ವಿಜಯಪುರ: ತಾಂತ್ರಿಕ ದೋಷದಿಂದ ಜಮೀನಿಗೆ ಅಪ್ಪಳಿಸಿದ ಖಾಸಗಿ ತರಬೇತಿ ವಿಮಾನ ; ಇಬ್ಬರಿಗೆ ಗಾಯ

ವಿಜಯಪುರ: ತಾಂತ್ರಿಕ ದೋಷದಿಂದ ತರಬೇತಿ ವಿಮಾನ ತುರ್ತು ಭೂಸಮ್ಮತ; ಇಬ್ಬರು ಪೈಲಟ್‌ಗಳು ಸುರಕ್ಷಿತ ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದ ಬಳಿ ಭಾನುವಾರ (ಫೆಬ್ರವರಿ 8) ರೆಡ್‌ಬರ್ಡ್ ಏವಿಯೇಷನ್ ಸಂಸ್ಥೆಗೆ ಸೇರಿದ ತರಬೇತಿ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ನೆಲಕ್ಕೆ ಅಪ್ಪಳಿಸಿದೆ (Crash-land). ಅದೃಷ್ಟವಶಾತ್ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಲಬುರಗಿಯಿಂದ ಬೆಳಗಾವಿಗೆ ತರಬೇತಿ … Continued

ನಮ್ಮ ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ : ಬಿಎಂಆರ್‌ಸಿಎಲ್

ಬೆಂಗಳೂರು: ಸಾರ್ವಜನಿಕರ ತೀವ್ರ ಆಕ್ರೋಶ ಮತ್ತು ರಾಜಕೀಯ ಪಕ್ಷಗಳ ನಡುವಿನ ಆರೋಪ-ಪ್ರತ್ಯಾರೋಪಗಳ ಹಿನ್ನೆಲೆಯಲ್ಲಿ, ಫೆಬ್ರವರಿ 5 ರಂದು ಘೋಷಿಸಲಾಗಿದ್ದ ವಾರ್ಷಿಕ ಪ್ರಯಾಣ ದರ ಹೆಚ್ಚಳವನ್ನು ಜಾರಿಗೆ ತರದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಡೆಹಿಡಿದಿದೆ. ಫೆಬ್ರವರಿ 9ರಿಂದ (ಸೋಮವಾರ) ಜಾರಿಗೆ ಬರಬೇಕಿದ್ದ ಈ ನಿರ್ಧಾರವನ್ನು ಮಂಡಳಿಯ ಮರುಪರಿಶೀಲನೆಗಾಗಿ ಅಮಾನತ್ತಿನಲ್ಲಿಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ. … Continued

ತೆಕ್ಕಲಕೋಟೆ ಬಳಿ ಉತ್ಖನನದ ವೇಳೆ ಸುಮಾರು 5,000 ವರ್ಷಗಳ ಹಿಂದಿನ ಮಾನವನ ಅಸ್ಥಿಪಂಜರ ಪತ್ತೆ

ಬಳ್ಳಾರಿ : ಜಿಲ್ಲೆಯ ತೆಕ್ಕಲಕೋಟೆಯ ‘ಗೌಡ್ರ ಮೂಲೆ’ ಬೆಟ್ಟದಲ್ಲಿ ಸುಮಾರು 5,000 ವರ್ಷಗಳ ಹಿಂದಿನ ನವಶಿಲಾಯುಗದ ಮಾನವನ ಅಸ್ಥಿಪಂಜರ ಪತ್ತೆಯಾಗಿದೆ. ಅಮೆರಿಕಾದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ತಂಡವು ಉತ್ಖನನದ ನಡೆಸುತ್ತಿದ್ದಾಗ, 5.5 ಅಡಿ ಉದ್ದದ ಅಸ್ಥಿಪಂಜರದೊಂದಿಗೆ ಶಿಲಾಯುಧಗಳು ಮತ್ತು ಮಡಕೆಗಳ ಕುರುಹುಗಳು ಉತ್ಖನನದ ವೇಳೆ 5.5 ಅಡಿ ಉದ್ದದ ಅಸ್ಥಿಪಂಜರ ಪತ್ತೆಯಾಗಿದೆ.  ಶವ ಸಂಸ್ಕಾರದ ವೇಳೆ ಕಲ್ಲುಗಳನ್ನು … Continued

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 3 ಕೋಟಿ. ರೂ ಮೌಲ್ಯದ ಗಾಂಜಾ ಪತ್ತೆ ; ಮೂವರ ಬಂಧನ

ಬೆಂಗಳೂರು : ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 2.97 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಥಾಯ್ಲೆಂಡ್‌ ಹಾಗೂ ಮಲೇಶಿಯಾದಿಂದ ಆಗಮಿಸಿದ್ದ ಮೂವರು ಪ್ರಯಾಣಿಕರ ಲಗೇಜ್ ಬ್ಯಾಗ್‌ಗಳನ್ನು ವಲಸೆ … Continued

ಶಿರಸಿ ರೋಟರಿಗೆ 8 ಉತ್ಕೃಷ್ಟ ಪ್ರಶಸ್ತಿಗಳು

ಶಿರಸಿ: 2025-26ನೇ ಸಾಲಿಗೆ ಶಿರಸಿ ರೋಟರಿಯ ಪ್ರಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಖ್ಯಾತ ಪೆಥಾಲಾಜಿಸ್ಟ್ ಮತ್ತು ರಕ್ತನಿಧಿ ಅಧಿಕಾರಿ ಡಾ. ಸುಮನ್ ಹೆಗಡೆಗೆ ಲಭಿಸಿದ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ ಸೇರಿದಂತೆ ಒಟ್ಟೂ 8 ಉತ್ಕೃಷ್ಟ ಪ್ರಶಸ್ತಿಗಳನ್ನು ಶಿರಸಿ ರೋಟರಿ ಬಾಚಿಕೊಂಡಿದೆ. ಇದು ಶಿರಸಿ ರೋಟರಿಯ ಎಲ್ಲಾ ಸದಸ್ಯರ ಅಮೂಲ್ಯ ಸಹಕಾರ, ಮಾರ್ಗದರ್ಶನ ಮತ್ತು ಸೇವಾಭಾವನೆಯಿಂದ … Continued

ಬೆಂಗಳೂರು | ನೆಲಮಂಗಲದ ಬಳಿ ಹೊತ್ತಿ ಉರಿದ ಖಾಸಗಿ ಬಸ್‌

ಬೆಂಗಳೂರು: ತುಮಕೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಖಾಸಗಿ ಬಸ್ಸೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಶುಕ್ರವಾರ ಬೆಳಗಿನ ಜಾವ ನೆಲಮಂಗಲದ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ. ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ಖಾಸಗಿ ಬಸ್, ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಸಮೀಪ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎಂದು … Continued

ಬೆಂಗಳೂರು : ಕದಿಯಲು ಹೋಗಿ ಸಿಕ್ಕಿಬಿದ್ದ ನಂತ್ರ ತಾನು ಕಳ್ಳತನಕ್ಕೆ ಯತ್ನಿಸಿದ ಮನೆಯವರ ವಿರುದ್ಧವೇ ದೂರು ನೀಡಿದ ಕಳ್ಳ…!

ಬೆಂಗಳೂರು: ಬೆಂಗಳೂರು ಬೀದಿಗಳಲ್ಲಿ ಪ್ರತಿದಿನ ಒಂದಲ್ಲ ಒಂದು ವಿಚಿತ್ರ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಆದರೆ, ಮನೆಯೊಂದಕ್ಕೆ ಕನ್ನ ಹಾಕಲು ಹೋದ ಕಳ್ಳನೊಬ್ಬ, ಸಾರ್ವಜನಿಕರಿಂದ ಏಟು ತಿಂದ ಮೇಲೆ ಸ್ವತಃ ಪೊಲೀಸರ ಬಳಿ ಹೋಗಿ ದೂರು ನೀಡಿದ್ದಾನೆ ಎಂದು ವರದಿಯಾಗಿದೆ.  ವಿಚಿತ್ರವೆಂದರೆ ತಾನು ದರೋಡೆಗೆ ಯತ್ನಿಸುವಾಗ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ತಾನು ಕಳ್ಳತನಕ್ಕೆ … Continued

ಅದೃಷ್ಟ ಅಂದ್ರೆ ಇದಪ್ಪ..: ಅಬುಧಾಬಿ ಬಿಗ್ ಟಿಕೆಟ್ ಲಾಟರಿಯಲ್ಲಿ ₹49 ಕೋಟಿ ಬಹುಮಾನ ಗೆದ್ದ ಉಡುಪಿ ಯುವಕ…!

ಉಡುಪಿ: ಕರ್ನಾಟಕದ ಕರಾವಳಿಯ ಯುವಕನೊಬ್ಬನಿಗೆ ರಾತ್ರೋರಾತ್ರಿ ಅದೃಷ್ಟ ಲಕ್ಷ್ಮಿ ಒಲಿದಿದ್ದಾಳೆ. ಯುಎಇಯ ಪ್ರತಿಷ್ಠಿತ ‘ಬಿಗ್ ಟಿಕೆಟ್’ (Big Ticket) ಲಕ್ಕಿ ಡ್ರಾನಲ್ಲಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಮಟ್ಟು ನಿವಾಸಿ ಶಂತನು ಶೆಟ್ಟಿಗಾರ್ ಅವರು ಬರೋಬ್ಬರಿ 20 ಮಿಲಿಯನ್ ದಿರ್ಹಾಮ್ (ಅಂದಾಜು 49 ಕೋಟಿ ರೂಪಾಯಿ) ಬಹುಮಾನ ಗೆದ್ದಿದ್ದಾರೆ. ಪ್ರಸ್ತುತ ಓಮನ್‌ನ ರಿಟೇಲ್ ವಲಯದಲ್ಲಿ … Continued

57ನೇ ವಯಸ್ಸಿನಲ್ಲಿ ರಾಜ್ಯಮಟ್ಟದ ಶೂಟಿಂಗ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ನಟ ಜಗ್ಗೇಶ ಪತ್ನಿ…!

 ಬೆಂಗಳೂರು : ‘ವಯಸ್ಸು ಕೇವಲ ಸಂಖ್ಯೆಯಷ್ಟೇ ಹೊರತು ಸಾಧನೆಗೆ ಅಲ್ಲ’ ಎಂಬುದನ್ನು ಖ್ಯಾತ ನಟ ಜಗ್ಗೇಶ ಪತ್ನಿ ಹಾಗೂ ಆಹಾರ ತಜ್ಞೆಯೂ  ಪರಿಮಳಾ ಜಗ್ಗೇಶ ಅವರು ಸಾಬೀತು ಪಡಿಸಿದ್ದಾರೆ. ಅವರು ತಮ್ಮ  57  ವಯಸ್ಸಿನಲ್ಲಿ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಶೂಟಿಂಗ್ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ (KSRA) ವತಿಯಿಂದ … Continued

ಸಾಗರ : ಮಾರಿಕಾಂಬೆ ದರ್ಶನದ ವೇಳೆ ಕಾಗೋಡು ತಿಮ್ಮಪ್ಪ ಅಸ್ವಸ್ಥ

ಶಿವಮೊಗ್ಗ : ಜಿಲ್ಲೆಯ ಸಾಗರ ಮಾರಿಕಾಂಬ ದೇವಿ ಜಾತ್ರೆ ಮಂಗಳವಾರದಿಂದ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ದೇವಿಯ ದರ್ಶನಕ್ಕೆ ತೆರಳಿದ್ದ  ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ (Kagodu Thimmappa) ಅವರು ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಮಾರಿಕಾಂಬ ದೇವಿಯ ದರ್ಶನಕ್ಕೆ ತೆರಳಿದ್ದ ವೇಳೆ ಅಸ್ವಸ್ಥತೆಯಿಂದಾಗಿ ಕುಸಿದು ಬಿದ್ದಿದ್ದಾರೆ ಎಂದು ಹೇಳಲಾಗಿದೆ.. … Continued