ನಟ ಪ್ರಕಾಶ ರಾಜಗೆ ಜೀವ ಬೆದರಿಕೆ; ಯೂಟ್ಯೂಬ್ ಚಾನಲ್ ವಿರುದ್ಧ ದೂರು ದಾಖಲು

ಬೆಂಗಳೂರು : ತಮ್ಮ ಮತ್ತು ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ ಎಂದು ನಟ ಪ್ರಕಾಶ ರಾಜ ಅವರು ಬೆಂಗಳೂರಿನಲ್ಲಿ ಯೂಟ್ಯೂಬ್ ವಾಹಿನಿ ವಿರುದ್ಧ ದೂರು ದಾಖಲಿಸಿದ್ದಾರೆ. ಯೂಟ್ಯೂಬ್​ ಚಾನೆಲ್’ವೊಂದರಲ್ಲಿ ಎರಡು ವೀಡಿಯೊಗಳಲ್ಲಿ ಜೀವ ಬೆದರಿಕೆ ಹಾಕುವ ರೀತಿಯಲ್ಲಿ ಸಂದೇಶಗಳು ಪ್ರಸಾರವಾಗಿವೆ ಎಂದು ಪ್ರಕಾಶ ರಾಜ ಅವರು ದೂರನಲ್ಲಿ ಆರೋಪಿಸಿದ್ದಾರೆ. ಕೆಲ ದಿನಗಳ ಹಿಂದೆ ಯೂಟ್ಯೂಬ್ … Continued

ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವ 9 ಪ್ರತ್ಯೇಕತಾವಾದಿ ಸಂಘಟನೆಗಳ ನೆಲೆ ಕೆನಡಾ; ಭಾರತ ಗಡೀಪಾರು ಮನವಿ ನಿರ್ಲಕ್ಷಿಸಿದ ಕೆನಡಾ : ಅಧಿಕಾರಿಗಳು

ನವದೆಹಲಿ: ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವ ಕನಿಷ್ಠ ಒಂಬತ್ತು ಪ್ರತ್ಯೇಕತಾವಾದಿ ಸಂಘಟನೆಗಳು ಕೆನಡಾದಲ್ಲಿ ತಮ್ಮ ನೆಲೆಗಳನ್ನು ಹೊಂದಿದ್ದು, ಹಲವಾರು ಗಡೀಪಾರು ವಿನಂತಿಗಳ ಹೊರತಾಗಿಯೂ, ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಸೇರಿದಂತೆ ಘೋರ ಅಪರಾಧಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕೆನಡಾ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನವದೆಹಲಿಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ವಿಶ್ವ ಸಿಖ್ ಸಂಘಟನೆ (ಡಬ್ಲ್ಯುಎಸ್‌ಒ), … Continued

ಸಾಮಾಜಿಕ ಜಾಲತಾಣ ಬಳಕೆಗೆ ವಯೋಮಿತಿ ನಿಗದಿಪಡಿಸಿ: ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸಲಹೆ

ಬೆಂಗಳೂರು : ಮತದಾನಕ್ಕೆ ವಯೋಮಿತಿ ನಿಗದಿ ಮಾಡಿರುವ ರೀತಿಯಲ್ಲಿಯೇ ಸಾಮಾಜಿಕ ಜಾಲತಾಣ ಬಳಕೆ ಮಾಡಲು ವಯೋಮಿತಿ ನಿಗದಿ ಮಾಡಲು ಚಿಂತನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಸಲಹೆ ನೀಡಿದೆ. ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರವು 2021ರ ಫೆಬ್ರವರಿ ಮತ್ತು 2022ರ ಅವಧಿಯಲ್ಲಿ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿರುವ ಕರ್ನಾಟಕ … Continued

ಗಣೇಶನನ್ನು ಮನೆಗೆ ಕರೆತಂದು ಗಣೇಶ ಚತುರ್ಥಿ ಆಚರಿಸಿದ ನಟ ಶಾರುಖ್ ಖಾನ್

ಮುಂಬೈ: ಗಣೇಶ ಚತುರ್ಥಿ ಭಾರತದಲ್ಲಿ, ಅದರಲ್ಲಿಯೂ ವಿಶೇಷವಾಗಿ ಮುಂಬೈನಲ್ಲಿ ಹೆಚ್ಚು ಪ್ರೀತಿಯ ಹಬ್ಬವಾಗಿದೆ, ಅಲ್ಲಿ ಗಣೇಶನನ್ನು ಹೃತ್ಪೂರ್ವಕವಾಗಿ ಮನೆಗಳಿಗೆ ಸ್ವಾಗತಿಸಲಾಗುತ್ತದೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ತಮ್ಮ ಆಚರಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ, ಗಣೇಶನ ಆಶೀರ್ವಾದವನ್ನು ಕೋರುವ ಸಿನೆ ತಾರೆಗಳಲ್ಲಿ ಶಾರುಖ್ ಖಾನ್ ಕೂಡ ಒಬ್ಬರು. ಶಾರುಖ್ ಖಾನ್ ತಮ್ಮ ನಿವಾಸಕ್ಕೆ ಗಣಪತಿಗೆ ಆತ್ಮೀಯ ಸ್ವಾಗತವನ್ನು ನೀಡುವ ಮೂಲಕ … Continued

“ಎಚ್ಚರಿಕೆ ವಹಿಸಿ”: ಖಲಿಸ್ತಾನಿ ಭಯೋತ್ಪಾಕನ ಹತ್ಯೆ ವಿವಾದದ ನಡುವೆ ಭಾರತಕ್ಕೆ ಪ್ರಯಾಣಿಸುವ ಬಗ್ಗೆ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಕೆನಡಾ

ನವದೆಹಲಿ: ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಕೆನಡಾ ಮಂಗಳವಾರ ಭಾರತಕ್ಕೆ ಪ್ರಯಾಣ ಸಲಹೆಯನ್ನು ನವೀಕರಿಸಿದೆ. ಅಸ್ಸಾಂ ಮತ್ತು ಹಿಂಸಾಚಾರ ಪೀಡಿತ ಮಣಿಪುರವನ್ನು ವಿಶೇಷವಾಗಿ ಉಲ್ಲೇಖಿಸಿ ಕೆನಡಾದ ನಾಗರಿಕರಿಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯದಲ್ಲಿ ಪ್ರಯಾಣಿಸದಂತೆ ಎಚ್ಚರಿಕೆ ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರವನ್ನು ಸ್ಪಷ್ಟವಾಗಿ ಉಲ್ಲೇಖಿಸಿ, “ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿಯು ಉದ್ವಿಗ್ನವಾಗಿದೆ. … Continued

ಭಾರತ ಚಂದ್ರನ ಮೇಲೆ ಇಳಿದರೆ ಪಾಕಿಸ್ತಾನವು ಪ್ರಪಂಚದ ಮುಂದೆ ಭಿಕ್ಷೆ ಬೇಡುತ್ತಿದೆ: ನವಾಜ್ ಷರೀಫ್

ಲಾಹೋರ್‌ : ಭಾರತವು ಚಂದ್ರನನ್ನು ತಲುಪಿ, ಜಿ 20 ಶೃಂಗಸಭೆಯನ್ನು ಆಯೋಜಿಸಿರುವಾಗ ಪಾಕಿಸ್ತಾನವು ವಿಶ್ವದ ಮುಂದೆ ಹಣದ ಭಿಕ್ಷೆ ಬೇಡುತ್ತಿದೆ ಎಂದು ಗಡಿಪಾರಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ಪಾಕಿಸ್ತಾನದ ಆರ್ಥಿಕ ಸಮಸ್ಯೆಗಳಿಗೆ ದೇಶದ ಮಾಜಿ ಜನರಲ್‌ಗಳು ಮತ್ತು ನ್ಯಾಯಾಧೀಶರು ಕಾರಣ ಎಂದು ಅವರು ದೂಷಿಸಿದ್ದಾರೆ. ಪಾಕಿಸ್ತಾನದ ಆರ್ಥಿಕತೆಯು ಕಳೆದ ಹಲವು ವರ್ಷಗಳಿಂದ … Continued

ಸ್ಥಿರಾಸ್ತಿ ಪರಿಷ್ಕೃತ ಮಾರ್ಗಸೂಚಿ ದರ ಅಕ್ಟೋಬರ್‌ 1ರಿಂದ ಜಾರಿ: ಆಗಲಿದೆ ಆಸ್ತಿ ನೋಂದಣಿ ದುಬಾರಿ

ಬೆಂಗಳೂರು : ರಾಜ್ಯಾದ್ಯಂತ ಸ್ಥಿರಾಸ್ತಿಗಳ ಪರಿಷ್ಕೃತ ನೂತನ “ಮಾರ್ಗಸೂಚಿ ದರ” (ಗೈಡೆನ್ಸ್ ವ್ಯಾಲ್ಯೂ) ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಂದಣಿ ಇಲಾಖೆ ಕಾನೂನಿನ ಪ್ರಕಾರ ಪ್ರತಿ ವರ್ಷ ಮಾರ್ಗಸೂಚಿ ದರ ಪರಿಷ್ಕರಣೆಯಾಗಬೇಕು. ಆದರೆ, ಐದು ವರ್ಷದಿಂದ ಮಾರ್ಗಸೂಚಿ ದರ ಪರಿಷ್ಕರಣೆಯಾಗಿರಲಿಲ್ಲ ಎಂದು ತಿಳಿಸಿದರು. … Continued

ಮರಳಿನಲ್ಲಿ ಸಿಕ್ಕಿಬಿದ್ದ ದಾಳಿಕೋರ ಬೃಹತ್‌ ಮಾಕೋ ಶಾರ್ಕ್ ಮೀನನ್ನು ಸಮುದ್ರಕ್ಕೆ ತಳ್ಳಿ ರಕ್ಷಿಸಿದ ಬೀಚಿಗೆ ಹೋದ ಪ್ರವಾಸಿಗರು | ವೀಕ್ಷಿಸಿ

ಫ್ಲೋರಿಡಾ ಕಡಲತೀರದವರು ಮರಳಿನ ಮೇಲೆ ಸಿಕ್ಕಿಬಿದ್ದ ಬೃಹತ್ ಶಾರ್ಕ್ ಮೀನನ್ನು ಉಳಿಸಲು ನಾಲ್ಕೈದು ಜನ ಒಟ್ಟಾಗಿ ಸೇರಿ ಪ್ರಯತ್ನ ಪಡುವ ದೃಶ್ಯವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಸನ್‌ಶೈನ್ ಸ್ಟೇಟ್‌ನ ಗಲ್ಫ್ ಕೋಸ್ಟ್‌ನಲ್ಲಿರುವ ಪೆನ್ಸಕೋಲಾದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಕಡಲತೀರಕ್ಕೆ ಬಂದವರ ಗುಂಪೊಂದು 10 ಅಡಿ ಉದ್ದದ ಮಾಕೋ ಶಾರ್ಕ್ ದಡಕ್ಕೆ ಕೊಚ್ಚಿಬಂದಿರುವುದನ್ನು ಗಮನಿಸಿದೆ. ಅವರು ಶೀಘ್ರದಲ್ಲೇ … Continued

ಡಾ.ಡಿ.ಸಿ ಪಾವಟೆ ಅತ್ಯುತ್ತಮ ಎನ್‌ ಎಸ್‌ ಎಸ್‌ ಸ್ವಯಂಸೇವಕ ಪ್ರಶಸ್ತಿಗೆ ಪ್ರಜ್ವಲ್‌ ಆಯ್ಕೆ

ಧಾರವಾಡ : ಧಾರವಾಡದ ಕರ್ನಾಟಕ ಕಲಾ ಕಾಲೇಜಿನ ಬಿ.ಎ.ಅಂತಿಮ ವರ್ಷದ ವಿದ್ಯಾರ್ಥಿ ಪ್ರಜ್ವಲ್‌ ವಿ.ಟಿ.ಅವರು “2021-2022 ನೇ ಸಾಲಿನ ವಿಶ್ವವಿದ್ಯಾನಿಲಯ ಮಟ್ಟದ ಡಾ.ಡಿ.ಸಿ ಪಾವಟೆ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನೆ (NSS) ಸ್ವಯಂಸೇವಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೂಲತಃ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದ ಪ್ರಜ್ವಲ್‌ ಪದವಿ ಪೂರ್ವ ಕಾಲೇಜಿನಲ್ಲಿದ್ದಾಗಲೇರಾಷ್ಟ್ರೀಯ ಸೇವಾ ಯೋಜನೆ … Continued

ಶೀಘ್ರವೇ ಎಲ್ಲ ಎಕ್ಸ್ (ಟ್ವಟರ್‌) ಬಳಕೆದಾರರಿಗೆ ಮಾಸಿಕ ಶುಲ್ಕ ವಿಧಿಸುವ ಸಾಧ್ಯತೆ

ವಾಷಿಂಗ್ಟನ್: ಟ್ವಿಟ್ಟರ್ ಅಥವಾ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಸ್ವಯಂಚಾಲಿತ ಬಾಟ್​ಗಳ ಹಾವಳಿ ತಡೆಯಲು ಮಾಸಿಕ ಶುಲ್ಕ ವಿಧಿಸುವ ಕ್ರಮ ಜಾರಿಯಾಗುವ ಸಾಧ್ಯತೆ ಇದೆ.ಬಾಟ್‌ಗಳನ್ನು ಕಡಿತಗೊಳಿಸುವ ಅಗತ್ಯವನ್ನು ಉಲ್ಲೇಖಿಸಿ ಆನ್‌ಲೈನ್ ಪ್ಲಾಟ್‌ಫಾರ್ಮ್ X (ಹಿಂದಿನ ಟ್ವಿಟರ್‌) ಎಲ್ಲಾ ಬಳಕೆದಾರರಿಗೆ ಮಾಸಿಕ ಶುಲ್ಕವನ್ನು ಪರಿಚಯಿಸಬಹುದು ಎಂದು ಅದರ ಮಾಲೀಕ ಎಲೋನ್ ಮಸ್ಕ್ ಸೋಮವಾರ ಹೇಳಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಟ್ವಿಟರ್ … Continued