20 ವರ್ಷಗಳ ಕಾಲ ಕೋಮಾದಲ್ಲಿದ್ದ ಸೌದಿ ಅರೇಬಿಯಾದ ‘ಸ್ಲೀಪಿಂಗ್ ಪ್ರಿನ್ಸ್’ ಅಲ್ ವಲೀದ್ ಬಿನ್ ಖಲೀದ್ ನಿಧನ

ನವದೆಹಲಿ:  “ಸ್ಲೀಪಿಂಗ್ ಪ್ರಿನ್ಸ್” ಎಂದು ವ್ಯಾಪಕವಾಗಿ ಕರೆಯಲ್ಪಡುವ ಸೌದಿ ರಾಜಮನೆತನದ ಪ್ರಿನ್ಸ್ ಅಲ್ ವಲೀದ್ ಬಿನ್ ಖಲೀದ್ ಬಿನ್ ತಲಾಲ್ ಅಲ್ ಸೌದ್ ಕೋಮಾಕ್ಕೆ ಜಾರಿದ ಸುಮಾರು 20 ವರ್ಷಗಳ ನಂತರ ನಿಧನರಾಗಿದ್ದಾರೆ. ಅವರಿಗೆ 36 ವರ್ಷ ವಯಸ್ಸಾಗಿತ್ತು. ಏಪ್ರಿಲ್ 1990 ರಲ್ಲಿ ಜನಿಸಿದ ಪ್ರಿನ್ಸ್ ಅಲ್ ವಲೀದ್, ಪ್ರಮುಖ ಸೌದಿ ರಾಜಮನೆತನದವರೂ ಮತ್ತು ಬಿಲಿಯನೇರ್ … Continued

ಎಎಸ್‌ಐ ಆಗಿದ್ದ ಲಿವ್-ಇನ್ ಸಂಗಾತಿ ಕೊಂದು ಆಕೆ ನಿಯೋಜನೆಗೊಂಡಿದ್ದ ಪೊಲೀಸ್ ಠಾಣೆಗೆ ಬಂದು ಶರಣಾದ ಸಿಆರ್‌ಪಿಎಫ್ ಜವಾನ

ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಶುಕ್ರವಾರ ರಾತ್ರಿ ಅವರ ಲಿವ್-ಇನ್ ಪಾರ್ಟ್ನರ್‌ ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಶನಿವಾರ ಬೆಳಿಗ್ಗೆ ಆ ವ್ಯಕ್ತಿ ಕೊಲೆಯಾದ ಮಹಿಳಾ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲಾಗಿದ್ದ ಪೊಲೀಸ್ ಠಾಣೆಗೆ ನಡೆದು ಬಂದು ಶರಣಾದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಕೊಲೆಯಾದ ಅರುಣಾಬೆನ್ ನಟುಭಾಯಿ ಜಾದವ್ … Continued

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇಂದು ವಿಪರೀತ ಮಳೆಯಾಗುವ ಮುನ್ಸೂಚನೆ; ರೆಡ್‌ ಅಲರ್ಟ್‌ ಘೋಷಣೆ

ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಜುಲೈ 20ರಿಂದ ಎರಡು ದಿನ ಕೆಲ ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ರೆಡ್‌ ಅಲರ್ಟ್‌ ನೀಡಲಾಗಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಜುಲೈ ಜುಲೈ 20ರಂದು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, … Continued

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ವಿಭು ಬಕ್ರು ಪ್ರಮಾಣ ವಚನ

ಬೆಂಗಳೂರು : ಕರ್ನಾಟಕ ಹೈಕೋರ್ಟ್‌ನ 35ನೇ ಮುಖ್ಯ ನ್ಯಾಯಮೂರ್ತಿಯಾಗಿ ವಿಭು ಬಕ್ರು ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರಚಂದ ಗೆಹ್ಲೋಟ್‌ ಅವರು ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾ. ವಿಭು ಬಕ್ರು ಅವರಿಗೆ ಪ್ರಮಾಣ ವಚನ ಬೋಧಿಸಿದರು. ನ್ಯಾ. ಬಕ್ರು ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ … Continued

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾಮಿಕ್ ಪುಸ್ತಕಗಳಲ್ಲಿ ಅಡಗಿಸಿಟ್ಟಿದ್ದ 40 ಕೋಟಿ ರೂ. ಮೌಲ್ಯದ ಕೊಕೇನ್ ವಶ

ಬೆಂಗಳೂರು : ಶನಿವಾರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೂಪರ್ ಹೀರೋ ಕಾಮಿಕ್ ಪುಸ್ತಕಗಳ ಒಳಗೆ ಅಡಗಿಸಿಟ್ಟಿದ್ದ ನಾಲ್ಕು ಕಿಲೋಗ್ರಾಂಗಳಷ್ಟು ಕೊಕೇನ್ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 40 ಕೋಟಿ ರೂ.ಗಳು ಎಂದು ಹೇಳಲಾಗಿದೆ. ಈ ಸಂಬಂಧ ಒಬ್ಬ ಪ್ರಯಾಣಿಕನನ್ನು ಬಂಧಿಸಲಾಗಿದೆ. ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಶನಿವಾರ (ಜುಲೈ 18) … Continued

ಮೈ ಜುಂ ಎನ್ನುವ ವೀಡಿಯೊ | ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿಯನ್ನು ರಕ್ಷಿಸಿದ ಹೊಟೇಲ್‌ ಸಿಬ್ಬಂದಿ

ಜುಲೈ 18 ರಂದು ಬಾರಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ವಯಕ್ತಿಯೊಬ್ಬನನ್ನು ರಕ್ಷಿಸಿದ ವೀಡಿಯೊವೊಂದು ವೈರಲ್‌ ಆಗಿದೆ. ರಾಜಸ್ತಾನದ ಅಜ್ಮೀರ್‌ನಲ್ಲಿ ಭಾರಿ ಮಳೆಯಾದ ನಂತರ, ಖ್ವಾಜಾ ಗರೀಬ್ ನವಾಜ್ ಅವರ ಪವಿತ್ರ ದರ್ಗಾ ಸೇರಿದಂತೆ ನಗರದ ಹಲವಾರು ಭಾಗಗಳು ತೀವ್ರವಾಗಿ ಜಲಾವೃತಗೊಂಡವು. ಮಳೆಯಿಂದಾಗಿ ದೇವಾಲಯದ ಸುತ್ತಲಿನ ಕಿರಿದಾದ ಹಾದಿಗಳು ಜಲಾವೃತಗೊಂಡು, ಅವು ವೇಗವಾಗಿ ಹರಿಯುವ … Continued

ʼಕಿಂಗ್’ ಸಿನೆಮಾದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ನಟ ಶಾರುಖ್ ಖಾನಗೆ ಗಾಯ

ಮುಂಬೈ: ಕಿಂಗ್‌ ಸಿನೆಮಾದ ಚಿತ್ರೀಕರಣ ವೇಳೆ ಶಾರುಖ್ ಖಾನ್ ಅವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮುಂಬೈನ (Mumbai) ಗೋಲ್ಡನ್ ಟೊಬ್ಯಾಕೊ ಸ್ಟುಡಿಯೋದಲ್ಲಿ ಸಾಹಸ ದೃಶ್ಯವನ್ನು ಚಿತ್ರೀಕರಿಸುವಾಗ ಶಾರುಖ್‌ ಖಾನ್‌ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯದ ವಿವರಗಳು ಗೌಪ್ಯವಾಗಿ ಉಳಿದಿದ್ದರೂ, ಶಾರುಖ್ ಅವರಿಗೆ ಒಂದು ತಿಂಗಳು ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ, ವೈದ್ಯಕೀಯ … Continued

ಡಿಸಿಎಂ ಡಿಕೆ ಶಿವಕುಮಾರ ಬೆಂಗಾವಲು ವಾಹನ ಪಲ್ಟಿ

ಮಂಡ್ಯ: ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾದ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ವ್ಯಾಪ್ತಿಯ ಎಕ್ಸ್‌ಪ್ರೆಸ್ ಹೈವೇಯ ಗೌಡಹಳ್ಳಿ ಟಿಎಂ ಹೊಸೂರು ಬಳಿಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಈ ಘಟನೆ ನಡೆದಿದೆ. ಮೈಸೂರಿನಲ್ಲಿ ಕಾಂಗ್ರೆಸ್‌ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ … Continued

ಕನ್ನಡ-ಕರ್ನಾಟಕದ ಬಗ್ಗೆ ಅವಹೇಳನ ; ಪಶ್ಚಿಮ ಬಂಗಾಳದ ವ್ಯಕ್ತಿ ಬಂಧನ

ಬೆಂಗಳೂರು: ಕರ್ನಾಟಕ (Karnataka) ಮತ್ತು ಕನ್ನಡ ಭಾಷಿಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜುಲೈ 17 ರಂದು ಬೆಳಗ್ಗೆ 9:30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಆರ್ಡರ್ ಮಾಡಿದ್ದ ಟಿ-ಶರ್ಟ್ ತಲುಪಿಸಲು ವಿಳಾಸ ದೃಢೀಕರಣಕ್ಕಾಗಿ ಡೆಲಿವರಿ ಎಕ್ಸಿಕ್ಯೂಟಿವ್ ರಂಜಿತ್ … Continued

ಆಗಸ್ಟ್ 11 ರಿಂದ ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ

ಬೆಂಗಳೂರು: ರಾಜ್ಯದ ವಿಧಾನ ಮಂಡಲದ ಮುಂಗಾರು ಅಧಿವೇಶನ ಆಗಸ್ಟ್ 11 ರಿಂದ 22ರವರೆಗೆ 9 ದಿನಗಳ ಕಾಲ ನಡೆಯಲಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಆಗಸ್ಟ್ 11 ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಜಂಟಿ ಅಧಿವೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕರ್ನಾಟಕ ರೋಹಿತ್ ವೇಮುಲಾ ಮಸೂದೆ, ಕರ್ನಾಟಕ … Continued