ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿ ; ಸರ್ಕಾರದಿಂದ ಸಮಿತಿ ರಚನೆ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಾದಹಳೆ ಪಿಂಚಣಿ ಯೋಜನೆ ( Old Pension Scheme-OPS ) ಜಾರಿಗೊಳಿಸಲು ಸರ್ಕಾರವು ಪರಿಶೀಲನಾ ಸಮಿತಿಯನ್ನು ರಚನೆ ಮಾಡಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯ ( National Pension Scheme – NPS ) ಬದಲಾಗಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡುವ ಸಾಧ್ಯತೆಗಳ ಕುರಿತು ಪರಿಶೀಲಿಸಲು … Continued

26/11 ಮುಂಬೈ ದಾಳಿ ಆರೋಪಿ ಪಾಕ್ ಮೂಲದ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಕೋರ್ಟ್‌ ಒಪ್ಪಿಗೆ

ನವದೆಹಲಿ : 160ಕ್ಕೂ ಹೆಚ್ಚು ಮಂದಿ ಸಾವಿಗೆ ಕಾರಣವಾದ 2008ರ 16/11 ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾರತಕ್ಕೆ ಬೇಕಾಗಿರುವ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ಹುಸೇನ್ ರಾಣಾ ಎಂಬಾತನನ್ನು ಭಾರತ-ಅಮೆರಿಕ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಭಾರತಕ್ಕೆ ಕಳುಹಿಸಬಹುದು ಎಂದು ಕ್ಯಾಲಿಫೋರ್ನಿಯಾದ ನ್ಯಾಯಾಲಯ ಹೇಳಿದೆ. “(ಇಂಡೋ-ಯುಎಸ್ ಹಸ್ತಾಂತರ) ಒಪ್ಪಂದವು ರಾಣಾನ ಹಸ್ತಾಂತರಕ್ಕೆ ಅನುಮತಿ ನೀಡುತ್ತದೆ” ಎಂದು … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ ಐದಾರು ದಿನ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು : ಕರ್ನಾಟಕದಲ್ಲಿ ಆಗಸ್ಟ್ 16 ರಿಂದ ಎರಡನೇ ಹಂತದ ಮುಂಗಾರು ಆರಂಭವಾಗಿದೆ ಎಂದು ರಾಜ್ಯ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಐಎಂಡಿ (IMD) ಅಧಿಕಾರಿಗಳ ಪ್ರಕಾರ, ಒಂದು ವಾರಗಳ ಕಾಲ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಸಿಲಿಕಾನ್ ಸಿಟಿ, ಬೆಂಗಳೂರಿನಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯ ಆರ್ಭಟ ಮುಂದುವರೆಯಲಿದೆ ಎಂದು ಭವಿಷ್ಯ … Continued

ಮುಡಾ ಹಗರಣ | ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ ; ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ : ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಹುದ್ದೆಗೆ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ, ನನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರ ನಡೆದಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದೊಗೆ ಮಾತನಾಡಿದ ಅವರು, ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡುವುದನ್ನು ನಾನು ನಿರೀಕ್ಷೆ ಮಾಡಿದ್ದೆ. ಚುನಾಯಿತ … Continued

ವೀಡಿಯೊ..| ವಿನೇಶ್ ಫೋಗಟಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ; ಕಣ್ಣೀರಾದ ಮಹಿಳಾ ಕುಸ್ತಿಪಟು

ನವದೆಹಲಿ: ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಹೆಚ್ಚು ತೂಕ ಹೊಂದಿದ್ದ ಕಾರಣಕ್ಕೆ ಇತ್ತೀಚಿಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್ 2024 ನಿಂದ ಅನರ್ಹಗೊಂಡ ನಂತರ ಶನಿವಾರ (ಆಗಸ್ಟ್ 17) ನವದೆಹಲಿಗೆ ಆಗಮಿಸಿದ್ದಾರೆ. ವಿನೇಶ್ ಅವರು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಸಾವಿರಾರು ಜನರು ಅವರನ್ನು ಸ್ವಾಗತಿಸಲು ನಿಲ್ದಾಣದ ಹೊರಗೆ ಜಮಾಯಿಸಿದರು. ಕುಸ್ತಿಪಟು ಬರುವ ಕೆಲವೇ … Continued

ವೀಡಿಯೊ | ಮುಂಬೈ ಅಟಲ್ ಸೇತುವೆಯಿಂದ ಜಿಗಿಯಲು ಯತ್ನಿಸಿದ ಮಹಿಳೆ ; ಕ್ಯಾಬ್‌ ಚಾಲಕ- ಪೊಲೀಸರು ರಕ್ಷಿಸಿದ ವೀಡಿಯೊ ವೈರಲ್‌

ಮುಂಬೈ : ಮುಂಬೈನ ಅಟಲ್ ಸೇತು ಸೇತುವೆಯ ಮೇಲೆ ‘ಶಂಕಿತ’ ಆತ್ಮಹತ್ಯೆ ಯತ್ನದ ಘಟನೆಯಲ್ಲಿ, 56 ವರ್ಷದ ಮಹಿಳೆಯೊಬ್ಬರನ್ನು ನ್ಹವಾ ಶೇವಾ ಘಟಕದ ಕ್ಯಾಬ್ ಚಾಲಕ ಮತ್ತು ಟ್ರಾಫಿಕ್ ಸಿಬ್ಬಂದಿ ರಕ್ಷಿಸಿದ್ದಾರೆ. ಮುಲುಂದದ ನಿವಾಸಿಯಾದ ರೀಮಾ ಪಟೇಲ್ ಎಂದು ಗುರುತಿಸಲಾದ ಮಹಿಳೆ ಮುಲುಂದನಿಂದ ಕ್ಯಾಬ್ ಬಾಡಿಗೆಗೆ ಪಡೆದಿದ್ದರು ಎಂದು ಹೇಳಲಾಗಿದೆ. ಅಟಲ್ ಸೇತು ಸೇತುವೆ ಎಂದೂ … Continued

ವೈದ್ಯೆ ಅತ್ಯಾಚಾರ-ಬರ್ಬರ ಕೊಲೆ : ರಾಷ್ಟ್ರವ್ಯಾಪಿ ವೈದ್ಯರ ಮುಷ್ಕರಕ್ಕೆ ಡಾ. ಸೋನಾಲಿ ಸರ್ನೋಬತ್ ಬೆಂಬಲ

ಬೆಳಗಾವಿ : ಪಶ್ಚಿಮ ಬಂಗಾಳದ ಕೋಲ್ಕತ್ತಾದ ಆರ್‌.ಜಿ. ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ಟ್ರೈನಿ ವೈದ್ಯೆಯ ಸಾಮೂಹಿಕ ಅತ್ಯಾಚಾರ ಹಾಗೂ ಬರ್ಬರ ಕೊಲೆ ಖಂಡಿಸಿ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆವರೆಗೆ 24 ಗಂಟೆಗಳ ಕಾಲ ರಾಷ್ಟ್ರವ್ಯಾಪಿ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ತುರ್ತು ವೈದ್ಯಕೀಯ ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲವನ್ನೂ … Continued

ಮುಡಾ ಹಗರಣ : ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ಗೆ ರಾಜ್ಯಪಾಲರ ಅನುಮತಿ

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಭೂ ಮಂಜೂರಾತಿ ಹಗರಣದ ಆರೋಪದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ಕರ್ನಾಟಕ ರಾಜ್ಯಪಾಲರು ಶನಿವಾರ ಅನುಮತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರವಾನೆ ಮಾಡಿದ್ದಾರೆ ಎನ್ನಲಾಗಿದೆ. ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ … Continued

ಕೋಲ್ಕತ್ತಾ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ : ಸಿಬಿಐಗೆ ಶಂಕಿತರ ಮಾಹಿತಿ ನೀಡಿದ ಪೋಷಕರು ; ವರದಿ

ಕೋಲ್ಕತ್ತಾ: ಕೋಲ್ಕತ್ತಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಟ್ರೇನಿ ವೈದ್ಯೆಯ ಪೋಷಕರು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಆಸ್ಪತ್ರೆಯ ಹಲವಾರು ಇಂಟರ್ನ್‌ಗಳು ಮತ್ತು ವೈದ್ಯರು ಅಪರಾಧದಲ್ಲಿ ಭಾಗಿಯಾಗಿರಬಹುದು ಎಂದು ಹೇಳಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ತಮ್ಮ ಮಗಳ ಅತ್ಯಾಚಾರ ಮತ್ತು ಕೊಲೆಯಲ್ಲಿ ಭಾಗಿಯಾಗಿರುವ ಶಂಕಿತ … Continued

ವೈದ್ಯೆ ಅತ್ಯಾಚಾರ-ಕೊಲೆ ಖಂಡಿಸಿ ಇಂದು ದೇಶಾದ್ಯಂತ ವೈದ್ಯರ ಮುಷ್ಕರ ; ಯಾವೆಲ್ಲ ಸೇವೆ ಇರಲ್ಲ ?

ನವದೆಹಲಿ: ಕೋಲ್ಕತಾ ನಗರದ ಆರ್‌.ಜಿ. ಕರ್‌ ಸರಕಾರಿ ವೈದ್ಯಕೀಯ ಹಾಗೂ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿ ಶನಿವಾರ (ಆಗಸ್ಟ್ 17) ದೇಶಾದ್ಯಂತ ವೈದ್ಯರು ಸೇವೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಶನಿವಾರ (ಆಗಸ್ಟ್ 17) ಬೆಳಗ್ಗೆ 6 ಗಂಟೆಯಿಂದ ಮರುದಿನ ಭಾನುವಾರ ಬೆಳಗ್ಗೆ 6 ಗಂಟೆ … Continued