ಕ್ರಿಕೆಟ್‌ ನಲ್ಲಿ ವಿಚಿತ್ರ ಔಟ್‌ : ವಿಕೆಟ್‌ಕೀಪರ್‌ ಹೆಲ್ಮೆಟ್‌ ಗೆ ಸಿಲುಕಿದ ಬಾಲ್‌ : ಬ್ಯಾಟರ್‌ ಔಟ್‌ ಎಂದು ಅಂಪೈರ್‌ ತೀರ್ಪು | ವೀಕ್ಷಿಸಿ

ಕ್ರಿಕೆಟ್ ಆಟವು ವರ್ಷಗಳಲ್ಲಿ ಸುಂದರವಾಗಿ ವಿಕಸನಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ ಹೆಚ್ಚು ನವೀನ ಮತ್ತು ಪ್ರಭಾವಶಾಲಿಯಾಗಿದೆ ಮತ್ತು ಅದನ್ನು ಎದುರಿಸಲು ಬೌಲಿಂಗ್ ಕೂಡ ಅಭಿವೃದ್ಧಿಗೊಂಡಿದೆ. ಕ್ರಿಕೆಟ್ ಆಟದ ಮತ್ತೊಂದು ನಿರ್ಣಾಯಕ ಭಾಗವಾದ ಫೀಲ್ಡಿಂಗ್ ಕೂಡ ಈಗ ಬಹಳಷ್ಟು ಸುದಾರಣೆಗಳನ್ನು ಕಂಡಿದೆ. ಇವೆಲ್ಲದರ ನಡುವೆ, ಕ್ರಿಕೆಟ್ ನಲ್ಲಿ ತಮಾಷೆ ಮತ್ತು ವಿಲಕ್ಷಣ ಘಟನೆಗಳು ಪದೇ ಪದೇ ನಡೆಯುತ್ತವೆ. … Continued

ಕೆನಡಾದಲ್ಲಿ ಭಯೋತ್ಪಾದಕ ಸುಖದೂಲ್ ಸಿಂಗ್ ಹತ್ಯೆ ಮಾಡಿದ್ದು ತಾನೇ ಎಂದ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್

ನವದೆಹಲಿ: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಕೆನಡಾದ ವಿನ್ನಿಪೆಗ್ ನಗರದಲ್ಲಿ ಖಲಿಸ್ತಾನಿ ಭಯೋತ್ಪಾದಕ ಸುಖದೂಲ್ ಸಿಂಗ್ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ ಎಂದು ಆತನ ಗ್ಯಾಂಗ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ. ಪೋಸ್ಟ್‌ನಲ್ಲಿ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಸುಖಾ ದುನುಕೆ ಎಂದೂ ಕರೆಯಲ್ಪಡುವ ಸುಖದೂಲ್ ಸಿಂಗ್ ಗ್ಯಾಂಗ್‌ಸ್ಟರ್‌ಗಳಾದ ಗುರ್ಲಾಲ್ ಬ್ರಾರ್ ಮತ್ತು ವಿಕ್ಕಿ ಮಿಡ್ಖೇರಾ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. … Continued

ಸೆಪ್ಟೆಂಬರ್‌ ಕೊನೆಗೆ ಉತ್ತಮ ಮಳೆ, ಭಾರತದಲ್ಲಿ ಈ ಬಾರಿ ಸುದೀರ್ಘ ಮಳೆಗಾಲ: ಹವಾಮಾನ ಇಲಾಖೆಯ ಮಹತ್ವದ ಮಾಹಿತಿ

ನವದೆಹಲಿ : ಈ ಬಾರಿ ಸುದೀರ್ಘ ಮಳೆಗಾಲಕ್ಕೆ ಭಾರತ ಸಾಕ್ಷಿಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನೂ ಕೆಲವು ದಿನಗಳವರೆಗೆ ನೈಋತ್ಯ ಮಾನ್ಸೂನ್ ಭಾರತದಾದ್ಯಂತ ವಿಸ್ತರಿಸುವ ಸಾಧ್ಯತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಹೇಳಿದ್ದಾರೆ. ಪ್ರಸ್ತುತ ಹವಾಮಾನ ಪರಿಸ್ಥಿತಿಗಳು ಮುಂದಿನ ಕೆಲವು ದಿನಗಳಲ್ಲಿ ಮಾನ್ಸೂನ್ ಕಡಿಮೆಯಾಗುವ ಸಾಧ್ಯತೆಯಿಲ್ಲ ಎಂದು … Continued

ಸ್ವಿಟ್ಜರ್ಲೆಂಡಿನಲ್ಲಿ ಬುರ್ಖಾ, ನಿಖಾಬ್ ನಿಷೇಧ

ಬುಧವಾರ, ಸ್ವಿಟ್ಜರ್ಲೆಂಡ್‌ನ ಸಂಸತ್ತಿನ ಕೆಳಮನೆಯಾದ ನ್ಯಾಶನಲ್ ಕೌನ್ಸಿಲ್ 151-29 ಬಹುಮತದೊಂದಿಗೆ ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾಗಳನ್ನು ಒಳಗೊಂಡಂತೆ ಮುಖ ಮುಚ್ಚುವುದನ್ನು ನಿಷೇಧಿಸಲು ಮತ ಚಲಾಯಿಸಿದೆ. ಸ್ವಿಟ್ಜರ್‌ ಲ್ಯಾಂಡ್‌ ನ ಬಲಪಂಥೀಯ ಆಡಳಿತದ ಪೀಪಲ್ಸ್‌ ಪಕ್ಷವು ಈಗಾಗಲೇ ಪಾರ್ಲಿಮೆಂಟ್‌ ನ ಮೇಲ್ಮನೆಯಲ್ಲಿ ಹಿಜಾಬ್ ನಿಷೇಧದ ವಿಧೇಯಕಕ್ಕೆ ಅಂಗೀಕಾರ ಪಡೆದಿತ್ತು. ಎರಡು ವರ್ಷಗಳ ಹಿಂದೆ ನಡೆದ ರಾಷ್ಟ್ರೀಯ ಜನಾಭಿಪ್ರಾಯ … Continued

ತಪ್ಪು ದಾರಿ ನಿರ್ದೇಶಿಸಿದ ಗೂಗಲ್‌ ಮ್ಯಾಪ್ ; ಕುಸಿದ ಸೇತುವೆ ಮೇಲೆ ಕಾರು ಚಲಾಯಿಸಿದ ವ್ಯಕ್ತಿ ಸಾವು : ಗೂಗಲ್ ವಿರುದ್ಧ ಮೊಕದ್ದಮೆ

ಗೂಗಲ್ ಮ್ಯಾಪ್ಸ್ ನಿರ್ದೇಶನಗಳಂತೆ ಕಾರು ಚಲಾಯಿಸಿ ಕುಸಿದ ಸೇತುವೆ ಮೇಲೆ ಸಾಗಿದ ನಂತರ ಅಪಘಾತವಾಗಿ ಮೃತಪಟ್ಟ ಉತ್ತರ ಕೆರೊಲಿನಾದ ವ್ಯಕ್ತಿಯ ಕುಟುಂಬವು ಈಗ ತಂತ್ರಜ್ಞಾನದ ದೈತ್ಯ ಗೂಗಲ್‌ ವಿರುದ್ಧ ಮೊಕದ್ದಮೆ ಹೂಡಿದೆ. ಕುಸಿತದ ಬಗ್ಗೆ ತಿಳಿಸಲಾಗಿದೆ, ಆದರೂ ಅದರ ನ್ಯಾವಿಗೇಷನ್ ಸಿಸ್ಟಮ್ ಅದನ್ನು ನವೀಕರಿಸಲು ವಿಫಲವಾಗಿದೆ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ. ವೇಕ್ ಕೌಂಟಿ ಸುಪೀರಿಯರ್ ಕೋರ್ಟ್‌ನಲ್ಲಿ … Continued

ರಾಜತಾಂತ್ರಿಕ ಬಿಕ್ಕಟ್ಟಿನ ನಂತರ ಕೆನಡಾ ಪ್ರಜೆಗಳಿಗೆ ಭಾರತೀಯ ವೀಸಾ ಸ್ಥಗಿತಗೊಳಿಸಿದ ಸರ್ಕಾರ

ನವದೆಹಲಿ: ಭಾರತವು ಗುರುವಾರ ಕೆನಡಾದ ನಾಗರಿಕರಿಗೆ ವೀಸಾ ನೀಡುವಿಕೆಯನ್ನು “ಮುಂದಿನ ಸೂಚನೆಯವರೆಗೆ” ಸ್ಥಗಿತಗೊಳಿಸಿದೆ. ಕೆನಡಾದ ಪ್ರಜೆಗಳ ವೀಸಾ ಅರ್ಜಿಗಳ ಪ್ರಾಥಮಿಕ ಪರಿಶೀಲನೆಗಾಗಿ ನೇಮಕಗೊಂಡ ಖಾಸಗಿ ಏಜೆನ್ಸಿಯಾದ BLS ಇಂಟರ್‌ನ್ಯಾಶನಲ್‌ನ ಸೂಚನೆಯು “ಕಾರ್ಯಾಚರಣೆಯ ಕಾರಣಗಳಿಂದಾಗಿ… ಮುಂದಿನ ಸೂಚನೆ ಬರುವವರೆಗೆ ಭಾರತೀಯ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ. ಖಲಿಸ್ತಾನ್ ಪರ ಸಿಖ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ … Continued

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕೆಂಪು ಅಂಗಿ ತೊಟ್ಟು ʼಹಮಾಲಿʼಯಾದ ರಾಹುಲ್ ಗಾಂಧಿ | ವೀಕ್ಷಿಸಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ದೆಹಲಿಯ ಆನಂದ್ ವಿಹಾರ ರೈಲು ನಿಲ್ದಾಣದಲ್ಲಿ ಹಮಾಲರನ್ನು ಭೇಟಿ ಮಾಡಿದರು ಮತ್ತು ಕೆಂಪು “ಕೂಲಿ” ಶರ್ಟ್ ಮತ್ತು ಕೈಗೆ ಬ್ಯಾಡ್ಜ್ ಕಟ್ಟಿಕೊಂಡು ತಲೆಯ ಮೇಲೆ ಲಗೇಜ್ ಹೊತ್ತುಕೊಂಡು ಸಾಗಿದರು. ವೈರಲ್ ಕ್ಲಿಪ್‌ನಲ್ಲಿ, ವಯನಾಡ್ ಸಂಸದ ತಲೆಯ ಮೇಲೆ ಟ್ರಾಲಿ ಬ್ಯಾಗ್ ಇರಿಸುತ್ತಿರುವುದು ಹಾಗೂ ಪೋರ್ಟರ್‌ಗಳು ಅವರನ್ನು ಸುತ್ತುವರೆದಿರುವುದನ್ನು … Continued

ಕಾವೇರಿ ವಿವಾದ: ತಮಿಳುನಾಡಿಗೆ ನೀರು ಬಿಡುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ : ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌ 15 ದಿನಗಳ ಕಾಲ ಪ್ರತಿದಿನ 5 ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ. ಅರ್ಜಿ ವಿಚಾರಣೆ ನಡೆಸಿದ ಬಿ.ಆರ್ ಗವಾಯಿ ನೇತೃತ್ವದ ತ್ರಿ ಸದಸ್ಯ ಪೀಠವು, ಕಾವೇರಿ ನಿಯಂತ್ರಣ ಆಯೋಗ ಮತ್ತು ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶಗಳು ಮತ್ತು … Continued

ಕರ್ನಾಟಕದ ಹಲವೆಡೆ ಐದಾರು ದಿನ ಗುಡುಗು ಸಹಿತ ಮಳೆಯ ಮುನ್ಸೂಚನೆ

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 27ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಮತ್ತು ಒಳನಾಡಿನ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳ ಕಾಲ ಕರಾವಳಿಯ ಬಹುತೇಕ ಭಾಗಗಳಲ್ಲಿ, ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ … Continued

ಕಾವೇರಿ ವಿವಾದ: ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಕೇಂದ್ರ ಜಲಶಕ್ತಿ ಸಚಿವರ ಭೇಟಿ

ನವದೆಹಲಿ : ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ರಾಜ್ಯದ ಜನಪ್ರತಿನಿಧಿಗಳು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಅವರನ್ನು ಗುರುವಾರ ಭೇಟಿಯಾಗಿದ್ದಾರೆ. ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಗಜೇಂದ್ರ ಸಿಂಗ್ ಶೇಖಾವತ್ ನಿವಾಸದಲ್ಲಿ ಭೇಟಿಯಾಗಿ ನೀರು ಹಂಚಿಕೆ ವಿವಾದದ ಕುರಿತು ಮಾತುಕತೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ … Continued