ಶಾಸಕ ನೆಹರು ಓಲೆಕಾರ ವಿರುದ್ಧದ ದೋಷಿ ಆದೇಶಕ್ಕೆ ಹೈಕೋರ್ಟ್‌ ತಡೆ; ಚುನಾವಣಾ ಹಾದಿ ಸುಗಮ

ಬೆಂಗಳೂರು: ಸ್ವಜನ ಪಕ್ಷಪಾತ ಮತ್ತು ಕ್ರಿಮಿನಲ್‌ ವಂಚನೆ ಪ್ರಕರಣದಲ್ಲಿ ಬಿಜೆಪಿಯ ಹಾವೇರಿ ಶಾಸಕ ನೆಹರು ಓಲೆಕಾರ ಅವರನ್ನು ದೋಷಿ ಎಂದು ತೀರ್ಮಾನಿಸಿದ್ದ ವಿಶೇಷ ನ್ಯಾಯಾಲಯದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆ ನೀಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಧಿಸಿರುವ ಎರಡು ವರ್ಷಗಳ ಶಿಕ್ಷೆ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ಓಲೆಕಾರ ಅವರನ್ನು ಸಲ್ಲಿಸಿದ್ದ ಮಧ್ಯಂತರ … Continued

ಮಗನ ಮದುವೆಗೆ ಪ್ರಧಾನಿ ಮೋದಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ ನೀಡಿದ ಸುಮಲತಾ ಅಂಬರೀಷ

ಬೆಂಗಳೂರು: ತಮ್ಮ ಪುತ್ರ ಅಭಿಷೇಕ ಅಂಬರೀಷ್‌ ಜೊತೆ ತೆರಳಿ ಇಂದು, ಬುಧವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಸುಮಲತಾ ಅಂಬರೀಷ ಅವರು ತಮ್ಮ ಮಗನ ಮದುವೆ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಅಭಿಷೇಕ ಅಂಬರೀಷ ಅವರು ತನ್ನ ಬಾಲ್ಯದ ಗೆಳತಿ ಅವಿವಾ ಬಿದ್ದಪ್ಪ ಜೊತೆ ಕೆಲವೇ ದಿನಗಳಲ್ಲಿ ವೈವಾಹಿಕಿ ಜೀವನಕ್ಕೆ … Continued

ಹೊನ್ನಾವರ: ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

ಹೊನ್ನಾವರ: ಮನೆಯ ಕೋಣೆಯಲ್ಲಿ ಪತಿ-ಪತ್ನಿ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಬೈಲಗದ್ದೆ ಸಮೀಪ ವರದಿಯಾಗಿದೆ. ಮೃತರನ್ನು ವೆಂಕ್ಟ ತಿಮ್ಮಪ್ಪ ನಾಯ್ಕ (65) ಹಾಗೂ ಗೋಪಿ ನಾಯ್ಕ (60) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಡುಗೆ ಕೋನೆಯ  ಸೀಲಿಂಗ್ ಹುಕ್ಕಿಗೆ ಸೀರೆಯಿಂದ ಕುತ್ತಿಗೆಗೆ ನೇಣು … Continued

ಸಿಎಂ ಬೊಮ್ಮಾಯಿಗೆ ನಟ ಸುದೀಪ್​ ಬೆಂಬಲ: ಮೋದಿ ಮುಖ ತೋರಿಸಿದರೂ ಓಟು ಗಿಟ್ಟುವುದಿಲ್ಲ ಎಂದು ಕಾಂಗ್ರೆಸ್‌ ವ್ಯಂಗ್ಯ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಿಚ್ಚ ಸುದೀಪ್ ಅವರನ್ನು ತನ್ನ ಸ್ಟಾರ್ ಪ್ರಚಾರಕ ಎಂದು ಬಿಜೆಪಿ ಘೋಷಿಸಿದ ಕೆಲವೇ ಗಂಟೆಗಳ ನಂತರ ಕಾಂಗ್ರೆಸ್ ಸಂಸದ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಯಾರನ್ನು ಬೆಂಬಲಿಸಬೇಕು ಎಂಬುದನ್ನು ಆಯ್ಕೆ ಮಾಡಲು ನಟ ಸುದೀಪ್‌ ಅವರು ಸ್ವತಂತ್ರರು ಎಂದು ಹೇಳಿದ್ದಾರೆ. ಆದರೆ ಕರ್ನಾಟಕದ ಭವಿಷ್ಯವನ್ನು ನಿರ್ಧರಿಸುವವರು … Continued

ತಲೆಮರೆಸಿಕೊಂಡಿದ್ದ ಪುನೀತ್​ ಕೆರೆಹಳ್ಳಿ ರಾಜಸ್ಥಾನದಲ್ಲಿ ಬಂಧನ

ಬೆಂಗಳೂರು : ಇದ್ರೀಷ್ ಪಾಷಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ ಕೆರೆಹಳ್ಳಿ ಹಾಗೂ ಅವರ ನಾಲ್ವರು ಸಹಚರರನ್ನು ರಾಮನಗರ ಪೊಲೀಸರು ರಾಜಸ್ಥಾನದಲ್ಲಿ ಬುಧವಾರ ಬಂಧಿಸಿದ್ದಾರೆ. ಮಾರ್ಚ್ 31 ರಂದು ಕನಕಪುರದ ತಾಲೂಕಿನ ಸಾತನೂರು ಬಳಿ ಅಕ್ರಮ ಗೋ ಸಾಗಣಿಕೆ ಈ ವೇಳೆ ವ್ಯಕ್ತಿಯೊಬ್ಬರು ಅನುಮಾನಸ್ಪಾದವಾಗಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್​ … Continued

ನಟ ‘ಕಿಚ್ಚ’ ಸುದೀಪ್‌ಗೆ ಬೆದರಿಕೆ ; ದೂರು ದಾಖಲು

ಬೆಂಗಳೂರು: ನಟ ಕಿಚ್ಚ ಸುದೀಪ ರಾಜಕೀಯಕ್ಕೆ ಪ್ರವೇಶದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇಂದು ಬುಧವಾರ(ಏ.5) ಮಧ್ಯಾಹ್ನ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆ ಇದೆ. ಈ ಚರ್ಚೆ ನಡೆಯುತ್ತಿರುವಾಗಲೇ ಕಿಚ್ಚ ಸುದೀಪ ಅವರಿಗೆ ಬೆದರಿಕೆ ಪತ್ರ ಬಂದಿದ್ದು ಈ ಕುರಿತು ದೂರ ದಾಖಲಾಗಿದೆ. ಬೆದರಿಕೆ ಪತ್ರದಲ್ಲಿ ನಿಮ್ಮ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಪತ್ರದಲ್ಲಿ … Continued

ಕಿಚ್ಚ ಸುದೀಪ್ ಕರ್ನಾಟಕದಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗ್ತಾರಾ..? : ಇಂದು ಸುದ್ದಿಗೋಷ್ಠಿ ಕರೆದ ಸಿಎಂ ಬೊಮ್ಮಾಯಿ

ಬೆಂಗಳೂರು : ಕರ್ನಾಟಕದಲ್ಲಿ ಸತತ ಎರಡನೇ ಬಾರಿಗೆ ಐತಿಹಾಸಿಕ ಹಿರಿಮೆ ಸಾಧಿಸುವ ಗುರಿಯೊಂದಿಗೆ ಆಡಳಿತಾರೂಢ ಬಿಜೆಪಿಯು ಕೇವಲ ರಾಜಕೀಯ ನಾಯಕರನ್ನು ಪ್ರಚಾರದ ಹಾದಿಯಲ್ಲಿ ನಿಯೋಜಿಸುವುದಲ್ಲದೆ “ಸ್ಟಾರ್ ಪ್ರಚಾರಕ”ರಾಗಿ ಸಿನೆ ತಾರೆಯರನ್ನೂ ಕರೆತರುವ ಪ್ರಯತ್ನ ಮಾಡುತ್ತಿದೆ. ಮುಂದಿನ ತಿಂಗಳು ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು ತನ್ನ ಸ್ಟಾರ್ ಪ್ರಚಾರಕರಾಗಿ ಹಲವಾರು ಕನ್ನಡ ನಟರನ್ನು … Continued

ಹಿರೇಬಾಗೇವಾಡಿ ಟೋಲ್ ಗೇಟಿನಲ್ಲಿ ದಾಖಲೆರಹಿತ 2 ಕೋಟಿ ರೂ. ನಗದು ವಶ

ಬೆಳಗಾವಿ : ಸೂಕ್ತ ದಾಖಲೆಗಳಿಲ್ಲದೆ ಖಾಸಗಿ ಬಸ್‌ನಲ್ಲಿ ಸಾಗಿಸಲಾಗುತ್ತಿದ್ದ ಎರಡು ಕೋಟಿ ರೂಪಾಯಿ ನಗದು ಹಣವನ್ನು ಹಿರೇಬಾಗೇವಾಡಿ ಟೋಲ್ ಗೇಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ. ಮುಂಬೈಯಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಅನ್ನು ನಸುಕಿನಜಾವ 3:30 ರ ವೇಳೆಗೆ ಚುನಾವಣಾ ಕಾರ್ಯನಿರತ ಎಫ್‌ಎಸ್‌ಟಿ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಜಂಟಿಯಾಗಿ ತಪಾಸಣೆ ನಡೆಸಿದಾಗ ಅಕ್ರಮ ಹಣ ಪತ್ತೆಯಾಗಿರುತ್ತದೆ. … Continued

ಗಡಿ ವಿವಾದದ ಮಧ್ಯೆ ಕರ್ನಾಟಕದ ಗಡಿ ಪ್ರದೇಶದ 865 ಗ್ರಾಮಗಳಿಗೆ ಆರೋಗ್ಯ ಯೋಜನೆ ವಿಸ್ತರಿಸಿದ ಮಹಾರಾಷ್ಟ್ರ

ಬೆಳಗಾವಿ : ಗಡಿ ವಿವಾದದ ಮಧ್ಯೆ ಮಹಾರಾಷ್ಟ್ರ ಸರ್ಕಾರವು ತನ್ನ ಆರೋಗ್ಯ ಯೋಜನೆಯನ್ನು ಕರ್ನಾಟಕದ 865 ಹಳ್ಳಿಗಳಿಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಕುರಿತು ಸೋಮವಾರ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ಅಂತ್ಯೋದಯ ಆಹಾರ ಯೋಜನೆಯ ಫಲಾನುಭವಿಗಳು, ಆದ್ಯತಾ ಗುಂಪಿನ ಕುಟುಂಬಗಳು (ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಅಡಿಯಲ್ಲಿ) ಮತ್ತು ಅನ್ನಪೂರ್ಣ … Continued

ಅಂಕೋಲೆಯ ಸುಪ್ರಸಿದ್ಧ ಕರಿ ಇಷಾಡು ಮಾವಿಗೆ ಈಗ ಜಿಐ ಟ್ಯಾಗ್ ಹೆಗ್ಗಳಿಕೆ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಬೆಳೆಯುವ ಸುಪ್ರಸಿದ್ಧ ಕರಿ ಇಷಾಡು ಮಾವು ಅತ್ಯಂತ ಸ್ವಾದಿಷ್ಟ ಫಲವಾಗಿದ್ದು, ಇದರ ವಿಶೇಷ ಸ್ವಾದಿಷ್ಟಕ್ಕೆ ಹೆಗ್ಗಳಿಕೆಯಾಗಿ ಈಗ ಭೌಗೋಳಿಕ ಹೆಗ್ಗುರುತಿನ ಆಧಾರದ ಮೇಲೆ ನೀಡುವ ಜಿಐ (Geographical Indication Tags) ಟ್ಯಾಗ್ ಮಾನ್ಯತೆ ದೊರೆತಿದೆ. ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಪ್ರಕಾರ, ಜಿಯೋಗ್ರಾಫಿಕಲ್ ಇಂಡಿಕೇಶನ್ (ಜಿಐ) ಟ್ಯಾಗ್ … Continued