ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ: ಅಧ್ಯಯನಕ್ಕೆ ನ್ಯಾಯಮೂರ್ತಿ ಭಕ್ತವತ್ಸಲ ನೇತೃತ್ವದ ಆಯೋಗ ನೇಮಕ

ಬೆಂಗಳೂರು: ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ರಾಜಕೀಯ ಮೀಸಲಾತಿ ನಿಗದಿಪಡಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದಲ್ಲಿ ಆಯೋಗ ನೇಮಕ ಮಾಡಿ ಭಾನುವಾರ ಆದೇಶ ತಿದ್ದುಪಡಿ ಹೊರಡಿಸಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಸಿ.ಆರ್. ಚಿಕ್ಕಮಠ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ನಿಖರವಾದ … Continued

ಇಂದಿನಿಂದ ಮುಂಜಾನೆ 5 ಗಂಟೆಗೆ ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ, ಸುಪ್ರಭಾತ : ಮುತಾಲಿಕ್

ಮಂಡ್ಯ: ಮಸೀದಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಮೇ 9ರಿಂದ ಬೆಳಗ್ಗೆ 5 ಗಂಟೆಗೆ ಕರ್ನಾಟಕದ 1,000 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಅಥವಾ ಸುಪ್ರಭಾತ ಅಥವಾ ಓಂಕಾರ ಅಥವಾ ಭಕ್ತಿ ಗೀತೆಗಳನ್ನು ಧ್ವನಿವರ್ಧಕದಲ್ಲಿ ನುಡಿಸಲಾಗುವುದು ಎಂದು … Continued

ಜೂನ್‌ 30ರೊಳಗೆ ರಾಜ್ಯದಲ್ಲಿ 1000 ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ

ಮೈಸೂರು: ರಾಜ್ಯಾದಾದ್ಯಂತ ಜೂನ್ 30ರೊಳಗೆ ಸಾವಿರ ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಇಂಧನ ಸಚಿವ ವಿ.ಸುನಿಲಕುಮಾರ ತಿಳಿಸಿದರು. ಚಾಮುಂಡೇಶ್ವರಿ ವಿದ್ಯುತ್‍ಚ್ಛಕ್ತಿ ನಿಗಮಿತ ಮತ್ತು ಕರ್ನಾಟಕ ವಿದ್ಯುತ್‍ಚ್ಛಕ್ತಿ ಮಂಡಳಿಯ ಇಂಜಿನಿಯರ್‌ಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್‍ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜಿಲ್ಲಾ, ಪ್ರವಾಸಿ ಕೇಂದ್ರಗಳು, ರಾಜ್ಯ ಹೆದ್ದಾರಿ ಮತ್ತು … Continued

ಅಂಕೋಲಾ: ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲು

ಅಂಕೋಲಾ: ಜಾನಪದ ಗಾಯಕಿ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ (ಮೇ 7) ರಾತ್ರಿ ಕಾರವಾರ ಆಸ್ಪತ್ರೆಯಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಒಯ್ಯಲಾಗಿದೆ ಎಂದು ಹೇಳಲಾಗಿದೆ. ಉಸಿರಾಟ ಸಮಸ್ಯೆ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಸಮೀಪವರ್ತಿ ಮೂಲಗಳು ತಿಳಿಸಿವೆ. ಕೆಎಂಸಿ … Continued

ಅಪರೂಪದ ಮದುವೆ: ತಂದೆಯ ಮೇಣದ ಪ್ರತಿಮೆ ಮುಂದೆ ಮಗನ ವಿವಾಹ…!

ಮೈಸೂರು: ಯುವಕನೊಬ್ಬ ತಂದೆಯ ಮೇಣದ ಪ್ರತಿಮೆ ಮುಂದೆ ಮದುವೆಯಾಗಲಿದ್ದಾನೆ. ವಿವಾಹ ಶಾಸ್ತ್ರಗಳು ಆರಂಭವಾಗಿದ್ದು, ಇಂದು ಭಾನುವಾರ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ವಿವಾಹ ನಡೆಯಲಿದೆ. ಮೈಸೂರು ಜಿಲ್ಲೆ ನಂಜನಗೂಡಿನ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ಈ ಅಪರೂಪದ ವಿವಾಹ ನಡೆಯುತ್ತಿದ್ದು, ಡಾ.ಯತೀಶ ಹಾಗೂ ಡಾ. ಅಪೂರ್ವ ಅವರು ಡಾ.ಯತೋಶ ಅವರ ತಂದೆಯ ಮೇಣದ ಪ್ರತಿಮೆ ಮುಂದೆ ಹೊಸ … Continued

ಗೋವುಗಳನ್ನು ದತ್ತು ತೆಗೆದುಕೊಳ್ಳುವ ಪುಣ್ಯಕೋಟಿ ಯೋಜನೆ ಪ್ರಾರಂಭ : ಸಿಎಂ ಬೊಮ್ಮಾಯಿ

ಬೆಂಗಳೂರು : ರಾಜ್ಯದ ಗೋಶಾಲೆಗಳಲ್ಲಿನ ಗೋವುಗಳನ್ನು 11,000 ರೂ.ಗಳ ವಾರ್ಷಿಕ ಮೊತ್ತಕ್ಕೆ ದತ್ತು ತೆಗೆದುಕೊಳ್ಳುವ ಪುಣ್ಯಕೋಟಿ ದತ್ತು ಯೋಜನೆ ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಶನಿವಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಲಾಖೆಯ ವತಿಯಿಂದ ಕಿರುಚಿತ್ರ ಪ್ರದರ್ಶನ, ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಿಸಿ ಮಾತನಾಡಿದ ಅವರು, ಈ ಮೊದಲು ನಾನು‌ ನನ್ನ ಜನ್ಮದಿನವನ್ನು … Continued

ಕಾನೂನು ತಿದ್ದುಪಡಿಯಾದರೂ ಅರಣ್ಯ ಅತಿಕ್ರಮಣ ಮಂಜೂರಿಗೆ ಮೂರು ತಲೆಮಾರಿನ ಕಾಗದಪತ್ರ ಕೇಳ್ತಾರೆ, ಇದು ಅಗತ್ಯವೇ: ಸರ್ಕಾರಕ್ಕೆ ರವೀಂದ್ರ ನಾಯ್ಕ ಪ್ರಶ್ನೆ

ಹೊನ್ನಾವರ: ಅರಣ್ಯ ಅತಿಕ್ರಮಣ ಮಂಜೂರಾತಿಗೆ ಮೂರು ತಲೆಮಾರಿನ ಕಾಗದಪತ್ರ ಕೇಳುತ್ತಾರೆ. ಕಾನೂನು ತಿದ್ದುಪಡಿಯಾಗಿದೆ. ಆದರೂ ಮೂರು ತಲೆಮಾರಿನ ಹಿಂದಿನ ಕಾಗದಪತ್ರಗಳ ಅಗತ್ಯವಿದೆಯೇ ಎಂದು ಸರ್ಕಾರಕ್ಕೆ ಸವಾಲು ಹಾಕುತ್ತೇನೆ ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರನಾಥ ನಾಯ್ಕ ಗುಡುಗಿದರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ಶನಿವಾರ ಜಿಲ್ಲಾ … Continued

ಮಾಜಿ ಸಚಿವ ಪ್ರಮೋದ ಮಧ್ವರಾಜ, ವರ್ತೂರ್‌ ಪ್ರಕಾಶ ಸೇರಿ ಹಲವರು ಬಿಜೆಪಿಗೆ ಸೇರ್ಪಡೆ

ಬೆಂಗಳೂರು: ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಪ್ರಭಾವಿ ನಾಯಕ ಪ್ರಮೋದ ಮಧ್ವರಾಜ ಮತ್ತು ವರ್ತೂರ್‌ ಪ್ರಕಾಶ್‌ ಬಿಜೆಪಿ ಸೇರಿದ್ದಾರೆ. ಪ್ರಮೋದ್ ಮಧ್ವರಾಜ ಶನಿವಾರ ಮಧ್ಯಾಹ್ನ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.ಶನಿವಾರ ಸಂಜೆ ಪರಾಗ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ … Continued

ಹಣ ಪಡೆದು ಸಿಎಂ ಮಾಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ, ನಾನು ಹಾಗೆ ಎಲ್ಲಿಯೂ ಹೇಳಿಲ್ಲ: ಯತ್ನಾಳ ಸ್ಪಷ್ಟನೆ

ವಿಜಯಪುರ: ಮುಖ್ಯಮಂತ್ರಿಯಾಗಲು ಹೈಕಮಾಂಡಿಗೆ ಹಣ ನೀಡಬೇಕಾಗುತ್ತದೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ನಾನು ಹೇಳಿದ ಅರ್ಥ ಬೇರೆ ಇದೆ. ಮುಖ್ಯಮಂತ್ರಿ ಮಾಡ್ತೇವೆ ಎಂದು ಕೆಲವರು ವಾಟ್ಸಪ್ ಕಾಲ್ ಮಾಡುತ್ತಾರೆ. ನಮಗೆ ಮೋದಿ ಗೊತ್ತು, ಸೋನಿಯಾ ಗಾಂಧಿ ಗೊತ್ತು, ದೇವೇಗೌಡ್ರು ಗೊತ್ತು ಎಂದು ಹೇಳುತ್ತಾರೆ, ಅಂಥವರನ್ನು ನಂಬಬೇಡಿ ಎಂದು ಹೇಳಿದ್ದೇನೆಯೇ ಹೊರತು ಮುಖ್ಯಮಂತ್ರಿಯಾಗಲು ಹೈಕಮಾಂಡಿಗೆ ಹಣ ನೀಡಬೇಕಾಗುತ್ತದೆ … Continued

ರೈತರ ಮನೆ ಬಾಗಿಲಿಗೆ ಸಂಚಾರಿ ಪಶು ಚಿಕಿತ್ಸಾಲಯ, ಸಹಾಯವಾಣಿಗೆ ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು: ಮನೆ ಬಾಗಿಲಿಗೆ ಹೋಗಿ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಬಹುನಿರೀಕ್ಷಿತ ಸಂಚಾರಿ ಪಶು ಚಿಕಿತ್ಸಾಲಯ ಮತ್ತು ಸಹಾಯವಾಣಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು, ಶನಿವಾರ ಚಾಲನೆ ನೀಡಿದ್ದಾರೆ. ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ, ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ಸಂಸದ ಪಿ.ಸಿ.ಮೋಹನ್ ಮತ್ತಿತರರು … Continued