ಬಿಜೆಪಿಯೊಂದಿಗೆ ಮೈತ್ರಿ : ಪಂಜಾಬ್ ಸಿಎಂ ಅಮರಿಂದರ್ ಸಿಂಗ್

ಚಂಡೀಗಢ: ಪಂಜಾಬ್‌ನಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾಗಿ ಮುಖ್ಯಮಂತ್ರಿಯಾಗಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪ್ರಕಟಿಸಿದ್ದಾರೆ. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಂಡಿದ್ದಾಗಿ ಸಿಂಗ್ ಹೇಳಿದ್ದಾರೆ. ಬಿಜೆಪಿ ನಾಯಕರೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿದ ಬಳಿಕ ಅಮರಿಂದರ್‌ ಸಿಂಗ್‌ ಮೈತ್ರಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಚುನಾವಣೆಗಾಗಿ ಸೀಟುಗಳ ಹಂಚಿಕೆ ಸಂಬಂಧ ಮಾತುಕತೆ ನಡೆಯುತ್ತಿದೆ. ಸೀಟು ಹೊಂದಾಣಿಕೆ … Continued

ಭಾರತದ ಮಾನಸ ವಾರಣಾಸಿ ಸೇರಿದಂತೆ ಹಲವಾರು ಸ್ಪರ್ಧಿಗಳು ಕೋವಿಡ್-19 ಪಾಸಿಟಿವ್: ವಿಶ್ವ ಸುಂದರಿ 2021 ಸ್ಪರ್ಧೆ ಮುಂದಕ್ಕೆ

ವಿಶ್ವ ಸುಂದರಿ- 2021ರ ಅಂತಿಮ ಪಂದ್ಯವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಅಂತಿಮ ಪಂದ್ಯವು ಡಿಸೆಂಬರ್ 16 ರಂದು ಪೋರ್ಟೊ ರಿಕೊದಲ್ಲಿ ನಡೆಯಲಿದೆ. ವರದಿಗಳ ಪ್ರಕಾರ ಮಿಸ್ ವರ್ಲ್ಡ್ 2021 ಸ್ಪರ್ಧಿಗಳು ಮತ್ತು ಸಿಬ್ಬಂದಿ ಸೇರಿದಂತೆ 17 ಜನರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ. ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮಿಸ್ ಇಂಡಿಯಾ 2020 ಮಾನಸಾ ವಾರಣಾಸಿ ಕೂಡ ಒಬ್ಬರು. … Continued

‘ಅತ್ಯಾಚಾರವನ್ನು ಆನಂದಿಸಿ’ ಹೇಳಿಕೆ: ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ವಿರುದ್ಧ ನಿರ್ಭಯಾ ತಾಯಿ ವಾಗ್ದಾಳಿ

ನವದೆಹಲಿ: ಕರ್ನಾಟಕದ ಶಾಸಕ ಕೆ.ಆರ್. ರಮೇಶಕುಮಾರ್ ಅವರು “ಅತ್ಯಾಚಾರ ಅನಿವಾರ್ಯವಾದಾಗ, ಮಲಗಿ ಆನಂದಿಸಿ” ಎಂದು ಹೇಳಿಕೆಯನ್ನು 2012ರ ದೆಹಲಿಯ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ನಿರ್ಭಯಾ ತಾಯಿ ಖಂಡಿಸಿದ್ದು ಹೇಳಿಕೆಯನ್ನು “ಸಮಾಜದ ಮೇಲಿನ ಅಗೌರವದ ಕಳಂಕ” ಎಂದು ಹೇಳಿದ್ದಾರೆ. ಅಲ್ಲದೆ ರಮೇಶಕುಮಾರ ಅವರನ್ನು ಅಮಾನತು ಮಾಡಿ ಎಂದು ಒತ್ತಾಯಿಸಿದ್ದಾರೆ. . ಶಾಸಕರು ತಮ್ಮ ಅತಿರೇಕದ ಕಾಮೆಂಟ್‌ನೊಂದಿಗೆ ಸಮಾಜಕ್ಕೆ … Continued

ಭಾರತದ 11 ರಾಜ್ಯಗಳಲ್ಲಿ 101 ಓಮಿಕ್ರಾನ್ ಪ್ರಕರಣಗಳು ವರದಿ: ಜಾಗರೂಕರಾಗಿರಿ, ಅನಿವಾರ್ಯವಲ್ಲದ ಪ್ರಯಾಣ ಮುಂದೂಡಿ: ಆರೋಗ್ಯ ಸಚಿವಾಲಯ

ನವದೆಹಲಿ: ದೇಶದ 11 ರಾಜ್ಯಗಳಲ್ಲಿ 101 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ, ಕಳೆದ 20 ದಿನಗಳಿಂದ ದೈನಂದಿನ ಕೋವಿಡ್‌-19 ಪ್ರಕರಣಗಳು 10,000 ಕ್ಕಿಂತ ಕಡಿಮೆಯಾಗಿದೆ. ಆರೋಗ್ಯ ಸಚಿವಾಲಯ, ವಿವಿಧ ದೇಶಗಳಲ್ಲಿ ಓಮಿಕ್ರಾನ್ ರೂಪಾಂತರದ ಹೆಚ್ಚುತ್ತಿರುವ ಪ್ರಕರಣಗಳ ದೃಷ್ಟಿಯಿಂದ ಜನರು ಜಾಗರೂಕರಾಗಿರಬೇಕು ಮತ್ತು ಅನಿವಾರ್ಯವಲ್ಲದ ಪ್ರಯಾಣ, ಸಾಮೂಹಿಕ ಕೂಟಗಳನ್ನು ತಪ್ಪಿಸಬೇಕು ಮತ್ತು ಕಡಿಮೆ-ತೀವ್ರತೆಯ ಹಬ್ಬಗಳನ್ನು ಆಚರುಸಬೇಕು ಎಂದು ಹೇಳಿದೆ. … Continued

ಕೊಳವೆ ಬಾವಿಗೆ ಬಿದ್ದ ಮಗು; ಸತತ 10 ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಣೆ

ಭೋಪಾಲ್: 80 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಒಂದು ವರ್ಷದ ಹೆಣ್ಣು ಮಗುವನ್ನು ಪೊಲೀಸರು ಮತ್ತು ರಾಜ್ಯ ವಿಪತ್ತು ತುರ್ತು ಮೀಸಲು ಪಡೆ (SDERF) 10 ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಛತ್ತರ್‍ಪುರ ಜಿಲ್ಲೆಯ ಗೌಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ಮಧ್ಯಾಹ್ನ 3:30ರ ಹೊತ್ತಿಗೆ ಕೊಳವೆ ಬಾವಿಗೆ ಬಿದ್ದ … Continued

ವಿಕಲಾಂಗ ಮಹಿಳೆಯ ಕಾಲಿಗೆ ನಮಸ್ಕರಿಸಿದ ಮೋದಿ

ಲಕ್ನೋ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮನ್ನು ಭೇಟಿಯಾಗಲು ಬಂದಿದ್ದ ದಿವ್ಯಾಂಗ ಮಹಿಳೆಯೊರ್ವರ ಕಾಲಿಗೆ ನಮಸ್ಕರಿಸಿದ್ದಾರೆ. ಡಿ.13 ರಂದು ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗೆ ಮೋದಿ ವಾರಾಣಸಿಗೆ ಆಗಮಿಸಿದ್ದರು. ಉದ್ಘಾಟನೆ ಬಳಿಕ ಮೋದಿ ಅವರನ್ನು ಭೇಟಿ ಮಾಡಲು ಶಿಖಾ ರಸ್ತೋಗಿ ಅವರು ಬಂದಿದ್ದರು. ಮಹಿಳೆಯನ್ನು ನೋಡಿದ ಪ್ರಧಾನಿ ತಕ್ಷಣವೇ ಆಕೆಯ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಈ … Continued

 ಹೈದರಾಬಾದ್: ಹುಬ್ಬಳ್ಳಿ ವ್ಯಕ್ತಿಯ ದೇಹದಿಂದ ಬರೋಬ್ಬರಿ 156 ಕಿಡ್ನಿ ಸ್ಟೋನ್ಸ್ ತೆಗೆದ ವೈದ್ಯರು…!

ಹೈದರಾಬಾದ್: ನಗರದ ಪ್ರಮುಖ ಮೂತ್ರಪಿಂಡ ಆಸ್ಪತ್ರೆ ಪ್ರೀತಿ ಯುರಾಲಜಿ ಮತ್ತು ಕಿಡ್ನಿ ಆಸ್ಪತ್ರೆಯ ವೈದ್ಯರು ಬರೋಬ್ಬರಿ 156 ಮೂತ್ರಪಿಂಡದ ಕಲ್ಲುಗಳನ್ನು (ಕಿಡ್ನಿ ಸ್ಟೋನ್ಸ್) ತೆಗೆದುಹಾಕಿದ್ದಾರೆ…! ಮುಖ ಆಸ್ಪತ್ರೆಯ ವೈದ್ಯರು 50 ವರ್ಷದ ರೋಗಿಯಿಂದ ಲ್ಯಾಪರೊಸ್ಕೋಪಿ ಮತ್ತು ಎಂಡೋಸ್ಕೋಪಿಯನ್ನು ಬಳಸಿ 156 ಕಿಡ್ನಿ ಸ್ಟೋನ್ಸ್ ಗಳನ್ನು ಹೊರತೆಗೆದಿದ್ದಾರೆ. ಈ ಆಪರೇಷನ್ ಸುಮಾರು ಮೂರು ಗಂಟೆಗಳ ಕಾಲ ನಡೆದಿದ್ದು, … Continued

ದೆಹಲಿ, ಎನ್‌ಸಿಆರ್‌ನಲ್ಲಿ ವಿವಾಹ ಕಾರ್ಯಕ್ರಮ ನೆರವೇರಿಸುವ ಮೀರತ್‌ನ ಮಹಿಳಾ ಪುರೋಹಿತರು

ಮೀರತ್: ಒಂದು ಉಪಕ್ರಮದಲ್ಲಿ, ಮಹಿಳಾ ಪುರೋಹಿತರು ವೇದ ಮಂತ್ರಗಳನ್ನು ಪಠಿಸುವ ಮೂಲಕ ವಿವಾಹ ಸಮಾರಂಭಗಳನ್ನು ನಡೆಸಲು ಪ್ರಾರಂಭಿಸಿದ್ದಾರೆ. ಮೀರತ್‌ನ ನಾರಂಗ್‌ ಪುರದಲ್ಲಿರುವ ಶ್ರೀಮದ್ ದಯಾನಂದ ಉತ್ಕರ್ಷ ಆರ್ಶ ಕನ್ಯಾ ಗುರುಕುಲದ ಪ್ರಾಂಶುಪಾಲರು ಸೇರಿದಂತೆ ಮಹಿಳಾ ಪುರೋಹಿತರು ಮತ್ತು ಅವರ ಇತರ ಸಹಾಯಕರು ವೈದಿಕ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ವಿವಾಹವನ್ನು ನೆರವೇರಿಸುತ್ತಿದ್ದಾರೆ ಎಂದು ಹಿಂದಿ ದೈನಿಕ ಹಿಂದೂಸ್ತಾನ್ … Continued

ಸಿಡಿಎಸ್ ರಾವತ್ ನಿಧನದ ನಂತರ ಸಿಬ್ಬಂದಿ ಸಮಿತಿಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ

ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಎಲ್ಲಾ ಮೂರು ರಕ್ಷಣಾ ಸೇವೆಗಳ ಮುಖ್ಯಸ್ಥರನ್ನು ಒಳಗೊಂಡಿರುವ ಭಾರತದ ಹೊಸ ಮುಖ್ಯಸ್ಥರ ಸಮಿತಿ (ಸಿಒಎಸ್‌ಸಿ) ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಡಿಸೆಂಬರ್ 8 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ನಿಧನದ ಒಂದು ವಾರದ ನಂತರ ಈ … Continued

ಕೇರಳ: ಸಕ್ರಿಯ ರಾಜಕಾರಣಕ್ಕೆ ಮೆಟ್ರೊಮ್ಯಾನ್ ಶ್ರೀಧರನ್ ಗುಡ್ ಬೈ

ಕೊಚ್ಚಿ: ‘ಮೆಟ್ರೊ ಮ್ಯಾನ್’ ಎಂದೇ ಖ್ಯಾತರಾದ ಇ ಶ್ರೀಧರನ್ ಸಕ್ರಿಯ ರಾಜಕಾರಣದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಧರನ್, ಇನ್ನು ಮುಂದೆ ಸಕ್ರಿಯ ರಾಜಕಾರಣದಲ್ಲಿ ತೊಡಗುವುದಿಲ್ಲ. ರಾಜಕೀಯದಿಂದ ದೂರ ಉಳಿದು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. 90 ವರ್ಷ ವಯಸ್ಸಿನ ನಾನು ಇನ್ನು ಮುಂದೆ ಸಕ್ರಿಯ ರಾಜಕಾರಣದಲ್ಲಿರುವುದು ಸೂಕ್ತವಲ್ಲ ಭಾವಿಸಿದ್ದೇನೆ ಎಂದು ಶ್ರೀಧರನ್ … Continued