ಶಾಸಕ ಸಂಗಮೇಶಗೆ ನಿರೀಕ್ಷಣಾ ಜಾಮೀನು

ಶಿವಮೊಗ್ಗ:ಭದ್ರಾವತಿ ಗಲಾಟೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರಿಗೆ ನ್ಯಾಯಾಲಯದಿಂದ ರಿಲೀಫ್‌ ಸಿಕ್ಕಿದೆ. ಫೆ.27 ಮತ್ತು 28 ರಂದು ಭದ್ರಾವತಿಯ ಕನಕ ಮಂಟಪದಲ್ಲಿ ಕಬಡ್ಡಿ ಪಂದ್ಯಾವಳಿ ಅಂತಿಮ ಪಂದ್ಯದ ಬಳಿಕ ನಡೆದ ಗಲಭೆ ಪ್ರಕರಣದಲ್ಲಿ ಶಾಸಕ ಸಂಗಮೇಶ್ವರ್ ಪುತ್ರ ಗಣೇಶ್ ಹಾಗೂ ಸಹೋದರ ಬಿ.ಕೆ ಮೋಹನ್ ವಿರುದ್ಧ ಜಾತಿ ನಿಂದನೆ … Continued

ಶ್ರೀ ಸಿದ್ಧಾರೂಢಮಠ ಒಂದು ಅವಲೋಕನ

(ಶಿವರಾತ್ರಿ ನಿಮಿತ್ತ ಲೇಖನ) ದೇಶದಲ್ಲಿರುವ ಅನೇಕ ಮಹಾತ್ಮರು, ಸಂತರು, ದಾರ್ಶನಿಕರು, ಚಿಂತಕರು ಜನರನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದಾರೆ. ಅವರಲ್ಲಿ ಹುಬ್ಬಳ್ಳಿಯ ಪೂಜ್ಯ ಶ್ರೀ ಸಿದ್ಧಾರೂಢರು ಪ್ರಮುಖರು,ಪೂಜ್ಯರು ಅದ್ವೈತ ಸಾಮ್ರಾಟ, ವೇದಾಂತ ಸಾರ್ವಭೌಮರಾಗಿ, ಎಲ್ಲರ ಅಜ್ಜನಾಗಿ ದಾರಿ ತೋರಿಸುತ್ತಿದ್ದಾರೆ. ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳು ಹುಬ್ಬಳ್ಳಿಯನ್ನು ಪುಣ್ಯಭೂಮಿಯನ್ನಾಗಿ ಪರಿವರ್ತಿಸಿದರು, ಜಾತಿ, ಮತ, ಪಂಥವೆನ್ನದೇ ಎಲ್ಲರ ಕಾಮಧೇನು, ಕಲ್ಪವೃಕ್ಷದಂತಿರುವ ಸಿದ್ಧಾರೂಢ … Continued

ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆ: ಬೊಮ್ಮಾಯಿ

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣ ಕುರಿತು ಕೂಲಂಕಷ ವಿಚಾರಣೆ ನಡೆಸಲು ವಿಶೇಷ ತನಿಖಾ ತಂಡ ರಚನೆ ಮಾಡುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ನನಗೆ ಪತ್ರ ಬರೆದು, ತಮ್ಮ ವಿರುದ್ಧ ರಾಜಕೀಯ ತೇಜೋವಧೆ ಹಾಗೂ ಮಾನಹಾನಿ ಮಾಡುವ ಉದ್ದೇಶವಿದ್ದು, ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿ … Continued

ಹಣಕಾಸು ಇಲಾಖೆ ಅಧಿಕಾರಿಗಳೇ ಸಿಎಂ ಯಡಿಯೂರಪ್ಪಗೆ ಟೋಪಿ ಹಾಕಿದ್ದಾರೆ: ಎಚ್‌.ವಿಶ್ವನಾಥ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ ಬಜೆಟ್‌ನಲ್ಲಿ ಏನೂ ಹೊಸತನವಿಲ್ಲ, ಹಣಕಾಸು ಇಲಾಖೆ ಅಧಿಕಾರಿಗಳೇ ಮುಖ್ಯಮಂತ್ರಿಗೆ ಟೋಪಿ ಹಾಕಿದ್ದಾರೆ ಎಂದು ಬಿಜೆಪಿ ಮುಖಂಡ ಎಚ್‌.ವಿಶ್ವನಾಥ ಹೇಳಿದರು. ಕಳೆದ ೧೦ ವರ್ಷಗಳ ಬಜೆಟ್‌ ನೋಡಿದ್ದೇನೆ. ಇದರಲ್ಲಿ ಏನೂ ಹೊಸ ಯೋಜನೆಗಳಿಲ್ಲ. ಅಂಕಿ-ಅಂಶಗಳನ್ನು ತಿರುಗು-ಮುರುಗು ಮಾಡಿದ್ದಾರೆ. ಹಣಕಾಸು ಖಾತೆ ನಿಭಾಯಿಸಿದ ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹಲವು ಬಾರಿ ಬಜೆಟ್‌ … Continued

ಕೊಡಗು: ನರಹಂತಕ ಹುಲಿ ಕಂಡಲ್ಲಿ ಗುಂಡು ಆದೇಶ

ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ದಾಳಿ ನಡೆಸಿ ನಾಲ್ವರು ಜನರನ್ನು ಕೊಂದ ಹುಲಿಗೆ ಕಂಡಲ್ಲಿ ಗುಂಡು ಹಾರಿಸುವಂತೆ ಸರಕಾರ ಆದೇಶ ಹೊರಡಿಸಿದೆ. ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಬೆಲ್ಲೂರು ಗ್ರಾಮದಲ್ಲಿ ಹುಲಿ ದಾಳಿಗೆ ಬಾಲಕ ರಂಗಸ್ವಾಮಿ (೮) ಮೃತಪಟ್ಟಿದ್ದು, ತೋಟದ ಕಾರ್ಮಿಕ ಗಂಭೀರ ಗಾಯಗೊಂಡ ನಂತರ ಆದೇಶ ಮಾಡಲಾಗಿದೆ. ವಿರಾಜ್‌ಪೇಟೆಯ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಅವರು ವಿಧಾನಸಭೆಯಲ್ಲಿ, … Continued

ಪ್ರೊ. ಯು.ಆರ್‌.ರಾವ್‌ಗೆ ಗೂಗಲ್‌‌ “ಡೂಡಲ್” ಗೌರವ

ಉಪಗ್ರಹ ಮನುಷ್ಯ ಎಂದೇ ಖ್ಯಾತರಾಗಿದ್ದ ಪ್ರೊ ಉಡುಪಿ ರಾಮಚಂದ್ರ ರಾವ್‌ (ಯು.ಆರ್‌.ರಾವ್) ಅವರ ೮೯ನೇ ಜನ್ಮದಿನದ ಪ್ರಯುಕ್ತ ಗೂಗಲ್‌ ವಿಶೇಷ ಡೂಡಲ್‌ ಮೂಲಕ ಬಾಹ್ಯಾಕಾಶ ವಿಜ್ಞಾನಿಯನ್ನು ಗೌರವಿಸಿದೆ. ಪ್ರೊ.ಯು.ಆರ್‌. ರಾವ್‌ ಉಡುಪಿಯ ಅದಮಾರಿನಲ್ಲಿ ಜನಿಸಿದ್ದು, ಅವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ್ದಾರೆ. ೧೯೮೪ರಿಂದ ೧೦ ವರ್ಷಗಳ ಕಾಲ ಇಸ್ರೋ ಮುಖ್ಯಸ್ಥರಾಗಿದ್ದ ಅವರು, ಉಪಗ್ರಹ “ಆರ್ಯಭಟʼ … Continued

ಸಂವಿಧಾನಾತ್ಮಕವಾಗಿ ಕಾನೂನಿನ ಚೌಕಟ್ಟಿನಲ್ಲಿ ಮೀಸಲಾತಿಗೆ ಕ್ರಮ: ಸಚಿವ ಬಸವರಾಜ ಬೊಮ್ಮಾಯಿ

posted in: ರಾಜ್ಯ | 0

ಬೆಂಗಳೂರು: ಎಸ್ ಸಿ, ಎಸ್ ಟಿ, ಲಿಂಗಾಯತ ಪಂಚಮಸಾಲಿ, ಕುರುಬ, ಒಕ್ಕಲಿಗ ಸೇರಿದಂತೆ ಮೀಸಲಾತಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಹಲವು ಸಮುದಾಯಗಳ ಆಶೋತ್ತರಗಳಿಗೆ ಪೂರಕವಾಗಿ ಕಾನೂನಿನ ಚೌಕಟ್ಟಿನಲ್ಲಿ ಸಂವಿಧಾನಾತ್ಮಕವಾಗಿ ಮೀಸಲಾತಿಯನ್ನು ಕಲ್ಪಿಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು. ಬುಧವಾರ ವಿಧಾನಸಭೆಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ನಡೆದ ಪ್ರಸ್ತಾವನೆಗೆ … Continued

ಬಜೆಟ್‌ನಲ್ಲಿ ಮೈಸೂರಿಗೆ ಸಿಕ್ಕಿದ್ದು ಚಿಪ್ಪು ಮಾತ್ರ!: ಕೆಪಿಸಿಸಿ ವಕ್ತಾರ ಲಕ್ಷ್ಮಣ ಟೀಕೆ

ಬಜೆಟ್‌ನಲ್ಲಿ ಮೈಸೂರನ್ನು ಕಡೆಗಣಿಸಲಾಗಿದ್ದು, ಈ ಬಾರಿ ಮೈಸೂರಿಗೆ ಸಿಕ್ಕಿದ್ದು ಚಿಪ್ಪು ಮಾತ್ರ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ ಹೇಳಿದ್ದಾರೆ. ವಿಮಾನ ನಿಲ್ದಾಣ ಹಾಗೂ ರೈಲ್ವೆ ಟರ್ಮಿನಲ್‌ಗೆ ರಾಜ್ಯ ಸರಕಾರದಿಂದ ಹಣ ಬರಲಿದೆ ಎಂದು ಸಂಸದ ಪ್ರತಾಪಸಿಂಹ ಹೇಳಿದ್ದರು, ಆಗ ನಾನು ಬಜೆಟ್‌ನಲ್ಲಿ ಮೈಸೂರಿಗೆ ೧೦೦ ಕೋಟಿ ರೂ. ತರಲಿ ಸಾಕು ಎಂದು ನಾನು ಸವಾಲು ಹಾಕಿದ್ದೆ. … Continued

ನಾನೂ ಇಲ್ಲೇ ಜನಿಸಿದ್ದು: ತನ್ನ ಪಾಲಕರಿಗೆ ಬೈದಾಡಿದವರಿಗೆ ನಟ ಯಶ್ ಉತ್ತರ

ಹಾಸನ: ಹಾಸನ ಜಿಲ್ಲೆ ದುದ್ದ ಸಮೀಪದ ತಿಮ್ಲಾಪುರ ಬಳಿ ನಟ ರಾಕಿಂಗ್ ಸ್ಟಾರ್ ಯಶ್ ಅವರ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಅವರ ತಂದೆ, ತಾಯಿ ಹಾಗೂ ಗ್ರಾಮಸ್ಥರ ನಡುವೆ ಜಗಳವಾಗಿದೆ. ಜಮೀನಿಗೆ ಕೆಲವರು ಅಕ್ರಮವಾಗಿ ಪ್ರವೇಶಿಸಿದ್ದಾರೆನ್ನಲಾಗಿದ್ದು, ಇದನ್ನು ಪ್ರಶ್ನಿಸಿದ ಕೆಲಸ ಮಾಡುವ ಹುಡಗರ ಮೇಲೆ ಹಲ್ಲೆ ಮಾಡಿದ್ದಾರೆ. ಇದಕ್ಕೆ ಆಕ್ಷೇಪಿಸಿದ್ದಕ್ಕೆ ಯಶ್ ಅವರ ತಂದೆ, ತಾಯಿ … Continued

ರಮೇಶ್ ಜಾರಕಿಹೊಳಿ ಪಾಪ ಅಮಾಯಕರು, ರಾಜಕಾರಣಕ್ಕಾಗಿ ಈ ಮಟ್ಟಕ್ಕೆ ಇಳಿಯಬಾರದು:ಎಚ್‌ಡಿಕೆ

ಬೆಂಗಳೂರು: ರಮೇಶ್ ಜಾರಕಿಹೊಳಿ ಪಾಪ ಅಮಾಯಕರಿದ್ದಾರೆ, ರಾಜಕಾರಣಕ್ಕಾಗಿ ಯಾರೂ ಈ ಮಟ್ಟಕ್ಕೆ ಇಳಿಯಬಾರದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12 ಜನ ಮುಂಬೈಗೆ ಹೋಗಿದ್ದರು. ಮುಂಬೈಗೆ ಹೋಗಿ ಆ ಪುಣ್ಯಾತ್ಮರು ಏನು ಮಾಡಿದ್ದಾರೋ? ರಾಜಕಾರಣಕ್ಕಾಗಿ ಯಾರೂ ಈ ಮಟ್ಟಕ್ಕೆ ಇಳಿಯಬಾರದು. ಇಂಥದನ್ನು ಯಾರೂ ಮಾಡಬಾರದು. 6 ಸಚಿವರು ನ್ಯಾಯಾಲಯಕ್ಕೆ ಹೋಗಿದ್ದಾರೆ. … Continued