ಧಾರವಾಡದಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ

ಧಾರವಾಡ: ಧಾರವಾಡದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಇಂದು, ಶನಿವಾರ ಗೃಹಸಚಿವ ಅಮಿತ್‌ ಶಾ ಶಂಕುಸ್ಥಾಪನೆ ನೆರವೇರಿಸಿದ್ದಾರೆ. “ದೆಹಲಿಯಲ್ಲಿ ಫಾರೆನ್ಸಿಕ್‌ ವಿಶ್ವವಿದ್ಯಾಲಯವಿದೆ. ಕರ್ನಾಟಕದ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಧಾರವಾಡದಲ್ಲಿಯೂ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ನಿರ್ಮಾಣಗೊಳ್ಳುತ್ತಿದೆ. ಭವಿಷ್ಯದಲ್ಲಿ ಭಾರತವು ಅತಿ ಹೆಚ್ಚು ಫಾರೆನ್ಸಿಕ್‌ ತಜ್ಞರನ್ನು ಹೊಂದಿರುವ ದೇಶವಾಗಲಿದೆ ಎಂದು ಈ ವೇಳೆ ಅಮಿತ್‌ ಶಾ ಹೇಳಿದರು. ವಿಧಿ ವಿಜ್ಞಾನಕ್ಕೆ … Continued

ಮಂಗಳೂರು: ಅಪಾರ್ಟ್ಮೆಂಟಿನಲ್ಲಿ ದಂಪತಿ ಶವವಾಗಿ ಪತ್ತೆ

ಮಂಗಳೂರು: ಮಂಗಳೂರಿನ ಬಿಜೈನ ಅಪಾರ್ಟ್‌ಮೆಂಟ್‌ ಒಂದರಲ್ಲಿ ದಂಪತಿ ಶವವಾಗಿ ಪತ್ತೆಯಾಗಿದೆ. ಮೃತರನ್ನು ಬಿಜೈ ನಿವಾಸಿಗಳಾದ ನಿವೃತ್ತ ಕೆನರಾ ಬ್ಯಾಂಕ್ ಮ್ಯಾನೇಜರ್ ದಿನೇಶ್ ರಾವ್ (65) ಹಾಗೂ ಶೈಲಜಾ (64) ಎಂದು ಗುರುತಿಸಲಾಗಿದೆ. ಶೈಲಜಾ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದರು. ಇವರನ್ನು ನೋಡಿಕೊಳ್ಳಲು ರಾತ್ರಿ ಮತ್ತು ಬೆಳಿಗ್ಗೆ ಹೊತ್ತಿನಲ್ಲಿ ಇಬ್ಬರು ಹೋಮ್ ನರ್ಸ್‌ಗಳು ಬಂದು ಹೋಗುತ್ತಿದ್ದರು. … Continued

ಹುಡುಗಿಯ ಜೊತೆ ಆಟವಾಡಿದ್ದಕ್ಕೆ ನಾಯಿಯನ್ನೇ ಕೊಂದು ಹಾಕಿದ…!

ಊಡುಪಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಮೂಕ ಪ್ರಾಣಿ ನಾಯಿಯನ್ನು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿರುವ ಕಾಲೇಜು ವಠಾರದಲ್ಲಿ ನಾಯಿಯೊಂದು ಹುಡುಗಿಯ ಜೊತೆ ಆಟವಾಡಿದ್ದಕ್ಕೆ ಕಾಲೇಜು ವಾರ್ಡನ್ ನಾಯಿಯನ್ನೇ ಕೊಂದಿದ್ದು, ಈ ಅಮಾನವೀಯ ಘಟನೆ ಕಾಪು ತಾಲೂಕಿನ ಬಂಟಕಲ್​ನ ಕಾಲೇಜಿನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಹುಡುಗಿ ಜೊತೆ ಆಟ ಆಡಿದ ಕಾರಣಕ್ಕೆ … Continued

ಎಲ್​ಐಸಿಯಿಂದ 9394 ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಜೀವ ವಿಮಾ ನಿಗಮ (LIC) ಅಪ್ರೆಂಟಿಸ್ ಡೆವಲಪ್ಮೆಂಟ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 9394 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಬಯಸುವವರು ಅಧಿಕೃತ ವೆಬ್‌ಸೈಟ್ licindia.in ಗೆ ಭೇಟಿ ನೀಡುವ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರಗಳು: ಎಲ್‌ಐಸಿ (LIC) ಅಪ್ರೆಂಟಿಸ್ ಡೆವಲಪ್ಮೆಂಟ್ ಆಫೀಸರ್- 9394 ಹುದ್ದೆಗಳು … Continued

ಫೆಬ್ರವರಿ 10ರೊಳಗೆ ಕೆಆರ್​ಪಿಪಿ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಜನಾರ್ದನ ರೆಡ್ಡಿ

ರಾಯಚೂರು : ಹೊಸ ರಾಜಕೀಯ ಪಕ್ಷ ಘೋಷಿಸಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ತಮ್ಮ ಪಕ್ಷವಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (KRPP) ಅಭ್ಯರ್ಥಿಗಳ ಪಟ್ಟಿಯನ್ನು ಫೆಬ್ರವರಿ 10ರೊಳಗೆ ಪ್ರಕಟಿಸಲಾಗುವುದುೆಂದು ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕದ ಒಟ್ಟು 30 ಕ್ಷೇತ್ರಗಳಲ್ಲಿ ಈಗಾಗಲೇ … Continued

ಬೆಂಗಳೂರು : ಸಿಸಿಬಿ ದಾಳಿ, 6800 ನಕಲಿ ಅಂಕಪಟ್ಟಿಗಳು ವಶಕ್ಕೆ

ಬೆಂಗಳೂರು : ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿ 6800 ನಕಲಿ ಅಂಕಪಟ್ಟಿಗಳನ್ನ ವಶಕ್ಕೆ ಪಡೆದಿದೆ. ಮಾಹಿತಿ ಆಧರಿಸಿ ದಾಳಿ ನಡೆಸಿ ಸಿಸಿಬಿ ಪೊಲೀಸರು ಓರ್ವನನ್ನ ಬಂಧಿಸಿ 15 ವಿಶ್ವ ವಿದ್ಯಾಲಯಗಳು, ಬೋರ್ಡ್ ಗಳ ನಕಲಿ ಅಂಕಪಟ್ಟಿಯನ್ನ ವಶಕ್ಕೆ ಪಡೆದಿದ್ದಾರೆ. ಪರಿಶೀಲನೆ ವೇಳೆ ನಕಲಿ ಅಂಕಪಟ್ಟಿ ದಂಧೆ ಬಯಲಾಗಿದ್ದು 6800 … Continued

ಬೆಂಗಳೂರಿನ ಸ್ಟಿಕ್ ಇಡ್ಲಿ : ಈ ಖಾದ್ಯ ತಿನ್ನಲು ಈ ಹೊಸ ಮಾರ್ಗಕ್ಕೆ ಇಂಟರ್ನೆಟ್ ಭಾರೀ ಪ್ರತಿಕ್ರಿಯೆ

ಸಾಮಾನ್ಯವಾಗಿ ತಟ್ಟೆ ಇಡ್ಲಿ ನೋಡಿರುತ್ತೇವೆ. ಆದರೆ ಸ್ಟಿಕ್ ಇಡ್ಲಿ ಬಗ್ಗೆ ಕೇಳಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ​​ ಭಾರೀ ವೈರಲ್ ಆಗುತ್ತಿದೆ ಈ ಸ್ಟಿಕ್ ಇಡ್ಲಿ. ಏನಿದರ ವಿಶೇಷತೆ ಈ ಸ್ಟೋರಿ ಓದಿ. ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಕೆಲವೊಂದಿಷ್ಟು ಪೋಸ್ಟ್​​ಗಳು, ವಿಡಿಯೋಗಳು ಸಾಕಷ್ಟು ಸದ್ದು ಮಾಡುತ್ತಿರುತ್ತವೆ. ಈಗ ಸ್ಟಿಕ್ ಇಡ್ಲಿ ಎಲ್ಲೆಡೆ ವೈರಲ್​​ ಆಗಿದೆ. … Continued

ಹೊನ್ನಾವರ: ಕರ್ಕಿಯ ದೈವಜ್ಞ ಮಠದಲ್ಲಿ ಫೆಬ್ರವರಿ 3ರಿಂದ 5ರ ವರೆಗೆ ಶ್ರೀ ರಾಮತಾರಕ ನಾಮ ಜಪ ಮಹಾಯಜ್ಞ-ಶ್ರೀರಾಮ ಪಟ್ಟಾಭಿಷೇಕ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಯ ದೈವಜ್ಞ ಮಠದಲ್ಲಿ ಫೆಬ್ರವರಿ ೩ರಿಂದ ೫ರ ತನಕ ಲೋಕಕಲ್ಯಾಣಾರ್ಥವ ಶ್ರೀ ರಾಮತಾರಕ ನಾಮ ಜಪ ಮಹಾಯಜ್ಞ ಹಾಗೂ ಶ್ರೀರಾಮ ಪಟ್ಟಾಭಿಷೇಕ ನಡೆಯಲಿದೆ ಎಂದು ದೈವಜ್ಞ ವಾಹಿನಿ ಮತ್ತು ಮಾತೃವಾಹಿನಿ ಅಧ್ಯಕ್ಷ ಕೃಷ್ಣಕುಮಾರ ಶೇಟ್ ತಿಳಿಸಿದ್ದಾರೆ. ಪಟ್ಟಣದ ಶ್ರೀ ವಿಠ್ಠಲ ರುಕುಮಾಯಿ ದೇವಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, … Continued

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದ ಗೋ ಫಸ್ಟ್‌ ಏರ್‌ಲೈನ್ಸ್‌ಗೆ 10 ಲಕ್ಷ ರೂ. ದಂಡ

ಬೆಂಗಳೂರು : ಬೆಂಗಳೂರು ವಿಮಾನ ನಿಲ್ದಾಣದಲ್ಲಿ 50 ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಟ್ಟು ಈ ತಿಂಗಳ ಆರಂಭದಲ್ಲಿ ದೆಹಲಿಗೆ ತನ್ನ ವಿಮಾನವೊಂದು ಟೇಕಾಫ್ ಮಾಡಿದ್ದ ಏರ್‌ಲೈನ್ ಆಪರೇಟರ್ ಗೋ ಫಸ್ಟ್‌ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು (DGCA) 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಜನವರಿ 9ರಂದು, ಗೋ ಫಸ್ಟ್ ವಿಮಾನವು ತಮ್ಮನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲೇ … Continued

ಭವಾನಿ ರೇವಣ್ಣಗೆ ಬಿಜೆಪಿಯಿಂದ ಟಿಕೆಟ್ ಆಫರ್ ಕೊಟ್ಟ ಸಿ.ಟಿ.ರವಿ..!

ಚಿಕ್ಕಮಗಳೂರು : ಹಾಸನ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಭವಾನಿ ರೇವಣ್ಣ ಅವರಿಗೆ ಈಗಾಗಲೇ ಟಿಕೆಟ್ ನೀಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಭವಾನಿ ರೇವಣ್ಣ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಬಿಜೆಪಿಯಿಂದ ಟಿಕೆಟ್ ಆಫರ್ ನೀಡಿದ್ದಾರೆ..! ಹಾಸನದಿಂದ ಸ್ಪರ್ಧಿಸಲು ಜೆಡಿಎಸ್‌ನಿಂದ ಭವಾನಿ ರೇವಣ್ಣರಿಗೆ ಟಿಕೆಟ್ ನಿರಾಕರಿಸಿದ … Continued