ಹಿಜಾಬ್ ನಿಷೇಧ | ಮುಂಬೈ ಕಾಲೇಜಿಗೆ ಸುಪ್ರೀಂ ಕೋರ್ಟ್ ತರಾಟೆ; ವಸ್ತ್ರ ಸಂಹಿತೆಗೆ ತಡೆ

ನವದೆಹಲಿ : ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಬುರ್ಖಾ ಮತ್ತು ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ಮುಂಬೈ ಕಾಲೇಜಿನ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಸುಪ್ರೀಂ ಕೋರ್ಟ್, ಮಹಿಳೆಯರಿಗೆ ಏನು ಧರಿಸಬೇಕೆಂದು ಹೇಳುವ ಮೂಲಕ ನೀವು ಹೇಗೆ ಮಹಿಳೆಯರ ಸಬಲೀಕರಣ ಮಾಡುತ್ತಿದ್ದೀರಿ ಎಂದು ಸಂಸ್ಥೆಯ ಅಧಿಕಾರಿಗಳನ್ನು ಪ್ರಶ್ನಿಸಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ಇಂತಹ ನಿಷೇಧಗಳನ್ನು ಹೇರಿರುವುದು ದುರದೃಷ್ಟಕರ … Continued

ಹೊಸನಗರ : ಮಕ್ಕಳೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಶಿವಮೊಗ್ಗ : ತಾಯಿಯೊಬ್ಬಳು ತನ್ನಿಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಹೊಸನಗರ ತಾಲೂಕಿನ ಮತ್ತಿಕೈ ಎಂಬಲ್ಲಿ ಎರಡು ಪುಟ್ಟ ಮಕ್ಕಳನ್ನು ಬಾವಿಗೆ ಎಸೆದು, ನಂತರ ತಾನು ಕೂಡ ಬಾವಿಗೆ ಹಾರಿಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದ್ದು ಬುಧವಾರ ರಾತ್ರಿ ನಡೆದಿದೆ. ಚಂಪಕಾಪುರ ನಿವಾಸಿ ರಾಜೇಶ … Continued

ಇ.ಡಿ., ಸಿಬಿಐ ಎರಡೂ ಪ್ರಕರಣಗಳಲ್ಲಿ ಮನೀಶ ಸಿಸೋಡಿಯಾಗೆ ಸುಪ್ರೀಂ ಕೋರ್ಟ್ ಜಾಮೀನು

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಪಿಪಿ) ನಾಯಕ ಹಾಗೂ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ ಡಿ) ಹೂಡಿದ್ದ ಪ್ರಕರಣಗಳೆರಡರಲ್ಲೂ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ … Continued

ಪ್ಯಾರಿಸ್ ಒಲಿಂಪಿಕ್ಸ್‌ | ಸಿಎಎಸ್‌ ಮುಂದೆ ವಿನೇಶ್ ಫೋಗಟ್ ಪರ ಖ್ಯಾತ ವಕೀಲ ಹರೀಶ ಸಾಳ್ವೆ ವಾದ ; ಅವರ ಹಿಂದಿನ ಗೆಲುವಿನ ಕಿರುನೋಟ…

ನವದೆಹಲಿ: ಶತಕೋಟಿ ಭಾರತೀಯರ ಭರವಸೆ ಈಗ ವಕೀಲ ಹರೀಶ್ ಸಾಳ್ವೆ ಅವರ ಹೆಗಲ ಮೇಲೆ ನಿಂತಿದೆ. ಅವರು ಶುಕ್ರವಾರ ಪ್ಯಾರಿಸ್ ಒಲಿಂಪಿಕ್ಸ್ ಅನರ್ಹತೆಯ ಪ್ರಕರಣದಲ್ಲಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ (CAS) ಕುಸ್ತಿಪಟು ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಪ್ರತಿನಿಧಿಸಲಿದ್ದಾರೆ. 50-ಕೆಜಿ ಕುಸ್ತಿ ವಿಭಾಗದಲ್ಲಿ ಅಗ್ರ ಸ್ಪರ್ಧಿಯಾಗಿದ್ದ ವಿನೇಶ್‌ ಫೋಗಟ್, ಫೈನಲ್‌ ಪಂದ್ಯದ ಕೆಲವೇ … Continued

ಮೂಡುಬಿದಿರೆ | ಶಿಕ್ಷಣ ಕಾಶಿ ಮುಕುಟಕ್ಕೆ ಮತ್ತೊಂದು ಗರಿ : ಆಗಸ್ಟ್ 10 ರಂದು ತಾಲೂಕಿನಲ್ಲೇ ಪ್ರಪ್ರಥಮ ಕಾನೂನು ಕಾಲೇಜು ಉದ್ಘಾಟನೆ

ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲೆಯ  ಶಿರ್ತಾಡಿಯ ಭುವನ ಜ್ಯೋತಿ ವಿದ್ಯಾ ಸಮಚ್ಚಯದಲ್ಲಿ ಮೂಡುಬಿದರೆಯಲ್ಲಿಯೇ ಪ್ರಪ್ರಥಮ ಕಾನೂನು ವಿದ್ಯಾಲಯ ಪ್ರಾರಂಭವಾಗುತ್ತಿದೆ. ಆಗಸ್ಟ್ 10 ರಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಆಂಧ್ರಪ್ರದೇಶದ ರಾಜ್ಯಪಾಲರಾದ ಬೆಳುವಾಯಿ ಎಸ್. ಅಬ್ದುಲ್ ನಜೀರ್ ಅವರು ನೂತನ ಕಾನೂನು ವಿದ್ಯಾಲಯವನ್ನು ಉದ್ಘಾಟಿಸಲಿದ್ದಾರೆ. ನೂತನ ವಿದ್ಯಾಲಯಕ್ಕೆ ಈಗಾಗಲೇ 25 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. … Continued

ಹುಬ್ಬಳ್ಳಿ-ಅಂಕೋಲಾ ರೈಲು ; ಜೋಡಿ ಹಳಿ ನಿರ್ಮಾಣ-ಸಚಿವ ಅಶ್ವಿನಿ ವೈಷ್ಣವ

ನವದೆಹಲಿ : ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗಕ್ಕೆ ಹೊಸ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್)ಸಿದ್ಧಪಡಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ತಿಳಿಸಿದ್ದಾರೆ. ಯೋಜನೆಗೆ ಪರಿಸರವಾದಿಗಳಿಂದ ವಿರೋಧವಿದೆ, ಈ ಕಾರಣಕ್ಕೆ ರೈಲ್ವೆ ಮಾರ್ಗ ಯೋಜನೆಗೆ ಈಗಾಗಲೇ ಮಾಡಿರುವ ವಿನ್ಯಾಸವನ್ನು ರೈಲ್ವೆ ಇಲಾಖೆ ಬದಲಿಸಲಿದ್ದು ಜೋಡಿ ರೈಲ್ವೆ ಹಳಿ ನಿರ್ಮಾಣ ಮಾಡಲಾಗುವುದು ಎಂದು ಅವರು ಲೋಕಸಭೆಯಲ್ಲಿ ಉತ್ತರ … Continued

ಪ್ಯಾರಿಸ್‌ ಒಲಿಂಪಿಕ್ಸ್ 2024 : ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಮತ್ತೊಂದು ಪದಕ ಗೆದ್ದ ನೀರಜ ಚೋಪ್ರಾ

ಪ್ಯಾರಿಸ್‌ : ಶುಕ್ರವಾರ ಮುಂಜಾನೆ ನಡೆದ ಪ್ಯಾರಿಸ್ ಒಲಿಂಪಿಕ್ಸ್ 2024 ರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಅವರು 89.45 ಮೀಟರ್‌ಗಳ ಋತುವಿನ ಅತ್ಯುತ್ತಮ ಎಸೆತದೊಂದಿಗೆ ಬೆಳ್ಳಿ ಪದಕ ಗೆದ್ದಿದ್ದಾರೆ. ಇದು ಭಾರತಕ್ಕೆ ಮೊದಲ ಬೆಳ್ಳಿ ಪದಕವಾಗಿದೆ. ಹಾಗೂ ಒಟ್ಟಾರೆಯಾಗಿ ಐದನೇ ಪದಕವಾಗಿದೆ. ಆದಾಗ್ಯೂ, ಪಾಕಿಸ್ತಾನದ ಅರ್ಷದ್ ನದೀಮ್ ಅವರು ಉತ್ತಮ ಪ್ರದರ್ಶನ … Continued

ಧಾರ್ಮಿಕ ಉತ್ಸವದ ಹೋರ್ಡಿಂಗ್‌ ನಲ್ಲಿ ಮಾಜಿ ನೀಲಿ ಚಿತ್ರದ ತಾರೆ ಮಿಯಾ ಖಲೀಫಾ ಫೋಟೊ ; ಗಾಬರಿಬಿದ್ದ ಜನ…!

ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಧಾರ್ಮಿಕ ಉತ್ಸವದ ಹೋರ್ಡಿಂಗ್‌ನಲ್ಲಿ ಮಾಜಿ ನೀಲಿ (ಅಶ್ಲೀಲ) ಚಿತ್ರದ ತಾರೆ ಮಿಯಾ ಖಲೀಫಾ ಅವರ ಫೋಟೋವನ್ನು ಬಳಸಲಾಗಿದೆ. ಆದಿ ಪೆರುಕ್ಕು ಹಬ್ಬದ ಅಲಂಕಾರದ ಭಾಗವಾಗಿದ್ದ ಹೋರ್ಡಿಂಗ್ ನಲ್ಲಿ ಸಾಂಪ್ರದಾಯಿಕ ಹಾಲಿನ ಪಾತ್ರೆಯನ್ನು ಹೊತ್ತಿರುವ ಮಿಯಾ ಖಲೀಫಾಳನ್ನು ಚಿತ್ರಿಸಲಾಗಿದೆ, ಇದು ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಆದಿ ಪೆರುಕ್ಕು ಉತ್ಸವವು ಪಾರ್ವತಿಯ … Continued

ವಕ್ಫ್ ಕಾಯ್ದೆ | 1500 ವರ್ಷ ಹಳೆಯ ದೇಗುಲ ಇರುವ ಹಳ್ಳಿ, ಮುನ್ಸಿಪಲ್ ಕಾರ್ಪೋರೇಶನ್ ಪ್ರಧಾನ ಕಚೇರಿ ವಕ್ಫ್ ಆಸ್ತಿ ; ಇದು ಸಂಭವಿಸಿದ್ದು ಹೇಗೆ ? ವಿಪಕ್ಷಗಳಿಗೆ ರಿಜಿಜು ತಿರುಗೇಟು

ನವದೆಹಲಿ: ದೇಶದಲ್ಲಿ ಬೆರಳೆಣಿಕೆಯಷ್ಟು ಜನರು ವಕ್ಫ್ ಮಂಡಳಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು ಮತ್ತು ಸಾಮಾನ್ಯ ಮುಸ್ಲಿಮರಿಗೆ ನ್ಯಾಯ ಸಿಕ್ಕಿಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ ರಿಜಿಜು ಲೋಕಸಭೆಯಲ್ಲಿ ಹೇಳಿದರು. ಬುಧವಾರ ಲೋಕಸಭೆಯಲ್ಲಿ ಮಂಡಿಸಿದ ವಕ್ಫ್ (ತಿದ್ದುಪಡಿ) ಕಾಯ್ದೆಯ ಮೇಲಿನ ಪ್ರತಿಪಕ್ಷಗಳ ಆರೋಪಕ್ಕೆ ಅವರು ಉತ್ತರ ನೀಡಿದರು. ಪ್ರಸ್ತಾವಿತ ಕಾನೂನಿನಲ್ಲಿನ ನಿಬಂಧನೆಗಳು ಅನೇಕ ವರ್ಷಗಳಲ್ಲಿ ಬಹು … Continued

ಪೊಲೀಸ್‌ ಕಾನ್‌ಸ್ಟೆಬಲ್‌ ನ ಮಾತು-ಶ್ರವಣದೋಷವುಳ್ಳ ಮಗನ ಸಹಾಯದಿಂದ ಕೊಲೆ ಪ್ರಕರಣ ಭೇದಿಸಿದ ಪೊಲೀಸರು ; ಅದು ಹೇಗೆಂದರೆ…

ಮುಂಬೈ: ಕಾನ್‌ಸ್ಟೆಬಲ್‌ ಒಬ್ಬರ ಮಾತು ಮತ್ತು ಶ್ರವಣದೋಷವುಳ್ಳ ಮಗ ಮುಂಬೈ ಪೊಲೀಸರಿಗೆ ಕೊಲೆ ಪ್ರಕರಣವನ್ನು ಭೇದಿಸಲು ಸಹಾಯ ಮಾಡಿದ್ದಾನೆ. ಆತ ಇದೇ ಅಂಗವೈಕಲ್ಯದಿಂದ ಬಳಲುತ್ತಿರುವ ಆರೋಪಿಯೊಂದಿಗೆ ಸಂವಹನ ನಡೆಸಲು ಸಂಕೇತ ಭಾಷೆ ಬಳಸಿ ಪ್ರಕರಣ ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಗುರುವಾರ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗಸ್ಟ್ 5ರಂದು ದಾದರ್ … Continued