ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ಹಡಗು ಈಗ ಭಾರತದತ್ತ: ಅರ್ಧ ದಾರಿಯಲ್ಲೇ ಯು-ಟರ್ನ್ !

ನವದೆಹಲಿ: ಚೀನಾಗೆ ತೆರಳುತ್ತಿದ್ದ ರಷ್ಯಾದ ಕಚ್ಚಾ ತೈಲ ಹೊತ್ತ ಹಡಗುಗಳು ಈಗ ಅರ್ಧ ದಾರಿಯಲ್ಲೇ ಮಾರ್ಗ ಬದಲಿಸಿ ಭಾರತದತ್ತ ಧಾವಿಸುತ್ತಿವೆ. ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಉಂಟಾಗಿರುವ ಜಾಗತಿಕ ತೈಲ ಬಿಕ್ಕಟ್ಟಿನ ನಡುವೆ, ಭಾರತವು ರಷ್ಯಾದಿಂದ ತನ್ನ ತೈಲ ಆಮದನ್ನು ದುಪ್ಪಟ್ಟುಗೊಳಿಸಿರುವುದು ಇದಕ್ಕೆ ಕಾರಣವಾಗಿದೆ. ಮಾರ್ಗ ಬದಲಿಸಿದ ‘ಅಕ್ವಾ ಟೈಟಾನ್’ (Aqua Titan) ಎಂಬ ಹಡಗು ಬಾಲ್ಟಿಕ್ … Continued

ವೀಡಿಯೊ | ರೀಲ್ಸ್‌ ಹುಚ್ಚಿಗೆ ಬಿದ್ದು ತಂದೆಯನ್ನೇ ಮೂಟೆಕಟ್ಟಿ ‘ಕೊರಿಯರ್’ ಮಾಡಲು ಹೋದ ಬೆಂಗಳೂರು ಮಹಿಳೆ : ಮುಂದಾಗಿದ್ದು..?

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ‘ವೈರಲ್’ ಆಗುವ ಹಪಾಹಪಿಗೆ ಬಿದ್ದ ಕುಟುಂಬವೊಂದು, ವಯಸ್ಸಾದ ವ್ಯಕ್ತಿಯನ್ನೇ ಪಾರ್ಸೆಲ್ ಬಾಕ್ಸ್‌ನಲ್ಲಿ ತುರುಕಿ ಕೊರಿಯರ್ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಮಂಗಳವಾರ (ಮಾರ್ಚ್‌ ೧೭) ಮಹಿಳೆ, ಆಕೆಯ ಪತಿ, ಅತ್ತೆ ಮತ್ತು … Continued

ವೀಡಿಯೊಗಳು | ಆಲಿಕಲ್ಲು ಮಳೆಯ ಅಬ್ಬರಕ್ಕೆ ಹಿಮಚ್ಛಾದಿತ ಕಾಶ್ಮೀರದಂತೆ ಕಂಡ ಕಲಘಟಗಿ…!

ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ಹಲವಡೆ ಮಂಗಳವಾರ ಅಪರಾಹ್ನದ ನಂತರ ಸುರಿದ ಭೀಕರ ಆಲಿಕಲ್ಲು ಮಳೆಯಿಂದಾಗಿ ಸಂಪೂರ್ಣವಾಗಿ ‘ಹಿಮಲೋಕ’ವಾಗಿ ಪರಿವರ್ತನೆಗೊಂಡಿತ್ತು. ಮಧ್ಯಾಹ್ನದ ನಂತರ ಹವಾಮಾನ ಬದಲಾಗಿದ್ದು, ಕಲಘಟಗಿ ಪಟ್ಟಣ, ಬೆಲವಂತರ, ಮಾಚಾಪುರ, ಸೋಮನಕೊಪ್ಪ ಮೊದಲಾದ ಗ್ರಾಮಗಳಲ್ಲಿ ಆರಂಭದಲ್ಲಿ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ ನೋಡನೋಡುತ್ತಿದ್ದಂತೆ ಭೀಕರ ಆಲಿಕಲ್ಲು ಮಳೆಯ ರೂಪ ತಾಳಿತು. ಮಧ್ಯಾಹ್ನ 3ರ ನಂತರ ಆಲಿಕಲ್ಲು … Continued

ಭಾರತದ ನೌಕಾಪಡೆಗೆ ಮತ್ತಷ್ಟು ಬಲ: ಕಾರವಾರದಲ್ಲಿ ‘ಕಲ್ವರಿ’ ಜಲಾಂತರ್ಗಾಮಿಗಳ ಅತ್ಯಾಧುನಿಕ ನಿರ್ವಹಣಾ ಘಟಕ ಉದ್ಘಾಟನೆ

ಕಾರವಾರ : ಕಲ್ವರಿ ದರ್ಜೆಯ (Kalvari-class) ಜಲಾಂತರ್ಗಾಮಿ ನೌಕೆಗಳಲ್ಲಿ ಅಳವಡಿಸಲಾಗಿರುವ ಅತ್ಯಂತ ನಿರ್ಣಾಯಕ ‘ನ್ಯೂಮ್ಯಾಟಿಕ್’ (Pneumatic) ವ್ಯವಸ್ಥೆಗಳ ಪರೀಕ್ಷೆ, ನಿರ್ವಹಣೆ ಮತ್ತು ದುರಸ್ತಿಗಾಗಿ ದೇಶದ ಮೊದಲ ವಿಶೇಷ ಘಟಕವನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾ ನೆಲೆಯಲ್ಲಿ ಉದ್ಘಾಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಕಾರವಾರದ ಕದಂಬ ನೌಕಾ ನೆಲಯ ತಾಂತ್ರಿಕ ವರ್ಕ್‌ಶಾಪ್‌ನಲ್ಲಿ ನಿಯೋಜಿಸಲಾಗಿದೆ … Continued

ಮಲೆನಾಡಿನ ಪಾರಂಪರಿಕ ಆಹಾರ ಪದ್ಧತಿ ಉಳಿಸಲು ‘ಎಥ್ನಿಕ್‌ ಫುಡ್‌ ಪ್ರವಾಸೋದ್ಯಮ’ ಇಂದಿನ ಅಗತ್ಯ

ಶಿರಸಿ : ಮಲೆನಾಡಿನ ಪಾರಂಪರಿಕ ಆಹಾರ ಪದ್ಧತಿ ನಶಿಸುತ್ತಿರುವ ಈ ಸಂದರ್ಭದಲ್ಲಿ ಎಥ್ನಿಕ್‌ ಫುಡ್‌ ಪ್ರವಾಸೋದ್ಯಮ (ethnic Tourism) ಪ್ರಚುರಪಡಿಸುವ ಮೂಲಕ ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ ಎಂದು ಕದಂಬ ಮಾರ್ಕೆಟಿಂಗ್ ಸಹಕಾರಿ ಸಂಘದ ಸಲಹೆಗಾರ ವಿಶ್ವೇಶ್ವರ ಭಟ್ ಕೋಟೆಮನೆ ಹೇಳಿದ್ದಾರೆ. ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ತೋಟಗಾರಿಕಾ ಇಲಾಖೆ ಸಭಾಭವನದಲ್ಲಿ ಸೋಮವಾರ … Continued

ವೀಡಿಯೊ | ಶಿರಸಿ : ಬಾವಿಗೆ ಬಿದ್ದ 2 ವರ್ಷದ ಮಗು; ಪಂಪ್‌ಸೆಟ್‌ ಪೈಪು ಹಿಡಿಕೊಂಡಿದ್ದ ಬಾಲೆ; ಕಾಪಾಡಿದ ಆಪದ್ಬಾಂಧವ

ಶಿರಸಿ: ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದ ಎರಡು ವರ್ಷದ ಕಂದಮ್ಮ ಪವಾಡಸದೃಶರೀತಿಯಲ್ಲಿ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರಬಾ ನಗರದಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. ವ್ಯಕ್ತಿಯೊಬ್ಬರು ತೋರಿದ ಸಮಯ ಪ್ರಜ್ಞೆಯಿಂದ ಮಗು ಅಪಾಯದಿಂದ ಪಾರಾಗಿದೆ. ಪ್ರಾಣದ ಹಂಗು ತೊರೆದು ಬಾವಿಗಿಳಿದ ಪಯ್ಯು ಚವಟಿ ಎಂಬವರು ಮಗುವನ್ನು ಮೇಲಕ್ಕೆತ್ತುವ ಮೂಲಕ ಮಗುವಿಗೆ ಮರುಜನ್ಮ … Continued

ಕನ್ನಡ ಸಾಹಿತಿ ಅಮರೇಶ ನುಗಡೋಣಿ ಸೇರಿದಂತೆ 24 ಲೇಖಕರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

ನವದೆಹಲಿ : ಕನ್ನಡ ಬರಹಗಾರ ಅಮರೇಶ ನುಗಡೋಣಿ (Amresh Nugadoni),  ಇಂಗ್ಲಿಷ್ ಲೇಖಕಿ ಮತ್ತು ಮಾಜಿ ರಾಯಭಾರಿ ನವತೇಜ್ ಸರ್ನಾ ಮತ್ತು ಹಿಂದಿ ಬರಹಗಾರ್ತಿ ಮಮತಾ ಕಾಲಿಯಾ ಸೇರಿದಂತೆ  24 ಭಾಷೆಗಳ ಲೇಖಕರಿಗೆ  2025 ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಅಕಾಡೆಮಿ ಆಫ್‌ ಲೆಟರ್ಸ್‌ (National Academy of Letters) ಸೋಮವಾರ ಪ್ರಕಟಿಸಿದೆ. ಅಮರೇಶ … Continued

ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ

ಬೆಂಗಳೂರು : ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ತಾಪಮಾನ (Karnataka Weather) ಹೆಚ್ಚಾಗಿ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಈ ನಡುವೆ ರಾಜ್ಯದ ಹಲವೆಡೆ ಮಳೆಯಾದ ವರದಿಯಾಗಿದೆ. ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ, ಕೊಡಗು, ಬೀದರ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಕೆಲವಡೆ ಭಾನುವಾರ ಕೆಲ ಹೊತ್ತು ಗುಡುಗು ಸಹಿತ ಮಳೆ ಸುರಿದಿದೆ. ಉತ್ತರ … Continued

ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆ ದಿನಾಂಕ ಪ್ರಕಟ

ಬೆಂಗಳೂರು: ಕರ್ನಾಟಕದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಏಪ್ರಿಲ್ 9ರಂದು ಮತದಾನ ನಡೆಯಲಿದೆ. ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ಸುದ್ದಿಗೋಷ್ಠಿ ವೇಳೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಈ ಎರಡೂ ಕ್ಷೇತ್ರಗಳ ಉಪಚುನಾವಣೆಯ ದಿನಾಂಕ ಘೋಷಣೆ ಮಾಡಿದ್ದಾರೆ. ಬಾಗಲಕೋಟೆ ಕ್ಷೇತ್ರ ಎಚ್​.ವೈ.ಮೇಟಿ ನಿಧನದಿಂದ ತೆರವಾಗಿದ್ದರೆ, ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ … Continued

ಚಳ್ಳಕೆರೆ ಬಳಿ ಅಪಘಾತ; ಮೂವರು ರಿಸರ್ವ್ ಸಬ್ ಇನ್‌ಸ್ಪೆಕ್ಟರ್‌ಗಳು ಸಾವು

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ಹೆಗ್ಗರೆ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ರಿಸರ್ವ್ ಸಬ್ ಇನ್‌ಸ್ಪೆಕ್ಟರ್‌ಗಳು ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ. ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಲಾರಿಯ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು … Continued