ವೀಡಿಯೊ…| ಊಟ ಇಲ್ಲ ಅಂದಿದ್ದಕ್ಕೆ ಕೋಪಗೊಂಡು ಹೊಟೇಲಿಗೆ ಟ್ರಕ್ ಡಿಕ್ಕಿ ಹೊಡೆಸಿದ ಪಾನಮತ್ತ ಚಾಲಕ…!

ಆಘಾತಕಾರಿ ಘಟನೆಯೊಂದರಲ್ಲಿ ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನಲ್ಲಿ ಪಾನಮತ್ತ ಚಾಲಕನೊಬ್ಬ ತನಗೆ ಊಟ ನಿರಾಕರಿಸಿದ ಕಾರಣಕ್ಕೆ ತನ್ನ ಟ್ರಕ್ ಅನ್ನು ಹೊಟೇಲಿಗೆ ಡಿಕ್ಕಿ ಹೊಡೆಸಿದ್ದಾನೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ, ಪುಣೆ-ಸೋಲಾಪುರ ಹೆದ್ದಾರಿಯಲ್ಲಿರುವ ರಸ್ತೆ ಬದಿಯ ಹೊಟೇಲ್‌ ಗೋಕುಲದಲ್ಲಿ ಈ ಘಟನೆ ನಡೆದಿದೆ. ಹಿಂಗಂಗಾವ್‌ನ ಹೋಟೆಲ್ ಗೋಕುಲ ಬಳಿ … Continued

ಹರಿಯಾಣ ವಿಧಾನಸಭೆ ಚುನಾವಣೆ; ಕುಸ್ತಿಪಟು ವಿನೇಶ್‌ ಫೋಗಟ್‌ ಗೆ ಕಾಂಗ್ರೆಸ್‌ ಟಿಕೆಟ್‌

ಚಂಡೀಗಢ : ಜುಲಾನಾದಿಂದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಒಲಿಂಪಿಯನ್‌ ಕುಸ್ತಿಪಟು ವಿನೇಶ್ ಫೋಗಟ್‌ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅವರು ಜುಲಾನ್‌ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಇದು ತೂಕದ ಕಾರಣಕ್ಕೆ ಒಲಿಂಪಿಕ್ ನಿಂದ ಅನರ್ಹತೆಗೊಂಡ ನಂತರ ಪ್ರಸಿದ್ಧ ಕುಸ್ತಿಪಟುವಿನ ಜೀವನದಲ್ಲಿ ಹೊಸ ಆರಂಭವನ್ನು ಗುರುತಿಸಿದೆ. ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಗರ್ಹಿ ಸಂಪ್ಲಾ-ಕಿಲೋಯ್ ಕ್ಷೇತ್ರ, ಮತ್ತು … Continued

ಡಿಜಿಟಲ್ ಪಾವತಿಯ ʼಯುಪಿಐ ಸರ್ಕಲ್ (UPI Circle)’ ಆರಂಭ ; ಹಾಗೆಂದರೇನು…? ಅದು ಹೇಗೆ ಕಾರ್ಯನಿರ್ವಹಿಸುತ್ತದೆ..? ಮಾಹಿತಿ ಇಲ್ಲಿದೆ…

ನವದೆಹಲಿ : ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಡಿಜಿಟಲ್ ಪಾವತಿ ಪ್ರವೇಶ (accessibility) ಹೆಚ್ಚಿಸುವ ಉದ್ದೇಶದಿಂದ ʼಯುಪಿಐ (UPI) ಸರ್ಕಲ್ʼ ಎಂಬ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಈ ಹೊಸ ವೈಶಿಷ್ಟ್ಯವು ಪ್ರಾಥಮಿಕ ಬಳಕೆದಾರರಿಗೆ ತಮ್ಮ ಕುಟುಂಬದ ಸದಸ್ಯರು ಮತ್ತು ಸ್ನೇಹಿತರನ್ನು ದ್ವಿತೀಯ ಬಳಕೆದಾರರಾಗಿ ಸೇರಿಸಲು ಅನುಮತಿಸುತ್ತದೆ. ಪ್ರಾಥಮಿಕ ಬಳಕೆದಾರರ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು … Continued

ಜನನಿಬಿಡ ರಸ್ತೆಯಲ್ಲಿ ಹಾಡಹಗಲೇ ಅತ್ಯಾಚಾರ ; ಹೇಯ ಕೃತ್ಯ ವೀಡಿಯೊ ಚಿತ್ರೀಕರಿಸಿದ ಜನ…!

ಉಜ್ಜಯಿನಿ : ಮಧ್ಯಪ್ರದೇಶದ ಉಜ್ಜಯಿನಿಯ ಜನನಿಬಿಡ ರಸ್ತೆಯಲ್ಲಿ ಮಹಿಳೆಯೊಬ್ಬರ ಮೇಲೆ ಹಾಡಹಗಲೇ ಅತ್ಯಾಚಾರ ನಡೆದಿದೆ. ಮಹಿಳೆಯನ್ನು ಕಾಪಾಡುವುದರ ಬದಲು ದಾರಿಹೋಕರು ಅತ್ಯಾಚಾರದ ಘಟನೆಯನ್ನು ತಮ್ಮ ಫೋನ್‌ಗಳಲ್ಲಿ ಚಿತ್ರೀಕರಿಸಿದ್ದಾರೆ…! ನಂತರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ…!! ಉಜ್ಜಯಿನಿ ನಗರದ ಅತ್ಯಂತ ಜನನಿಬಿಡ ಸ್ಥಳಗಳಲ್ಲಿ ಒಂದಾದ ಕೊಯ್ಲಾ ಫಾಟಕ್ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. … Continued

ಪ್ಯಾರಾಲಿಂಪಿಕ್ಸ್: ಜಾವೆಲಿನ್ ಹೈಜಂಪ್‌ನಲ್ಲಿ ಚಿನ್ನ ಗೆದ್ದ ಪ್ರವೀಣಕುಮಾರ

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಒಂಬತ್ತನೇ ದಿನ ಪುರುಷರ ಹೈಜಂಪ್-ಟಿ64 ಸ್ಪರ್ಧೆಯಲ್ಲಿ ಭಾರತದ ಪ್ರವೀಣಕುಮಾರ ಚಿನ್ನದ ಪದಕ ಗೆದ್ದಿದ್ದಾರೆ. ಪ್ರವೀಣಕುಮಾರ ಚಿನ್ನದ ಪದಕ ಗೆದ್ದರೆ, ಅಮೆರಿಕದ ಡೆರೆಕ್ ಲೊಸಿಡೆಂಟ್ ಬೆಳ್ಳಿಯ ಪದಕ ಗೆದ್ದಿದ್ದಾರೆ. ಉಜ್ಬೇಕಿಸ್ತಾನ್‌ನ ತೈಮುರ್‌ಬೆಕ್ ಗಿಯಾಜೊವ್ ಮತ್ತು ಪೋಲೆಂಡ್‌ನ ಮಸಿಯೆಜ್ ಲೆಪಿಯಾಟೊ ಜಂಟಿಯಾಗಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.ಪ್ರವೀಣಕುಮಾರ ಅವರು 2.08 ಮೀಟರ್ ಎತ್ತರ ಜಿಗಿಯುವ … Continued

ವೀಡಿಯೊಗಳು…| ಆಂಧ್ರ ಸಿಎಂ ಧೈರ್ಯ ನೋಡಿ…: ರೈಲ್ವೆ ಸೇತುವೆ ಮೇಲಿಂದ ಪ್ರವಾಹ ಸ್ಥಿತಿ ವೀಕ್ಷಿಸುತ್ತಿದ್ದಾಗ ಇಂಚುಗಳಷ್ಟು ಸಮೀಪ ಹಾದುಹೋದ ರೈಲು

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ವಿಜಯವಾಡದ ಮಧುರಾನಗರದ ಪ್ರವಾಹ ಪೀಡಿತ ಪ್ರದೇಶದಲ್ಲಿರುವ ರೈಲ್ವೆ ಸೇತುವೆ ಮೇಲೆ ಗುರುವಾರ ಪರಿಶೀಲಿಸುವ ವೇಳೆ ರೈಲಿಗೆ ಬಹಳ ಬಹಳ ಸಮೀಪದಲ್ಲಿಯೇ ಇದ್ದರೂ ಸ್ವಲ್ಪವೂ ವಿಚಲಿತರಾಗದೇ ಇರುವುದು ಗಮನ ಸೆಳೆದಿದೆ. ನಾಯ್ಡು ಮತ್ತು ಅವರ ತಂಡವು ರೈಲ್ವೇ ಹಳಿಯೊಂದರ ಕೆಳಗೆ ಉಕ್ಕಿ ಹರಿಯುತ್ತಿರುವ ಹೊಳೆಯನ್ನು ವೀಕ್ಷಿಸಲು ನಡೆದುಕೊಂಡು ಹೋಗುತ್ತಿದ್ದಾಗ … Continued

ಜಾತ್ರೆ ವೇಳೆ ಬೈಕ್​ ವೀಲ್ಹಿಂಗ್​ ಹುಚ್ಚಾಟ ​; ನಾಲ್ವರು ಸಾವು, ಮೂವರ ಸ್ಥಿತಿ ಗಂಭೀರ

ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳದಲ್ಲಿ ಯುವಕರಿಬ್ಬರ ಬೈಕ್ ವ್ಹೀಲಿಂಗ್ ಹುಚ್ಚಿಗೆ ನಾಲ್ವರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಮಧ್ಯರಾತ್ರಿ ಕುಂಟೋಜಿ ಗ್ರಾಮದ ಹತ್ತಿರ ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬೈಕ್ ಸವಾರ ಗೋಟಖಂಡಕಿ ಗ್ರಾಮದ ನಿವಾಸಿ ನಿಂಗರಾಜ ಚೌಧರಿ(22), ಹಿಂಬದಿ ಸವಾರ ದೇವರಹಿಪ್ಪರಗಿ ತಾಲೂಕಿನ ಹಂಚಲಿ ಗ್ರಾಮದ ನಿವಾಸಿ ಅನಿಲ … Continued

ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಕಾಂಗ್ರೆಸ್ ಸೇರ್ಪಡೆ

ನವದೆಹಲಿ : ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಭಾರತದ ಮಾಜಿ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಲೈಂಗಿಕ ದೌರ್ಜನ್ಯ ಮತ್ತು ಬೆದರಿಕೆಯ ವಿರುದ್ಧ ಕಳೆದ ವರ್ಷದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಇಬ್ಬರೂ ಒಲಿಂಪಿಯನ್‌ಗಳು ಬುಧವಾರ ಹಿರಿಯ ಕಾಂಗ್ರೆಸ್ ನಾಯಕ ಮತ್ತು … Continued

ವೀಡಿಯೊ…| ಆಂಬ್ಯುಲೆನ್ಸ್ ಇಲ್ಲ, 10 ವರ್ಷದ ಇಬ್ಬರು ಪುತ್ರರ ಶವಗಳನ್ನು ಭುಜದ ಮೇಲೆ ಹೊತ್ತು 15 ಕಿ.ಮೀ ನಡೆದ ದಂಪತಿ…!

ಮಹಾರಾಷ್ಟ್ರದ ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣಕ್ಕೆ ದಂಪತಿ ಮೃತಪಟ್ಟ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ತಮ್ಮ ಇಬ್ಬರು ಪುತ್ರರ ಶವಗಳನ್ನು 15 ಕಿಲೋಮೀಟರ್‌ಗಳವರೆಗೆ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿರುವುದು ವರದಿಯಾಗಿದೆ. ದಂಪತಿ ತಮ್ಮ ಪುತ್ರರ ಶವಗಳೊಂದಿಗೆ ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, … Continued

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಆರೋಗ್ಯ ಸ್ಥಿತಿ ಗಂಭೀರ ; ಏಮ್ಸ್‌ನಲ್ಲಿ ವೆಂಟಿಲೇಟರಗೆ ಶಿಫ್ಟ್‌

ನವದೆಹಲಿ: ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರನ್ನು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಆಸ್ಪತ್ರೆಯ ವೆಂಟಿಲೇಟರ್‌ಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಯೆಚೂರಿ ಅವರ ಆರೋಗ್ಯ ಹದಗೆಟ್ಟ ಬೆನ್ನಲ್ಲೇ ವೆಂಟಿಲೇಟರ್‌ಗೆ ದಾಖಲಿಸಲಾಗಿತ್ತು. ಶ್ವಾಸಕೋಶದ ಸೋಂಕಿನ ಚಿಕಿತ್ಸೆಗಾಗಿ ದಾಖಲಾಗಿದ್ದ ಅವರಿಗೆ ಏಮ್ಸ್‌ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಯೆಚೂರಿ … Continued