ಸಿದ್ದಾಪುರ : ನಕಲಿ ಬಂಗಾರದ ನಾಣ್ಯ ನೀಡಿ 10 ಲಕ್ಷ ರೂ. ವಂಚನೆ ; ಅಂತರ ಜಿಲ್ಲಾ ವಂಚಕನನ್ನು ಬಂಧಿಸಿದ ಪೊಲೀಸರು

ಸಿದ್ದಾಪುರ: ಕಡಿಮೆ ಬೆಲೆಗೆ ಅಸಲಿ ಬಂಗಾರ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ  ಹಣ ಲೂಟಿ ಮಾಡುತ್ತಿದ್ದ ಅಂತರ ಜಿಲ್ಲಾ ವಂಚಕನನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಸಿದ್ದಾಪುರ ತಾಲೂಕಿನ ವ್ಯಕ್ತಿಯೊಬ್ಬರಿಗೆ ಈ ಆರೋಪಿಯು ಇದೇ ರೀತಿ ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಗಾರದ ನಾಣ್ಯವನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಕೊಡಿಸುವುದಾಗಿ ಹೇಳಿದ್ದ … Continued

ಸುರಪುರ: ಈಜಲು ಹೋದ ನಾಲ್ವರು ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವು

ಯಾದಗಿರಿ : ಕೃಷಿ ಹೊಂಡದಲ್ಲಿ ಈಜಲು ಹೋದ ಒಂದೇ ಕುಟುಂಬದ ನಾಲ್ವರು ಮಕ್ಕಳು ಮುಳುಗಿ ನೀರು ಪಾಲಾದ  ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶಾಲೆಗೆ ರಜೆ ಇದ್ದ ಕಾರಣ ಕೃಷಿಹೊಂಡದಲ್ಲಿ ಮಕ್ಕಳು ಈಜಲು ಹೋಗಿದ್ದ ವೇಳೆ ದುರಂತ ಸಂಭವಿಸಿದೆ. ಮೃತ ಬಾಲಕರನ್ನು ಕಿರಣ (6), ಬಸಮ್ಮ (11), … Continued

ವೀಡಿಯೊ | ಸಕಲೇಶಪುರ : ಚಪ್ಪಲಿ ಧರಿಸಿ ದೇವಸ್ಥಾನದಲ್ಲಿ ಪ್ರಿ-ವೆಡ್ಡಿಂಗ್ ಶೂಟಿಂಗ್ ಮಾಡಿದ ಆರೋಪ ; ಹೊಡೆದಾಟ

ಹಾಸನ : ಸಕಲೇಶಪುರ ತಾಲ್ಲೂಕಿನ ಪ್ರಸಿದ್ಧ ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ನಡೆದ ಪ್ರಿ-ವೆಡ್ಡಿಂಗ್ ಫೋಟೋಶೂಟ್ ವೇಳೆ ಸ್ಥಳೀಯರು ಮತ್ತು ಫೋಟೋಗ್ರಾಫರ್‌ಗಳ ನಡುವೆ ಜಗಳ ಉಂಟಾಗಿದ್ದು, ಅದು ಮಾರಾಮಾರಿಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸಕಲೇಶಪುರ ತಾಲ್ಲೂಕಿನ ಬೆಟ್ಟದ ಸಾಲಿನಲ್ಲಿರುವ ಈ ದೇವಸ್ಥಾನವು ಪ್ರಿ-ವೆಡ್ಡಿಂಗ್ ಫೋಟೋಶೂಟ್‌ಗಳಿಗೆ ಅತ್ಯಂತ ಜನಪ್ರಿಯ ತಾಣವಾಗಿದೆ. ವರದಿಯ ಪ್ರಕಾರ, … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ ನಾಲ್ಕೈದು ದಿನ ಮಳೆ ಬೀಳುವ ಸಾಧ್ಯತೆ

ಬೆಂಗಳೂರು : ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್‌ 2ರ ವರೆಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಲವು ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣವಿದೆ ಎಂದು ಅದು ಹೇಳಿದೆ.. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮಂಡ್ಯ, ಬೆಂಗಳೂರು ಜಿಲ್ಲೆಗಳ ಕೆಲವಡೆ … Continued

ಎಸ್‌ಎಸ್‌ಎಲ್‌ಸಿ ; ಮಹತ್ವದ ಬದಲಾವಣೆ : ಹಿಂದಿ ಸೇರಿ ತೃತೀಯ ಭಾಷೆಗೆ ಗ್ರೇಡ್‌ ನೀಡಲು ನಿರ್ಧಾರ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ (SSLC Exam) ಸಂಬಂಧಿಸಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಈ ವರ್ಷದಿಂದ ಮೂರನೇ ಭಾಷೆಯ (ಹಿಂದಿ) ವಿಷಯಗಳಿಗೆ ಅಂಕಗಳನ್ನು ಕೈಬಿಟ್ಟು ಗ್ರೇಡ್‌ ನೀಡಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ. 625 ಅಂಕಗಳ ಬದಲು 525 ಅಂಕಗಳು ಮಾತ್ರ ಇರಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ … Continued

ತುಂಗಭದ್ರಾ ನದಿಗೆ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ನೀರುಪಾಲು

ರಾಯಚೂರು : ಆಂಧ್ರ ಪ್ರದೇಶದ ಕೊಸಗಿ ಮಂಡಲ ಕಂದಕೂರು ಬಳಿ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಕರ್ನಾಟಕ ಮೂಲದ ಒಂದೇ ಕುಟುಂಬದ ನಾಲ್ವರು ಮುಳುಗಿ ನೀರುಪಾಲಾದ ಘಟನೆ ಶುಕ್ರವಾರ(ಮಾ.28) ನಡೆದಿದೆ ಎಂದು ವರದಿಯಾಗಿದೆ. ಕರ್ನೂಲು ಜಿಲ್ಲೆಯ ರಾಜೊಳ್ಳಿಬಂಡಾ ಅಣೆಕಟ್ಟಿನ ಹೊಂದಿಕೊಂಡಿರುವ ಕಂದಕೂರು ಬಳಿ ಈ ದುರ್ಘಟನೆ ನಡೆದಿದ್ದು, ಮೃತರನ್ನುರಾಯಚೂರು ​ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದ … Continued

ಮಂಗಳೂರು : ಬೆಳ್ಳಂಬೆಳಿಗ್ಗೆ ರೌಡಿಶೀಟರ್ ಕೊಲೆ

ಮಂಗಳೂರು: ನಗರದ ಹೊರವಲಯದ‌ ತೊಕ್ಕೊಟ್ಟು ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟರನನ್ನು ಕೊಲೆ ಮಾಡಿದ ಘಟನೆ ಶುಕ್ರವಾರ ಬೆಳ್ಳಬೆಳಿಗ್ಗೆ ನಡೆದಿದ್ದು, ತೊಕ್ಕೊಟ್ಟು ಫ್ಲೈ ಓವರ್ ಬ್ರಿಜ್ ಮೇಲೆ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಮೃತನನ್ನು 46 ವರ್ಷದ ರೌಡಿಶೀಟರ್ ಆರಿಫ್ ಯಾನೆ ಟಾಬ್ಲೆಟ್ ಆರಿಫ್ ಎಂದು ಗುರುತಿಸಲಾಗಿದೆ. ಆರಿಫ್ ಯಾನೆ ಟಾಬ್ಲೆಟ್ ಆರಿಫ್, ಮುಳ್ಳುಗುಡ್ಡೆ … Continued

ನಾವು ವಿಐಪಿಗಳು, ಕ್ಯೂನಲ್ಲಿ ನಿಲ್ಲಲು ಸಾಧ್ಯವಿಲ್ಲ”: ಪ್ರತಿ ಶಾಸಕರಿಗೂ 5 ಟಿಕೆಟ್ ನೀಡಿ ; ಶಾಸಕ ಕಾಶಪ್ಪನವರ ಒತ್ತಾಯ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್‌ಸಿಎ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳಿಗಾಗಿ ಪ್ರತಿ ಶಾಸಕರಿಗೆ ತಲಾ ಐದು ಟಿಕೆಟ್‌ಗಳನ್ನು ನೀಡಬೇಕು ಎಂದು ಕಾಂಗ್ರೆಸ್ ಶಾಸಕರೊಬ್ಬರು ಒತ್ತಾಯಿಸಿದ್ದಾರೆ. ಶಾಸಕರು ವಿಐಪಿಗಳಾಗಿದ್ದು, ಅವರು “ಸರತಿ ಸಾಲಿನಲ್ಲಿ ನಿಲ್ಲಲು ಸಾಧ್ಯವಿಲ್ಲ” ಎಂದು ಅವರು ಪ್ರತಿಪಾದಿಸಿದ್ದಾರೆ. ಇದಲ್ಲದೆ, ಶಾಸಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕು ಎಂದು ಹುನಗುಂದ ಶಾಸಕ … Continued

ಕ್ಲಾಸ್​ ರೂಮಿನಲ್ಲೇ ವೈದ್ಯ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿ ಚಪ್ಪಲಿ ಏಟು ತಿಂದ ಪ್ರೊಫೆಸರ್

ಬೆಂಗಳೂರು : ಪ್ರತಿಷ್ಠಿತ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಕ್ಲಾಸ್‌ ರೂಮಿನಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್‌ ಮಾಡಿ, ಬಳಿಕ ಏಟು ತಿಂದ ಘಟನೆ ನೆಲಮಂಗಲ ತಾಲೂಕಿನ ಮೆಡಿಕಲ್ ಕಾಲೇಜಿನಲ್ಲಿ (Medical College) ನಡೆದಿದೆ ಎಂದು ವರದಿಯಾಗಿದೆ.  ಅಬ್ದುಲ್ ಎಂಬ ಸಹಾಯಕ ಪ್ರಾಧ್ಯಾಪಕರು ಪಾಠ ಮಾಡುವ ವೇಳೆ ವಿದ್ಯಾರ್ಥಿನಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದಾರೆ. ತರಗತಿ ನಡೆಯುತ್ತಿದ್ದಾಗಲೇ ವಿದ್ಯಾರ್ಥಿನಿಗೆ (Girl Student) ಚಾಕೊಲೇಟ್ ಕೊಟ್ಟು … Continued

1ನೇ ತರಗತಿ ದಾಖಲಾತಿ ; 6 ವರ್ಷ ಕಡ್ಡಾಯ ವಯೋಮಿತಿಗೆ ವಿನಾಯಿತಿ

ಬೆಂಗಳೂರು : ರಾಜ್ಯದಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಲು ಅಗತ್ಯವಾಗಿರುವ ವಯಸ್ಸಿನ ಬಗ್ಗೆ ಮೂಡಿರುವ ಗೊಂದಲಕ್ಕೆ ಸರ್ಕಾರ ಸದ್ಯಕ್ಕೆ ನಿವಾರಿಸಿದೆ. 1ನೇ ತರಗತಿ ಪ್ರವೇಶಕ್ಕೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮದಲ್ಲಿ ಈ ವರ್ಷವೂ ಸಡಿಲಿಕೆ ಮಾಡುವುದಾಗಿ ಅಧಿವೇಶನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಜೂನ್ 1ಕ್ಕೆ ಮಗುವಿಗೆ 6 ವರ್ಷ ತುಂಬಿರಬೇಕು ಎಂಬ … Continued