ಕ್ಲಾಸ್‌ ರೂಂ ಒಳಗೇ ಶಿಕ್ಷಕನನ್ನು ಇರಿದು ಸಾಯಿಸಿದ ಅಪ್ರಾಪ್ತ ವಿದ್ಯಾರ್ಥಿ…!

ಗುವಾಹತಿ : ಅಸ್ಸಾಂನ ಶಿವಸಾಗರ ಜಿಲ್ಲೆಯಲ್ಲಿ ಶನಿವಾರ ತರಗತಿಯೊಳಗೆ ಕೋಚಿಂಗ್ ಸೆಂಟರ್‌ನ ಶಿಕ್ಷಕರೊಬ್ಬರನ್ನು ಅವರ ವಿದ್ಯಾರ್ಥಿಯೇ ಚಾಕುವಿನಿಂದ ಕೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಪ್ರಾಪ್ತ ವಯಸ್ಕ ವಿದ್ಯಾರ್ಥಿಯನ್ನು ಶಿವಸಾಗರ ಪಟ್ಟಣದ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದ್ದಾರೆ. 11 ನೇ ತರಗತಿಯ ವಿದ್ಯಾರ್ಥಿಯನ್ನು ಹಿಂದಿನ ದಿನ ಯಾವುದೋ ವಿಷಯಕ್ಕೆ ಶಿಕ್ಷಕರು ನಿಂದಿಸಿದ್ದರು … Continued

ಕಾಶ್ಮೀರ : ಕುಲ್ಗಾಂನಲ್ಲಿ ನಡೆದ ಎನ್ಕೌಂಟರಿನಲ್ಲಿ ಇಬ್ಬರು ಯೋಧರು ಹುತಾತ್ಮ ; ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಕುಲ್ಗಾಮ್: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಶನಿವಾರ ನಡೆದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ನಾಲ್ವರು ಭಯೋತ್ಪಾದಕರನ್ನು ಪಡೆಗಳು ಹೊಡೆದುರುಳಿಸಿವೆ, ಇತರ ನಾಲ್ವರು ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎಂದು ನಂಬಲಾಗಿದೆ. ಜಿಲ್ಲೆಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಭಯೋತ್ಪಾದಕರು ಇರುವ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಪ್ರಾರಂಭಿಸಿದ … Continued

ಮೊದಲ ನೋಟದಲ್ಲೇ ಪ್ರೀತಿ…8 ವರ್ಷ ಪ್ರೀತಿಸಿದ್ರೂ ಒಟ್ಟಿಗಿದ್ದಿದ್ದು ಎರಡೇ ತಿಂಗಳು ; ʼಕೀರ್ತಿಚಕ್ರʼ ಸ್ವೀಕರಿಸಿದ ನಂತರ ನೆನಪಿಸಿಕೊಂಡ ಕ್ಯಾಪ್ಟನ್‌ ಅಂಶುಮಾನ್ ಪತ್ನಿ

ನವದೆಹಲಿ : ರಾಷ್ಟ್ರಪತಿ ಭವನದಲ್ಲಿ ನಡೆದ ಗಂಭೀರ ಸಮಾರಂಭದಲ್ಲಿ, ಕ್ಯಾಪ್ಟನ್ ಅಂಶುಮಾನ ಸಿಂಗ್ ಅವರ ತಾಯಿ ಹಾಗೂ ವಿಧವೆ ಪತ್ನಿ ಸ್ಮೃತಿ ಸಿಂಗ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಕೀರ್ತಿ ಚಕ್ರವನ್ನು ಸ್ವೀಕರಿಸಿದರು. ಸಿಯಾಚಿನ್‌ನಲ್ಲಿ ನಡೆದ ಬೆಂಕಿ ಅವಘಡದ ಸಂದರ್ಭದಲ್ಲಿ ತೋರಿದ ಅಸಾಧಾರಣ ಶೌರ್ಯಕ್ಕಾಗಿ ಕ್ಯಾಪ್ಟನ್ ಅಂಶುಮಾನ ಸಿಂಗ್ … Continued

ಕೆಲಸ ಒತ್ತಡಕ್ಕೆ ಬಳಲಿ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿತೇ ʼರೊಬೊಟ್‌ʼ..? : ತನಿಖೆಗೆ ಆದೇಶಿಸಿದ ದಕ್ಷಿಣ ಕೊರಿಯಾ…!

ಸಿಯೋಲ್: ದಕ್ಷಿಣ ಕೊರಿಯಾದ ಪಟ್ಟಣವೊಂದರ ನಗರಸಭೆಯ ಕೆಲಸಗಳಲ್ಲಿ ಸಿವಿಲ್ ಸರ್ವೆಂಟ್ ಆಗಿ ಕೆಲಸ ಮಾಡುತ್ತಿದ್ದ ರೊಬೊಟ್‌ ಒಂದು ಮಹಡಿ ಮೇಲಿಂದ ತಾನೇ ಕೆಳಗೆ ಬಿದ್ದು ನಿಷ್ಕ್ರಿಯೆಗೊಂಡಿದ್ದು, ಇದು ಆತ್ಮಹತ್ಯೆ ಮಾಡಿಕೊಂಡಿದೆಯೇ ಎಂದು ತಿಳಿಯುವ ಬಗ್ಗೆ ಅಲ್ಲಿನ ಆಡಳಿತ ತನಿಖೆಗೆ ಆದೇಶಿಸಿದೆ. ಅಚ್ಚರಿಯ ಘಟನೆಯಲ್ಲಿ ದಕ್ಷಿಣ ಕೊರಿಯಾದ ಗುಮಿ ಸಿಟಿ ಕೌನ್ಸಿಲ್‌ಗಾಗಿ ಕೆಲಸ ಮಾಡುತ್ತಿದ್ದ ʼಸಿವಿಲ್ ಸರ್ವೆಂಟ್ … Continued

ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳ: ವೈದ್ಯಕೀಯ ತುರ್ತು ಸ್ಥಿತಿ ಘೋಷಿಸಲು ಸಂಸದ ಡಾ.ಮಂಜುನಾಥ ಆಗ್ರಹ

ಬೆಂಗಳೂರು: ಡೆಂಗ್ಯೂ ರಾಜ್ಯಾದ್ಯಂತ ಹರಡುತ್ತಿದ್ದು, ಅದರ ನಿಯಂತ್ರಣಕ್ಕೆ ಕೋವಿಡ್ ಮಾದರಿಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಆಗಬೇಕು. ಇದನ್ನು ‘ವೈದ್ಯಕೀಯ ತುರ್ತು ಸ್ಥಿತಿ’ ಎಂದು ಘೋಷಿಸಬೇಕು ಎಂದು ಬಿಜೆಪಿ ಸಂಸದ ಡಾ. ಸಿ.ಎನ್. ಮಂಜುನಾಥ ಆಗ್ರಹಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡೆಂಗ್ಯೂ ಜ್ವರ ನಿಯಂತ್ರಣ ಮಾಡಬೇಕಿದ್ದರೆ ಸೊಳ್ಳೆಗಳ ನಿಯಂತ್ರಣ … Continued

ಜುಲೈ 23 ರಂದು ಹಣಕಾಸು ಸಚಿವರಿಂದ ಕೇಂದ್ರ ಬಜೆಟ್ ಮಂಡನೆ

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನ ಜುಲೈ 22ರಂದು ಆರಂಭವಾಗಲಿದ್ದು, ಜುಲೈ 23 ರಂದು 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತದೆ ಎಂದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ಪ್ರಕಟಿಸಿದ್ದಾರೆ. ಜುಲೈ 22 ರಂದು ಆರಂಭವಾದ ಬಜೆಟ್ ಅಧಿವೇಶನ ಆಗಸ್ಟ್ 12 ರಂದು ಮುಕ್ತಾಯಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಕೇಂದ್ರ … Continued

ಪ್ರಾಂಶುಪಾಲೆಯನ್ನು ಅವರ ಕೊಠಡಿಯಿಂದ ಬಲವಂತವಾಗಿ ಹೊರದಬ್ಬಿದ ಶಾಲಾ ಆಡಳಿತ ಮಂಡಳಿ : ವೀಡಿಯೊ ವೈರಲ್‌

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿರುವ ಬಿಷಪ್ ಜಾನ್ಸನ್ ಗರ್ಲ್ಸ್ ಹೈಸ್ಕೂಲ್​​ನ ಪ್ರಾಂಶುಪಾಲೆ ಪಾರುಲ್ ಸೊಲೊಮನ್ ಅವರನ್ನು ಆಡಳಿತ ಮಂಡಳಿಯು ಬಲವಂತವಾಗಿ ಅವರ ಕಚೇರಿಯಿಂದ ಹೊರದಬ್ಬಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವೈರಲ್​​ ಆದ ವೀಡಿಯೊದಲ್ಲಿ ಪ್ರಾಂಶುಪಾಲೆ ಪಾರುಲ್ ಅವರನ್ನು ಕುರ್ಚಿಯಿಂದ ಬಲವಂತದಿಂದ ಎಳೆದುಹಾಕಿ ಅದೇ ಸ್ಥಾನಕ್ಕೆ ಹೊಸ ಪ್ರಾಂಶುಪಾಲರನ್ನು ಕೂಡ್ರಿಸಿರುವುದು ಕಂಡುಬಂದಿದೆ. ಸಂಸ್ಥೆಯ ಅಧ್ಯಕ್ಷರ … Continued

ಕೇರಳದಲ್ಲಿ ಅಪರೂಪದ ‘ಮಿದುಳು ತಿನ್ನುವ ಅಮೀಬಾ’ ಸೋಂಕಿನ 4ನೇ ಪ್ರಕರಣ ಪತ್ತೆ

ಕೋಯಿಕ್ಕೋಡ್: ಕೇರಳದಲ್ಲಿ ಅಪರೂಪದ ಅಮೀಬಾ ಸೋಂಕಿನ (ಅಮೀಬಿಕ್ ಮೆನಿಂಗೂ ಎನ್ಸೆಫಾಲಿಟಿಸ್) ನಾಲ್ಕನೇ ಪ್ರಕರಣ ಪತ್ತೆಯಾಗಿದೆ. ಉತ್ತರ ಕೇರಳದ ಕೋಯಿಕ್ಕೋಡ್ ಜಿಲ್ಲೆಯ 14 ವರ್ಷದ ಬಾಲಕ ಅಮೀಬಾ ಸೋಂಕಿನಿಂದ ಬಳಲುತ್ತಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಜುಲೈ 1ರಂದು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ. ಸೋಂಕನ್ನು ಬೇಗನೇ ಪತ್ತೆಹಚ್ಚಿದ ನಂತರ ವಿದೇಶದಿಂದ ತುರ್ತಾಗಿ … Continued

ಯುರೋಪ್‌ನಲ್ಲಿ ಸಂಘರ್ಷ, ಮಂಗಳನ ಮೇಲೆ ಯುದ್ಧ, ‘ಏಲಿಯನ್ಸ್’ ಜೊತೆ ಸಂಪರ್ಕ, ಪ್ರಪಂಚದ ಆಯುಷ್ಯ…: ಮುಂಬರುವ ವರ್ಷಗಳ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ…!

ನಿಖರ ಭವಿಷ್ಯಕ್ಕೆ ಹೆಸರುವಾಸಿಯಾಗಿರುವ ಬಾಬಾ ವಂಗಾ ಎಂದೇ ಖ್ಯಾತಿ ಪಡೆದಿರುವ ವಾಂಗೆಲಿಯಾ ಪಾಂಡೆವಾ ಗುಸ್ಚೆರೋವಾ ಮತ್ತೊಂದು ಭವಿಷ್ಯ ಇದೀಗ ಭಾರೀ ಚರ್ಚೆಗೆ ಕಾರಣ ಆಗಿದೆ. ಬಲ್ಗೇರಿಯಾ ಮೂಲದ ಬಾಬಾ ವಂಗಾ 1996ರಲ್ಲಿ 85ನೇ ವಯಸ್ಸಿಗೆ ನಿಧನರಾಗಿದ್ದಾರೆ. ಅವರು ತಮ್ಮ ಜೀವತಾವಧಿಯಲ್ಲಿ ನುಡಿದ ಹಲವಾರು ಭವಿಷ್ಯಗಳು ನಿಜವಾಗಿದ್ದು, ಹೀಗಾಗಿ ಅವರು ‘ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್’ ಎಂದೇ ಖ್ಯಾತರಾಗಿದ್ದಾರೆ. ಅವರು … Continued

ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಚೆನ್ನೈ: ಬಹುಜನ ಸಮಾಜ ಪಕ್ಷದ ತಮಿಳುನಾಡು ಘಟಕದ ಅಧ್ಯಕ್ಷರನ್ನು ಬೈಕ್‌ನಲ್ಲಿ ಬಂದ ಆರು ಮಂದಿ ದುಷ್ಕರ್ಮಿಗಳು ಅವರ ಮನೆಯ ಸಮೀಪವೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದಾರೆ. ಪೊಲೀಸರ ಪ್ರಕಾರ, ದಾಳಿಗೆ ಸಂಬಂಧಿಸಿದಂತೆ ಎಂಟು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರ್ಮ್‌ಸ್ಟ್ರಾಂಗ್ ಅವರು ನಗರದ ಸೇಂಬಿಯಂ ಪ್ರದೇಶದಲ್ಲಿನ ಅವರ ಮನೆಯ ಬಳಿ ಪಕ್ಷದ ಕೆಲವು ಕಾರ್ಯಕರ್ತರೊಂದಿಗೆ ಚರ್ಚೆ ನಡೆಸುತ್ತಿದ್ದಾಗ ಆರು … Continued