ಟಿ 20 ವಿಶ್ವಕಪ್ 2024 ; ಆಸ್ಟ್ರೇಲಿಯಾ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ ಭಾರತ

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಸಿಯ): ಸೋಮವಾರ (ಜೂನ್ 24) ಗ್ರಾಸ್ ಐಲೆಟ್‌ನಲ್ಲಿ ನಡೆದ ತಮ್ಮ ಕೊನೆಯ ಸೂಪರ್ 8 ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 24 ರನ್‌ಗಳಿಂದ ಸೋಲಿಸಿದ ನಂತರ ಭಾರತವು T20 ವಿಶ್ವಕಪ್ 2024 ರ ಸೆಮಿಫೈನಲ್ ಪ್ರವೇಶಿಸಿದೆ. ಆಸ್ಟ್ರೇಲಿಯಾ ತಂಡಕ್ಕೆ 20 ಓವರ್‌ಗಳಲ್ಲಿ 181/7 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಗ್ರೂಪ್ 1 ರ ಈ ವಿಜಯವು … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆ ; ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಜೂನ್‌ 27 ರ ವರೆಗೂ ಹಲವು ಜಿಲ್ಲೆಗಳಿಗೆ ಭಾರೀ ಮಳೆಯಾಗಲಿರುವ ಹಿನ್ನಲೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇಂದಿನಿಂದ ಆರಂಭವಾಗಿ ಜೂನ್ 27 ರವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಭಾರೀ ಮಳೆಯಾಗಲಿದೆ, ಆರೆಂಜ್ ಅಲರ್ಟ್ ನೀಡಲಾಗಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಚಾಮರಾಜನಗರ, ದಾವಣಗೆರೆ, ಮಂಡ್ಯ, ಮೈಸೂರು … Continued

ಅಂತರಿಕ್ಷದಿಂದ ‘ರಾಮಸೇತು’ ಹೇಗೆ ಕಾಣುತ್ತದೆ ? ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಹಂಚಿಕೊಂಡ ಹೈ-ರೆಸಲ್ಯೂಶನ್ ಫೋಟೋ ವೈರಲ್‌

ನವದೆಹಲಿ: ಐರೋಪ್ಯ ಬಾಹ್ಯಾಕಾಶ ಸಂಸ್ಥೆ (European Space Agency) ತನ್ನ ಕೋಪರ್ನಿಕಸ್ ಸೆಂಟಿನೆಲ್-2 ಉಪಗ್ರಹದಿಂದ ತೆಗೆದ ‘ರಾಮಸೇತು’ವಿನ ಚಿತ್ರವನ್ನು ಹಂಚಿಕೊಂಡಿದೆ. ಆಡಮ್ಸ್ ಬ್ರಿಡ್ಜ್ ಎಂದೂ ಕರೆಯಲ್ಪಡುವ ಇದು ಭಾರತ ಮತ್ತು ಶ್ರೀಲಂಕಾವನ್ನು ಸಂಪರ್ಕಿಸುವ ಶೋಲ್ಗಳ ಸರಪಳಿಯಾಗಿದೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ರಾಮಸೇತು ಶ್ರೀಲಂಕಾದ ಮನ್ನಾರ್ ದ್ವೀಪ ಹಾಗೂ ಭಾರತದ … Continued

ಜಿಂಬಾಬ್ವೆ T20 ಸರಣಿಗೆ ಭಾರತದ ತಂಡ ಪ್ರಕಟ ; ಗಿಲ್ ಗೆ ನಾಯಕತ್ವ, ಹಿರಿಯರಿಗೆ ವಿಶ್ರಾಂತಿ, ಯುವ ಆಟಗಾರರಿಗೆ ಮಣೆ

ನವದೆಹಲಿ: ಜುಲೈ 6ರಿಂದ ಮತ್ತು 14 ರ ವರೆಗೆ ನಡೆಯಲಿರುವ ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ T20 ಸರಣಿಗೆ ಭಾರತದ ತಂಡ ಪ್ರಕಟಿಸಲಾಗಿದ್ದು, ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ತಂಡದ ನಾಯಕನಾಗಿ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ, ಯುವ ಆಟಗಾರರಾದ ರಿಯಾನ್ ಪರಾಗ್, ಅಭಿಷೇಕ್ ಶರ್ಮಾ ಮತ್ತು ನಿತೀಶ್ ರೆಡ್ಡಿ ಅವರು … Continued

ರಾಜ್ಯಸಭೆಯಲ್ಲಿ ಸದನದ ನಾಯಕರಾಗಿ ಜೆಪಿ ನಡ್ಡಾ ನೇಮಕ

ನವದೆಹಲಿ: ಉತ್ತರ ಮುಂಬೈ ಕ್ಷೇತ್ರದಿಂದ 18ನೇ ಲೋಕಸಭೆಗೆ ಪ್ರವೇಶಿಸಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಬದಲಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ ನಡ್ಡಾ ಅವರನ್ನು ರಾಜ್ಯಸಭೆಯ ಸಭಾನಾಯಕರನ್ನಾಗಿ ನೇಮಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾದ 41 ಅಭ್ಯರ್ಥಿಗಳಲ್ಲಿ ಜೆ.ಪಿ. ನಡ್ಡಾ ಕೂಡ ಒಬ್ಬರು. ಗೋಯಲ್ ಅವರು ಜುಲೈ 5, … Continued

ಯುವಕನಿಗೆ ಲೈಂಗಿಕ ಕಿರುಕುಳ ಪ್ರಕರಣ : ಸೂರಜ್‌ ರೇವಣ್ಣ 8 ದಿನ ಸಿಐಡಿ ಕಸ್ಟಡಿಗೆ

ಬೆಂಗಳೂರು : ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಶಾಸಕ ಎಚ್‌.ಡಿ. ರೇವಣ್ಣ ಅವರ ಹಿರಿಯ ಪುತ್ರ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಕೋರ್ಟ್‌ 8 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಪ್ರಕರಣವನ್ನು ಭಾನುವಾರ ಸಿಐಡಿಗೆ ವಹಿಸಿಸಿತ್ತು. ಆದರೆ ಅಧಿಕೃತವಾಗಿ ಸಿಐಡಿಗೆ ವರ್ಗಾವಣೆ ಆಗಿರಲಿಲ್ಲ. … Continued

ವೀಡಿಯೊ..| ಸಂಸದರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಾಲ್ವರು ಕೇಂದ್ರ ಸಚಿವರು

ನವದೆಹಲಿ : ಕೇಂದ್ರ ಸಚಿವರಾಗಿರುವ ರಾಜ್ಯದ ಲೋಕಸಭಾ ಸದಸ್ಯರಾದ ಎಚ್.ಡಿ ಕುಮಾರಸ್ವಾಮಿ, ಪ್ರಹ್ಲಾದ ಜೋಶಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರು ಸಂಸದರಾಗಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನೂತನ ಸಂಸತ್‌ ಭವನ ಸೆಂಟ್ರಲ್ ವಿಸ್ಟಾದಲ್ಲಿ ನಡೆಯುತ್ತಿರುವ 18ನೇ ಲೋಕಸಭೆಯ ಮೊದಲ ಅಧಿವೇಶನದ ಆರಂಭದಲ್ಲಿ ಆಯ್ಕೆಯಾದ ನೂತನ ಸಂಸದರಿಗೆ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ ಅವರು ಪ್ರತಿಜ್ಞಾವಿಧಿ … Continued

ಲೋಕಸಭೆ ಅಧಿವೇಶನ : ಮಂಡ್ಯ ಸಂಸದರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ

ನವದೆಹಲಿ: ಲೋಕಸಭೆಯಲ್ಲಿ ನೂತನ ಸಂಸದರಿಗೆ ಹಂಗಾಮಿ ಸ್ಪೀಕರ್‌ ಆದ ಅವರು ಭಾನುವಾರ ಲೋಕಸಭೆಯ ಸದಸ್ಯರಿಗೆ ಪ್ರಮಾಣ ವಚನ ಭೋದನೆ ಮಾಡುತ್ತಿದ್ದು, ಮಂಡ್ಯ ಸಂಸದರಾಗಿ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್​.ಡಿ ಕುಮಾರಸ್ವಾಮಿ ಕನ್ನಡದಲ್ಲಿ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಭಾನುವಾರ 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಿದೆ. … Continued

ಮೃತ ಪತ್ನಿಯ ಅಂತ್ಯಸಂಸ್ಕಾರ ಮುಗಿದು 4 ದಿನಗಳ ಬಳಿಕ 600 ಕಿಮೀ ದೂರದಲ್ಲಿ ಆಕೆ ಜೀವಂತವಾಗಿ ಪತ್ತೆ…!

ಗೋರಖಪುರ : ಪತ್ನಿ ಮೃತಪಟ್ಟಿದ್ದಾಳೆ ಎಂದು ಆಕೆಯ ಅಂತ್ಯಸಂಸ್ಕಾರ ನಡೆಸಿದ್ದ ಪತಿಗೆ ನಾಲ್ಕು ದಿನಗಳ ನಂತರ ಪತ್ನಿ 600 ಕಿ.ಮೀ. ದೂರದಲ್ಲಿ ಪತ್ತೆಯಾಗಿದ್ದು, ಈಗ ಸತಿ ಪತಿ ಮತ್ತೆ ಒಂದಾಗಿರುವ ಅಸಾಮಾನ್ಯ ಘಟನೆ ಉತ್ತರ ‍ಪ್ರದೇಶದ ಗೋರಖಪುರ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ. ಗೋರಖಪುರದ ಬನ್ಸ್‌ಗಾಂವ್‌ನ ನಿವಾಸಿ ರಾಮ ಸುಮೇರ್ (60) ಅವರು ತಮ್ಮ ಪತ್ನಿ ಫೂಲ್ಮತಿ … Continued

ಕಲಬುರಗಿ ವಿಮಾನ ನಿಲ್ದಾಣಕ್ಕೆ‌ ಬಾಂಬ್ ಬೆದರಿಕೆ

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣ (Kalaburagi Airport) ಸ್ಫೋಟಿಸುವುದಾಗಿ ಅನಾಮಧೇಯ ವ್ಯಕ್ತಿಯಿಂದ ಬಾಂಬ್​ ಬೆದರಿಕೆಯ ಇ-ಮೇಲ್ ಬಂದಿದೆ. ​ಏರ್ ಪೋರ್ಟ್ ನ ಟರ್ಮಿನಲ್ ಕಟ್ಟಡದಲ್ಲಿ ಬಾಂಬ್ ಇರಿಸಿರುವ ಬಗ್ಗೆ ಇ ಮೇಲ್ ಸಂದೇಶ ಕಳುಹಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಬಾಂಬ್ ನಿಷ್ಕ್ರಿಯ ದಳ ವ್ಯಾಪಕ ಶೋಧನಾ ಕಾರ್ಯ ನಡೆಸುತ್ತಿದೆ. ಭದ್ರತಾ ಪಡೆಯವರೂ ತಪಾಸಣೆ ನಡೆಸಿದ್ದಾರೆ. ಬೆಂಗಳೂರಿನಿಂದ … Continued