತು ಇದು ಸುಮಾರು 8 ಮೀಟರ್ ಉದ್ದವಿದೆ ಎಂದು ನಂಬಲಾದ ಡೈನೋಸಾರ್‌ಗೆ ಸೇರಿದೆ. 180 ದಶಲಕ್ಷ ವರ್ಷಗಳ ಹಿಂದಿನ ಪಳೆಯುಳಿಕೆ ಮೇ ತಿಂಗಳ ಕೊನೆಯಲ್ಲಿ ದಕ್ಷಿಣ ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿರುವ ಲುಫೆಂಗ್ ನಗರದಲ್ಲಿ ಪತ್ತೆಯಾಗಿದೆ. ಆವಿಷ್ಕಾರದ ನಂತರ, ಡೈನೋಸಾರ್ ಪಳೆಯುಳಿಕೆ ಸಂರಕ್ಷಣೆ … Continued

ಕರ್ನಾಟಕದಲ್ಲಿ ದೈನಂದಿನ ಕೊರೊನಾ ಪ್ರಕರಣ ಕುಸಿತ, ಆದರೆ ಸಾವಿನ ಸಂಖ್ಯೆಯಲ್ಲಿ ಇಳಿಕೆಯಿಲ್ಲ

ಬೆಂಗಳೂರು :ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ (ಭಾನುವಾರ) ಬೆಂಗಳೂರಿನಲ್ಲಿ 187 ಸೋಂಕಿತರು ಸೇರಿದಂತೆ 320 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 12,209 ಜನರಿಗೆ ಕೊರೊನಾ ಸೋಂಕು ದೃಢಪಟ್ಟ ವರದಿಯಾಗಿದೆ.ಬೆಂಗಳೂರಿನಲ್ಲಿ 2944 ಜನರಿಗೆ ಸೋಂಕು ತಗುಲಿದೆ. ಇದೇವೇಳೆಗೆ 25,659 ಜನರು ಸೋಂಕಿನಿಂದ ಚೇತರಿಸಿಕೊಂಡು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 24,09,417 ಜನರು ಗುಣಮುಖರಾಗಿ … Continued

100 ಜನರು ಮೃತಪಟ್ಟ ಆಲಿಘಡ ಕಳ್ಳಭಟ್ಟಿ ದುರಂತದ ಪ್ರಮುಖ ಆರೋಪಿ ಬಿಜೆಪಿ ಮುಖಂಡ ರಿಷಿ ಶರ್ಮಾ ಬಂಧನ

ಆಲಿಘಡ; 100 ಜನ ಮೃತಪಟ್ಟ ಕಳ್ಳಭಟ್ಟಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ಬಿಜೆಪಿ ಮುಖಂಡ ರಿಷಿ ಶರ್ಮಾನನ್ನು ಪೊಲೀಸರು ಭಾನುವಾರ ಬೆಳಗ್ಗೆ ಬುಲಂದ್‌ ಶಹರ್ ಗಡಿ ಬಳಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರುಖ ಆರೋಪಿ ರಿಷಿ ಶರ್ಮಾ, ಸುಮಾರು 10 ದಿನಗಳಿಂದ ತಲೆ ಮರೆಸಿಕೊಂಡಿದ್ದ. ಈತನನ್ನು ಪತ್ತೆ ಹಚ್ಚಿದವರಿಗೆ ಪೊಲೀಸರು 1 ಲಕ್ಷ … Continued