ಓಂಕಾರೇಶ್ವರದಲ್ಲಿ108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರು ಗುರುವಾರ ಓಂಕಾರೇಶ್ವರದಲ್ಲಿ ಆದಿ ಶಂಕರಾಚಾರ್ಯರ ‘ಏಕತ್ವದ ಪ್ರತಿಮೆ’ಯನ್ನು ಅನಾವರಣಗೊಳಿಸಿದ್ದಾರೆ. 8 ನೇ ಶತಮಾನದ ಹಿಂದೂ ತತ್ವಜ್ಞಾನಿ ಮತ್ತು ಸಂತನ ಜೀವನ ಮತ್ತು ತತ್ವಶಾಸ್ತ್ರದ ಕುರಿತ ಈ ಯೋಜನೆಗೆ ರಾಜ್ಯ ಕ್ಯಾಬಿನೆಟ್ ಕಳೆದ ವರ್ಷ ಅನುಮೋದನೆ ನೀಡಿತ್ತು. ಈ 108 ಅಡಿ ಎತ್ತರದ ಪ್ರತಿಮೆಯು ಓಂಕಾರೇಶ್ವರದ ಮಂಧಾತ ಪರ್ವತದ … Continued

ಶರದ್ ಪವಾರ್ ಬಣದ ಎನ್‌ಸಿಪಿಯ 10 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ ಅಜಿತ ಪವಾರ್ ಬಣ

ಮುಂಬೈ: ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಬಣವು ಪಕ್ಷ ವಿರೋಧಿ ಚಟುವಟಿಕೆಗಳ ಕಾರಣಕ್ಕಾಗಿ ಶರದ್ ಪವಾರ್ ಪಾಳೆಯದ ಶಾಸಕರ ವಿರುದ್ಧ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಅನರ್ಹತೆ ಅರ್ಜಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಅನರ್ಹಗೊಳಿಸುವ ಅರ್ಜಿಯಲ್ಲಿ ಹೆಸರಿಸಲಾದ ವ್ಯಕ್ತಿಗಳಲ್ಲಿ ಶರದ್ ಪವಾರ್ ಪಾಳಯದ ಜಯಂತ ಪಾಟೀಲ, ಜಿತೇಂದ್ರ … Continued

ರೈಲಿನಲ್ಲಿ ಮಹಿಳಾ ಪೋಲೀಸ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ : ಪೊಲೀಸರಿಗೆ ಬೇಕಾಗಿದ್ದ ಆರೋಪಿ ಎನ್‌ಕೌಂಟರ್‌ನಲ್ಲಿ ಸಾವು

ಅಯೋಧ್ಯಾ : ಕಳೆದ ತಿಂಗಳು ರೈಲು ಕಂಪಾರ್ಟ್‌ಮೆಂಟ್‌ನಲ್ಲಿ “ರಕ್ತದ ಮಡುವಿನಲ್ಲಿ” ಬಿದ್ದಿದ್ದ ಮಹಿಳಾ ಪೋಲೀಸ್ ಮೇಲೆ ದಾಳಿ ಮಾಡಿದ ಆರೋಪದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ಶುಕ್ರವಾರ ಅಯೋಧ್ಯೆಯಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ. ಎನ್‌ಕೌಂಟರ್ ವೇಳೆ ಇತರ ಇಬ್ಬರು ವ್ಯಕ್ತಿಗಳಿಗೆ ಗುಂಡು ತಗುಲಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತರ ಪ್ರದೇಶ ಪೊಲೀಸ್ ಮತ್ತು ಲಕ್ನೋ ವಿಶೇಷ ಕಾರ್ಯಪಡೆ … Continued

ಮತ್ತೆ ಡಿಲಿಮಿಟೇಶನ್ ಚರ್ಚೆ : ದಕ್ಷಿಣ ರಾಜ್ಯಗಳು ಡಿಲಿಮಿಟೇಶನ್ ವಿರೋಧಿಸುತ್ತಿರುವುದು ಏಕೆ…?

ನವದೆಹಲಿ : ನವದೆಹಲಿ : ಡಿಲಿಮಿಟೇಶನ್ ನಂತರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳು ಕೆಲವು ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಉತ್ತರದ ಕೆಲವು ರಾಜ್ಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯು ದಕ್ಷಿಣ ಭಾರತಕ್ಕಿಂತ ವೇಗವಾಗಿದೆ. ತುಲನಾತ್ಮಕವಾಗಿ ಕಡಿಮೆ ಜನಸಂಖ್ಯೆಯ ಬೆಳವಣಿಗೆಯ ಪರಿಣಾಮವಾಗಿ, ಡಿಲಿಮಿಟೇಶನ್ ನಂತರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ಕೆಲವು ಲೋಕಸಭಾ … Continued

ಚಂದ್ರಯಾನ-3 : ಚಂದ್ರನ ಮೇಲೆ ಬೆಳಗಾಗುತ್ತಿದ್ದಂತೆ ಪ್ರಗ್ಯಾನ್ ರೋವರ್, ವಿಕ್ರಂ ಲ್ಯಾಂಡರ್ ಪುನಶ್ಚೇತನಗೊಳಿಸಲು ಇಸ್ರೋ ಸಿದ್ಧತೆ

ನವದೆಹಲಿ : ಚಂದ್ರನ ದಕ್ಷಿಣ ಧ್ರುವದ ಮೇಲೆ ಬೆಳಕಾಗುತ್ತಿದ್ದಂತೆ, ಇಸ್ರೋ ಈಗ ತನ್ನ ಚಂದ್ರಯಾನ-3 ರ ಸೌರಶಕ್ತಿ ಚಾಲಿತ ಲ್ಯಾಂಡರ್ ವಿಕ್ರಂ ಮತ್ತು ರೋವರ್ ಪ್ರಗ್ಯಾನ್‌ನೊಂದಿಗೆ ಸಂವಹನವನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿದೆ. ಅವುಗಳನ್ನು ಪುನರುಜ್ಜೀವನಗೊಳಿಸಿದರೆ ವೈಜ್ಞಾನಿಕ ಪ್ರಯೋಗಗಳನ್ನು ಮುಂದುವರಿಸಬಹುದಾಗಿದೆ. ಲ್ಯಾಂಡರ್ ಮತ್ತು ರೋವರ್ ಎರಡನ್ನೂ ಈ ತಿಂಗಳ ಆರಂಭದಲ್ಲಿ ಚಂದ್ರನಲ್ಲಿ ರಾತ್ರಿಯಾಗುವ ಮೊದಲು ಕ್ರಮವಾಗಿ ಸೆಪ್ಟೆಂಬರ್ 4 … Continued

ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲಿಯೂ ಅಂಗೀಕಾರ

ನವದೆಹಲಿ: ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಮಹತ್ವದ ಮಸೂದೆಗೆ ರಾಜ್ಯಸಭೆ ಗುರುವಾರ ಅನುಮೋದನೆ ನೀಡಿದೆ. 128ನೇ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಬುಧವಾರ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕರಿಸಲಾಯಿತು. ರಾಜ್ಯಸಭೆಯ ಒಪ್ಪಿಗೆಯೊಂದಿಗೆ, ಐತಿಹಾಸಿಕ ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ. ಮಹಿಳಾ ಮೀಸಲು ಮಸೂದೆಯ ಅಂಗೀಕಾರವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, … Continued

ಭಾರತದ ವೈದ್ಯಕೀಯ ಪದವೀಧರರು ಇನ್ಮುಂದೆ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ. ಇತರ ದೇಶಗಳಲ್ಲಿ ಪ್ರಾಕ್ಟೀಸ್‌ ಮಾಡಬಹುದು

ನವದೆಹಲಿ: ಭಾರತದ ರಾಷ್ಟ್ರೀಯ ವೈದ್ಯಕೀಯ ಆಯೋಗ(NMC)ಕ್ಕೆ ವಿಶ್ವ ವೈದ್ಯಕೀಯ ಶಿಕ್ಷಣ ಫೆಡರೇಶನ್ (WFME) 10 ವರ್ಷಗಳ ಅವಧಿಯ ಮಾನ್ಯತೆಯ ಸ್ಥಾನಮಾನ ನೀಡಿದೆ ಎಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಇದರಿಂದಾಗಿ ಇನ್ನು ಮುಂದೆ ಭಾರತೀಯ ವೈದ್ಯಕೀಯ ಪದವೀಧರರು ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ತರಬೇತಿ … Continued

ಕ್ರಿಕೆಟ್‌ ನಲ್ಲಿ ವಿಚಿತ್ರ ಔಟ್‌ : ವಿಕೆಟ್‌ಕೀಪರ್‌ ಹೆಲ್ಮೆಟ್‌ ಗೆ ಸಿಲುಕಿದ ಬಾಲ್‌ : ಬ್ಯಾಟರ್‌ ಔಟ್‌ ಎಂದು ಅಂಪೈರ್‌ ತೀರ್ಪು | ವೀಕ್ಷಿಸಿ

ಕ್ರಿಕೆಟ್ ಆಟವು ವರ್ಷಗಳಲ್ಲಿ ಸುಂದರವಾಗಿ ವಿಕಸನಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ ಹೆಚ್ಚು ನವೀನ ಮತ್ತು ಪ್ರಭಾವಶಾಲಿಯಾಗಿದೆ ಮತ್ತು ಅದನ್ನು ಎದುರಿಸಲು ಬೌಲಿಂಗ್ ಕೂಡ ಅಭಿವೃದ್ಧಿಗೊಂಡಿದೆ. ಕ್ರಿಕೆಟ್ ಆಟದ ಮತ್ತೊಂದು ನಿರ್ಣಾಯಕ ಭಾಗವಾದ ಫೀಲ್ಡಿಂಗ್ ಕೂಡ ಈಗ ಬಹಳಷ್ಟು ಸುದಾರಣೆಗಳನ್ನು ಕಂಡಿದೆ. ಇವೆಲ್ಲದರ ನಡುವೆ, ಕ್ರಿಕೆಟ್ ನಲ್ಲಿ ತಮಾಷೆ ಮತ್ತು ವಿಲಕ್ಷಣ ಘಟನೆಗಳು ಪದೇ ಪದೇ ನಡೆಯುತ್ತವೆ. … Continued

ಕೆನಡಾದಲ್ಲಿ ಭಯೋತ್ಪಾದಕ ಸುಖದೂಲ್ ಸಿಂಗ್ ಹತ್ಯೆ ಮಾಡಿದ್ದು ತಾನೇ ಎಂದ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್

ನವದೆಹಲಿ: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಕೆನಡಾದ ವಿನ್ನಿಪೆಗ್ ನಗರದಲ್ಲಿ ಖಲಿಸ್ತಾನಿ ಭಯೋತ್ಪಾದಕ ಸುಖದೂಲ್ ಸಿಂಗ್ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ ಎಂದು ಆತನ ಗ್ಯಾಂಗ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ. ಪೋಸ್ಟ್‌ನಲ್ಲಿ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಸುಖಾ ದುನುಕೆ ಎಂದೂ ಕರೆಯಲ್ಪಡುವ ಸುಖದೂಲ್ ಸಿಂಗ್ ಗ್ಯಾಂಗ್‌ಸ್ಟರ್‌ಗಳಾದ ಗುರ್ಲಾಲ್ ಬ್ರಾರ್ ಮತ್ತು ವಿಕ್ಕಿ ಮಿಡ್ಖೇರಾ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. … Continued

ಸೆಪ್ಟೆಂಬರ್‌ ಕೊನೆಗೆ ಉತ್ತಮ ಮಳೆ, ಭಾರತದಲ್ಲಿ ಈ ಬಾರಿ ಸುದೀರ್ಘ ಮಳೆಗಾಲ: ಹವಾಮಾನ ಇಲಾಖೆಯ ಮಹತ್ವದ ಮಾಹಿತಿ

ನವದೆಹಲಿ : ಈ ಬಾರಿ ಸುದೀರ್ಘ ಮಳೆಗಾಲಕ್ಕೆ ಭಾರತ ಸಾಕ್ಷಿಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನೂ ಕೆಲವು ದಿನಗಳವರೆಗೆ ನೈಋತ್ಯ ಮಾನ್ಸೂನ್ ಭಾರತದಾದ್ಯಂತ ವಿಸ್ತರಿಸುವ ಸಾಧ್ಯತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಹೇಳಿದ್ದಾರೆ. ಪ್ರಸ್ತುತ ಹವಾಮಾನ ಪರಿಸ್ಥಿತಿಗಳು ಮುಂದಿನ ಕೆಲವು ದಿನಗಳಲ್ಲಿ ಮಾನ್ಸೂನ್ ಕಡಿಮೆಯಾಗುವ ಸಾಧ್ಯತೆಯಿಲ್ಲ ಎಂದು … Continued