ಕರ್ನಾಟಕ ಬಂದ್​ಗೆ ರಾಜ್ಯ ರೈತ ಸಂಘ ಸಂಪೂರ್ಣ ಬೆಂಬಲ: ಕೋಡಿಹಳ್ಳಿ ಚಂದ್ರಶೇಖರ

ಬೆಂಗಳೂರು: ರಾಜ್ಯ ಬಂದ್​ಗೆ ಸಂಪೂರ್ಣ ಬೆಂಬಲ ಇದೆ. ನಾಡಿನ ವಿಚಾರ ಬಂದಾಗ ನಾವು ರಾಜ್ಯದ ಪರವಾಗಿ ನಿಲ್ಲುತ್ತೇವೆ. ರಾಜ್ಯದೊಳಗೆ ಬೇರೆ ರಾಜ್ಯಗಳ ಪ್ರಕ್ರಿಯೆ ನಡೆಯಬಾರದು. ಎಂಇಎಸ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದ್ದಾರೆ. ನಗರದ ಪ್ರೆಸ್ ಕ್ಲಬ್​ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ … Continued

31ರಂದು ಕರ್ನಾಟಕ ಬಂದ್ ಶತಸಿದ್ದ: ವಾಟಾಳ್ ನಾಗರಾಜ್

ಬೆಳಗಾವಿ : ಡಿಸೆಂಬರ್‌ 31ರಂದು ನಡೆಯಲಿರುವ ಕರ್ನಾಟಕ ಬಂದ್‌ ನಡೆಯುವುದು ಶತಸಿದ್ಧ. ಅಂದು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ನಡೆಯಲಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ದಿನಗಳ ಹಿಂದೆ ನಾವು ಬಂದ್‌ಗೆ ಕರೆ ಕೊಟ್ಟಿದ್ದೇವೆ. ನಮ್ಮ ಹೋರಾಟ ಎಂಇಎಸ್ ಬ್ಯಾನ್ ಮಾಡಲು, ಕನ್ನಡ … Continued

ಮಂಗಳೂರು: ಕೊರಗಜ್ಜ ಕಟ್ಟೆಯಲ್ಲಿ ಕಾಂಡೋಮ್ ಇರಿಸಿದ ಆರೋಪಿ ಬಂಧನ

ಮಂಗಳೂರು: ನಗರದ ಮಾರ್ನಮಿಕಟ್ಟೆಯ ಕೊರಗಜ್ಜನ ಗುಡಿಯ ಎದುರು ಉಪಯೋಗಿಸಿದ ಕಾಂಡೋಮ್ ನ್ನು ಇಟ್ಟು ಅಪವಿತ್ರಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೂಲತಃ ಹುಬ್ಬಳ್ಳಿಯವನಾದ ಪ್ರಸ್ತುತ ಕೋಟೆಕಾರು ಮುಂಡಾಣ ಎಂಬಲ್ಲಿ ವಾಸವಾಗಿರುವ ದೇವದಾಸ್ ದೇಸಾಯಿ (62) ಎಂಬವರೇ ಬಂಧಿತ ಆರೋಪಿ. ಆರೋಪಿ ದೇವದಾಸ್ ತಂದೆ ಜಾನ್ ದೇಸಾಯಿ, ಸರಕಾರಿ ಉದ್ಯೋಗಿಯಾಗಿದ್ದು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಈತ … Continued

ಕರ್ನಾಟಕದಲ್ಲಿ ಬಿಜೆಪಿ 150 ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ

ಹುಬ್ಬಳ್ಳಿ: 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ 150 ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಬುಧವಾರ ವಿಶ್ವಾಸ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಎರಡು ದಿನಗಳ ಭಾರತೀಯ ಜನತಾ ಪಕ್ಷದ ಕರ್ನಾಟಕ … Continued

ಬೆಳಗಾವಿ: ಪ್ರತಿಭಟನೆಗೆ ಮುಂದಾದ ವಾಟಾಳ್ ನಾಗರಾಜ್ ಸೇರಿ ಹಲವು ಹೋರಾಟಗಾರರು ಪೊಲೀಸ್ ವಶಕ್ಕೆ

ಬೆಳಗಾವಿ: ಎಂಇಎಸ್ ಸಂಘಟನೆ ನಿಷೇಧ ಆಗ್ರಹಿಸಿ ಎಂಇಎಸ್‌ (MES) ವಿರುದ್ಧ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆದ ಸಮಯದಲ್ಲಿ ಅವರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಕುವೆಂಪು ಭಾವಚಿತ್ರಕ್ಕೆ ಹೂಹಾರ ಹಾಕಿ ವಾಟಾಳ್ ನಾಗರಾಜ ಪ್ರತಿಭಟನೆಗೆ ಚಾಲನೆ ನೀಡಿದರು. ಆ ವೇಳೆ ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿ … Continued

ರಾಮದುರ್ಗ: ಪಟಾಕಿ ಸಿಡಿದು ರಥಕ್ಕೆ ತಗುಲಿದ ಬೆಂಕಿ, ತಪ್ಪಿದ ಅನಾಹುತ.. ದೃಶ್ಯ ವಿಡಿಯೊದಲ್ಲಿ ಸೆರೆ

ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗದ ಶಿವಪೇಟೆ ಗ್ರಾಮದಲ್ಲಿ ಶ್ರೀ ಜಡಿ ಶಂಕರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ವೇಳೆ ಬೆಂಕಿ ಆಕಸ್ಮಿಕ ನಡೆದಿದೆ. ಶಿವಪೇಟೆಯಲ್ಲಿ ಸುಪ್ರಸಿದ್ಧ ಜಡಿ ಶಂಕರಲಿಂಗ ದೇವರ ಜಾತ್ರೆಯರಥೋತ್ಸವ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ರಥಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಈ ಬೆಂಕಿ ಆಕಸ್ಮಿಕದಲ್ಲಿ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಮಹಾರಥೋತ್ಸವ ನಡೆಯುತ್ತಿದ್ದಾಗ ಪಟಾಕಿ ಸಿಡಿತದಿಂದ ರಥಕ್ಕೆ … Continued

ಕಾರವಾರ: ಶಾಲೆಗೆ ಹೋಗುತ್ತಿದ್ದ ಮಕ್ಕಳ ಮೇಲೆ ಜೇನು ದಾಳಿ: 16 ಮಂದಿ ಆಸ್ಪತ್ರೆಗೆ ದಾಖಲು

ಕಾರವಾರ: ಶಾಲೆಗೆ ಹೋಗುತ್ತಿದ್ದ 20ಕ್ಕೂ ಹೆಚ್ಚು ಮಕ್ಕಳಿಗೆ ಜೇನು ನೊಣ ದಾಳಿ ಮಾಡಿ ಕಡಿದ ಘಟನೆ ಕಾರವಾರ ತಾಲೂಕಿನ ಕಿನ್ನರ ಗ್ರಾಮದ ನ್ಯೂ ಹೈಸ್ಕೂಲಿನಲ್ಲಿ ಮಂಗಳವಾರ ನಡೆದ ಬಗ್ಗೆ ವರದಿಯಾಗಿದೆ. ಜೇನು ಕಡಿತದಿಂದ 16 ಮಕ್ಕಳು ಅಸ್ವಸ್ಥರಾಗಿದ್ದು, ಕೆಲ ಮಕ್ಕಳ ಬೆನ್ನು, ಕುತ್ತಿಗೆ, ಮುಖ, ತಲೆಗೆ ಗಾಯಗಳಾಗಿವೆ. ಗಾಯಗೊಂಡಿರುವ ಮಕ್ಕಳನ್ನು ಊರವರ ಸಹಾಯದಿಂದ ಕಾರವಾರ ಜಿಲ್ಲಾಸ್ಪತ್ರೆಗೆ … Continued

ಕೋವಿಡ್‌ ಹೆಚ್ಚಳದ ಭೀತಿ: ನಾಳೆಯಿಂದಲೇ ರಾಜ್ಯಾದ್ಯಂತ ಮನೆಮನೆ ಆರೋಗ್ಯ ಸಮೀಕ್ಷೆಗೆ ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಓಮಿಕ್ರಾನ್​ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮನೆಮನೆ ಆರೋಗ್ಯ ಸಮೀಕ್ಷೆ ನಡೆಸಲು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಮನೆಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ಮಾಡುವಂತೆ ಆದೇಶ ನೀಡಲಾಗಿದೆ. ತೀವ್ರ ಉಸಿರಾಟ ಸಮಸ್ಯೆ ಇರುವ ಕೇಸ್​ಗಳ ಸರ್ವೆಗೆ ಆದೇಶ ನೀಡಿದೆ. ಆರೋಗ್ಯ ಸರ್ವೆ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ. ಮನೆ ಮನೆಗೆ ತೆರಳಿ … Continued

ಲಿಂಗದೇವ ಅಂಕಿತ ಹಿಂತೆಗೆತಕ್ಕೆ ಬಸವಧರ್ಮಪೀಠದ ಅಧ್ಯಕ್ಷರ ಸೂಚನೆ : ತೋಂಟದ ಶ್ರೀ ಹರ್ಷ

ಬೆಳಗಾವಿ: ವಿಶ್ವಗುರು ಬಸವಣ್ಣನವರ ವಚನಾಂಕಿತ ಕೂಡಲ ಸಂಗಮದೇವ ಎಂಬುದನ್ನು ಬಸವಧರ್ಮ ಪೀಠಾಧ್ಯಕ್ಷರಾಗಿದ್ದ ಪೂಜ್ಯಶ್ರೀ ಮಾತೆ ಮಹಾದೇವಿಯವರು ‘ಲಿಂಗದೇವ’ ಎಂದು ಬದಲಿಸಿರುವುದಕ್ಕೆ ಲಿಂಗಾಯತ ಸಮಾಜದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ಈಗಿನ ಬಸವಧರ್ಮಪೀಠದ ಅಧ್ಯಕ್ಷರಾದ ಪೂಜ್ಯಶ್ರೀ ಡಾ. ಗಂಗಾಮಾತಾಜಿಯವರು ‘ಲಿಂಗದೇವ’ ಬದಲಿಗೆ ಕೂಡಲಸಂಗಮದೇವ ಎಂದೇ ಬಳಸಬೇಕೆಂದು ಸಂದೇಶ ನೀಡಿದ್ದಾರೆ. ಇದರಿಂದ ಸಮಸ್ತ ಲಿಂಗಾಯತರಿಗೆ ಸಂತಸ ಉಂಟಾಗಿದೆ ಎಂದು … Continued

ಮತದಾನ ಮಾಡಿ ಬರುತ್ತಿದ್ದ ಮಹಿಳೆಯ ಕಾರು ಅಡ್ಡಗಟ್ಟಿ ಬರ್ಬರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳು

ಬೆಂಗಳೂರು: ಕಾರು ಅಡ್ಡಗಟ್ಟಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಸೋಮವಾರ ರಾತ್ರಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅರ್ಚನಾ ರೆಡ್ಡಿ (40)ಕೊಲೆಯಾಗಿರುವ ಗೃಹಿಣಿ ಎಂದು ಗುರುತಿಸಲಾಗಿದೆ. ಮೂಲತಃ ಜಿಗಣಿ ನಿವಾಸಿಯಾಗಿರುವ ಅವರು, ಇತ್ತೀಚೆಗೆ ಬೆಳ್ಳಂದೂರಿನಲ್ಲಿ ವಾಸವಾಗಿದ್ದರು. ನಿನ್ನೆ ಜಿಗಣಿ ಪುರಸಭೆಗೆ ನಡೆದ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಚನಾ ರೆಡ್ಡಿ ಬರುತ್ತಾರೆ ಎಂದು … Continued