೧ರಿಂದ ೯ನೇ ತರಗತಿ ಮಕ್ಕಳಿಗೆ ಪರೀಕ್ಷೆ ರದ್ದು ನಿರ್ಧಾರ ಕೈಗೊಂಡಿಲ್ಲ:ಸಿಎಂ ಬಿಎಸ್‌ವೈ

ಬೆಂಗಳೂರು: ೧ರಿಂದ ೯ನೇ ತರಗತಿ ಮಕ್ಕಳಿಗೆ ಪರೀಕ್ಷೆ  ರದ್ದು ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆತಂಕ ಮೂಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಶಾಲೆ ಬಂದ್ ಮಾಡುವ … Continued

ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲು ಸಿಡಿ ಪ್ರಕರಣದ ಯುವತಿಗೆ ಕೋರ್ಟ್‌ ಅನುಮತಿ, ಯಾವಾಗ ಹಾಜರಾಗ್ತಾಳೆ..?

ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ಸಿಡಿಯಲ್ಲಿನ ಯುವತಿ ಕೋರ್ಟ್ ಮುಂದೆ ಹಾಜರಾಗಿ, ನ್ಯಾಯಾಧೀಶರ ಎದುರು ತನ್ನ ಹೇಳಿಕೆ ದಾಖಲಿಸಲು ಸೋಮವಾರ ಕೋರ್ಟ್ ಅನುಮತಿ ನೀಡಿದೆ. ಇದರಿಂದಾಗಿ ಸಿಡಿ ಪ್ರಕರಣಕ್ಕೆ ಈಗ ಬಹುದೊಡ್ಡ ತಿರುವು ಸಿಕ್ಕಂತಾಗಿದೆ. ಸೋಮವಾರ ಸಿಡಿ ಸಂತ್ರಸ್ತ ಯುವತಿ ವಕೀಲ ಜಗದೀಶ್ ಅವರು ಕೋರ್ಟ್‌ ಮುಂದೆ ಸಂತ್ರಸ್ತ ಯುವತಿ ಹಾಜರಾಗಿ … Continued

ಸಿಎಸ್ ಹೊರತಾಗಿ ಸಚಿವರು, ಅಧಿಕಾರಿಗಳು ಕೊರೊನಾ ಆದೇಶ, ಹೇಳಿಕೆ ನೀಡುವಂತಿಲ್ಲ; ಸಿಎಂ ಬಿಎಸ್‌ವೈ ಖಡಕ್ ಸೂಚನೆ

ಬೆಂಗಳೂರು : ಕೇಂದ್ರ ಗೃಹ ಮಂತ್ರಾಲಯದ ಮಾದರಿಯಲ್ಲೇ ರಾಜ್ಯದಲ್ಲೂ ಲಾಕ್ ಡೌನ್ ತೆರವುಗೊಳಿಸುವಿಕೆ, ಪುನರಾರಂಭ, ಕಂಟೈನ್ಮೆಂಟ್, ನಿರ್ಭಂಧ ಹೇರುವುದು ಇತ್ಯಾದಿ ಆದೇಶಗಳನ್ನು ಮುಖ್ಯ ಕಾರ್ಯದರ್ಶಿಯವರ ಸಹಿಯಲ್ಲಿ ಆದೇಶ ಹೊರಬರಬೇಕು. ಈ ಬಗ್ಗೆ ಯಾವುದೇ ಸಚಿವರಾಗಲಿ, ಅಧಿಕಾರಿಗಳಾಗಲಿ ಪತ್ರಿಕಾ ಹೇಳಿಕೆ ನೀಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಡಕ್ ಆದೇಶ ಮಾಡಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ … Continued

ಲಾಕ್‌‌ಡೌನ್‌ ಇಲ್ಲ.. ಆದರೆ ಕೊರೊನಾ ನಿಯಂತ್ರಣಕ್ಕೆ 15 ದಿನ ಪ್ರತಿಭಟನೆ, ಸಮಾವೇಶ ಇತ್ಯಾದಿ ಬಂದ್‌

ಬೆಂಗಳೂರು : ನಾಳೆಯಿಂದ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿದೆ. ನಾಳೆಯಿಂದ ಮುಂದಿನ 15 ದಿನಗಳ ವರೆಗೆ ರಾಜ್ಯದಲ್ಲಿ ಯಾವುದೇ ಪ್ರತಿಭಟನೆ,ಸಮಾವೇಶ ಇತ್ಯಾದಿಗಳಿಗೆ ಅವಕಾಶವಿಲ್ಲ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಮಾಡುವುದಿಲ್ಲ. ಅದರೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಕೊರೋನಾ ನಿಯಂತ್ರಣ ಕುರಿತಂತೆ ಸೋಮವಾರ ಸಭೆ ನಡೆಸಿದ ಬಳಿಕ … Continued

ಸಂತ ಶ್ರೇಷ್ಠ ದಾಸ ರಾಜರಾಮರ ೨೫೨ನೇ ಜನ್ಮೋತ್ಸವ

(ಧಾರವಾಡದ ಎಮ್ಮಿಕೆರಿಯಲ್ಲಿರುವ ಶ್ರೀ ಸದ್ಗುರು ರಮಣ ಚಿದಂಬರ ಆಶ್ರಮದ ವತಿಯಿಂದ ಸಂತ ಶ್ರೇಷ್ಠ ದಾಸ ರಾಜರಾಮರ ೨೫೨ ಜನ್ಮೋತ್ಸವವನ್ನು ಮಾ.೩೦ ರಂದು ಎಮ್ಮಿಕೇರಿ, ಕೆಳಕರ ಹನುಮಂತ ಗುಡಿ ಹತ್ತಿರ, ರಘೋತ್ತಮದಾಸ ಮಂಟಪದಲ್ಲಿ ಆಚರಿಸಲಾಗುತ್ತಿದ್ದು, ಈನಿಮಿತ್ತ ಲೇಖನ) ಶ್ರೀ ಶಿವ ಚಿದಂಬರ ಭಕ್ತ ಪರಂಪರೆ, ರಜಪೂತ ವಂಶದೊಳಗಿನ ಮಹಾನ್ ಭಗವದ್ಭಕ್ತ ಹರಿಸಿಂಗ್‌ ಮತ್ತು ಲಕ್ಷ್ಮೀಬಾಯಿ ಅವರ ಪುತ್ರರಾದ … Continued

ಮಗಳ ಹೇಳಿಕೆಗೆ ವಿರುದ್ಧವಾದ ಹೇಳಿಕೆ: ಪೋಷಕರು ಆರೋಪಿ ಕಸ್ಟಡಿಯಲ್ಲಿರುವುದು ಸ್ಪಷ್ಟ ಎಂದ ಕಾಂಗ್ರೆಸ್

ಬೆಂಗಳೂರು: ಮಗಳು ಕೋರ್ಟ್‌ ಮುಂದೆ ಹಾಜರಾಗಿ ಹೇಳಿಕೆ ನೀಡುವುದು ಖಚಿತವಾಗುತ್ತಿದ್ದಂತೆ ಸಿಡಿ ಯುವತಿ ಪೋಷಕರು ದಿಢೀರ್ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಕಿಡಿಕಾರಿರುವ ಕಾಂಗ್ರೆಸ್, ವಿಜಯಪುರದ ಯುವತಿ ಪೋಷಕರು ಬೆಳಗಾವಿಯಲ್ಲಿ ಏಕಿದ್ದಾರೆ? ಮಗಳ ಹೇಳಿಕೆಗೆ ವಿರುದ್ಧವಾಗಿ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದರೆ ಪೋಷಕರು ಆರೋಪಿಯ ಕಸ್ಟಡಿಯಲ್ಲಿರುವಂತೆ ಕಾಣುತ್ತಿದೆ ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ. ಸರಣಿ ಟ್ವೀಟ್ ಮಾಡಿರುವ ರಾಜ್ಯ … Continued

ಸಿಡಿ ಪ್ರಕರಣ: ನನ್ನ ಮಗಳು ಬೇರೆಯವರ ಒತ್ತಡದಲ್ಲಿದ್ದಾಳೆ, ಅವಳು ನೀಡುವ ಹೇಳಿಕೆ ಪರಿಗಣಿಸಬೇಡಿ ಎಂದ ಯುವತಿ ತಂದೆ

ಬೆಳಗಾವಿ: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಪೋಷಕರು ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದು, ನನ್ನ ಮಗಳು ಬೇರೆಯವರ ಒತ್ತಡಕ್ಕೆ ಸಿಲುಕಿದ್ದಾಳೆ. ಹೀಗಾಗಿ ಅವಳ ಹೇಳಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ. ನನ್ನ ಮಗಳನ್ನು ರಾಜಕೀಯ ದಾಳವಾಗಿ ಬಳಸಿಕೊಂಡಿದ್ದಾರೆ. ಮೊದಲು ನಮ್ಮ ಮಗಳು ಅಲ್ಲಿಂದ ಹೊರಬರಬೇಕು. ಆಕೆಯ ಮೇಲೆ ಡಿ.ಕೆ.ಶಿವಕುಮಾರ್ ಕಡೆಯವರು ಒತ್ತಡ ಹೇರಿ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಮೊದಲು … Continued

ಸಿಡಿ ಪ್ರಕರಣ ಬೇರೆ ರಾಜ್ಯಕ್ಕೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್‌ ಮೆಟ್ಟಿಲೇರಲು ಯುವತಿ ಪರ ವಕೀಲರ ತಂಡ ನಿರ್ಧಾರ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೋಳಿ ಜೊತೆ ಸಿಡಿಯಲ್ಲಿರುವ ಕಾಣಿಸಿಕೊಂಡ ಯುವತಿಯ ಪರವಾಗಿರುವ ವಕೀಲರ ತಂಡವು ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ತಿರ್ಮಾನಿಸಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕ ಪ್ರಭಾವಶಾಲಿಯಾಗಿದ್ದು ಯುವತಿ ತನ್ನ ಸುರಕ್ಷತೆ ಬಗ್ಗೆ ಆತಂಕಗೊಂಡಿದ್ದಾಳೆ ಎಂಬ ಕಾರಣದಿಂದ ವಕೀಲರ ತಂಡ ಈ ಅಭಿಪ್ರಾಯಕ್ಕೆ ಬಂದಿದೆ ಎನ್ನಲಾಗಿದೆ. ವಕೀಲರಲ್ಲೊಬ್ಬರಾದ … Continued

ಬೆಳಗಾವಿ ಲೋಕಸಭೆ ಉಪಚುನಾವಣೆ:ಸತೀಶ ಜಾರಕಿಹೊಳಿ ನಾಮಪತ್ರ ಸಲ್ಲಿಕೆ

ಬೆಳಗಾವಿ :ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ಸೋಮವಾರ(ಮಾ.29)  ನಾಮಪತ್ರ ಸಲ್ಲಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಉಪಸ್ಥಿತರಿದ್ದರು.ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ನಾಮಪತ್ರ ಸ್ವೀಕರಿಸಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ರಮೇಶ ಜಾರಕಿಹೊಳಿಯವರ ಬೆಂಬಲಿಗರು ಗೋ ಬ್ಯಾಕ್ ಘೋಷಣೆ ಕೂಗಿ ಡಿ.ಕೆ.ಶಿವಕುಮಾರ ಅವರ … Continued

ಸಿಡಿ ಪ್ರಕರಣ; ಯುವತಿ ಬಂದು ದೂರು ನೀಡದೆ ಯಾರನ್ನೇ ಆದರೂ ಬಂಧಿಸಲು ಸಾಧ್ಯವೇ?:ಸಚಿವ ಜೋಶಿ

ಬೆಂಗಳೂರು: ಮಾಜಿ ಸಚಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಗೆ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ. ಪೊಲೀಸರ ತನಿಖೆಗೆ ಸಹಕರಿಸುವುದು ಎಲ್ಲರ ಕರ್ತವ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಯಾರನ್ನು ಬಂಧಿಸಬೇಕು ಯಾರನ್ನು ಬಿಡಬೇಕು ಎಂಬುದು ಎಸ್‌ಐಟಿಗೆ ಬಿಟ್ಟ … Continued