ಇದು ವಿಶ್ವದ ಅತ್ಯಂತ ಭಾರವಾದ ಈರುಳ್ಳಿ : ಇದರ ತೂಕಕ್ಕೆ ಬೆರಗಾಗಲೇಬೇಕು…!

ಗುರ್ನಸಿಯ ವ್ಯಕ್ತಿಯೊಬ್ಬರು ಇತ್ತೀಚೆಗೆ ವಿಶ್ವದಲ್ಲೇ ಅತಿ ದೊಡ್ಡ ಈರುಳ್ಳಿ ಬೆಳೆದ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಈ ಈರುಳ್ಳಿ ಒಂದು ಅಥವಾ ಮೂರು ಕೆಜಿ ಭಾರವಲ್ಲ, ಆದರೆ ಬರೋಬ್ಬರಿ 8.97 ಕೆಜಿ ತೂಗುತ್ತದೆ. ಸೆಪ್ಟೆಂಬರ್ 15 ರಂದು ಉತ್ತರ ಯಾರ್ಕ್‌ಷೈರ್‌ನಲ್ಲಿ ನಡೆದ ಹ್ಯಾರೊಗೇಟ್ ಶರತ್ಕಾಲದ ಪುಷ್ಪ ಪ್ರದರ್ಶನದಲ್ಲಿ ಗರೆಥ್ ಗ್ರಿಫಿನ್ ಎಂಬವರು ಹೆಮ್ಮೆಯಿಂದ ತನ್ನ ಉತ್ಪನ್ನಗಳನ್ನು ಪ್ರದರ್ಶಿಸಿದರು. ಇದು … Continued

ವೀಡಿಯೊ : ಟರ್ಕಿಶ್ ಸಂಸತ್ತಿನ ಬಳಿ “ಭಯೋತ್ಪಾದಕ ದಾಳಿ”; ಕಾರಿನಿಂದ ಹೊರಬಂದು ತನ್ನನ್ನು ಸ್ಪೋಟಿಸಿಕೊಂಡ ಭಯೋತ್ಪಾದಕ | ವೀಕ್ಷಿಸಿ

ಅಂಕಾರಾ : ಭಾನುವಾರ ರಾಜಧಾನಿ ಅಂಕಾರಾದಲ್ಲಿರುವ ಟರ್ಕಿಶ್ ಸಂಸತ್ತಿನ ಬಳಿ ನಡೆದ “ಭಯೋತ್ಪಾದಕ ದಾಳಿಯ” ಚಿತ್ರಗಳನ್ನು ಭದ್ರತಾ ಕ್ಯಾಮೆರಾದ ತುಣುಕಿನಲ್ಲಿ ತೋರಿಸಲಾಗಿದೆ. ಸ್ಫೋಟವು ಎಷ್ಟು ಪ್ರಬಲವಾಗಿದೆ ಎಂದರೆ ಘಟನೆಯ ಸ್ಥಳದಿಂದ ಹಲವಾರು ಕಿಲೋಮೀಟರ್‌ಗಳವರೆಗೆ ಅದು ಕೇಳಿಸಿದೆ. ವೀಡಿಯೊ ಪ್ರಕಾರ, ಇಬ್ಬರು ದಾಳಿಕೋರರು ಭಾನುವಾರ ಬೆಳಿಗ್ಗೆ 9:90 ರ ಸುಮಾರಿಗೆ ವಾಹನದಲ್ಲಿ ಬಂದರು ಮತ್ತು ಅವರು ವಾಹನದ … Continued

26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಸಹಾಯಕ, ಮೋಸ್ಟ್ ವಾಂಟೆಡ್ ಉಗ್ರನಿಗೆ ಕರಾಚಿಯಲ್ಲಿ ಗುಂಡಿಕ್ಕಿ ಹತ್ಯೆ: ವರದಿ

ಕರಾಚಿ: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಮೋಸ್ಟ್ ವಾಂಟೆಡ್ ನಾಯಕರಲ್ಲಿ ಒಬ್ಬರಾದ ಮುಫ್ತಿ ಕೈಸರ್ ಫಾರೂಕ್ ಎಂಬಾತನನ್ನು ಕರಾಚಿಯಲ್ಲಿ “ಅಪರಿಚಿತ ವ್ಯಕ್ತಿಗಳು” ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮ ವರದಿ ಮಾಡಿದೆ. ಕೈಸರ್ ಫಾರೂಕ್ ಎಲ್‌ಇಟಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬ ಮತ್ತು 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ನಿಕಟವರ್ತಿ … Continued

ನೇರಪ್ರಸಾರದ ಟಿವಿ ಚರ್ಚೆ ವೇಳೆ ಪರಸ್ಪರ ಹೊಡೆದಾಡಿಕೊಂಡ ಪಾಕಿಸ್ತಾನದ ನಾಯಕರು | ವೀಕ್ಷಿಸಿ

ಇತ್ತೀಚೆಗೆ ಪಾಕಿಸ್ತಾನದ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ, ಎದುರಾಳಿ ಪಕ್ಷಗಳ ಇಬ್ಬರು ಪ್ಯಾನೆಲಿಸ್ಟ್‌ಗಳ ನಡುವಿನ ಚರ್ಚೆಯು ಜಗಳಕ್ಕೆ ತಿರುಗಿ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷ ಬೆಂಬಲಿಸುವ ವಕೀಲ ಶೇರ್ ಅಫ್ಜಲ್ ಮರ್ವಾತ್ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್ – ನವಾಜ್ (ಪಿಎಂಎಲ್-ಎನ್) ಸೆನೆಟರ್ ಅಫ್ನಾನುಲ್ಲಾ ಖಾನ್ ಅವರು ಕಾರ್ಯಕ್ರಮದ ಚರ್ಚೆಯ ಸಮಯದಲ್ಲಿ ತಮ್ಮ … Continued

ಪಾಕಿಸ್ತಾನದ ಮಸೀದಿ ಬಳಿ ಬಾಂಬ್ ಸ್ಫೋಟ: 52  ಸಾವು, 130 ಮಂದಿಗೆ ಗಾಯ

ಕರಾಚಿ: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದ ಮಸೀದಿಯೊಂದರ ಬಳಿ ಶುಕ್ರವಾರ ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಆಚರಣೆಗೆ ಸಮಾವೇಶಕ್ಕಾಗಿ ಜನರು ಸೇರುತ್ತಿದ್ದಾಗ ನಡೆದ ಆತ್ಮಹತ್ಯಾ ಸ್ಫೋಟದಲ್ಲಿ ಕನಿಷ್ಠಕನಿಷ್ಠ 52  ಜನರುಸಾವಿಗೀಡಾದ್ದಾರೆ ಮತ್ತು 130 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಮಸ್ತುಂಗ್ ಜಿಲ್ಲೆಯ ಮದೀನಾ ಮಸೀದಿ ಬಳಿ ಸ್ಫೋಟ ಸಂಭವಿಸಿದೆ ಎಂದು … Continued

375 ವರ್ಷಗಳಿಂದ ಕಾಣೆಯಾಗಿದ್ದ ವಿಶ್ವದ 8ನೇ ‘ಖಂಡ’ ಪತ್ತೆ ಮಾಡಿದ ವಿಜ್ಞಾನಿಗಳು…!

ಸುಮಾರು 375 ವರ್ಷಗಳ ನಂತರ, ಭೂವಿಜ್ಞಾನಿಗಳು ಸಾಮಾನ್ಯ ದೃಷ್ಟಿಯಲ್ಲಿ ಅಡಗಿರುವ (ಕಾಣಿಸದ) ಪ್ರಾಚೀನ ಗೊಂಡ್ವಾನಾ ಭೂಮಿಯ ಭಾಗವಾಗಿದ್ದ ಚಿಕ್ಕದಾದ ಖಂಡವನ್ನು ಅಂತಿಮವಾಗಿ ಪತ್ತೆ ಮಾಡಿದ್ದಾರೆ. ಭೂವಿಜ್ಞಾನಿಗಳು ಮತ್ತು ಭೂಕಂಪಶಾಸ್ತ್ರಜ್ಞರ ಸಣ್ಣ ತಂಡವು ಹೊಸದಾಗಿ ಸಂಸ್ಕರಿಸಿದ ಝೀಲ್ಯಾಂಡಿಯಾ ಅಥವಾ ಟೆ ರಿಯು-ಎ-ಮೌಯಿ ನಕ್ಷೆಯನ್ನು ರಚಿಸಿದೆ ಎಂದು Phys.org ವರದಿ ಮಾಡಿದೆ. ಸಾಗರ ತಳದಿಂದ ಸಂಗ್ರಹಿಸಿದ ಡ್ರೆಡ್ಜ್ ಮಾಡಿದ … Continued

ಇದೆಂಥ ಐಫೋನ್‌ ಕ್ರೇಜ್‌..: ಮಾಸ್ಕ್‌ ಧರಿಸಿ ಆಪಲ್ ಸ್ಟೋರ್ ಗೆ ನುಗ್ಗಿ ಐಫೋನ್‌-ಐಪ್ಯಾಡ್‌ಗಳನ್ನು ಲೂಟಿ ಹೊಡೆದು ನೂರಾರು ಟೀನೇಜರ್ಸ್‌ | ವೀಕ್ಷಿಸಿ

ಐಫೋನ್ ಉನ್ಮಾದದ ಕಥೆಗಳಿಗೆ ಬಂದಾಗ, ಹದಿಹರೆಯದವರು ಎಂದು ನಂಬಲಾದ ಮಾಸ್ಕ್‌ ಹಾಕಿದ ವ್ಯಕ್ತಿಗಳ ಹಲವಾರು ಗುಂಪುಗಳು ಐಫೋನ್ ಗಳಿಗಾಗಿ ಫಿಲಡೆಲ್ಫಿಯಾದ ಸಿಟಿ ಸೆಂಟರ್‌ನಲ್ಲಿರುವ ವಿವಿಧ ಮಳಿಗೆಗಳನ್ನು ಲೂಟಿ ಮಾಡಿದವು. NBC10 ಫಿಲಡೆಲ್ಫಿಯಾ ಪ್ರಕಾರ, ಮಂಗಳವಾರ, ಸೆಪ್ಟೆಂಬರ್ 26, ರಾತ್ರಿಯ ನಂತರ ನೂರಾರು ಹದಿಹರೆಯದವರಿಂದ ಅಂಗಡಿಗಳನ್ನು ಲೂಟಿ ಮಾಡುವುದನ್ನು ಚಿತ್ರಿಸುವ ಹಲವಾರು ವೀಡಿಯೊಗಳು ನಗರದಾದ್ಯಂತ ಕಾಣಿಸಿಕೊಂಡಿವೆ. ಮಂಗಳವಾರ … Continued

ಡಜನ್ ಗಟ್ಟಲೆ ನಾಯಿಗಳ ಮೇಲೆ ಅತ್ಯಾಚಾರ ನಡೆಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದನ್ನು ಒಪ್ಪಿಕೊಂಡ ಖ್ಯಾತ ಮೊಸಳೆ ತಜ್ಞ

ಸಿಡ್ನಿ: ಬ್ರಿಟನ್‌ ಮೂಲದ ಖ್ಯಾತ ಮೊಸಳೆ ತಜ್ಞ ಆಡಮ್ ಬ್ರಿಟನ್ ಎಂಬಾತ ನಾಯಿಗಳ ಮೇಲೆ ಅತ್ಯಾಚಾರ ಎಸಗಿ ಅವುಗಳನ್ನು ಕೊಂದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪ್ರಾಣಿಗಳ ಮೇಲೆ ದೌರ್ಜನ್ಯ ಎಸಗಿದ ಆರೋಪದಡಿ ಆಸ್ಟ್ರೇಲಿಯಾದಲ್ಲಿ 2022ರ ಏಪ್ರಿಲ್‌ನಲ್ಲಿ ಬಂಧಿತನಾಗಿದ್ದ ಬ್ರಿಟನ್, ತನ್ನ ವಿರುದ್ಧದ 60 ಆರೋಪಗಳಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಪ್ರಾಣಿಗಳ ನಿಂದನೆಗಾಗಿ ಏಪ್ರಿಲ್ 2022 ರಲ್ಲಿ ಬಂಧಿತನಾಗಿದ್ದ … Continued

ಇರಾಕ್‌ನ ಮದುವೆ ಹಾಲ್‌ನಲ್ಲಿ ಭೀಕರ ಅಗ್ನಿ ಅವಘಡ : 114 ಮಂದಿ ಸಾವು

ಮೋಸುಲ್: ಇರಾಕ್‌ ಉತ್ತರ ಭಾಗದಲ್ಲಿ ಕ್ರೈಸ್ತ ಧರ್ಮೀಯರ ಮದುವೆ ಸಮಾರಂಭದಲ್ಲಿ ಉಂಟಾದ ಅಗ್ನಿ ಅನಾಹುತದಲ್ಲಿ ಕನಿಷ್ಠ 114 ಮಂದಿ ಮೃತಪಟ್ಟಿದ್ದಾರೆ ಹಾಗೂ 150 ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇರಾಕಿನ ನಿನೆವಾಹ್ ಪ್ರಾಂತ್ಯದ ಹಂದಾನಿಯಾ ಪ್ರದೇಶದಲ್ಲಿನ ಸಭಾಂಗಣದಲ್ಲಿ ದುರ್ಘಟನೆ ಸಂಭವಿಸಿದೆ. ಮದುವೆ ಹಾಲ್‌ನಿಂದ ಭಾರಿ ದಟ್ಟನೆಯ … Continued

ನಾಜಿ ಹೋರಾಟಗಾರನ ಗೌರವಿಸಿದ್ದಕ್ಕೆ ವ್ಯಾಪಕ ಟೀಕೆ ನಂತರ ರಾಜೀನಾಮೆ ನೀಡಿದ ಕೆನಡಾದ ಹೌಸ್ ಆಫ್ ಕಾಮನ್ಸ್‌ ಸ್ಪೀಕರ್

ಒಟ್ಟಾವಾ: ಕೆನಡಾದ ಹೌಸ್ ಆಫ್ ಕಾಮನ್ಸ್‌ನ ಸ್ಪೀಕರ್‌ ಸ್ಥಾನಕ್ಕೆ ಆಂಥೋನಿ ರೋಟಾ ಅವರು ರಾಜೀನಾಮೆ ನೀಡಿದ್ದಾರೆ. ಎರಡನೇ ಮಹಾಯುದ್ಧದ ಸಮಯದಲ್ಲಿ ನಾಜಿ ಸೈನಿಕ ಘಟಕದಲ್ಲಿ ಹೋರಾಡಿದ ವ್ಯಕ್ತಿಗೆ ಹೌಸ್ ಆಫ್ ಕಾಮನ್ಸ್‌ ಗೌರವ ನೀಡಿದ್ದಕ್ಕೆ ವ್ಯಾಪಕವಾದ ಟೀಕೆ ವ್ಯಕ್ತವಾದ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ. ವಿಶ್ವದ ಎರಡನೇ ಮಹಾಯುದ್ಧ 2 ರ ಸಮಯದಲ್ಲಿ ನಾಜಿ ಘಟಕದಲ್ಲಿ … Continued