2024ರ ಲೋಕಸಭೆ ಚುನಾವಣೆ-ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ : ನರೇಂದ್ರ ಮೋದಿ Vs ರಾಹುಲ್‌ ಗಾಂಧಿ ; ಸಾಮಾನ್ಯ ವರ್ಗ, ಮುಸ್ಲಿಮರ ಒಲವು ಯಾರತ್ತ..?

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಮುನ್ನ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆಯಲ್ಲಿ ಪ್ರಧಾನಿ ಸ್ಥಾನಕ್ಕೆ ರಾಹುಲ್ ಗಾಂಧಿ ಮುಸ್ಲಿಮರ ಮೊದಲ ಆಯ್ಕೆಯಾಗಿದ್ದಾರೆ. ಹಾಗೂ ಮುಂದುವರಿದ ವರ್ಗಗಳ ಮತದಾರರಲ್ಲಿ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಮೊದಲ ಆದ್ಯತೆಯ ಆಯ್ಕೆಯಾಗಿದ್ದಾರೆ ಎಂದು ಕಂಡುಬಂದಿದೆ. ಸಮೀಕ್ಷೆಯ ಪ್ರಕಾರ, 70 %ರಷ್ಟು ಮುಂದುವರಿದ ಅಥವಾ ಸಾಮಾನ್ಯ ವರ್ಗಗಳ ಮತದಾರರು ನರೇಂದ್ರ ಮೋದಿ ಅವರು … Continued

ಏಷ್ಯನ್ ಗೇಮ್ಸ್ 2023 : 4×400 ಮೀ ಓಟದಲ್ಲಿ ಚಿನ್ನ ಗೆದ್ದ ಭಾರತದ ಪುರುಷರ ರಿಲೇ ತಂಡ

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಅಕ್ಟೋಬರ್ 4, ಬುಧವಾರ ವಿವಿಧ ವಿಭಾಗಗಳಲ್ಲಿ ಕ್ರೀಡೆಯಲ್ಲಿ ಅಥ್ಲೆಟಿಕ್ಸ್ ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪದಕಗಳನ್ನು ತಂದು ಕೊಡುವುದನ್ನು ಮುಂದುವರೆಸಿದೆ. ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಅವರ ಚಿನ್ನ ಸೇರಿದಂತೆ ಡಬಲ್ ಪೋಡಿಯಂ ಫಿನಿಶ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳ ಸಾಧನೆಯನ್ನು ಮುಖ್ಯವಾಗಿಸಿದೆ. ಬುಧವಾರ, ಮುಹಮ್ಮದ್ ಅನಾಸ್, ಅಮೋಜ್ ಜಾಕೋಬ್, ಮುಹಮ್ಮದ್ … Continued

ಗೇಮಿಂಗ್ ಆಪ್ ಪ್ರಕರಣದಲ್ಲಿ ರಣಬೀರ್ ಕಪೂರಗೆ ಇ.ಡಿ.ಯಿಂದ ಸಮನ್ಸ್

ನವದೆಹಲಿ: ಗೇಮಿಂಗ್ ಆಪ್ ಒಳಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟ ರಣಬೀರ್ ಕಪೂರ್ ಅವರಿಗೆ ಶುಕ್ರವಾರ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ಅಪ್ಲಿಕೇಶನ್ ಅನ್ನು ಪ್ರಚಾರ ಮಾಡುವ ಹಲವಾರು ಜಾಹೀರಾತುಗಳಲ್ಲಿ ನಟ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದಾರೆ. ಒಂದು ಅಪರಾಧದ ಆದಾಯದಿಂದ ಅವರಿಗೆ ದೊಡ್ಡ ಮೊತ್ತದ ಹಣವನ್ನು ವಿನಿಮಯವಾಗಿ ನೀಡಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ. … Continued

ಶಿರಸಿ: ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೂರು ವರ್ಷದ ಮಗು ಸಾವು

ಶಿರಸಿ: ಪುಟ್ಟ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದಿದೆ. ಶಿರಸಿಯ ಸಿ.ಪಿ.ಬಜಾರಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತ ಬಾಲಕಿಯನ್ನು ಅನುಶ್ರೀ ರಾಜಶೇಖರ ನೂಲಾಶೆಟ್ಟರ (೩) ಎಂದು ಗುರುತಿಸಲಾಗಿದೆ. ಈಕೆಯ ತಾಯಿ ಬಾವಿಯಿಂದ ನೀರು ತರಲು ತೆರಳಿದ್ದ ವೇಳೆ ಬಾಲಕಿಯೂ ಜೊತೆ ಹೋಗಿದ್ದ ವೇಳೆ ಈ ದುರ್ಘಟನೆ … Continued

ಅಕ್ಟೋಬರ್‌ 5ರಂದು ಮಹತ್ವದ ಸಭೆ ಕರೆದ ಶಿಕ್ಷಣ ಇಲಾಖೆ : ಬೆಂಗಳೂರಲ್ಲಿ ಶಾಲಾ ಸಮಯ ಬದಲಾವಣೆ..?

ಬೆಂಗಳೂರು : ಬೆಂಗಳೂರು ನಗರದಲ್ಲಿ ಶಾಲಾ ಸಮಯ ಬದಲಾವಣೆ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಅಕ್ಟೋಬರ್ 5ರಂದು ಮಹತ್ವದ ಸಭೆ ಕರೆದಿದೆ. ನಗರದಲ್ಲಿ ವೈಜ್ಞಾನಿಕವಾಗಿ ಸಂಚಾರ ವ್ಯವಸ್ಥೆ ಮಾಡಿ ಸಂಚಾರ ದಟ್ಟಣೆ ಕಡಿಮೆ ಮಾಡುವಂತೆ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಶಾಲಾ … Continued

ಏಷ್ಯನ್ ಗೇಮ್ಸ್ 2023 : ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾಗೆ ಚಿನ್ನ, ಕಿಶೋರ ಜೆನಾಗೆ ಬೆಳ್ಳಿ

ಚೀನಾದ ಹ್ಯಾಂಗ್‌ಝೌದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಜಾವೆಲಿನ್ ಫೈನಲ್‌ನಲ್ಲಿ ಇಬ್ಬರು ಭಾರತೀಯರು ಪ್ರಾಬಲ್ಯ ಮೆರೆದರು. ನೀರಜ ಚೋಪ್ರಾ ಅವರು ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಜಾವೆಲಿನ್ ಚಿನ್ನದ ಪದಕವನ್ನು ಉಳಿಸಿಕೊಂಡರು ಮತ್ತು ಉದಯೋನ್ಮುಖ ತಾರೆ ಕಿಶೋರ್ ಜೆನಾ ಅವರು ಬೆಳ್ಳಿ ಗೆದ್ದರು. ಮಹಿಳೆಯರ ಜಾವೆಲಿನ್ ನಲ್ಲಿ ಅನ್ನು ರಾಣಿ ಚಿನ್ನದ ಪದಕವನ್ನು ಗೆದ್ದ ಮಾರನೇ ದಿನ, 12 … Continued

ದೆಹಲಿ ಮದ್ಯ ನೀತಿ ಪ್ರಕರಣ : ಮನೆ ಇ.ಡಿ. ದಾಳಿ ನಡೆದ ಕೆಲವೇ ಗಂಟೆಗಳ ನಂತರ ಎಎಪಿ ನಾಯಕ ಸಂಜಯ ಸಿಂಗ್ ಬಂಧನ

ನವದೆಹಲಿ: ದೆಹಲಿ ಮದ್ಯ ನೀತಿಯ ತನಿಖೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷ (AAP)ಕ್ಕೆ ಜಾರಿ ನಿರ್ದೇಶನಾಲಯವು ಶಾಕ್‌ ನೀಡಿದೆ. (ED). ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್ ಅವರನ್ನು ಇ.ಡಿ. ಇಂದು ಬುಧವಾರ (ಅಕ್ಟೋಬರ್‌ 4) ಬಂಧಿಸಿದೆ. ಬುಧವಾರ ಬೆಳಗ್ಗೆಯಿಂದಲೇ ಸಂಸದರ ದೆಹಲಿ ನಿವಾಸದಲ್ಲಿ ಶೋಧ ಕಾರ್ಯ … Continued

ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಬ್ಸಿಡಿ 300 ರೂ.ಗೆ ಹೆಚ್ಚಿಸಿದ ಕೇಂದ್ರ ಸರ್ಕಾರ

ನವದೆಹಲಿ: ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದ ಬಡ ಮಹಿಳೆಯರಿಗೆ ನೀಡುವ ಸಬ್ಸಿಡಿಯನ್ನು ಪ್ರತಿ ಸಿಲಿಂಡರ್‌ಗೆ ಪ್ರಸ್ತುತ 200 ರೂ.ಗಳಿಂದ 300 ರೂ.ಗಳಿಗೆ ಸರ್ಕಾರ ಬುಧವಾರ (ಅಕ್ಟೋಬರ್ 4) ಹೆಚ್ಚಿಸಿದೆ ಎಂದು ಕೇಂದ್ರ ಸಚಿವ ಅನುರಾಗ ಠಾಕೂರ್ ಹೇಳಿದ್ದಾರೆ. ಉಜ್ವಲಾ ಫಲಾನುಭವಿಗಳು ಪ್ರಸ್ತುತ 14.2 ಕೆಜಿ ಸಿಲಿಂಡರ್‌ಗೆ 703 ರೂ.ಗಳನ್ನು ಪಾವತಿಸುತ್ತಿದ್ದರು. ಮಾರುಕಟ್ಟೆ ಬೆಲೆ … Continued

ರಾಜ್ಯದಲ್ಲಿ ಬರ ಪರಿಸ್ಥಿತಿ : ನಾಳೆಯಿಂದ ಕೇಂದ್ರ ತಂಡದಿಂದ 12 ಜಿಲ್ಲೆಗಳಲ್ಲಿ ಪರಿಶೀಲನೆ

ಬೆಂಗಳೂರು : ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಬರ ಸಮೀಕ್ಷೆಗಾಗಿ ನಾಳೆ, ಗುರುವಾರ ರಾಜ್ಯಕ್ಕೆ ಕೇಂದ್ರ ಸರ್ಕಾರದ ಮೂರು ತಂಡ ಭೇಟಿ ನೀಡಿ ಬರದ ಸ್ಥಿತಿಯ ಕುರಿತು ಪರಿಶೀಲನೆ ನಡೆಸಲಿದೆ. ನಾಳೆಯಿಂದ ಅಕ್ಟೋಬರ್ 9ರ ವರೆಗೆ ಬೆಳಗಾವಿ, ಬಾಗಲಕೋಟೆ, ಧಾರವಾಡ, ವಿಜಯಪುರ, ಹಾವೇರಿ, ಗದಗ, ಕೊಪ್ಪಳ, ವಿಜಯನಗರ, ಚಿಕ್ಕಬಳ್ಳಾಪುರ, … Continued

ಎಚ್‌ಎಎಲ್‌ನಿಂದ ಮೊದಲ ಎಲ್‌ಸಿಎ ತೇಜಸ್ ತರಬೇತು ವಿಮಾನ ಸ್ವೀಕರಿಸಿದ ಭಾರತೀಯ ವಾಯುಪಡೆ

ಭಾರತೀಯ ವಾಯುಪಡೆಯು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿಂದ ಮೊದಲ ಎಲ್‌ಸಿಎ (LCA) ತೇಜಸ್ ತರಬೇತುದಾರ ವಿಮಾನವನ್ನು ಬುಧವಾರ ಸ್ವೀಕರಿಸಿದೆ. LCA ತೇಜಸ್ ಅವಳಿ ಆಸನವುಳ್ಳ ಹಗುರವಾದ, ಎಲ್ಲಾ ಹವಾಮಾನದ ಬಹು-ಪಾತ್ರದ 4.5 ಪೀಳಿಗೆಯ ವಿಮಾನವಾಗಿದೆ. ಈ ದಿನವನ್ನು ಐತಿಹಾಸಿಕ ಎಂದು ಕರೆದ ಎಚ್‌ಎಎಲ್, ಅಂತಹ ವಿಮಾನ ತಯಾರಿಸಿದ ಮತ್ತು ತಮ್ಮ ರಕ್ಷಣಾ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ … Continued