ಕೊವ್ಯಾಕ್ಸಿನ್‌ ಮೊದಲ ಡೋಸ್‌ ಪಡೆದ ಸಿಎಂ ಬಿಎಸ್‌ವೈ

ಬೆಂಗಳೂರು; ನಗರದ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಪಿಎಸ್​ಎಸ್​ವೈ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಶುಕ್ರವಾರ ಕೊವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದರು. ಮುಖ್ಯಮಂತ್ರಿಗಳ‌ ಜತೆ ಆರೋಗ್ಯ ಸಚಿವ ಸುಧಾಕರ್ ಕೂಡ ಲಸಿಕೆ ಹಾಕಿಸಿಕೊಂಡರು. ಲಸಿಕೆ ಹಾಕಿಸಿ ಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಲಸಿಕೆ ಹಾಕಿಸಿಕೊಂಡರೆ ಯಾವುದೇ ಸಮಸ್ಯೆ ಆಗುವುದಿಲ್ಲ. ನಾನು ದೇಸಿ ಲಸಿಕೆ ಕೋವಾಕ್ಸಿನ್ … Continued

ಬಳ್ಳಾರಿಗೂ ಬಂತು ಆಫ್ರಿಕಾ ರೂಪಾಂತರಿ ಕೊರೊನಾ..!

ಬಳ್ಳಾರಿ : ದುಬೈನಿಂದ ಬಳ್ಳಾರಿಗೆ ಬಂದ ಇಬ್ಬರಿಗೆ ಕೊರೊನಾ ದೃಢಪಟ್ಟಿದ್ದು, ಒಬ್ಬರಿಗೆ  ಆಫ್ರಿಕಾ ರೂಪಾಂತರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವಿಷಯವನ್ನು ಜಿಲ್ಲಾಧಿಕಾರಿ ಪವನಕುಮಾರ ಜೈನ್‌ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ ಪವನ್‌ಕುಮಾರ್ ಜೈನ್, ದುಬೈನಿಂದ ಈ ಇಬ್ಬರು ವ್ಯಕ್ತಿಗಳು ಬೆಂಗಳೂರಿಗೆ ಬಂದ ವೇಳೆ ಅವರಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ಕೆಲ … Continued

ರಮೇಶ ಜಾರಕಿಹೊಳಿಗೆ ನಾನು ಧೈರ್ಯ ಹೇಳಿದ್ದು ನಿಜ:ರೇವಣ್ಣ

ಹಾಸನ: ಸಿಡಿ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ “ನಾನು ಧೈರ್ಯ ಹೇಳಿದ್ದು ನಿಜ. ಒಳ್ಳೆಯದ್ದು ಮತ್ತು ಕೆಟ್ಟದ್ದನ್ನು ದೇವರಿಗೆ ಬಿಡೋಣ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ನಮಗೆ ಮೊದಲು ಮನುಷ್ಯತ್ವ ಬೇಕು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಷ್ಟಪಟ್ಟು ಮೇಲೆ ಬಂದವರು. ಅವರಿಗೆ ನಾನು ಧೈರ್ಯ … Continued

ಗಣಿಗಾರಿಕೆ ಲೈಸೆನ್ಸ್ ನೀಡಲು ಆನ್‍ಲೈನ್-ಆಫ್‍ಲೈನ್‌ ವ್ಯವಸ್ಥೆ ಜಾರಿ:ನಿರಾಣಿ

ಧಾರವಾಡ: ಗಣಿಗಾರಿಕೆ ನಡೆಸುವ ಉದ್ಯಮಿಗಳಿಗೆ ಶೀಘ್ರದಲ್ಲಿ ಲೈಸೆನ್ಸ್(ಪರಾವನಗಿ) ನೀಡಲು ಅನುಕೂಲವಾಗುವಂತೆ ಆನ್‍ಲೈನ್ ಮತ್ತು ಆಫ್‍ಲೈನ್ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಗಣಿ ಮತ್ತು  ಭೂ ವಿಜ್ಞಾನ ಸಚಿವ  ಮುರುಗೇಶ್ ನಿರಾಣಿ ಶುಕ್ರವಾರ ಪ್ರಕಟಿಸಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜೊತೆ  ಪ್ರಗತಿ ಪರಿಶೀಲನಾ ಸಭೆ  ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಫ್‍ಲೈನ್, ಆನ್‍ಲೈನ್ ಜಾರಿ … Continued

ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್‌ಐಟಿ ರಚನೆ ‌

ಬೆಂಗಳೂರು; ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳನ್ನು ಹೊಂದಿರುವ ತಂಡ ರಚನೆಯಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ಮಾರ್ಗದರ್ಶನದಲ್ಲಿ ಸಿಡಿ ಪ್ರಕರಣದ ತನಿಖೆ ನಡೆಯಲಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಆದೇಶದ ಹಿನ್ನೆಲೆಯಲ್ಲಿ ಇದೀಗ ಪೂರ್ಣ ಪ್ರಮಾಣದ “ವಿಶೇಷ ತನಿಖಾ ತಂಡ” ರಚನೆಯಾಗಿದೆ. ಈ ಬಗ್ಗೆ ನಗರದಲ್ಲಿ ಸುದ್ದಿಗಾರರ … Continued

ನಾನು ಗುರುವಾರದಿಂದಲೇ ಕಾಂಗ್ರೆಸ್‌ ಕಾರ್ಯಕರ್ತನಾಗಿ ಕೆಲಸ ಆರಂಭಿಸಿದ್ದೇನೆ

ಬೆಂಗಳೂರು: ನಾನು ಗುರುವಾರದಿಂದಲೇ ಕಾಂಗ್ರೆಸ್ ಕಾರ್ಯಕರ್ತನಾಗಿ ಕೆಲಸ ಶುರು ಮಾಡಿದ್ದೇನೆ ಎಂದು ಮಧು ಬಂಗಾರಪ್ಪ ಹೇಳಿದರು. ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಗುರುವಾರದಿಂದಲೇ ಕಾಂಗ್ರೆಸ್ ಕಾರ್ಯಕರ್ತನಾಗಿ ಕೆಲಸ ಶುರು ಮಾಡಿದ್ದೇನೆ. ಅಧಿಕೃತವಾಗಿ ಸೇರ್ಪಡೆಯಾಗುವುದು ಬಾಕಿ ಇದೆ. ಒಂದು ವರ್ಷ ಕಾಲ ನಿರ್ಧಾರ ತೆಗೆದುಕೊಳ್ಳಲು … Continued

ಸಿಡಿ ಹಗರಣದ ತನಿಖೆ ಶುರು: ಮೊದಲ ದಿನವೇ ಐವರ ವಿಚಾರಣೆ..!

ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಕುರಿತಂತೆ ತನಿಖೆ ಶುಕ್ರವಾರದಿಂದ (ಮಾ.೧೨ರಿಂದ) ತನಿಖೆ ಆರಂಭಿಸಿರುವ ವಿಶೇಷ ತನಿಖಾ ತಂಡ ಎಸ್‌ಐಟಿ ಮೊದಲ ದಿನವೇ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಸೌಮೇಂದ್ರ ಮುಖರ್ಜಿಯವರ ನೇತೃತ್ವದ ತಂಡ, ಮೊದಲ ದಿನವೇ ತನಿಖೆ ಚುರುಕುಗೊಳಿಸಿದ್ದು, ಐವರನ್ನು ವಶಕ್ಕೆ ಪಡೆದು, ಪ್ರತ್ಯೇಕ ಸ್ಥಳಗಳಲ್ಲಿ ವಿಚಾರಣೆ ನಡೆಸುತ್ತಿದೆ ಎನ್ನಲಾಗಿದೆ. ರಾಜ್ಯ … Continued

ನಾಯಕತ್ವ ಬದಲಾವಣೆ: ಊಹಾಪೋಹಕ್ಕೆ ತೆರೆ ಎಳೆದ ಡಿಸಿಎಂ

ನವ ದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಕೇಂದ್ರ ಸಚಿವರಾದ ಸದಾನಂದಗೌಡರು ನನ್ನ ಮೇಲಿನ ಪ್ರೀತಿಯಿಂದಾಗಿ, ನಾನು ಮುಖ್ಯಮಂತ್ರಿಯಾಗಲಿ ಎಂದು ಹೇಳಿರಬಹುದು. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸದಾನಂದಗೌಡರು ಉದ್ದೇಶಪೂರ್ವಕವಾಗಿ ಹೇಳಿದ್ದಲ್ಲ, ಆಕಸ್ಮಿಕವಾಗಿ ಆ ಮಾತನ್ನು ಹೇಳಿದ್ದಾರೆ. … Continued

ಬೆಳಗಾವಿಯಲ್ಲಿ ಮರಾಠಿ ನಾಮಫಲಕಕ್ಕೆ ಮಸಿ ಬಳಿದ ಕರವೇ

ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ನಾಮಫಲಕಗಳಿಗೆ ಕಪ್ಪು ಮಸಿ ಹಚ್ಚಿರುವುದಕ್ಕೆ ಪ್ರತಿಯಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿ ಶಿವಸೇನೆ ವಾಹನದ ಮೇಲಿನ ಶಿವಸೇನೆ ಫಲಕ್ಕಕ್ಕೆ ಕಪ್ಪು ಮಸಿ ಬಳಿದು ಫಲಕವ ಧ್ವಂಸ ಮಾಡಿದ ಘಟನೆ ಶುಕ್ರವಾರ ನಡೆದಿದೆ. ರಾಮಲಿಂಗ ಖಿಂಡ ಗಲ್ಲಿಯ ಎಂಇಎಸ್ ಕಚೇರಿಗೆ ನುಗ್ಗಲು ಕರವೇ ಕಾರ್ಯಕರ್ತರು ಯತ್ನಿಸಿದಾಗ ಪೋಲೀಸರು … Continued

ಶಿವಮೊಗ್ಗದಲ್ಲಿ ದಕ್ಷಿಣ ಆಫ್ರಿಕಾ ‘ರೂಪಾಂತರಿ ವೈರಸ್’ ಪತ್ತೆಯಾಗಿಲ್ಲ

  ಶಿವಮೊಗ್ಗ : ದುಬೈಯಿಂದ ಶಿವಮೊಗ್ಗ ಆಗಮಿಸಿದ್ದ ವ್ಯಕ್ತಿಗೆ ಕೊರೋನಾ ನೆಗಟಿವ್ ವರದಿ ಬಂದಿದ್ದು, ಜಿಲ್ಲೆಯಲ್ಲಿ ದಕ್ಷಿಣ ಆಫ್ರಿಕಾ ಮೂಲಕ ರೂಪಾಂತರಿತ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ. ಅವರು ಶುಕ್ರವಾರ ಮೆಗ್ಗಾನ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ದುಬೈಯಿಂದ ಆಗಮಿಸಿದ್ದ ವ್ಯಕ್ತಿಯ ಕೊರೋನಾ ವರದಿ ನೆಗಟಿವ್ ಬಂದಿದ್ದು, ಪ್ರಾಥಮಿಕ … Continued