ಶಬರಿಮಲೆ: ಪ್ರತಿದಿನ 60 ಸಾವಿರ ಭಕ್ತರಿಗೆ ಅವಕಾಶ

ತಿರುವನಂತಪುರ (ಕೇರಳ) : ರಾಜ್ಯದಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗುತ್ತಿರುವ ಹಿನ್ನೆಲೆ ಕೇರಳ ಸರ್ಕಾರ ಶಬರಿಮಲೆ ದೇವಸ್ಥಾನದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದೆ. ಮಂಡಲ-ಮಕರವಿಳಕ್ಕು (ಮಕರ ಸಂಕ್ರಾಂತಿ) ಉತ್ಸವದಲ್ಲಿ ದೇವಸ್ಥಾನದಲ್ಲಿ ಭಕ್ತರಿಗೆ ತುಪ್ಪದ ಅಭಿಷೇಕಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ವರೆಗೆ ಈ ಸಡಿಲಿಕೆ ಅನ್ವಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಿನಂಪ್ರತಿ 60 ಸಾವಿರ ಭಕ್ತರಿಗೆ … Continued

ಪ್ರತಿಪಕ್ಷಗಳ ಪ್ರತಿಭಟನೆ ನಡುವೆಯೇ ಮತದಾರರ ಗುರುತಿನ ಚೀಟಿ ಆಧಾರ್‌ನೊಂದಿಗೆ ಜೋಡಿಸುವ ಮಸೂದೆಗೆ ಲೋಕಸಭೆ ಅಂಗೀಕಾರ

ನವದೆಹಲಿ: ಪ್ರತಿಪಕ್ಷಗಳ ಭಾರೀ ಪ್ರತಿಭಟನೆಯ ನಡುವೆಯೇ ಆಧಾರ್ ಕಾರ್ಡ್ ಅನ್ನು ಮತದಾರರ ಐ-ಕಾರ್ಡ್‌ಗೆ ಜೋಡಿಸಲು ಅನುವು ಮಾಡಿಕೊಡುವ ಚುನಾವಣಾ ಕಾನೂನುಗಳ ಬದಲಾವಣೆಗಳಿಗೆ ಲೋಕಸಭೆಯು ಸೋಮವಾರ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ ಅಂಗೀಕರಿಸಿತು. ಮಸೂದೆಯನ್ನು ನಂತರ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಮಸೂದೆಯನ್ನು ಮಂಡಿಸಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಈ ಶಾಸನವು ದೇಶದಲ್ಲಿ ನಕಲಿ … Continued

ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ಬಾಲಿವುಡ್ ತಾರೆ ಐಶ್ವರ್ಯಾ ರೈ ಬಚ್ಚನ್‌ಗೆ ಇಡಿ ಸಮನ್ಸ್

ನವದೆಹಲಿ: ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ತಾರೆ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಸೋಮವಾರ ಜಾರಿ ನಿರ್ದೇಶನಾಲಯ (ಇಡಿ) ಅವರಿಗೆ ಸಮನ್ಸ್ ನೀಡಿದೆ. ವರದಿಗಳ ಪ್ರಕಾರ, ಈ ವಿಷಯದಲ್ಲಿ 2002 ರ ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ) ಅಡಿಯಲ್ಲಿ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡ್ರಿ) ಪ್ರಕರಣವನ್ನು ದಾಖಲಿಸಿದೆ. ಪನಾಮಾ … Continued

ಹೆತ್ತಮ್ಮನಿಗೆ ಬೇಡವಾಯ್ತು ಕಂದಮ್ಮ… ತನ್ನ ಮರಿಗಳ ಜೊತೆ ನವಜಾತ ಶಿಶುವನ್ನು ರಕ್ಷಿಸಿತು ಬೀದಿನಾಯಿ…!

ಮುಂಗೇಲಿ (ಛತ್ತೀಸ್‌ಗಢ): ಕೊರೆಯುವ ಚಳಿಯಲ್ಲಿ ತಾಯಿಯೊಬ್ಬಳು ನವಜಾತ ಶಿಶುವೊಂದನ್ನು ಬೀದಿಯಲ್ಲಿ ಬಿಟ್ಟು ಹೋಗಿದ್ದು, ಅಚ್ಚರಿಯ ವಿದ್ಯಮಾನದಲ್ಲಿ ತಾಯಿಯಿಂದ ಪರಿತ್ಯಕ್ತ ಶಿಶುವನ್ನು ಬೀದಿ ನಾಯಿಗಳು ರಾತ್ರಿಯಿಡಿ ರಕ್ಷಣೆ ಮಾಡಿದ ಘಟನೆ ಛತ್ತೀಸ್​​ಗಢದ ಮುಂಗೇಲಿ ಜಿಲ್ಲೆಯ ಸರಿಸ್ಟಾಲ್​ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯಿಂದ ಮಾನವೀಯತೆಯ ಮುಜುಗರದ ನಿದರ್ಶನಕ್ಕೆ ಇದು ಸಾಕ್ಷಿಯಾಗಿದೆ. ಕಲಿಯುಗದ ತಾಯಿ ತನ್ನ … Continued

ಭಾರತದಲ್ಲಿ 151ಕ್ಕೆ ಏರಿದ ಓಮಿಕ್ರಾನ್ ಸೋಂಕಿತರ ಸಂಖ್ಯೆ

ನವದೆಹಲಿ: ಭಾರತದಲ್ಲಿ ಓಮಿಕ್ರಾನ್ ಸಂಖ್ಯೆ ಹೆಚ್ಚುತ್ತಲೇ ಇದ್ದು, ಭಾನುವಾರ 9 ಹೊಸ ಪ್ರಕರಣಗಳು ವರದಿಯಾಗಿವೆ. ಅದೇ ಸಮಯದಲ್ಲಿ, ಸಾಂಕ್ರಾಮಿಕ ರೋಗದ ಮೂರನೇ ಅಲೆ ಜನೇವರಿ ಅಥವಾ ಫೆಬ್ರುವರಿಯಲ್ಲಿಸಂಭವಿಸಬಹುದು ಎಂಬ ಎಚ್ಚರಿಕೆಯ ಮಧ್ಯೆಯೇ ಕೆಲವು ಪ್ರದೇಶಗಳಲ್ಲಿ ದೈನಂದಿನ ಕೋವಿಡ್‌-19 ಸಂಖ್ಯೆ ಏರಲು ಪ್ರಾರಂಭಿಸಿದೆ. ಭಾನುವಾರ, ದೆಹಲಿಯು ಸುಮಾರು ಆರು ತಿಂಗಳಲ್ಲೇ ಅತಿ ಹೆಚ್ಚು ಏಕದಿನ ಪ್ರಕರಣವನ್ನು ವರದಿ … Continued

14.65 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ; ಕೀನ್ಯಾದಿಂದ ಮಹಿಳೆ ವಶಕ್ಕೆ

ಜೈಪುರ: ಬರೋಬ್ಬರಿ 2.150 ಕೇಜಿ ಮಾದಕ ದ್ರವ್ಯ ಹೊಂದಿದ್ದ ಕೀನ್ಯಾ ಪ್ರಜೆಯೊಬ್ಬಳನ್ನು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಹೆರಾಯಿನ್ ಸುಮಾರು 14.65 ಕೋಟಿ ಬೆಲೆಬಾಳುತ್ತದೆ ಎಂದು ಹೇಳಲಾಗಿದೆ. ವಿಮಾನ ನಿಲ್ದಾಣದ ಪತ್ರಿಕಾ ಪ್ರಕಟಣೆಯಂತೆ 33 ವರ್ಷದ ಮಹಿಳೆ ಶಾರ್ಜಾದಿಂದ ಏರ್ ಅರೇಬಿಯಾ ವಿಮಾನದಲ್ಲಿ ಬಂದು ಇಳಿದಿದ್ದಾರೆ. ಆ ವೇಳೆ … Continued

ಶಿಗ್ಗಾವಿಯಲ್ಲಿ ಸಿಎಂ ಭಾವುಕ : ಸ್ವಕ್ಷೇತ್ರದಲ್ಲಿ ಬೊಮ್ಮಾಯಿ ಕಣ್ಣೀರು..!

ಹಾವೇರಿ: ಜೀವನದಲ್ಲಿ ಯಾವುದೂ ಶಾಶ್ವತ ಅಲ್ಲ. ಈ ಸ್ಥಾನಮಾನಗಳೂ ಶಾಶ್ವತ ಅಲ್ಲ. ಈ ಅರಿವು ನಮಗೆ ಪ್ರತಿ ಕ್ಷಣ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾಗಿ ಹೇಳಿದ್ದಾರೆ. ಶಿಗ್ಗಾವಿ ಪಟ್ಟಣದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ಕ್ಷೇತ್ರದ ಹೊರಗೆ ನಾನು ಗೃಹ ಮಂತ್ರಿ, ನೀರಾವರಿ ಸಚಿವ, ಮುಖ್ಯಮಂತ್ರಿ. … Continued

ಕೋಲ್ಕತ್ತಾ ಮುನ್ಸಿಪಲ್​ ಕಾರ್ಪೋರೇಶನ್​ ಚುನಾವಣೆ; ಕಚ್ಚಾಬಾಂಬ್ ಸ್ಫೋಟ, ಮೂವರ ಸ್ಥಿತಿ ಗಂಭೀರ

ಇಂದು ನಡೆದ ಕೋಲ್ಕತ್ತಾ ಮುನ್ಸಿಪಲ್​ ಕಾರ್ಪೋರೇಶನ್​ ಚುನಾವಣೆಯಲ್ಲಿ ಚುನಾವಣೆಯಲ್ಲಿ ಕಚ್ಚಾಬಾಂಬ್​ ಸ್ಫೋಟಗೊಂಡು ಮೂವರು ಮತದಾರರು ಗಾಯಗೊಂಡಿದ್ದಾರೆ. ಅದರಲ್ಲಿ ಒಬ್ಬರಿಗೆ ತೀವ್ರ ಗಾಯವಾಗಿದ್ದು, ಅವರು ತಮ್ಮ ಕಾಲು ಕಳೆದುಕೊಂಡಿದ್ದಾರೆ. ಇನ್ನಿಬ್ಬರೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಟಾಕಿ ಶಾಲೆಯ ವಾರ್ಡ್​ ನಂಬರ್​ 36ರಲ್ಲಿ, ಈ ಘಟನೆ ನಡೆದಿದ್ದು ಬೆಳಗ್ಗೆ 11 ಗಂಟೆಗೆ. … Continued

ವಿರಾಟ್ ಕೊಹ್ಲಿ ಸಾಕಷ್ಟು ಜಗಳವಾಡುತ್ತಾರೆ..! : ಕೊಹ್ಲಿ ವರ್ತನೆ ಬಗ್ಗೆ ಮೌನ ಮುರಿದ ಗಂಗೂಲಿ

ಮುಂಬೈ : ಏಕದಿನ ನಾಯಕತ್ವದಿಂದ ವಿರಾಟ್‌ ಕೊಹ್ಲಿ ಅವರನ್ನು ಕೆಳಗಿಸಿದ ಬೆನ್ನಲ್ಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಕೊನೆಗೂ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ ಗಂಗೂಲಿ ಮೌನ ಮುರಿದಿದ್ದಾರೆ. ಗುರ್‌ಗಾಂವ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗಂಗೂಲಿ ಅವರು ತಮ್ಮ ಪ್ರಕಾರ ಯಾವ ಆಟಗಾರ ಉತ್ತಮ ಮನೋಭಾವವನ್ನು ಹೊಂದಿದ್ದಾರೆ ಎಂಬುದಕ್ಕೆ ಉತ್ತರಿಸಿದರು. “ನಾನು ವಿರಾಟ್ … Continued

ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಿಸಿಕೊಂಡ ಅಪರೂಪದ ಬಿಳಿ ಅಲ್ಬಿನೋ ಹಾಗ್ ಜಿಂಕೆ.. ವಿಡಿಯೊದಲ್ಲಿ ಸೆರೆ

ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಪರೂಪದ ಅಲ್ಬಿನೋ ಹಂದಿ ಜಿಂಕೆಗಳ ವಿಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ಸಂತೋಷಪಟ್ಟಿದ್ದಾರೆ. ವೈರಲ್ ಕ್ಲಿಪ್ ಅನ್ನು ರಾಷ್ಟ್ರೀಯ ಉದ್ಯಾನವನದ ಅಧಿಕೃತ ಹ್ಯಾಂಡಲ್ ಮೂಲಕ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ, ಸುಂದರವಾದ ಬಿಳಿ ಹಂದಿ ಜಿಂಕೆ ಕಂದು ಬಣ್ಣದ ಜಿಂಕೆಯೊಂದಿಗೆ ಅಡ್ಡಾಡುತ್ತಿರುವುದನ್ನು ಗುರುತಿಸಲಾಯಿತು. ಅಪರೂಪದ … Continued