ಹೊನ್ನಾವರ : ಏರ್‌ಗನ್ ನಿಂದ ಸಿಡಿದ ಗುಂಡು ತಗುಲಿ ಯುವಕ ಸಾವು

ಹೊನ್ನಾವರ : ಕೈಯಲ್ಲಿದ್ದ ಏರ್‌ಗನ್ ನಿಂದ ಆಕಸ್ಮಿಕವಾಗಿ ಸಿಡಿದ ಗುಂಡು ತಗುಲಿ ಯುವಕನೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪ ಸಮೀಪದ ಹಾಡಗೇರಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತನನ್ನು ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ (19) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ಮಂಗಗಳನ್ನು ಓಡಿಸಲು ಕೈಯಲ್ಲಿ ಏರ್‌ಗನ್ ಹಿಡಿದು … Continued

ವೀಡಿಯೊ..| ಕುಮಟಾ: ಡಾಲ್ಫಿನ್ ಕಳೆಬರ ಪತ್ತೆ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯ ಕಡ್ಲೆಯ ಅರಬ್ಬೀ ಸಮುದ್ರ ತೀರದಲ್ಲಿ ಡಾಲ್ಫಿನ್ ಕಳೆಬರ ಪತ್ತೆಯಾಗಿದೆ. ಸುಮಾರು 5 ಅಡಿ ಉದ್ದವಿರುವ ಡಾಲ್ಫಿನ್ ಕೊಳೆತ ಸ್ಥಿತಿಯಲ್ಲಿ ತೀರಕ್ಕೆ ಬಂದು ಬಿದ್ದಿದೆ. ಸಾಮಾನ್ಯವಾಗಿ ಹತ್ತರಿಂದ 15 ನಾಟಿಕಲ್ ಮೈಲು ಒಳಗೆ ಇದು ವಾಸಿಸುತ್ತಿದ್ದು ಸಮುದ್ರದ ನೀರಿನ ಇಳಿತದ ಸಂದರ್ಭದಲ್ಲಿ ಆಳ ಸಮುದ್ರಕ್ಕೆ ಹೋದ ಸಂದರ್ಭದಲ್ಲಿ … Continued

ವೀಡಿಯೊಗಳು | ಕಾರವಾರ : ಶಾಲಾ ಕೊಠಡಿಯೊಳಗೆ ಬಂದ ಕಾಳಿಂಗ ಸರ್ಪ…!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಗುಡ್ಡಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ತರಗತಿ ಕೊಠಡಿಯಲ್ಲಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತರಗತಿಯಲ್ಲಿ ಬೃಹತ್‌ ಹಾವಿನ ಆರ್ಭಟಕ್ಕೆ  ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ತಕ್ಷಣ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ಕಳುಹಿಸಿದ … Continued

ಬೀರೂರು : ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಪುತ್ರಿಯರು

ಚಿಕ್ಕಮಗಳೂರು :   ಜಿಲ್ಲೆಯ ಬೀರೂರಿನಲ್ಲಿ ಇಬ್ಬರು ಹೆಣ್ಣುಮಕ್ಕಳು ತಮ್ಮ ತಂದೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ ಎಂದು ವರದಿಯಾಗಿದೆ. ಮನೆಯಲ್ಲಿ ಹಿರಿಯರು ಮೃತಪಟ್ಟರೆ ಅಂತ್ಯ ಸಂಸ್ಕಾರ (funeral) ಹಾಗೂ ದೇಹಕ್ಕೆ ಅಗ್ನಿಸ್ಪರ್ಶ ಮಾಡುವ ವಿಧಿ-ವಿಧಾನಗಳನ್ನು ಸಾಮಾನ್ಯವಾಗಿ ಗಂಡು ಮಕ್ಕಳೇ ಮಾಡುವುದು ವಾಡಿಕೆಯಾಗಿ ಬಂದಿದೆ. ಆದರೆ ಇಲ್ಲಿ ಮೃತರ ಇಬ್ಬರು ಪುತ್ರಿಯರೇ ತಮ್ಮ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಬೀರೂರಿನಲ್ಲಿ … Continued

ವೀಡಿಯೊಗಳು..| ಕುಮಟಾ : ಹೊಲನಗದ್ದೆ-ಕಡ್ಲೆ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯ ಕಡ್ಲೆ ಗುಡ್ಡದ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಸಂಜೆ ಬೆಂಕಿ ವ್ಯಾಪಿಸಿದ್ದು  ಸಸ್ಯ ಸಂಕುಲಗಳು ಬೆಂಕಿಗೆ ಆಹುತಿಯಾಗಿದೆ. ಈ ಘಟನೆ ಶುಕ್ರವಾರ ಅಪರಾಹ್ನದ ಸುಮಾರಿಗೆ ನಡೆದಿದೆ ಎಂದು ಹೇಳಲಾಗಿದೆ. ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಿರುವ ಕಡ್ಲೆ ಗುಡ್ಡದಲ್ಲಿ ವ್ಯಾಪಿಸಿರುವ ಬೆಂಕಿ ನಂದಿಸುವುದು ಸುಲಭವಲ್ಲ. ಅರಬ್ಬೀ ಸಮುದ್ರದ ಪಶ್ಚಿಮ … Continued

ಇರಾನ್‌ ಯುದ್ಧದ ನಡುವೆಯೂ ಕಾರವಾರಕ್ಕೆ ಬಂದ ಯುಎಇ ಹಡಗು

ಕಾರವಾರ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮುಚ್ಚುವುದಾಗಿ ಇರಾನ್ ನೀಡಿರುವ ಎಚ್ಚರಿಕೆಯಿಂದಾಗಿ ಗಲ್ಫ್ ರಾಷ್ಟ್ರಗಳಲ್ಲಿ ಹಡಗು ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗಿದೆ. ಈ ಆತಂಕದ ನಡುವೆಯೇ, ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ (UAE) ಡಾಂಬರು ಹೊತ್ತ ಸರಕು ನೌಕೆ ಕಾರವಾರ ವಾಣಿಜ್ಯ ಬಂದರಿಗೆ ಯಶಸ್ವಿಯಾಗಿ ಬಂದು ತಲುಪಿದೆ ಎಂದು ವರದಿಯಾಗಿದೆ. … Continued

ಶಿರಸಿ: ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಶಿರಸಿ: ಪರೀಕ್ಷೆಯ ಸಮಯದಲ್ಲಿ ಮೊಬೈಲ್ ವ್ಯಾಮೋಹ ಬಿಟ್ಟು ಓದಿನ ಕಡೆ ಗಮನಹರಿಸುವಂತೆ ಪೋಷಕರು ಹೇಳಿದ್ದಕ್ಕೆ ಮನನೊಂದ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಶಿರಸಿ ನಗರದ ಗಣೇಶನಗರದ 15 ವರ್ಷದ ಶುಭಂ ನಾಯ್ಕ ಎಂಬಾತ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು … Continued

ಹಳೆಯ ಸಂಭಾಷಣೆಯ ಆಡಿಯೋ ಲೀಕ್: ಕಾನೂನು ಹೋರಾಟದ ಎಚ್ಚರಿಕೆ ನೀಡಿದ ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಕುರಿತು ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದು, ಹಳೆಯ ಸಂಭಾಷಣೆಯನ್ನು ಈಗ ಹರಿಬಿಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನು ತೆಗೆದುಹಾಕದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಈ ವರ್ಷದ ಫೆಬ್ರವರಿ 26 ರಂದು … Continued

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜಗೆ ಜಾಮೀನು

ಬೆಂಗಳೂರು:  ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ ಅವರಿಗೆ  ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜಾಮೀನು ಕೋರಿ ಭೈರತಿ ಬಸವರಾಜ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂತೋಷ ಗಜಾನನ ಭಟ್ ಅವರು, ಎರಡು ಲಕ್ಷ ರೂಪಾಯಿ ಬಾಂಡ್ ಮತ್ತು ಅಷ್ಟೇ ಮೊತ್ತದ ಇಬ್ಬರ ಶ್ಯೂರಿಟಿ ಒದಗಿಸಬೇಕು, … Continued

ಹೊನ್ನಾವರ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ದ ಬೃಹತ್ ಪ್ರತಿಭಟನಾ ಸಮಾವೇಶ

ಹೊನ್ನಾವರ  :  ನದಿ ತಾನು ಹರಿಯುವ ದಿಕ್ಕಿನ ವಿರುದ್ಧ ಹರಿದರೆ ಅದು ನಾಶಕ್ಕೆ ಮುನ್ನುಡಿ. ನದಿಯ ನೀರನ್ನು ಸುರಂಗ‌ ಕೊರೆದು ಹಿಂದಕ್ಕೆ ಒಯ್ಯುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬೇಡ. ಯೋಜನೆ ನಿಲ್ಲಿಸಲು ಎಲ್ಲರೂ ಒಂದಾಗಬೇಕು. ಎಲ್ಲರೂ ಸೇರಿ ಒಗ್ಗಟ್ಟಿನಲ್ಲಿ ಹೋರಾಟ ಮಾಡೋಣ ಎಂದು ನುಡಿದರು. ಎಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ  … Continued