ಫೆಬ್ರವರಿ 11, 12ರಂದು ಹುಬ್ಬಳ್ಳಿಯ ರಾಮಕೃಷ್ಣ-ವಿವೇಕಾನಂದ ಆಶ್ರಮದಿಂದ ಅಖಿಲ ಕರ್ನಾಟಕ ಭಕ್ತರ ಸಮ್ಮೇಳನ, ಶತಚಂಡೀ ಮಹಾಯಾಗ

(ಫೆಬ್ರವರಿ11, 12 ರಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ವಿದ್ಯಾನಗರದ ಕಲ್ಯಾಣ ನಗರದಲ್ಲಿ ಅಖಿಲ ಕರ್ನಾಟಕ ಭಕ್ತರ ಸಮ್ಮೇಳನ ಮತ್ತು ಶ್ರೀ ಶ್ರೀ ಶತಚಂಡೀ ಮಹಾಯಾಗವನ್ನು ಕುಂದೂರಿನ ವಿದ್ವಾನ್ ಶ್ರೀ ಸತ್ಯನಾರಾಯಣ ಜೋಶಿ ಮತ್ತು ಕೋಕ್ಕಾರಿನ ವಿನಾಯಕ ಭಟ್‌ ಹಾಗೂ ಆಯೋಜಿಸಿದೆ ಮತ್ತು ಉದಾತ್ತ ಮತ್ತು ಉತ್ತಮ ೧೮ ಲೇಖನಗಳನ್ನು ಒಳಗೊಂಡ “ಜನನಿ” ಗ್ರಂಥ ಇದೇ … Continued

ಧಾರವಾಡ ಖಾಸಗಿ ಶಾಲೆಗಳ ೩೫ ಶಿಕ್ಷಕಿಯರಿಗೆ ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರದಾನ

ಧಾರವಾಡ:  ಧಾರವಾಡ ಅನುದಾನರಹಿತ ಖಾಸಗಿ ಶಾಲೆಗಳ ಅಭಿವೃದ್ಧಿ ಸಂಘ(ದಕ್ಷ)ದಿಂದ ಸಾವಿತ್ರಿಬಾಯಿ ಪುಲೆ ಮತ್ತು ಫಾತಿಮಾ ಶೇಖ ಸ್ಮರಣೆಯಲ್ಲಿ ಧಾರವಾಡ ಖಾಸಗಿ ಶಾಲೆಗಳ ೩೫ ಶಿಕ್ಷಕಿಯರಿಗೆ ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರದಾನ ಸಮಾರಂಭ ಜೆ.ಎಸ್.ಎಸ್. ಕಾಲೇಜಿನ ಉತ್ಸವ ಸಭಾಭವನದಲ್ಲಿ   ನಡೆಯಿತು. ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್. ವಿ ಸಂಕನೂರ ಅವರು, ಅತ್ಯುತ್ತಮ … Continued

ಧಾರವಾಡ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

ಧಾರವಾಡ: ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನಲ್ಲಿ ಜನವರಿ ೨೯ರಂದು ಬೆಳಿಗ್ಗೆ ೧೦:೩೦ ಕ್ಕೆ ಎಸ್.ಎಸ್.ಎಲ್.ಸಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. “ಕೌಶಲ್ಯ ಸಂಪಾದನೆಯೊಂದಿಗೆ ಉನ್ನತ ಶಿಕ್ಷಣ” ಹಾಗೂ “ಬೆಳೆಯುತ್ತಿರುವ ಭಾರತದಲ್ಲಿ ಕೈಗಾರಿಕೆಗಳ ಅವಶ್ಯಕತೆ” ವಿಷಯಗಳ ಮೇಲೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಹುಬ್ಬಳ್ಳಿ-ಧಾರವಾಡ ಹಾಗೂ ಸುತ್ತಮುತ್ತಲಿನ ಗ್ರಾಮದ ಶಾಲೆಗಳ ಮಕ್ಕಳು ಈ … Continued

ಕುಮಟಾ: ವಿನಾಯಕ ರೆಕ್ಸಿನ್ ಹೌಸ್ ವಿಜಯೋತ್ಸವ – ಶಾಪಿಂಗ್‌ ಉತ್ಸವದಲ್ಲಿ ಗೌರೀಶ ಭಂಡಾರಿಗೆ ಕಾರು ಬಹುಮಾನ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಳೆಯ ಮೀನುಮಾರುಕಟ್ಟೆ ರಸ್ತೆಯ ಜಯನಗರದಲ್ಲಿರುವ ವಿನಾಯಕ ರೆಕ್ಸಿನ್ ಹೌಸ್‌ನಲ್ಲಿ ಕನ್ನಡದ ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸಹಭಾಗಿತ್ವದಲ್ಲಿ ನಡೆದ“ವಿಜಯೋತ್ಸವ – ಶಾಪಿಂಗ್ ಉತ್ಸವ” ಫಲಿತಾಂಶ ಪ್ರಕಟವಾಗಿದೆ. ಹತ್ತು ಸಾವಿರ ರೂ.ಗಳ ಬೆಡ್ ಖರೀದಿಸಿದ್ದ ಗೌರೀಶ ಎಂ. ಭಂಡಾರಿ ಮಣಕಿ ಕುಮಟಾ ಅವರಿಗೆ ಅದೃಷ್ಟ ಒಲಿದು … Continued

ಕುಮಟಾ: ಚಿತ್ರಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ

ಕುಮಟಾ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಿವೆ ಎಂದು ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಹೇಳಿದರು. ಚಿತ್ರಗಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಉಚಿತ ಕೋವಿಡ್‌ ಲಸಿಕೆ ನೀಡಿ … Continued

ನಿವೃತ್ತ ಪ್ರಾಚಾರ್ಯ ಜಿ. ವಿ. ಭಟ್ಟ ಕೊಂಕೇರಿ ನಿಧನ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡತೋಕದ ಕೊಂಕೇರಿಯವರಾದ ನಿವೃತ್ತ ಪ್ರಾಚಾರ್ಯ ಜಿ. ವಿ. ಭಟ್ಟ (87) ಕೊಂಕೇರಿ ಶನಿವಾರ ನಿಧನರಾದರು. ಕಾರವಾರದ ಪ್ರತಿಷ್ಠಿತ ದಿವೇಕರ ಕಾಲೇಜಿನ ಪ್ರಥಮ ಪ್ರಾಚಾರ್ಯರಾಗಿದ್ದರು ಸತತವಾಗಿ 23 ವರ್ಷ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ತಮ್ಮ ಮೂಲ ಮನೆ ಕಡತೋಕದಲ್ಲಿ ನೆಲೆಸಿ ಅನೇಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. … Continued

ಕುಮಟಾ: ಹಿರಿಯ ಕಾಂಗ್ರೆಸ್‌ ನಾಯಕ ಮೋಂಟಿ ಫರ್ನಾಂಡಿಸ್‌ ನಿಧನ

ಕುಮಟಾ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಮೋಂಟಿ ಫಾರ್ನಾಂಡಿಸ್ ಗುರುವಾರ ನಿಧನರಾಗಿದ್ದಾರೆ. ಸರಳ ವ್ಯಕ್ತಿತ್ವದ ಅವರು ಕಾಂಗ್ರೆಸ್‌ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಎಲ್ಲ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಪಕ್ಷಾತೀತವಾಗಿ ಉತ್ತಮ ಸಂಬಂಧಹೊಂದಿದ್ದರು. ಅವರು ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಕುಮಟಾದಲ್ಲಿ ಆನ್‌ಲೈನ್ ಷೇರು ಮಾರುಕಟ್ಟೆಯು ಆರಂಭ … Continued

ಬೆತ್ತಗೇರಿ ರಮಾನಂದ ಭಟ್ಟ ನಿಧನ

ಕುಮಟಾ : ತಾಲೂಕಿನ ಬೆತ್ತಗೇರಿಯ ರಮಾನಂದ ಭಟ್ಟ (65) ಭಾನುವಾರ ಹೃದಯಘಾತದಿಂದ ನಿಧನರಾಗಿದ್ದಾರೆ. ಧಾರೇಶ್ವರದ ಬಿಜೆಪಿಯ ಭೂತ ಮಟ್ಟದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸುದೀರ್ಘ ಕಾಲದಿಂದ ಶ್ರೀ ರಾಮಚಂದ್ರಾ ಪುರ ಮಠದ ಬಿಂದು-ಸಿಂಧು ಯೋಜನೆಯ ಪ್ರಧಾನ, ರಾಗಿ ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು, ಸಂತಾಪ: ರಮಾನಂದ ಭಟ್‌ ಅವರ ನಿಧನಕ್ಕೆ ಶಾಸಕ ದಿನಕರ ಶೆಟ್ಟಿ, ಹವ್ಯಕ … Continued

ಕುಮಟಾ: ಗೋ ಗ್ರೀನ್‌ನಲ್ಲಿ ಹವ್ಯಕ ಸೇವಾ ಪ್ರತಿಷ್ಠಾನದ ಸಮಾವೇಶ: ತಮ್ಮತನ ಉಳಿಸಿಕೊಳ್ಳಲು ಸಂಘಟನೆ ಬೇಕು- ಕಾಗೇರಿ

ಕುಮಟಾ: ನಮ್ಮ ಬದುಕಿನ ಮಧ್ಯೆ ಬರುವ ಸಮಸ್ಯೆ ನಿವಾರಣೆಗೆ  ಹಾಗೂ ತಮ್ಮತನ ಉಳಿಸಿಕೊಳ್ಳಲು ಸಂಘಟನೆ ಬೇಕು ಎಂದು ವಿಧಾಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬಡಗಣಿಯ ಗೊ ಗ್ರೀನ್ ಮೈದಾನದಲ್ಲಿ ನಡೆದ ಹವ್ಯಕ ಸೇವಾ ಪ್ರತಿಷ್ಠಾನ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ವ್ಯವಹಾರಿಕ ಜಂಜಾಟದಲ್ಲಿ ಇರುತ್ತಾರೆ. ಇದರ ಮಧ್ಯೆ … Continued

ಕುಮಟಾ: ನಿವೃತ್ತ ತಹಶೀಲ್ದಾರ ಮೇಘರಾಜ ನಾಯ್ಕ ನಿಧನ

ಕುಮಟಾ: ನಗರದ ಪೋಸ್ಟಲ್ ಕಾಲೋನಿ ಸಮೀಪದ ನಿವಾಸಿ ನಿವೃತ್ತ ತಹಸೀಲ್ದಾರ ಮೇಘರಾಜ್ ನಾಯ್ಕ್ (62) ಗುರುವಾರ ಮುಂಜಾನೆ ನಿಧನರಾದರು. ಅವರು ಕುಮಟಾದಲ್ಲಿ ತಹಸೀಲ್ದಾರ ಆಗಿದ್ದಾಗ ನೆರೆ ಹಾವಳಿ ಹಾಗೂ ಕೊರೊನಾ ಸಾಂಕ್ರಾಮಿಕ ರೋಗದಿಂದ ಉದ್ಭವಿಸಿದ ಪರಿಸ್ಥಿತಿಯ ನಿರ್ವಹಣೆಯಲ್ಲಿ ಹಗಲು ರಾತ್ರಿ ಕೆಲಸ ಮಾಡಿದ್ದರು. ಮೂಲತಃ ಕುಮಟಾ ತಾಲೂಕಿನ ಕಾಗಾಲ ಗ್ರಾಮದವರಾಗಿದ್ದ ಮೇಘರಾಜ ನಾಯ್ಕ ಅವರು ವಿಧಾನ … Continued