ಬೆಲ್ಟ್ & ರೋಡ್ ಉಪಕ್ರಮದಿಂದ ನಿರ್ಗಮಿಸುವ ಬಗ್ಗೆ ಚೀನಾಕ್ಕೆ ಸೂಚ್ಯವಾಗಿ ತಿಳಿಸಿದ ಇಟಲಿ : ವರದಿ

ನವದೆಹಲಿ: ಭಾರತದಲ್ಲಿ ನಡೆದ ಜಿ 20 ಶೃಂಗಸಭೆಯ ಸಂದರ್ಭದಲ್ಲಿ ನಡೆದ ಖಾಸಗಿ ಸಭೆಯಲ್ಲಿ, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೇತೃತ್ವದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್‌ನಿಂದ ಹಿಂದೆ ಸರಿಯುವ ಇಟಲಿಯ ಯೋಜನೆಗಳ ಬಗ್ಗೆ ಚೀನಾದ ಪ್ರಧಾನಿ ಲಿ ಕಿಯಾಂಗ್‌ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಹೂಡಿಕೆ ಒಪ್ಪಂದವು ಅಮೆರಿಕದೊಂದಿಗೆ ಇಟಲಿಯ … Continued

ಮೊರೊಕ್ಕೊ ಭೂಕಂಪ: 2000 ದಾಟಿದ ಸಾವಿನ ಸಂಖ್ಯೆ, ಪುನರ್ನಿರ್ಮಾಣಕ್ಕೆ ವರ್ಷಗಳು ಬೇಕು ಎಂದ ರೆಡ್‌ ಕ್ರಾಸ್‌

ತಫೆಘಘ್ಟೆ (ಮೊರಾಕೊ) : ದಶಕಗಳಲ್ಲಿ ಮೊರೊಕ್ಕೊದಲ್ಲಿ ಸಂಭವಿಸಿದ ಭೀಕರ ಭೂಕಂಪವು 2,000 ಕ್ಕೂ ಹೆಚ್ಚು ಜನರ ಸಾವಿಗೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಕ್ಷಣಾ ಪಡೆಗಳು ಮತ್ತು ತುರ್ತು ಸೇವೆಗಳು ದೂರದ ಪರ್ವತ ಹಳ್ಳಿಗಳನ್ನು ತಲುಪಲು ಹರಸಾಹಸ ಪಡುತ್ತಿವೆ. ದೇಶದಲ್ಲಿ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ. ಆದರೆ ಹಾನಿಯನ್ನು ಸರಿಪಡಿಸಲು ವರ್ಷಗಳು ತೆಗೆದುಕೊಳ್ಳಬಹುದು ಎಂದು ರೆಡ್‌ಕ್ರಾಸ್ … Continued

ತಾಯಿ ಕೊಕ್ಕರೆ ತನ್ನ ಮರಿಗೆ ಬಡಿಯುತ್ತದೆ, ಗೂಡಿನಿಂದ ಕೆಳಗೆ ಎಸೆಯುತ್ತದೆ : ಜೀವ ಪ್ರಪಂಚದ ಆಘಾತಕಾರಿ ವೀಡಿಯೊ ವೈರಲ್‌ | ವೀಕ್ಷಿಸಿ

ಪ್ರಕೃತಿಯು ಅದ್ಭುತ ಮತ್ತು ನಿಗೂಢವಾಗಿದೆ. ತಾಯಿ ಮತ್ತು ಮಗುವಿನ ನಡುವಿನ ತಾಯ್ತನದ ಬಾಂಧವ್ಯವನ್ನು ಪ್ರಾಣಿಗಳಾಗಲಿ ಅಥವಾ ಪಕ್ಷಿಗಳಾಗಲಿ ನಾವು ಕಣ್ಣಾರೆ ಕಂಡಿರುವ ಎಷ್ಟೋ ನಿದರ್ಶನಗಳಿವೆ. ಈ ಸಂಬಂಧವು ತೀವ್ರವಾದ, ಆಸಕ್ತಿದಾಯಕ ಮತ್ತು ಕೆಲವೊಮ್ಮೆ ವಿಚಿತ್ರವಾಗಿದೆ. ಇದನ್ನೇ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ವೀಡಿಯೊದಲ್ಲಿ ಸಾಕ್ಷಿಯಾಗಿದೆ. ತಾಯಿ ಕೊಕ್ಕರೆ ಮತ್ತು ಐದು ಮರಿಗಳೊಂದಿಗೆ ಇರುವ ಕೊಕ್ಕರೆಯ ಗೂಡನ್ನು ವೀಡಿಯೊ … Continued

ಮೊರಾಕೊ ಭೂಕಂಪ : 1000 ದಾಟಿದ ಸಾವಿನ ಸಂಖ್ಯೆ

ಅಮಿಜ್ಮಿಜ್ (ಮೊರಾಕೊ) : ಮೊರಾಕೊದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 1,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳಿ ತಿಳಿಸಿವೆ. ಆರು ದಶಕಗಳಲ್ಲೇ ಹೆಚ್ಚು ಮಾರಣಾಂತಿಕವಾದ ಭೂಕಂಪವಾಗಿದೆ. ರಕ್ಷಣಾ ಕಾರ್ಯಕರ್ತರು ಬದುಕುಳಿದವರಿಗಾಗಿ ಅವಶೇಷಗಳಡಿ ಹುಡುಕುತ್ತಿದ್ದಾರೆ. ಶುಕ್ರವಾರ ತಡರಾತ್ರಿ ಮೊರಾಕೊದ ಹೈ ಅಟ್ಲಾಸ್ ಪರ್ವತಗಳಲ್ಲಿ ಭೂಕಂಪ ಸಂಭವಿಸಿದೆ, ಭೂಕಂಪನವು ಸಮೀಪವಿರುವ ನಗರವಾದ … Continued

G20 ಶೃಂಗಸಭೆ : ಭಾರತ-ಮಧ್ಯಪ್ರಾಚ್ಯ-ಯುರೋಪ್ ಸಂಪರ್ಕ ಕಾರಿಡಾರಿಗೆ ಚಾಲನೆ : ಇದು ಚೀನಾದ ಬೆಲ್ಟ್ ಮತ್ತು ರೋಡ್ ಯೋಜನೆಗೆ ಪ್ರತಿಸ್ಪರ್ಧಿ

ನವದೆಹಲಿ: ಭಾರತ, ಯುಎಇ, ಸೌದಿ ಅರೇಬಿಯಾ, ಯುರೋಪಿಯನ್‌ ಒಕ್ಕೂಟ, ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಅಮೆರಿಕ ದೇಶಗಳ ಸಂಪರ್ಕ ಮತ್ತು ಮೂಲಸೌಕರ್ಯಗಳ ಸಹಕಾರದ ಮೇಲಿನ ಮೊದಲ ಉಪಕ್ರಮವಾದ ಭಾರತ-ಮಧ್ಯಪ್ರಾಚ್ಯ-ಯುರೋಪ್ ಸಂಪರ್ಕ ಕಾರಿಡಾರ್ ಅನ್ನು ಪ್ರಾರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದರು. ಚೀನಾದಿಂದ ಆಕ್ಷೇಪಿಸಲ್ಪಟ್ಟ ಉಪಕ್ರಮವು ಭಾರತ ಮತ್ತು ಅಮೆರಿಕ ಸಹ-ಅಧ್ಯಕ್ಷತೆಯನ್ನು ಹೊಂದಿದೆ. ಅಮೆರಿಕ ಅಧ್ಯಕ್ಷ … Continued

ಮೊರಾಕೊದಲ್ಲಿ ಪ್ರಬಲ ಭೂಕಂಪ : 632 ಮಂದಿ ಸಾವು, ನೂರಾರು ಮಂದಿಗೆ ಗಾಯ

ರಬತ್ : ಶುಕ್ರವಾರ ತಡರಾತ್ರಿ ಮಧ್ಯ ಮೊರಾಕೊದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ನಂತರ ಕನಿಷ್ಠ 632 ಜನರು ಸಾವಿಗೀಡಾಗಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಮೊರಾಕೊದ ಆಂತರಿಕ ಸಚಿವಾಲಯ ಶನಿವಾರ ಮುಂಜಾನೆ ಹೇಳಿದ್ದು, ಭೂಕಂಪದ ಸಮೀಪವಿರುವ ಪ್ರಾಂತ್ಯಗಳಲ್ಲಿ ಕನಿಷ್ಠ 632 ಜನರು ಮೃತಪಟ್ಟಿದ್ದಾರೆ. ಗಾಯಗೊಂಡ 300 ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ನಗರಗಳು … Continued

ಆಫ್ರಿಕನ್ ಯೂನಿಯನ್ ಅನ್ನು ಜಿ20 ಕಾಯಂ ಸದಸ್ಯನನ್ನಾಗಿ ಸ್ವಾಗತಿಸಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಡಿಸಿದ ಪ್ರಸ್ತಾವನೆಯನ್ನು ಅನುಸರಿಸಿ ಆಫ್ರಿಕನ್ ಯೂನಿಯನ್ ಶನಿವಾರ G20ಯ ಕಾಯಂ ಸದಸ್ಯತ್ವವನ್ನು ಪಡೆದುಕೊಂಡಿತು, ಅದನ್ನು ಎಲ್ಲಾ ಸದಸ್ಯ ರಾಷ್ಟ್ರಗಳು ಸ್ವಾಗತಿಸಿದವು. ಅದರ ನಂತರ, ಪ್ರಧಾನಿ ಮೋದಿ ಅವರು ಕೊಮೊರೊಸ್ ಒಕ್ಕೂಟದ ಅಧ್ಯಕ್ಷರು ಮತ್ತು ಆಫ್ರಿಕನ್ ಯೂನಿಯನ್ (ಎಯು) ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರನ್ನು ಜಿ 20 ಹೈ ಟೇಬಲ್‌ನಲ್ಲಿ … Continued

ಕ್ಸಿ ಜಿನ್‌ಪಿಂಗ್‌ ದೆಹಲಿಯ ಜಿ20 ಶೃಂಗಸಭೆಗೆ ಗೈರಾಗಲು ಭಾರತದ ಜೊತೆ ಸಂಬಂಧ ಹಳಸಿದ್ದಕ್ಕಿಂತ ಹೆಚ್ಚಾಗಿ ಚೀನಾದ ಆಂತರಿಕ ತೊಂದರೆಗಳು ಕಾರಣವೇ..?

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ನವದೆಹಲಿಯಲ್ಲಿ ನಡೆಯಲಿರುವ G20 ಶೃಂಗಸಭೆಗೆ ಗೈರಾಗುತ್ತಿದ್ದಾರೆ. ಚೀನಾವು ಅವರ ಬದಲಿಗೆ ಪ್ರಧಾನಿ ಲಿ ಕಿಯಾಂಗ್ ಅವರನ್ನು ಕಳುಹಿಸುತ್ತಿದೆ. ಮೇ 2020 ರಲ್ಲಿ ಗಡಿ ಘರ್ಷಣೆಯ ನಂತರ ಭಾರತದೊಂದಿಗೆ ಚೀನಾದ ಸಂಬಂಧವು ಚೆನ್ನಾಗಿಲ್ಲ ಎಂಬುದು ನಿಜ. ಮತ್ತು ಅದು ಚೀನಾದ ಸರ್ಕಾರವು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬದಲಿಗೆ ಪ್ರಧಾನಿ ಲಿ … Continued

ಪ್ರಾಣಿ ಜಗತ್ತಿನ ಅಚ್ಚರಿ…: ಕಾಡು ನಾಯಿಯನ್ನು ನೀರಿಗೆ ಎಳೆದೊಯ್ದು ಮುಳುಗಿಸಿ ಅದರ ಬಿಗಿ ಹಿಡಿತದಿಂದ ತಪ್ಪಿಸಿಕೊಂಡು ಪಾರಾದ ಚಿಗರೆ | ವೀಕ್ಷಿಸಿ

ನೈಸರ್ಗಿಕ ಜಗತ್ತಿನಲ್ಲಿ, ಆಹಾರಕ್ಕಾಗಿ ಒಂದು ಪ್ರಾಣಿ ಇನ್ನೊಂದನ್ನು ಕೊಲ್ಲುವುದು ಆಹಾರ ಸರಪಳಿ ಮತ್ತು ಪರಿಸರ ವ್ಯವಸ್ಥೆಯ ಡೈನಾಮಿಕ್ಸ್‌ನ ಮೂಲಭೂತ ಅಂಶವಾಗಿದೆ. ಇದು ಪರಿಸರ ವ್ಯವಸ್ಥೆಗಳ ಸಮತೋಲನ ಮತ್ತು ಕಾರ್ಯನಿರ್ವಹಣೆಯನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಪರಿಸರ ವ್ಯವಸ್ಥೆಯ ಡೈನಾಮಿಕ್ಸ್ ತತ್ವಗಳಿಗೆ ಅನುಗುಣವಾಗಿ, ಆಫ್ರಿಕನ್ ಅರಣ್ಯದಲ್ಲಿ ಚಿಗರೆ ಮತ್ತು ಕಾಡು ನಾಯಿಯ ನಡುವಿನ ಸಂಘರ್ಷದ ಕಾದಾಟವನ್ನು ಚಿತ್ರಿಸುವ … Continued

ಭಾರತದ ಭೇಟಿಗೆ ಮುನ್ನ ಅಮೆರಿಕ ಅಧ್ಯಕ್ಷ ಬೈಡನ್‌ ಪತ್ನಿಗೆ ಕೋವಿಡ್‌ ಸೋಂಕು

ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್‌ ಸೋಮವಾರ ಕೋವಿಡ್‌-19 ಸೋಂಕಿಗೆ ಒಳಗಾಗಿದ್ದಾರೆ. ಆದರೆ ಸೌಮ್ಯ ರೋಗಲಕ್ಷಣಗಳಿವೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ. ಪತ್ನಿಗೆ ಕೋವಿಡ್‌ ಪರೀಕ್ಷೆಯಲ್ಲಿ ಸೋಂಕು ಕಂಡುಬಂದ ನಂತರ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೂ ಕೋವಿಡ್‌-19 ಪರೀಕ್ಷೆ ನಡೆಸಲಾಯಿತು. ಆದರೆ ಅವರಿಗೆ ಕೋವಿಡ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದೆ. ಅಧ್ಯಕ್ಷರು ನಿಯಮಿತವಾಗಿ ಪರೀಕ್ಷೆಯನ್ನು ಮುಂದುವರೆಸುತ್ತಾರೆ … Continued