ಶ್ರೀಲಂಕಾಕ್ಕೆ ತೆರಳುವ ಭಾರತ, ಇತರ 6 ರಾಷ್ಟ್ರಗಳ ಪ್ರಯಾಣಿಕರಿಗೆ ʼಉಚಿತ ಪ್ರವಾಸಿ ವೀಸಾʼ

ಕೊಲಂಬೊ: ಭಾರತ ಮತ್ತು ಇತರ ಆರು ದೇಶಗಳ ಪ್ರಯಾಣಿಕರಿಗೆ ಉಚಿತ ಪ್ರವಾಸಿ ವೀಸಾ ನೀಡುವ ನೀತಿಗೆ ಶ್ರೀಲಂಕಾ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ವಿದೇಶಾಂಗ ಸಚಿವ ಅಲಿ ಸಬ್ರಿ ಸೋಮವಾರ ಹೇಳಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರದ ಪ್ರವಾಸೋದ್ಯಮ ಕ್ಷೇತ್ರವನ್ನು ಮರುನಿರ್ಮಾಣ ಮಾಡುವ ಪ್ರಯತ್ನಗಳ ನಡುವೆ ಈ ಕ್ರಮ ಬಂದಿದೆ. ಇದನ್ನು ಪ್ರಾಯೋಗಿಕ ಯೋಜನೆಯಾಗಿ … Continued

ಹಮಾಸ್‌ ವಿರುದ್ಧ ಇಸ್ರೇಲ್‌ಗೆ “ಆತ್ಮ ರಕ್ಷಣೆಯ ಹಕ್ಕಿದೆ ” : ನಿಲುವು ಬದಲಿಸಿದ ಚೀನಾ

ಯುದ್ಧದ ಬಗೆಗಿನ ತನ್ನ ನಿಲುವಿನ ಬಗ್ಗೆ ಟೀಕೆಗೆ ಒಳಗಾದ ನಂತರ ಚೀನಾ ಈಗ ತನ್ನ ನಿಲುವನ್ನು ಬದಲಾಯಿಸಿದೆ. ಹಮಾಸ್ ವಿರುದ್ಧ ಇಸ್ರೇಲ್ ಆತ್ಮರಕ್ಷಣೆಯ ಹಕ್ಕನ್ನು ಹೊಂದಿದೆ ಎಂದು ಚೀನಾ ಒಪ್ಪಿಕೊಂಡಿದೆ. ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ವಾಷಿಂಗ್ಟನ್‌ಗೆ ಉನ್ನತ ಮಟ್ಟದ ಭೇಟಿಗಾಗಿ ತಯಾರಿ ನಡೆಸುತ್ತಿರುವಾಗ ಈ ಹೇಳಿಕೆ ಬಂದಿದೆ. “ಪ್ರತಿಯೊಂದು ದೇಶವೂ ಆತ್ಮರಕ್ಷಣೆಯ … Continued

ಇಸ್ರೇಲ್‌ನ ತೀಕ್ಷ್ಣ ಎಚ್ಚರಿಕೆ ನಡುವೆ ಇನ್ನಿಬ್ಬರು ಒತ್ತೆಯಾಳು ಬಿಡುಗಡೆ ಮಾಡಿದ ಹಮಾಸ್ ಗುಂಪು

ಇಸ್ರೇಲಿ ಒತ್ತೆಯಾಳುಗಳಲ್ಲಿ ಇಬ್ಬರು ಮಹಿಳೆಯರನ್ನು ಹಮಾಸ್ ಸೋಮವಾರ ಬಿಡುಗಡೆ ಮಾಡಿದೆ ಎಂದು ಗುಂಪು ಹೇಳಿದೆ. ಹಮಾಸ್‌ನ ಸಬ್ಬತ್ ದಾಳಿಯ ನಂತರ ಗಾಜಾದ ಮೇಲೆ ಇಸ್ರೇಲ್ ದಾಳಿಗಳಲ್ಲಿ 5,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ಹಮಾಸ್ ಹೇಳಿದೆ. ಕತಾರ್ ಮತ್ತು ಈಜಿಪ್ಟ್‌ನ ಮಧ್ಯಸ್ಥಿಕೆಯ ನಂತರ “ಮಾನವೀಯ” ಕಾರಣಗಳಿಗಾಗಿ ಇಬ್ಬರು ಮಹಿಳೆಯರನ್ನು ಬಿಡುಗಡೆ ಮಾಡಲಾಗಿದೆ ಎಂದು ಹಮಾಸ್ … Continued

ದಾಖಲೆ ಸೋರಿಕೆ ಪ್ರಕರಣ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಶಾ ಮಹಮೂದ್ ಖುರೇಷಿ ವಿರುದ್ಧ ದೋಷಾರೋಪ

ಇಸ್ಲಾಮಾಬಾದ್‌ : ದೇಶದ ರಹಸ್ಯ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನದ ವಿಶೇಷ ನ್ಯಾಯಾಲಯವು ಸೋಮವಾರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಉಪಾಧ್ಯಕ್ಷ ಶಾ ಮಹಮೂದ್ ಖುರೇಷಿ ವಿರುದ್ಧ ದೋಷಾರೋಪ ಹೊರಿಸಿದೆ. ಈ ಪ್ರಕರಣದಲ್ಲಿ ಖಾನ್ ಮತ್ತು ಖುರೇಷಿ ಇಬ್ಬರೂ ತಾವು ನಿರ್ದೋಷಿಗಳೆಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ … Continued

ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಿರಿಯ ಹಮಾಸ್ ನಾಯಕ ಸಾವು

ಟೆಲ್ ಅವಿವ್ : ಇಸ್ರೇಲ್ ವಾಯುದಾಳಿಯಲ್ಲಿ ಭಾನುವಾರ ಗಾಜಾದಲ್ಲಿ ಹಮಾಸ್ ಭಯೋತ್ಪಾದಕ ಸಂಘಟನೆಯ ಪ್ರಾದೇಶಿಕ ಫಿರಂಗಿದಳದ ಉಪ ಮುಖ್ಯಸ್ಥ ಮುಹಮ್ಮದ್ ಕಟಮಾಶ್‌ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಪ್ರಕಟಿಸಿದೆ. ಮುಹಮ್ಮದ್ ಕಟಮಾಶ್‌ ಹಮಾಸ್‌ ಗುಂಪಿನ ಸೆಂಟ್ರಲ್ ಕ್ಯಾಂಪ್ಸ್ ಬ್ರಿಗೇಡ್‌ನಲ್ಲಿ ಬೆಂಕಿ ಮತ್ತು ಫಿರಂಗಿ ನಿರ್ವಹಣೆ ಹೊಣೆ ಹೊತ್ತಿದ್ದರು ಮತ್ತು ಗಾಜಾ ಪಟ್ಟಿಯ ಎಲ್ಲಾ … Continued

4 ವರ್ಷಗಳ ನಂತರ ಪಾಕಿಸ್ತಾನಕ್ಕೆ ಬಂದಿಳಿದ ಮಾಜಿ ಪ್ರಧಾನಿ ನವಾಜ್ ಷರೀಫ್

ಇಸ್ಲಾಮಾಬಾದ್‌ : ಪಾಕಿಸ್ತಾನದಲ್ಲಿ ಮೂರು ಬಾರಿ ಪ್ರಧಾನಿಯಾಗಿದ್ದ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ ಮುಖ್ಯಸ್ಥ ನವಾಜ್ ಷರೀಫ್, ನಾಲ್ಕು ವರ್ಷಗಳ ನಂತರ ತಾಯ್ನಾಡಿಗೆ ಬಂದಿದ್ದಾರೆ. ಜನವರಿ 2024 ರಲ್ಲಿ ನಡೆಯಲಿರುವ ಪಾಕ್ ಸಂಸತ್ತಿನ ಚುನಾವಣೆಗೆ ಮುಂಚಿತವಾಗಿ ತನ್ನ ಪಕ್ಷದ ಪ್ರಚಾರವನ್ನು ಪ್ರಾರಂಭಿಸಲು ನವಾಜ್‌ ಷರೀಫ್‌ ಶನಿವಾರ ದೇಶಕ್ಕೆ ಮರಳಿರುವುದು ಪಾಕ್ ರಾಜಕೀಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. … Continued

ಲಷ್ಕರ್-ಎ-ಜಬ್ಬಾರ್ ಭಯೋತ್ಪಾದಕ ಸಂಘಟನೆ ಸಂಸ್ಥಾಪಕ, ಮಸೂದ್ ಅಜರ್ ಆಪ್ತ ದಾವೂದ್ ಮಲಿಕ್ ಪಾಕಿಸ್ತಾನದಲ್ಲಿ ಹತ್ಯೆ: ವರದಿ

ಇಸ್ಲಾಮಾಬಾದ್‌ :  ಭಾರತ ವಿರೋಧಿ ಭಯೋತ್ಪಾದನಾ ಕಾರ್ಯಾಚರಣೆಗೆ ಮತ್ತೊಂದು ದೊಡ್ಡ ಹೊಡೆತವಾಗಿ, ಲಷ್ಕರ್-ಎ-ಜಬ್ಬಾರ್ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಮತ್ತು ಭಾರತದ ʼಮೋಸ್ಟ್‌ ವಾಂಟೆಡ್ʼ ಭಯೋತ್ಪಾದಕ ಮಸೂದ್ ಅಜರ್‌ನ ಆಪ್ತ ಸಹಾಯಕ ದಾವೂದ್ ಮಲಿಕ್ ಎಂಬಾತ ಪಾಕಿಸ್ತಾನದ ಉತ್ತರ ವಜೀರಿಸ್ತಾನ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಹತ್ಯೆಗೀಡಾಗಿದ್ದಾನೆ ಎಂದು ವರದಿಗಳು ತಿಳಿಸಿವೆ. ಡಾನ್ ವರದಿಯ ಪ್ರಕಾರ, ಶುಕ್ರವಾರ ಉತ್ತರ ವಜಿರಿಸ್ತಾನ್ … Continued

ಸ್ಫೋಟಗೊಂಡ ಪರಮಾಣು ಬಾಂಬ್‌ ಕೆಳಗೆ ನಿಂತಿದ್ದ ಆರು ಜನ ಧೈರ್ಯಶಾಲಿಗಳು..| ವೀಕ್ಷಿಸಿ

ಕಳೆದ ಕೆಲವು ದಶಕಗಳಲ್ಲಿ ಪರಮಾಣು ಶಕ್ತಿಯನ್ನು ಅಭಿವೃದ್ಧಿಪಡಿಸುವಲ್ಲಿ ಜಗತ್ತು ಸಾಕಷ್ಟು ಪ್ರಗತಿ ಸಾಧಿಸಿದೆ. ಇದು ಎರಡನೆಯ ಮಹಾಯುದ್ಧದಿಂದ ಪ್ರಾರಂಭವಾಯಿತು, ಮತ್ತು ಅಂದಿನಿಂದ, ಪ್ರಪಂಚವು ಅನೇಕ ಮೈಲಿಗಲ್ಲುಗಳನ್ನು ದಾಟಿದೆ ಹಾಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚು ಶಕ್ತಿಯುತವಾಗಿಸಿದೆ. ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಅಣುಬಾಂಬ್‌ಗಳನ್ನು ಹಾಕಿದಾಗ, ಪರಮಾಣು ಯುಗದ ಆರಂಭಕ್ಕೆ ಜಗತ್ತು ಸಾಕ್ಷಿಯಾಯಿತು. ತರುವಾಯ, ಈ ಅಸಾಧಾರಣ ಸಾಮರ್ಥ್ಯಗಳನ್ನು … Continued

ಅಶ್ಲೀಲ ಹೇಳಿಕೆಗಳ ವಿವಾದ: ಪತಿಯಿಂದ ಬೇರ್ಪಟ್ಟ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

ರೋಮ್: ಟೆಲಿವಿಷನ್‌ನಲ್ಲಿ ಸೆಕ್ಸಿಸ್ಟ್ ಹೇಳಿಕೆ ನೀಡಿದ್ದಕ್ಕೆ ತೀವ್ರ ವಿವಾದಕ್ಕೆ ಗುರಿಯಾಗಿರುವ ತಮ್ಮ ಪತಿ ಹಾಗೂ ಪತ್ರಕರ್ತ ಆಂಡ್ರಿಯಾ ಗಿಯಾಂಬ್ರುನೊ ಅವರಿಂದ ಬೇರ್ಪಟ್ಟಿರುವುದಾಗಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಶುಕ್ರವಾರ ಪ್ರಕಟಿಸಿದ್ದಾರೆ. ಆಂಡ್ರಿಯಾ ಗಿಯಾಂಬ್ರುನೊ ಜೊತೆಗಿನ ನನ್ನ ಸುಮಾರು 10 ವರ್ಷಗಳ ಸಂಬಂಧ ಇಲ್ಲಿಗೆ ಅಂತ್ಯಗೊಂಡಿದೆ” ಎಂದು ಇಟಲಿ ಪ್ರಧಾನಿ ಮೆಲೋನಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. “ನಮ್ಮ ದಾರಿಗಳು … Continued

X’ ನಲ್ಲಿ 2 ಹೊಸ ಚಂದಾದಾರಿಕೆ ಯೋಜನೆ ಪ್ರಕಟಿಸಿದ ಎಲೋನ್ ಮಸ್ಕ್ : ಮಾಹಿತಿ ಇಲ್ಲಿದೆ

ಎಕ್ಸ್ (ಹಿಂದೆ ಟ್ವಿಟರ್) ಶೀಘ್ರದಲ್ಲೇ ಎರಡು ಹೊಸ ಚಂದಾದಾರಿಕೆ ಶ್ರೇಣಿಗಳನ್ನು ಪರಿಚಯಿಸಲಿದೆ ಎಂದು ಎಲೋನ್ ಮಸ್ಕ್ ಪ್ರಕಟಿಸಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ ಫಾರ್ಮ್ ಎರಡು ಆಯ್ಕೆಗಳಲ್ಲಿ ಒಂದು ಕಡಿಮೆ-ವೆಚ್ಚದ ಆಯ್ಕೆಯನ್ನು ಪರಿಚಯಿಸುತ್ತದೆ, ಅದು ಎಲ್ಲಾ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ, ಆದರೆ ಜಾಹೀರಾತುಗಳೊಂದಿಗೆ ಇರಲಿದೆ.ಮತ್ತೊಂದೆಡೆ, ಹೆಚ್ಚು ದುಬಾರಿ ಶುಲ್ಕದ ಯೋಜನೆಯಾಗಿದ್ದು, ಇದು ನಿಮ್ಮ ಫೀಡ್‌ನಲ್ಲಿ ಜಾಹೀರಾತುಗಳನ್ನು ತೋರಿಸುವುದನ್ನು ತಡೆಯುತ್ತದೆ. … Continued