ಬಿಜೆಪಿ ಶಾಸಕ ಸುರೇಶಕುಮಾರ ಆಸ್ಪತ್ರೆಗೆ ದಾಖಲು

ಬೆಂಗಳೂರು : ತೀವ್ರ ಜ್ವರದಿಂದ ಬಳಲುತ್ತಿರುವ ಬಿಜೆಪಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಸ್. ಸುರೇಶಕುಮಾರ ಅವರು ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಗೆ ಸುರೇಶಕುಮಾರ ಅವರನ್ನು ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ಕಳೆದ ತಿಂಗಳು … Continued

ತ್ಯಾಜ್ಯ ನದಿಗೆ ಬಿಡುಗಡೆ ಆರೋಪ : ಶಾಸಕ ಯತ್ನಾಳ ಒಡೆತನದ ಕಾರ್ಖಾನೆ ವಿರುದ್ಧದ ದೂರು ವಜಾ ಮಾಡಿದ ಹೈಕೋರ್ಟ್‌

ಬೆಂಗಳೂರು : ಸಂಸ್ಕರಣೆ ಮಾಡದೆ ತ್ಯಾಜ್ಯವನ್ನು ನದಿಗೆ ಬಿಡುಗಡೆ ಮಾಡುವ ಮೂಲಕ ಜಲ ಮತ್ತು ಪರಿಸರ ಕಾಯಿದೆ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಡೆತನದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಮೆಸರ್ಸ್‌ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ಸಕ್ಕರೆ ಕಾರ್ಖಾನೆ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಕರ್ನಾಟಕ ಹೈಕೋರ್ಟ್‌ … Continued

ಅತಿದೊಡ್ಡ ಸೈಬರ್ ವಂಚನೆಯಲ್ಲಿ ₹ 13 ಕೋಟಿ ಕಳೆದುಕೊಂಡ 75 ವರ್ಷದ ವೃದ್ಧ…!

ಹೈದರಾಬಾದ್: ತೆಲಂಗಾಣದ ಸೈಬರ್ ಸೆಕ್ಯುರಿಟಿ ಬ್ಯೂರೋಗೆ ವ್ಯಕ್ತಿಯೊಬ್ಬರಿಂದ ಅತಿದೊಡ್ಡ ಸೈಬರ್ ಹಣಕಾಸು ವಂಚನೆ ದೂರು ಬಂದಿದ್ದು, 75 ವರ್ಷದ ವ್ಯಕ್ತಿಯೊಬ್ಬರು ₹ 13 ಕೋಟಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಸಂತ್ರಸ್ತ ವ್ಯಕ್ತಿ ಸಾರ್ವಜನಿಕ ವಲಯದ ಘಟಕದ ಹಿರಿಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು ಎಂದು ಹೇಳಲಾಗಿದೆ. ಈ ವ್ಯಕ್ತಿ ಜುಲೈ 1 ರಂದು ವಾಟ್ಸ್‌ಆ್ಯಪ್ ಮೂಲಕ ಹೂಡಿಕೆಯ ಪ್ರಸ್ತಾಪವನ್ನು … Continued

ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟ: 20 ಪ್ರಾಥಮಿಕ, 11 ಪ್ರೌಢಶಾಲೆ ಶಿಕ್ಷಕರು ಆಯ್ಕೆ

ಬೆಂಗಳೂರು : ಶಿಕ್ಷಣ ಇಲಾಖೆಯಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಯನ್ನು ಪ್ರಕಟ ಮಾಡಲಾಗಿದೆ. ಪ್ರಾಥಮಿಕ ಶಾಲೆಯ ವಿಭಾಗದಲ್ಲಿ 20 ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ 11 ಶಿಕ್ಷಕರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್‌ 5ರಂದು ಶಿಕ್ಷಕರ ದಿನಾಚರಣೆ ದಿನ ಸರ್ಕಾರ ಈ ಪ್ರಶಸ್ತಿ ಪ್ರದಾನ ಮಾಡಲಿದೆ. ಜೊತೆಗೆ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಮಹಿಳಾ ಶಿಕ್ಷಕಿಯರಿಗೆ … Continued

ಮನೆಯಲ್ಲಿ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ

ನವದೆಹಲಿ: ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ ಸಲೀಲ್ ಕಪೂರ್ (70) ಅವರು ಮಂಗಳವಾರ ದೆಹಲಿಯ ಲುಟ್ಯೆನ್ಸ್ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಡಾ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಅವರ ಮನೆಯ ಪೂಜಾ ಕೊಠಡಿಯ ಬಳಿ ರಕ್ತದ ಮಡುವಿನಲ್ಲಿ … Continued

ಅಕ್ಟೋಬರ್ 28 ರಿಂದ ಅಯೋಧ್ಯೆಯಲ್ಲಿ 4 ದಿನಗಳ ದೀಪೋತ್ಸವ ; ಬೆಳಗಲಿವೆ 25 ಲಕ್ಷ ದೀಪಗಳು…!

ಲಕ್ನೋ : ಈ ವರ್ಷದ ಜನವರಿಯಲ್ಲಿ ಭಗವಾನ್ ರಾಮನ ಐತಿಹಾಸಿಕ ‘ಪ್ರಾಣ ಪ್ರತಿಷ್ಠೆ’ಗೆ ಸಾಕ್ಷಿಯಾದ ಅಯೋಧ್ಯೆಯಲ್ಲಿ ಅಕ್ಟೋಬರ್ 28 ರಿಂದ ನಾಲ್ಕು ದಿನಗಳ ದೀಪೋತ್ಸವ ಆಚರಣೆ ನಡೆಯಲಿದೆ. ಇದು ಭಗವಾನ್ ರಾಮನ ದೇವಾಲಯ ಉದ್ಘಾಟನೆಯಾದ ನಂತರ ಮೊದಲ ಕಾರ್ಯಕ್ರಮವಾಗಿದೆ. ದೀಪೋತ್ಸವ ಆಚರಣೆಗಳು ಅಕ್ಟೋಬರ್ 28 ರಿಂದ ಅಕ್ಟೋಬರ್ 31ರ ವರೆಗೆ ನಡೆಯಲಿದೆ ಎಂದು ಉತ್ತರ ಪ್ರದೇಶ … Continued

ಅಧಿಕಾರಿ ಅಮಾನತಿನಿಂದ ಮುಡಾ ನಿರ್ಣಯ ತಪ್ಪೆಂಬುದು ಸಾಬೀತು ; ರವಿಕುಮಾರ

ಬೆಂಗಳೂರು : ಅಕ್ರಮವಾಗಿ ನೀಡಲಾದ ಮೈಸೂರು ಮುಡಾದ 14 ನಿವೇಶನಗಳನ್ನು ವಾಪಸ್ ಮಾಡಬೇಕು ಹಾಗೂ ಅಕ್ರಮದ ಆ ತಪ್ಪಿಗೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಆಗ್ರಹಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಮ್ಮ ಕಾನೂನು, ನಿಯಮ, ನಿರ್ದೇಶನಗಳಿಗೆ ಅವರು … Continued

ಗೋವುಗಳ ಕಳ್ಳ ಎಂದು ತಪ್ಪಾಗಿ ಭಾವಿಸಿ 19 ವರ್ಷದ ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಂದ ಗೋ ರಕ್ಷಕರು…!

ಸುಮಾರು 10 ದಿನಗಳ ಹಿಂದೆ ಗೋರಕ್ಷಕರು ಗುಂಡು ಹಾರಿಸಿದ ನಂತರ 19 ವರ್ಷದ ಘಟನೆಗೆ ಸಂಬಂದವೇ ಇರದ ಯುವಕ ಸಾವಿಗೀಡಾಗಿದ್ದು, ಇದು ಆತ ಗೋ ಕಳ್ಳ ಎಂಬ ತಪ್ಪಾಗಿ ಭಾವಿಸಿದ್ದರಿಂದ ಸಂಭವಿಸಿದೆ ಎಂದು ತಿಳಿದು ಬಂದಿದೆ. ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಅವರಲ್ಲಿ ಒಬ್ಬ ಗೋರಕ್ಷಕರ ಗುಂಪಿನ ಸದಸ್ಯ ಎಂದು ಹೇಳಲಾಗಿದೆ. ನಾಲ್ವರು ಆರೋಪಿಗಳು ಗೊಂದಲದ ಹಿನ್ನೆಲೆಯಲ್ಲಿ … Continued

ಪ್ರಧಾನಿ ಮೋದಿಯನ್ನು ಸ್ವಾಗತಿಸಲಿದ್ದಾರೆ 7000ಕ್ಕೂ ಹೆಚ್ಚು ಕಾರುಗಳ ಒಡೆಯ ಬ್ರೂನಿ ಸುಲ್ತಾನ್…!

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬ್ರೂನೈಗೆ ಆಗಮಿಸಲಿದ್ದು, ಆಗ್ನೇಯ ಏಷ್ಯಾದ ಈ ರಾಷ್ಟ್ರಕ್ಕೆ ಭಾರತೀಯ ಪ್ರಧಾನಿಯೊಬ್ಬರು ನೀಡಿದ ಮೊದಲ ಭೇಟಿಯಾಗಿದೆ. ಎರಡು ದಿನಗಳ ಭೇಟಿಯು ಬ್ರೂನಿಯೊಂದಿಗೆ ಭಾರತದ ಬಾಂಧವ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಮತ್ತು ಉಭಯ ದೇಶಗಳ ನಡುವಿನ 40 ವರ್ಷಗಳ ರಾಜತಾಂತ್ರಿಕ ಸಂಬಂಧಗಳನ್ನು ಇದು ಸ್ಮರಿಸುತ್ತದೆ. ಬ್ರಿಟನ್‌ ರಾಣಿ ಎಲಿಜಬೆತ್ II ರ … Continued

ಎನ್‌ಕೌಂಟರ್‌ನಲ್ಲಿ 9 ಮಾವೋವಾದಿಗಳನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ದಾಂತೇವಾಡ: ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಒಂಬತ್ತು ಮಾವೋವಾದಿಗಳು ಹತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭದ್ರತಾ ಪಡೆಗಳ ಜಂಟಿ ತಂಡವು ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ದಾಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿರುವ ಕಾಡಿನಲ್ಲಿ ಬೆಳಿಗ್ಗೆ 10:30 ರ ಸುಮಾರಿಗೆ ಗುಂಡಿನ ಚಕಮಕಿ ನಡೆಯಿತು ಎಂದು ಬಸ್ತಾರ್ … Continued