ಶೀಘ್ರವೇ ಅಪ್ಪಳಿಸಬಹುದಂತೆ ಕೋವಿಡ್‌ಗಿಂತ ಭೀಕರ ಮತ್ತೊಂದು ಸಾಂಕ್ರಾಮಿಕ ʼರೋಗ Xʼ ; ಇದು 5 ಕೋಟಿ ಜನರನ್ನು ಕೊಲ್ಲಬಹುದು ಎಂದು ತಜ್ಞರ ಎಚ್ಚರಿಕೆ…!

ಲಂಡನ್‌ : ಮಾರಣಾಂತಿಕ ಕೋವಿಡ್ -19 ಕ್ಕಿಂತ ಮಾರಕವಾದ ಮತ್ತೊಂದು ಸಾಂಕ್ರಾಮಿಕ ರೋಗ ಬರಬಹುದು ಎಂದು ಯುಕೆ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಅಲ್ಲದೆ, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಡಿಸೀಸ್-X (Disease X) ಎಂಬ ಹೆಸರಿಟ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮೇನಿಂದ ಡಿಸೆಂಬರ್ 2020 ರವರೆಗೆ ಯುಕೆ ಲಸಿಕೆ ಕಾರ್ಯಪಡೆಯ ಅಧ್ಯಕ್ಷರಾಗಿ ಸೇವೆ … Continued

ಕೆನಡಾದಲ್ಲಿ ಭಯೋತ್ಪಾದಕರು ಸುರಕ್ಷಿತ ನೆಲೆ ಕಂಡುಕೊಂಡಿದ್ದಾರೆ: ಪ್ರಧಾನಿ ಟ್ರುಡೊ ವಿರುದ್ಧ ಶ್ರೀಲಂಕಾ ವಿದೇಶಾಂಗ ಸಚಿವರ ವಾಗ್ದಾಳಿ

ನ್ಯೂಯಾರ್ಕ್‌ : ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಅವರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತ-ಕೆನಡಾ ರಾಜತಾಂತ್ರಿಕ ವಿವಾದಕ್ಕೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಕೆನಡಾದಲ್ಲಿ ಭಯೋತ್ಪಾದಕರು ಸುರಕ್ಷಿತ ನೆಲೆ ಕಂಡುಕೊಂಡಿದ್ದಾರೆ ಮತ್ತು ಆ ದೇಶದ ಪ್ರಧಾನಿ ಜಸ್ಟಿನ್ ಟ್ರುಡೊ ಯಾವುದೇ ಪುರಾವೆಗಳಿಲ್ಲದೆ ಅತಿರೇಕದ ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ. … Continued

ತೀವ್ರ ಮುಜುಗರವಾಗಿದೆ ‘: ಕೆನಡಾದ ಸಂಸತ್ತಿನಲ್ಲಿ ನಾಝಿ ಹೋರಾಟಗಾರನ ಗೌರವಿಸಿದ್ದಕ್ಕೆ ಪ್ರಧಾನಿ ಟ್ರೂಡೊ ಹೇಳಿಕೆ

ಒಟ್ಟಾವಾ : ಕೆನಡಾದ ಸಂಸತ್ತಿನಲ್ಲಿ ಉಕ್ರೇನಿಯನ್ ನಾಜಿ ಹೋರಾಟಗಾರರನ್ನು ಗೌರವಿಸಿದ ನಂತರ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮೊದಲ ಬಾರಿಗೆ ಮಾತನಾಡಿದ್ದಾರೆ ಮತ್ತು ಈ ಘಟನೆಯಿಂದ “ತೀವ್ರ ಮುಜುಗರ”ವಾಗಿದೆ ಎಂದು ಹೇಳಿದ್ದಾರೆ. “ಇದು ಕೆನಡಾದ ಸಂಸತ್ತಿಗೆ ಮತ್ತು ಎಲ್ಲಾ ಕೆನಡಿಯನ್ನರಿಗೆ ತೀವ್ರ ಮುಜುಗರವನ್ನುಂಟು ಮಾಡುತ್ತದೆ” ಎಂದು ಕೆನಡಾದ ಪ್ರಧಾನ ಮಂತ್ರಿ ಹೇಳಿದರು. ಈ ವಾರ ಕೆನಡಾಕ್ಕೆ … Continued

ಕೆನಡಾ ಪ್ರಧಾನಿಯಿಂದ ಮತ್ತೊಂದು ಎಡವಟ್ಟು : ನಾಜಿ ಹೋರಾಟಗಾರನ ಗೌರವಿಸಿದ ನಂತರ ಯಹೂದಿಗಳ ಕ್ಷಮೆಯಾಚಿಸಿದ ಕೆನಡಾ ಸಂಸತ್ತಿನ ಸ್ಪೀಕರ್

ಕೆನಡಾಕ್ಕೆ ಭೇಟಿ ನೀಡಿದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಗೌರವಾರ್ಥ ಶುಕ್ರವಾರ ಚೇಂಬರ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ನಾಜಿ ಘಟಕದ ಭಾಗವಾಗಿದ್ದ ವ್ಯಕ್ತಿಯನ್ನು ಆಹ್ವಾನಿಸಿದ ನಂತರ ಕೆನಡಾದ ಹೌಸ್ ಆಫ್ ಕಾಮನ್ಸ್ ಸ್ಪೀಕರ್ ಕ್ಷಮೆಯಾಚಿಸಿದ್ದಾರೆ. ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಯಿಲಿವ್ರೆ ಅವರು ಟ್ರುಡೊ ಅವರ “ನಿರ್ಧಾರದಲ್ಲಿ ಭಯಾನಕ ದೋಷ” ವನ್ನು ಸೂಚಿಸಿದ ನಂತರ ಕ್ಷಮೆಯಾಚಿಸಲಾಗಿದೆ. … Continued

‘ನಮಸ್ತೆ’ : ಮಾನವರೂಪಿ ರೋಬೋಟ್ ಯೋಗ ಮಾಡುವ ವೀಡಿಯೊ ಹಂಚಿಕೊಂಡ ಟೆಸ್ಲಾ | ವೀಕ್ಷಿಸಿ

ಟೆಸ್ಲಾ ಕಂಪನಿಯು ಭಾನುವಾರ ತನ್ನ ಆಪ್ಟಿಮಸ್ ಹೆಸರಿನ ಮಾನವರೂಪಿ (humanoid) ರೋಬೋಟ್ ಯೋಗ ಮಾಡುವುದು ಮತ್ತು ಬ್ಲಾಕ್‌ಗಳನ್ನು ಬಣ್ಣದ ಮೂಲಕ ವಿಂಗಡಿಸುವುದು ಸೇರಿದಂತೆ ವಿವಿಧ ಕಾರ್ಯಗಳನ್ನು ನಿರ್ವಹಿಸುವ ಆಕರ್ಷಕ ವೀಡಿಯೊವನ್ನು ಹಂಚಿಕೊಂಡಿದೆ. ವೀಡಿಯೋ ಆರಂಭದಲ್ಲಿ ಸುಲಭವಾಗಿ ಮತ್ತು ಮಾನವ ತರಹದ ವೇಗದಲ್ಲಿ ವಸ್ತುಗಳನ್ನು ಅದರ ಬಣ್ಣಕ್ಕೆ ಅನುಗುಣವಾಗಿ ಬೇರೆ ಬೇರೆ ಮಾಡುವ ರೋಬೋಟ್‌ನ ಸಾಮರ್ಥ್ಯವನ್ನು ತೋರಿಸುತ್ತದೆ. … Continued

ಕ್ಷುದ್ರಗ್ರಹದ ಅತಿದೊಡ್ಡ ಮಾದರಿ ಸಂಗ್ರಹಿಸಿ ಭೂಮಿಗೆ ಹೊತ್ತು ತಂದ ನಾಸಾದ ನೌಕೆ

ಡಗ್ವೇ: ಬಾಹ್ಯಾಕಾಶ ಪರಿಶೋಧನೆಯಲ್ಲಿ ಮತ್ತೊಂದು ಮೈಲಿಗಲ್ಲು ದಾಖಲು ಮಾಡಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA), ಕ್ಷುದ್ರಗ್ರಹದಿಂದ ಕೆಲವು ಮಾದರಿಗಳನ್ನು ಸಂಗ್ರಹಿಸಿದೆ. ಈ ಮಾದರಿ ಈಗ ಭೂಮಿಗೆ ತಲುಪಿದ್ದು, ಯುಎಸ್’ನಲ್ಲಿ ನಾಸಾದ ಬಾಹ್ಯಾಕಾಶ ನೌಕೆ ಕ್ಯಾಪ್ಸೂಲ್ ಭಾನುವಾರ ಉತಾಹ್ ಮರುಭೂಮಿಯಲ್ಲಿ ಇಳಿದಿದೆ. ಬಾಹ್ಯಾಕಾಶದಲ್ಲಿ ಕ್ಷುದ್ರಗ್ರಹದಿಂದ ಸಂಗ್ರಹಿಸಿದ ಅತಿದೊಡ್ಡ ಮಾದರಿ ಇದಾಗಿದೆ ಮತ್ತು ನಾಸಾ ಇದೇ ಮೊದಲ … Continued

ಇದು ಜಗತ್ತಿನಲ್ಲೇ ಅತಿದೊಡ್ಡ ಸೌತೆಕಾಯಿ…ಇದರ ತೂಕ ಎಷ್ಟು ಗೊತ್ತಾ..?

ಬ್ರಿಟಿಷ್ ತೋಟಗಾರರೊಬ್ಬರು 30 ಪೌಂಡ್‌ (14 ಕೆಜಿ) ತೂಕವಿರುವ ವಿಶ್ವದ ಅತಿದೊಡ್ಡ ಸೌತೆಕಾಯಿಯನ್ನು ಬೆಳೆದಿದ್ದಾರೆ. ವಿನ್ಸ್ ಸ್ಜೋಡಿನ್ (50) ಎಂಬವರು ವೋರ್ಸೆಸ್ಟರ್‌ಶೈರ್‌ನ ಮಾಲ್ವೆರ್ನ್‌ನಲ್ಲಿ ನಡೆದ ಯುಕೆ ರಾಷ್ಟ್ರೀಯ ಜೈಂಟ್ ವೆಜಿಟೇಬಲ್ಸ್ ಚಾಂಪಿಯನ್‌ಶಿಪ್‌ನಲ್ಲಿ 4 ಅಡಿ ಉದ್ದದ ಸೌತೆಕಾಯಿಯನ್ನು ಪ್ರದರ್ಶಿಸಿದರು. ಅವರು 2015ರಲ್ಲಿ ಬ್ರಿಟ್‌ನ ಡೇವಿಡ್ ಥಾಮಸ್ ಬೆಳೆದ 23 ಪೌಂಡ್‌ಗಳ ಹಿಂದಿನ ಸೌತೆಕಾಯಿಯನ್ನು ಮುರಿದಿದ್ದಾರೆ. ‘ಇದು … Continued

ಅದ್ಭುತ ಕ್ಯಾಚ್‌…: ಎರಡನೇ ಸ್ಲಿಪ್‌ನಲ್ಲಿ ರೀ ಬೌಂಡ್‌ ಆದ ಅಸಾಧಾರಣವಾದ ಕ್ಯಾಚ್‌ ಅನ್ನು ಒಂದೇ ಕೈಯಲ್ಲಿ ಹಿಡಿದ ಆಟಗಾರ | ವೀಕ್ಷಿಸಿ

ಈಗ ಬ್ಯಾಟಿಂಗ್ ಹಾಗೂ ಬೌಲಿಂಗ್‌ ನಷ್ಟೇ ಫೀಲ್ಡಿಂಗ್‌ಗೂ ಮಹತ್ವ ನೀಡುತ್ತಾರೆ. ಹೀಗಾಗಿ ಈಗ ಆಟಗಾರರು ಉತ್ತಮ ಫೀಲ್ಡಿಂಗ್‌ಗಾಗಿ ತಮ್ಮ ಫಿಟ್‌ನೆಸ್‌ಗೆ ಹೆಚ್ಚಿನ ಗಮನ ನೀಡುತ್ತಾರೆ. ಅತ್ಯುತ್ತಮ ಕ್ಯಾಚ್‌ ಗಳನ್ನು ತೆಗೆದುಕೊಳ್ಳುತ್ತಾರೆ. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಈಗ ಅದ್ಭುತ ಕ್ಯಾಚ್ ಹಿಡಿದ ದೃಶ್ಯದ ವೀಡಿಯೊವೊಂದು ವೈರಲ್‌ ಆಗಿದೆ. ವಿಶೇಷವೆಂದರೆ ಈ ಕ್ಯಾಚ್ ಹಿಡಿದವರು ಒಬ್ಬರಲ್ಲ ಇಬ್ಬರು…! ಕ್ಯಾಚ್‌ನ ವೀಡಿಯೊವನ್ನು … Continued

ಕೆನಡಾದ ಅತ್ಯುತ್ತಮ ಪ್ರಧಾನಿ ಅಭ್ಯರ್ಥಿ: ಭಾರತ-ಕೆನಡಾ ಬಿಕ್ಕಟ್ಟಿನ ವೇಳೆ ಗ್ಲೋಬಲ್ ನ್ಯೂಸ್-ಇಪ್ಸೋಸ್ ಸಮೀಕ್ಷೆ ಡಾಟಾ ಬಿಡುಗಡೆ ; ಪೊಯ್ಲಿವ್ರೆಯತ್ತ ಒಲವು, ಹಿಂದೆ ಬಿದ್ದ ಪ್ರಧಾನಿ ಟ್ರುಡೊ

ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಪ್ರತಿಸ್ಪರ್ಧಿ ಮತ್ತು ಕನ್ಸರ್ವೇಟಿವ್ ನಾಯಕ ಪಿಯರೆ ಪೊಲಿಯೆವ್ರೆ ಅವರು ದೇಶದ ಪ್ರಧಾನಿ ಹುದ್ದೆಗೆ ಅತ್ಯುತ್ತಮ ಆಯ್ಕೆಯಾಗಿದ್ದಾರೆ ಎಂದು ಗ್ಲೋಬಲ್ ನ್ಯೂಸ್‌ಗಾಗಿ ಮಾಡಿದ ಇಪ್ಸೋಸ್ ಸಮೀಕ್ಷೆ ಹೇಳಿದೆ. ಪ್ರಧಾನ ಮಂತ್ರಿಯ ಅತ್ಯುತ್ತಮ ಆಯ್ಕೆಯ ಪ್ರಶ್ನೆಯಲ್ಲಿ ಪೊಯ್ಲಿವ್ರೆ ಅವರ ಜನಪ್ರಿಯತೆಯು ಒಂದು ವರ್ಷದ ಹಿಂದೆ ಇದ್ದಿದ್ದಕ್ಕಿಂತ ಐದು ಅಂಕಗಳು ಹೆಚ್ಚಾಗಿವೆ … Continued

ಕ್ರಿಕೆಟ್‌ ನಲ್ಲಿ ವಿಚಿತ್ರ ಔಟ್‌ : ವಿಕೆಟ್‌ಕೀಪರ್‌ ಹೆಲ್ಮೆಟ್‌ ಗೆ ಸಿಲುಕಿದ ಬಾಲ್‌ : ಬ್ಯಾಟರ್‌ ಔಟ್‌ ಎಂದು ಅಂಪೈರ್‌ ತೀರ್ಪು | ವೀಕ್ಷಿಸಿ

ಕ್ರಿಕೆಟ್ ಆಟವು ವರ್ಷಗಳಲ್ಲಿ ಸುಂದರವಾಗಿ ವಿಕಸನಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ ಹೆಚ್ಚು ನವೀನ ಮತ್ತು ಪ್ರಭಾವಶಾಲಿಯಾಗಿದೆ ಮತ್ತು ಅದನ್ನು ಎದುರಿಸಲು ಬೌಲಿಂಗ್ ಕೂಡ ಅಭಿವೃದ್ಧಿಗೊಂಡಿದೆ. ಕ್ರಿಕೆಟ್ ಆಟದ ಮತ್ತೊಂದು ನಿರ್ಣಾಯಕ ಭಾಗವಾದ ಫೀಲ್ಡಿಂಗ್ ಕೂಡ ಈಗ ಬಹಳಷ್ಟು ಸುದಾರಣೆಗಳನ್ನು ಕಂಡಿದೆ. ಇವೆಲ್ಲದರ ನಡುವೆ, ಕ್ರಿಕೆಟ್ ನಲ್ಲಿ ತಮಾಷೆ ಮತ್ತು ವಿಲಕ್ಷಣ ಘಟನೆಗಳು ಪದೇ ಪದೇ ನಡೆಯುತ್ತವೆ. … Continued