ವಯಸ್ಸಾದ ತಾಯಿಯನ್ನು ಮನೆಯಲ್ಲಿ ಕೂಡಿಹಾಕಿ ಕುಂಭ ಮೇಳಕ್ಕೆ ಹೋದ ಮಗ…!

ವೃದ್ಧ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಮಗನೊಬ್ಬ ಮಹಾಕುಂಭ ಮೇಳಕ್ಕೆ ಹೋದ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಜಾರ್ಖಂಡದ ರಾಮಗಢದ ಮನೆಯೊಂದರಲ್ಲಿ ಬಂಧಿಯಾಗಿದ್ದ ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮೂರು ದಿನಗಳ ಕಾಲ ಅನ್ನ-ನೀರು ಸೇವಿಸಿ ವೃದ್ಧೆ ಹೇಗೋ ಬದುಕುಳಿದಳು. ಆದರೆ ನಂತರ ಆಕೆಯ ಹಸಿವು ಮತ್ತು ಸಂಕಟದ ಕೂಗು ಅಕ್ಕಪಕ್ಕದವರಿಗೆ ಕೇಳಿಸಿದಾಗ, ಅವರು ಬಾಗಿಲು ಒಡೆದು ಒಳಗೆ … Continued

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು ; ವರದಿ

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಗುರುವಾರ (ಫೆಬ್ರವರಿ 20) ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. 78 ವರ್ಷದ ಸೋನಿಯಾ ಗಾಂಧಿ ಅವರನ್ನು ಗುರುವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ನಿಖರವಾದ ಸಮಯ ತಿಳಿದಿಲ್ಲ. ವೈದ್ಯರ ತಂಡ ಆಕೆಯ ಆರೋಗ್ಯದ ಮೇಲೆ ನಿಗಾ ಇರಿಸಿದೆ ಎಂದು ವರದಿ ತಿಳಿಸಿದೆ. ಅವರು ಶುಕ್ರವಾರ … Continued

ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ – ಧನಶ್ರೀ ವರ್ಮಾ ವಿಚ್ಛೇದನ…

ಮುಂಬೈ : ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಮತ್ತು ಪತ್ನಿ ಧನಶ್ರೀ ವರ್ಮಾ ಅವರು ತಮ್ಮ ವಿಚ್ಛೇದನವನ್ನು ಅಂತಿಮಗೊಳಿಸಿದ್ದಾರೆ. ಎಬಿಪಿ ನ್ಯೂಸ್ ಪ್ರಕಾರ, ದಂಪತಿಯನ್ನು ಮುಂಬೈನ ಬಾಂದ್ರಾದಲ್ಲಿರುವ ಕೌಟುಂಬಿಕ ನ್ಯಾಯಾಲಯದ ಮುಂದೆ ಕರೆಸಲಾಗಿದೆ, ಅಲ್ಲಿ ಅವರು ಅಂತಿಮ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ, ನಂತರ ಅವರು ತಮ್ಮ ಅಧಿಕೃತ ವಿಚ್ಛೇದನ ಪ್ರಮಾಣಪತ್ರವನ್ನು ಪಡೆಯುತ್ತಾರೆ. ಪರಸ್ಪರ ಒಪ್ಪಿಗೆಯ ಮೂಲಕ ಬೇರೆಯಾಗುವ … Continued

ಮುಂಜಾನೆ ಹುಂಜ ಕೂಗಿದ್ದಕ್ಕೆ ದೂರು ದಾಖಲಿಸಿದ ವ್ಯಕ್ತಿ…!

ತಿರುವನಂತಪುರಂ: ವ್ಯಕ್ತಿಯೊಬ್ಬ ಪಕ್ಕದ ಮನೆಯ ಹುಂಜವೊಂದು ತನ್ನ ನಿದ್ರೆಗೆ ಭಂಗ ತರುತ್ತಿದೆ ಎಂದು ಅದರ ವಿರುದ್ಧ ಆರ್‌ಡಿಒನಲ್ಲಿ ದೂರು ದಾಖಲಿಸಿದ ಘಟನೆ ವರದಿಯಾಗಿದೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್‌(Viral ) ಆಗುತ್ತಿದೆ. ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಹಳ್ಳಿಯೊಂದರಲ್ಲಿ ರಾಧಾಕೃಷ್ಣ ಕುರುಪ್ ಎಂಬವರು ಮುಂಜಾನೆ 3 ಗಂಟೆಗೆ ಪಕ್ಕದ ಮನೆಯವರ ಹುಂಜ ಕೂಗುತ್ತಾ ಕಿರಿಕಿರಿ ಮಾಡುತ್ತಿದೆ. … Continued

ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ: ಮೌಲ್ವಿ ಬಂಧನ

ಮೈಸೂರು: ಉದಯಗಿರಿ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲು ತೂರಾಟ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪ ಹೊತ್ತಿರುವ ಮೌಲ್ವಿಯನ್ನು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಘಟನೆ ನಡೆದು 11 ದಿನಗಳ ಬಳಿಕ  ಪೊಲೀಸರು ಆರೋಪಿ ಮುಫ್ತಿ ಮುಸ್ತಾಕ್ ಅವರನ್ನು ಬಂಧಿಸಿದ್ದಾರೆ. ಘಟನೆ ಬಳಿಕ ಮೌಲ್ವಿಯ ಭಾಷಣದ ವೀಡಿಯೊವೊಂದು ವೈರಲ್ ಆಗಿತ್ತು. ಗಲಭೆಗೆ … Continued

ಮುಡಾ ಹಗರಣ : ಲೋಕಾಯುಕ್ತದಿಂದ ನ್ಯಾಯಾಲಯಕ್ಕೆ 11000 ಪುಟಗಳ ವರದಿ ಸಲ್ಲಿಕೆ

ಬೆಂಗಳೂರು: ಮುಡಾ ಹಗರಣಕ್ಕೆ (MUDA scam) ಸಂಬಂಧಿಸಿದಂತೆ ಇಂದು, ಗುರುವಾರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಲೋಕಾಯುಕ್ತ (Lokayukta) ಪೊಲೀಸ್ ಟಿ.ಉದೇಶ ಅವರು ಒಟ್ಟು 11 ಸಾವಿರ ಪುಟಗಳ ತನಿಖೆಯ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ. ಈ ವರದಿಯಲ್ಲಿ,  ಸಿದ್ಧಾರಮಯ್ಯ ಹಾಗೂ ಇತರ ಮೂವರ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಲೋಕಾಯುಕ್ತ ಪೊಲೀಸರು ಅವರಿಗೆ ಕ್ಲೀನ್‌ಚಿಟ್‌ನೀಡಿದ್ದಾರೆ. … Continued

ದೆಹಲಿ ಸಿಎಂ ಆಗಿ ಇಂದು ರೇಖಾ ಗುಪ್ತಾ ಪ್ರಮಾಣ ವಚನ ; ಸಂಪುಟದಲ್ಲಿ 6 ಮಂದಿ ಸಚಿವರು

ನವದೆಹಲಿ : ಬಿಜೆಪಿ ನಾಯಕರಾದ ಪರ್ವೇಶ ವರ್ಮಾ, ಕಪಿಲ್ ಮಿಶ್ರಾ, ಮಂಜಿಂದರ್ ಸಿಂಗ್ ಸಿರ್ಸಾ ಮತ್ತು ಆಶಿಶ್ ಸೂದ್ ಸೇರಿದಂತೆ ಆರು ಮಂದಿ ಗುರುವಾರ ರೇಖಾ ಗುಪ್ತಾ ನೇತೃತ್ವದ ದೆಹಲಿಯ ಬಿಜೆಪಿ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಬುಧವಾರ ಸಂಜೆ ಇಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ … Continued

ದೊಡ್ಡಬಳ್ಳಾಪುರ | ರೀಲ್ಸ್‌ ಹುಚ್ಚಿಗೆ ಬಿದ್ದು ಪ್ರಾಣ ಕಳೆದುಕೊಂಡ ಮೂವರು ಯುವಕರು..!

ದೊಡ್ಡಬಳ್ಳಾಪುರ: ರೀಲ್ಸ್‌ (Reels) ಹುಚ್ಚಿಗೆ ಬಿದ್ದು ಮೂವರು ಯುವಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ರೀಲ್ಸ್​ ಮಾಡುವಾಗ ರೈಲು ಡಿಕ್ಕಿ ಹೊಡೆದು ಉತ್ತರ ಪ್ರದೇಶ ಮೂಲದ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ಸಿದ್ದೆನಾಯಕನಹಳ್ಳಿ ರೈಲ್ವೆ ಹಳಿ ಬಳಿ ನಡೆದಿದೆ. ಮೃತರನ್ನು ರಾಹುಲ್ (18), ಬಿಕೇಶ (20) ಮತ್ತು ಲಲ್ಲನ್ (24) … Continued

ಶಿರಸಿ ಆಸ್ಪತ್ರೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನನಗೆ ಶಾಸಕರಿಂದ ಲೀಗಲ್‌ ನೋಟಿಸ್‌ : ಅನಂತಮೂರ್ತಿ ಹೆಗಡೆ

ಶಿರಸಿ: ಶಿರಸಿಯ ಪಂಡಿತ ಸರ್ಕಾರಿ ಆಸ್ಪತ್ರೆಯ ಬಗ್ಗೆ ನಾನು ಪ್ರಶ್ನೆ ಮಾಡಿದ್ದಕ್ಕೆ ಶಾಸಕ ಭೀಮಣ್ಣ ನಾಯ್ಕ ಅವರು ನನಗೆ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಸ್ಪತ್ರೆ ವಿಚಾರದಲ್ಲಿ ಶಾಸಕರನ್ನು ಪ್ರಶ್ನಿಸಿದ್ದಕ್ಕೆ ನನ್ನ ಪ್ರತಿಕೃತಿ ದಹಿಸಿದ್ದಾರೆ, ನನ್ನ ಮೇಲೆ ನಾನ್ ಬೇಲೇಬಲ್ … Continued

ತರಬೇತಿ ವೇಳೆ ಪವರ್‌ಲಿಫ್ಟರ್‌ ಕುತ್ತಿಗೆ ಮೇಲೆ ಬಿದ್ದ 270 ಕೆಜಿ ರಾಡ್; 17 ವರ್ಷದ ಚಿನ್ನದ ಪದಕ ವಿಜೇತ ಅಥ್ಲೀಟ್ ಸಾವು

ಜೈಪುರ : ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ಜೂನಿಯರ್ ರಾಷ್ಟ್ರೀಯ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಪವರ್-ಲಿಫ್ಟರ್ ಅಭ್ಯಾಸದ ವೇಳೆ ಕುತ್ತಿಗೆಯ ಮೇಲೆ 270 ಕೆಜಿ ತೂಕದ ರಾಡ್ ಬಿದ್ದಿದ್ದರಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಹಿಳಾ ಪವರ್‌ಲಿಫ್ಟರ್ ಯಾಷ್ಟಿಕಾ ಆಚಾರ್ಯ (17) ಜಿಮ್‌ನಲ್ಲಿ ಭಾರ ಎತ್ತುವುದನ್ನು ಅಭ್ಯಾಸ ಮಾಡುವ ವೇಳೆ ಸಾವಿಗೀಡಾಗಿದ್ದಾರೆ. ಮಂಗಳವಾರ 270 … Continued