ವೀಡಿಯೊ..: ಬಂದೂಕುಗಳ ಜೊತೆ ಶಿಶುಗಳನ್ನೂ ಎತ್ತಿಕೊಂಡಿರುವ ಹಮಾಸ್‌ ಸದಸ್ಯರು ; ಇಸ್ರೇಲ್‌ನಿಂದ ಹೊತ್ತೊಯ್ದ ಒತ್ತೆಯಾಳು ಮಕ್ಕಳ ವೀಡಿಯೊ ಬಿಡುಗಡೆ

ಹಮಾಸ್ ಗುಂಪಿನ ಶಸ್ತ್ರಸಜ್ಜಿತ ಸದಸ್ಯರು ತಮ್ಮ ಸೆರೆಯಲ್ಲಿರುವ ಶಿಶುಗಳಿಗೆ ಆರೈಕೆ ಮಾಡುವ ವೀಡಿಯೊವನ್ನು ಟೆಲಿಗ್ರಾಮ್‌ನಲ್ಲಿ ಚಾನೆಲ್‌ನಲ್ಲಿ ಪ್ರಸಾರ ಮಾಡಿದೆ. ಶನಿವಾರ ಇಸ್ರೇಲ್ ಮೇಲೆ ಭಯೋತ್ಪಾದಕ ದಾಳಿ ಪ್ರಾರಂಭಿಸಿದ ಮತ್ತು ಹಲವಾರು ರಾಷ್ಟ್ರಗಳ ಸುಮಾರು 150 ಜನರನ್ನು ಒತ್ತೆಯಾಳಾಗಿ ಗಾಜಾಕ್ಕೆ ಕರೆದೊಯ್ದ ಸಶಸ್ತ್ರ ಗುಂಪು ತಾವು ಒತ್ತೆಯಾಳಾಗಿ ಇರಿಸಿಕೊಂಡಿರುವ ಶಿಶುಗಳನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿದ್ದೇವೆಂದು ತೋರಿಸಲುಟೆಲಿಗ್ರಾಮ್ ಚಾನೆಲ್‌ನಲ್ಲಿ ವೀಡಿಯೊವನ್ನು … Continued

ನಮ್ಮ ಭೂ ಸೈನ್ಯದಿಂದ ಗಾಜಾದ ಮೇಲೆ ದಾಳಿ ಆರಂಭ : ಇಸ್ರೇಲಿ ಸೇನೆ

ಜೆರುಸಲೇಂ: ಜನನಿಬಿಡ ಪ್ಯಾಲೆಸ್ತೀನ್ ಪ್ರದೇಶದ ಮೇಲೆ ನಿರೀಕ್ಷಿತ ಭೂ ಆಕ್ರಮಣಕ್ಕಿಂತ ಮುಂಚಿತವಾಗಿ ಕಳೆದ 24 ಗಂಟೆಗಳಲ್ಲಿ ಇಸ್ರೇಲಿ ಭೂ ಸೈನ್ಯ ಗಾಜಾದ ಮೇಲೆ ದಾಳಿ ನಡೆಸಿದೆ ಎಂದು ಇಸ್ರೇಲ್‌ ಮಿಲಿಟರಿ ಶುಕ್ರವಾರ ತಿಳಿಸಿದೆ. “ಕಳೆದ 24 ಗಂಟೆಗಳಲ್ಲಿ, IDF (ಇಸ್ರೇಲಿ ಮಿಲಿಟರಿ) ಪಡೆಗಳು ಭಯೋತ್ಪಾದಕರು ಮತ್ತು ಶಸ್ತ್ರಾಸ್ತ್ರಗಳ ಪ್ರದೇಶ ನಾಶಗೊಳಿಸುವ ಪ್ರಯತ್ನ ಪೂರ್ಣಗೊಳಿಸಲು ಗಾಜಾ ಪಟ್ಟಿಯ … Continued

ವೀಡಿಯೊ…| ಹಮಾಸ್‌-ಇಸ್ರೇಲ್‌ ಯುದ್ಧದ ಮಧ್ಯೆ ಚೀನಾದಲ್ಲಿ ಇಸ್ರೇಲಿ ರಾಯಭಾರ ಕಚೇರಿ ಉದ್ಯೋಗಿಗೆ ಇರಿತ

ಬೀಜಿಂಗ್‌ನಲ್ಲಿರುವ ಇಸ್ರೇಲಿ ರಾಯಭಾರಿ ಕಚೇರಿಯ ಉದ್ಯೋಗಿಯೊಬ್ಬರನ್ನು ಶುಕ್ರವಾರ ದಾಳಿ ನಡೆಸಿ ಇರಿಯಲಾಗಿದೆ. ಉದ್ಯೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯನ್ನು ಚೀನಾ ತಕ್ಷಣವೇ ಒಪ್ಪಿಕೊಂಡಿಲ್ಲ. ಹಮಾಸ್‌ನ ಮಾಜಿ ನಾಯಕ ಇಸ್ಲಾಂನ ಎಲ್ಲಾ ಸದಸ್ಯರಿಗೆ “ಜಿಹಾದ್ ದಿನ” ಆಚರಿಸಲು ಕರೆ ನೀಡಿದ ದಿನ ಇದು ಸಂಭವಿಸಿದೆ. ಹೇಳಿಕೆಯಲ್ಲಿ, ಚೀನಾದ ವಿದೇಶಾಂಗ ಸಚಿವಾಲಯವು ರಾಯಭಾರ ಕಚೇರಿಯ ಆಧಾರದ ಮೇಲೆ ದಾಳಿ … Continued

24 ತಾಸಿನ ಒಳಗೆ ಉತ್ತರ ಗಾಜಾ ತೊರೆಯಿರಿ ಎಂದು ಲಕ್ಷಾಂತರ ಜನರಿಗೆ ಸೂಚನೆ ನೀಡಿದ ಇಸ್ರೇಲ್‌, ತೊರೆಯಬೇಡಿ ಎಂದ ಹಮಾಸ್‌… ತೊರೆಯುತ್ತಿರುವ ಜನರು | ವೀಡಿಯೊ

ಇಸ್ರೇಲಿ ಪಡೆಗಳು ಗಾಜಾ ಪಟ್ಟಿಯ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿದ್ದು, ಹಮಾಸ್‌ ಜೊತೆಗಿನ ಸಂಘರ್ಷವು ಆರನೇ ದಿನಕ್ಕೆ ಪ್ರವೇಶಿಸುತ್ತಿದ್ದಂತೆ ಸಂಭವನೀಯ ಭೂ ಆಕ್ರಮಣಕ್ಕೆ ತಯಾರಿ ನಡೆಸಿದೆ. ಹಮಾಸ್ ಭಯೋತ್ಪಾದಕರು ಒತ್ತೆಯಾಳಾಗಿರಿಸಿಕೊಂಡ 150 ಜನರನ್ನು ಬಿಡುಗಡೆ ಮಾಡುವವರೆಗೂ ಗಾಜಾಗೆ ಎಲ್ಲ ರೀತಿಯ ಪೂರೈಕೆ ಸ್ಥಗಿತಗೊಳಿಸಿರುವುದನ್ನು ಹಿಂಪಡೆಯುವುದಿಲ್ಲ ಎಂದು ಇಸ್ರೇಲ್ ಹೇಳಿದೆ. ಇಸ್ರೇಲ್‌ನ ಮಿಲಿಟರಿ ಶುಕ್ರವಾರ ಉತ್ತರ ಗಾಜಾದಿಂದ … Continued

ವೀಡಿಯೊ…| ಹಮಾಸ್ ಬಂಕರ್‌ ಮೇಲೆ ದಾಳಿ ಮಾಡಿ 250ಕ್ಕೂ ಹೆಚ್ಚು ಇಸ್ರೇಲಿ ಒತ್ತೆಯಾಳುಗಳ ರಕ್ಷಣೆ : ಈ ಕಾರ್ಯಾಚರಣೆ ವೀಡಿಯೊ ಹಂಚಿಕೊಂಡ ಇಸ್ರೇಲಿ ಸೇನೆ

ಇಸ್ರೇಲ್‌ನ ರಕ್ಷಣಾ ಪಡೆಗಳು (ಐಡಿಎಫ್) ಗಾಜಾ ಭದ್ರತಾ ಬೇಲಿ ಬಳಿ ಹಮಾಸ್‌ ಒತ್ತೆಯಾಳಾಗಿ ಇರಿಸಿಕೊಂಡಿದ್ದ 250ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ರಕ್ಷಿಸಿದ ದೃಶ್ಯಗಳ ವೀಡಿಯೊವನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಇಸ್ರೇಲ್‌ನ ಮಿಲಿಟರಿಯ “ಶಾಯೆಟೆಟ್ 13″ ಘಟಕವು ಸುಫಾ ಔಟ್‌ಪೋಸ್ಟ್‌ಗೆ ದಾಳಿ ನಡೆಸಿದ ವೇಳೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ 60 ಹಮಾಸ್ ಭಯೋತ್ಪಾದಕರು ಕೊಲ್ಲಲ್ಪಟ್ಟರು. 250 … Continued

ಹಮಾಸ್ ಎಂದರೇನು ..? ಅದರ ಉನ್ನತ ನಾಯಕರು ಯಾರು..? : ಸಂಕ್ಷಿಪ್ತ ಮಾಹಿತಿ…

ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್‌ಮೆಂಟ್ ಅಥವಾ ಅರೇಬಿಕ್‌ನಲ್ಲಿ ಹರಕತ್ ಅಲ್-ಮುಕ್ವಾಮಾ ಅಲ್-ಇಸ್ಲಾಮಿಯಾ ಎಂದೂ ಕರೆಯಲ್ಪಡುವ ಹಮಾಸ್‌ ಎಂಬುದು ಇಸ್ಲಾಮಿ ಮೂಲಭೂತವಾದಿ ಉಗ್ರಗಾಮಿ ಗುಂಪಾಗಿದೆ, ಇದನ್ನು 1987 ರಲ್ಲಿ ಗಾಜಾದಲ್ಲಿ ವಾಸಿಸುತ್ತಿದ್ದ ಪ್ಯಾಲೇಸ್ಟಿನಿಯನ್ ನಿರಾಶ್ರಿತ ಶೇಖ್ ಅಹ್ಮದ್ ಯಾಸಿನ್ ಮೊದಲ ಇಂತಿಫಾದಾ ಸಮಯದಲ್ಲಿ ಸ್ಥಾಪಿಸಿದರು. 1920 ರ ದಶಕದಲ್ಲಿ ಈಜಿಪ್ಟ್‌ನಲ್ಲಿ ಸ್ಥಾಪಿಸಲಾದ ವಿಶ್ವದ ಪ್ರಮುಖ ಸುನ್ನಿ ಮುಸ್ಲಿಂ ಗುಂಪುಗಳಲ್ಲಿ … Continued

ಸಿರಿಯಾದ 2 ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್‌ ವಾಯುದಾಳಿ

ಗುರುವಾರ ಸಿರಿಯಾದ ಎರಡು ಪ್ರಮುಖ ವಿಮಾನ ನಿಲ್ದಾಣಗಳನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್‌ ದಾಳಿ ನಡೆಸಿದೆ, ಇಸ್ರೇಲ್ ದಾಳಿ ನಡೆಸಿದೆ ಎಂದು ಸಿರಿಯನ್ ಸರ್ಕಾರಿ ಟಿವಿ ಹೇಳಿದೆ. “ಇಸ್ರೇಲಿ ಆಕ್ರಮಣವು ಡಮಾಸ್ಕಸ್ ಮತ್ತು ಅಲೆಪ್ಪೊ ವಿಮಾನ ನಿಲ್ದಾಣಗಳನ್ನು ಗುರಿಯಾಸಿದೆ” ಎಂದು ಸರ್ಕಾರಿ ಟಿವಿ ಸಂದೇಶ ಕಳುಹಿಸುವ ಅಪ್ಲಿಕೇಶನ್ ಟೆಲಿಗ್ರಾಮ್‌ನಲ್ಲಿ ಹೆಚ್ಚುವರಿ ವಿವರಗಳನ್ನು ನೀಡದೆ ವರದಿ ಮಾಡಿದೆ. ವರದಿಗಳ ಪ್ರಕಾರ, … Continued

ಇಸ್ರೇಲ್ ಮೇಲೆ ಹಮಾಸ್‌ ದಾಳಿ : 25 ಹಮಾಸ್ ಉಗ್ರರನ್ನು ಕೊಂದು ತನ್ನ ಗಡಿಯಂಚಿನ ಗ್ರಾಮವನ್ನು ರಕ್ಷಿಸಿದ 25 ವರ್ಷದ ಇಸ್ರೇಲಿ ಮಹಿಳೆ…!

ಹಮಾಸ್ ಉಗ್ರರ ದಾಳಿಯಿಂದ ತತ್ತರಿಸಿರುವ ಇಸ್ರೇಲ್​ನಲ್ಲಿ 25 ವರ್ಷದ ಯುವತಿಯೊಬ್ಬಳು ಕೆಚ್ಚೆದೆಯಿಂದ ಹೋರಾಡಿ ತನ್ನ ಇಡೀ ಗ್ರಾಮವನ್ನು ರಕ್ಷಿಸಿದ್ದಾಳೆ ಹಾಗೂ ಅವಳ ನೇತೃತ್ವದ ತಂಡ 25 ಉಗ್ರರನ್ನು ಹೊಡೆದುರುಳಿಸಿದೆ. ಅವಳೇ ಐವರು ಉಗ್ರರನ್ನು ಸ್ವತಃ ಎದುರಿಸಿ ಹೊಡೆದುರುಳಿಸಿದ್ದಾಳೆ. ಈ 25 ವರ್ಷದ ಇನ್ಬಾರ್ ಲೈಬರ್‌ಮ್ಯಾನ್ ಎಂಬ ಇಸ್ರೇಲಿನ ಯುವತಿ ತನ್ನ ಸಾಹಸದಿಂದ ಹಮಾಸ್ ಅನ್ನೇ ಹಿಮ್ಮೆಟ್ಟಿಸಿದ್ದಾಳೆ. … Continued

₹ 7,500 ಕೋಟಿ ಪವರ್‌ಬಾಲ್ ಲಾಟರಿ ಜಾಕ್‌ಪಾಟ್ ಗೆದ್ದ ಈ ವ್ಯಕ್ತಿ….!

ಅಮೆರಿಕದ ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬರು $1.73 ಬಿಲಿಯನ್ (₹ 7,500 ಕೋಟಿಗಿಂತ ಸ್ವಲ್ಪ ಹೆಚ್ಚು) ಪವರ್‌ಬಾಲ್ ಲಾಟರಿ ಜಾಕ್‌ಪಾಟ್ ಅನ್ನು ಗೆದ್ದಿದ್ದಾರೆ…! ಸಿಎನ್‌ಎನ್‌ (CNN) ಪ್ರಕಾರ, ಇದು ಪವರ್‌ಬಾಲ್ ಮತ್ತು ಅಮೆರಿಕದ ಲಾಟರಿ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಜಾಕ್‌ಪಾಟ್ ಆಗಿದೆ. ವಿಜೇತ ಸಂಖ್ಯೆಗಳು 22, 24, 40, 52, 64 ಮತ್ತು ಪವರ್‌ಬಾಲ್ 10. ಹೊಸ … Continued

2022ರಲ್ಲಿ ಎಐ(AI) ಕಂಪನಿ ಪ್ರಾರಂಭಿಸಿದ 16 ವರ್ಷದ ಭಾರತೀಯ ಹುಡುಗಿ : ಈಗ ಅದರ ಮೌಲ್ಯ 100 ಕೋಟಿ ರೂ…!

ಟೆಕ್ ಜಗತ್ತಿನಲ್ಲಿ ಒಂದು ಸುಂಟರಗಾಳಿ ಪ್ರವೇಶದಲ್ಲಿ, 16 ವರ್ಷದ ಭಾರತೀಯ ಪ್ರತಿಭೆ ಪ್ರಾಂಜಲಿ ಅವಸ್ಥಿ ತನ್ನ ಕೃತಕ ಬುದ್ಧಿಮತ್ತೆ ಎಐ (AI) ಸ್ಟಾರ್ಟ್ಅಪ್, ಡೆಲ್ವ್‌.ಎಐ (Delv.AI) ಮೂಲಕ ಅಲೆಗಳನ್ನು ಸೃಷ್ಟಿಸಿದ್ದಾರೆ. ಮಿಯಾಮಿ ಟೆಕ್ ವೀಕ್ ಈವೆಂಟ್‌ನಲ್ಲಿ, 16 ವರ್ಷದ ಪ್ರಾಂಜಲಿ ಅವಸ್ಥಿ ತನ್ನ ಮೆದುಳಿನ ಕೂಸನ್ನು ಅನಾವರಣಗೊಳಿಸಿದರು. ಅವರು ಜನವರಿ 2022 ರಲ್ಲಿ ಈ ಕಂಪನಿಯನ್ನು … Continued