ನಟ ರಜನಿಕಾಂತ್ ಚೆನ್ನೈ ಆಸ್ಪತ್ರೆಗೆ ದಾಖಲು

ಚೆನ್ನೈ: ನಟ ರಜನಿಕಾಂತ್ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ತಂಡದ ಪ್ರಕಾರ, ಅವರನ್ನು ‘ರೂಟಿನ್ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗುರುವಾರ ಸಂಜೆ 4.30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ನಿಯಮಿತವಾಗಿ ಮಾಡುವ ಆರೋಗ್ಯ ತಪಾಸಣೆಯಾಗಿದೆ. ಅವರು ಈಗ ತಪಾಸಣೆಗಾಗಿ ಖಾಸಗಿ ಆಸ್ಪತ್ರೆಯಲ್ಲಿದ್ದಾರೆ” ಎಂದು ರಜನಿಕಾಂತ ಅವರ ತಂಡದ ರಿಯಾಜ್ ಕೆ ಅಹ್ಮದ್ ತಿಳಿಸಿದ್ದಾರೆ. ದಾದಾಸಾಹೇಬ್ … Continued

ಟಿಡಿಪಿ-ಬಿಜೆಪಿ ಮತ್ತೆ ಮೈತ್ರಿ ಮಾಡಿಕೊಳ್ಳುತ್ತವೆಯೇ? :ಊಹಾಪೋಹಗಳಿಗೆ ಕಾರಣವಾದ ನಾಯ್ಡು ದೆಹಲಿ ಭೇಟಿ

ಅಮರಾವತಿ: ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಇತ್ತೀಚೆಗೆ ನವದೆಹಲಿಗೆ ಭೇಟಿ ನೀಡಿದ್ದು, ಅವರು ಬಿಜೆಪಿಯೊಂದಿಗಿನ ಸಂಬಂಧವನ್ನು ಸರಿಪಡಿಸಲು ಮತ್ತು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಪಟ್ಟುಗೆ ಮರಳಲು ಸಿದ್ಧರಿದ್ದಾರೆ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಅಕ್ಟೋಬರ್ 19 ರಂದು ಟಿಡಿಪಿ ನಾಯಕರು ಮತ್ತು ಕಚೇರಿಗಳ ಮೇಲೆ ಸರಣಿ ದಾಳಿಯ ನಂತರ, ಆಂಧ್ರಪ್ರದೇಶದಲ್ಲಿ ರಾಷ್ಟ್ರಪತಿ … Continued

ಬಂಧನಕ್ಕೂ 3 ದಿನ ಮೊದಲು ಸಮೀರ್ ವಾಂಖೆಡೆಗೆ ನೋಟಿಸ್: ಬಾಂಬೆ ಹೈಕೋರ್ಟ್‌ಗೆ ಮುಂಬೈ ಪೊಲೀಸರ ಭರವಸೆ

ಮುಂಬೈ: ಕ್ರೂಸ್‌ ಹಡಗು ಡ್ರಗ್ಸ್‌ ಪ್ರಕರಣಕ್ಕೆ ತಳಕು ಹಾಕಿಕೊಂಡಿರುವ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್‌ ವಾಂಖೇಡೆ ಅವರನ್ನು ಬಂಧಿಸುವ ಮೂರು ದಿನಗಳಿಗೂ ಮುನ್ನ ಅವರಿಗೆ ನೋಟಿಸ್‌ ನೀಡಲಾಗುವುದು ಎಂದು ಮುಂಬೈ ಪೊಲೀಸರು ಗುರುವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಪೊಲೀಸರು ನೀಡಿದ ಭರವಸೆಯನ್ನು ದಾಖಲಿಸಿಕೊಂಡ ನ್ಯಾಯಮೂರ್ತಿಗಳಾದ ನಿತಿನ್ ಜಾಮ್‌ದಾರ್ … Continued

ಸತತ 2ನೇ ವರ್ಷ ‘ಭಾರತದ ಅತ್ಯಂತ ಉದಾರಿ ಉದ್ಯಮಿ ಪ್ರಶಸ್ತಿ ಉಳಿಸಿಕೊಂಡ ಅಜೀಂ ಪ್ರೇಮ್‌ಜಿ, ದಿನಕ್ಕೆ 27 ಕೋಟಿ ದೇಣಿಗೆ ನೀಡಿದ ಉದ್ಯಮಿ..! ಉಳಿದವರ ಪಟ್ಟಿ ಇಲ್ಲಿದೆ

ನವದೆಹಲಿ: ವಾರ್ಷಿಕ 9,713 ಕೋಟಿ ರೂಪಾಯಿ ದೇಣಿಗೆಯೊಂದಿಗೆ, 76 ವರ್ಷದ ಅಜೀಂ ಪ್ರೇಮ್‌ಜಿ ಅವರು ಎರಡನೇ ವರ್ಷಕ್ಕೆ ‘ಭಾರತದ ಅತ್ಯಂತ ಉದಾರ ದಾನಿ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದಾರೆ ಎಂದು ಹುರುನ್ ಇಂಡಿಯಾ ಮತ್ತು ಎಡೆಲ್‌ಗಿವ್ ವರದಿ ‘ಎಡೆಲ್‌ಗಿವ್ ಹುರುನ್ ಇಂಡಿಯಾ ಫಿಲಾಂತ್ರಪಿ ಲಿಸ್ಟ್ 2021′(EdelGive Hurun India Philanthropy List 2021) ಇಂದು (ಗುರುವಾರ) ತಿಳಿಸಿದೆ. ಟೆಕ್ … Continued

ಉತ್ತರಪ್ರದೇಶ ಚುನಾವಣೆ ಎಫೆಕ್ಟ್​; 30 ಲಕ್ಷ ಬಿಜೆಪಿ ಕಾರ್ಯಕರ್ತರಿಗೆ ದೀಪಾವಳಿ ಉಡುಗೊರೆ…!

ಲಕ್ನೋ: ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷವು (ಬಿಜೆಪಿ) ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಪ್ರಯತ್ನಗಳನ್ನು ಚುರುಕುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕೇಸರಿ ಪಕ್ಷವು ತನ್ನ 30 ಲಕ್ಷ ಬೂತ್ ಕಾರ್ಯಕರ್ತರಿಗೆ ದೀಪಾವಳಿ ಉಡುಗೊರೆ ಕಳುಹಿಸಿದೆ ಎಂದು ವರದಿಯಾಗಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ … Continued

ಸಮೀರ್ ವಾಂಖೇಡೆ ವಿರುದ್ಧದ ಸುಲಿಗೆ ಆರೋಪ: ಮುಂಬೈ ಪೊಲೀಸರಿಂದ ತನಿಖೆಗೆ ನಾಲ್ಕು ತಂಡ ರಚನೆ

ಮುಂಬೈ: ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್ ವಾಂಖೇಡೆ ವಿರುದ್ಧದ ಸುಲಿಗೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಂಬೈ ಪೊಲೀಸರು ನಾಲ್ಕು ಅಧಿಕಾರಿಗಳ ತಂಡ ರಚಿಸಿದ್ದಾರೆ. ಇಬ್ಬರು ಮೇಲ್ವಿಚಾರಕರು ಹಾಗೂ ನಾಲ್ವರು ಸದಸ್ಯರನ್ನು ತಂಡ ಒಳಗೊಂಡಿದ್ದು ವಾಂಖೆಡೆ ವಿರುದ್ಧದ ಸುಲಿಗೆ ಮತ್ತು ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ನಾಲ್ಕು ದೂರುಗಳ … Continued

ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣ: ಆರ್ಯನ್​ ಖಾನ್​ಗೆ ಕೊನೆಗೂ ಜಾಮೀನು, ಶಾರುಖ್​ ಕುಟುಂಬಕ್ಕೆ ರಿಲೀಫ್​

ಮುಂಬೈ:ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಆದೇಶದ ಆಪರೇಟಿವ್ ಭಾಗವು ನಾಳೆ ಬೆಳಿಗ್ಗೆ … Continued

ಮಹಿಳೆ, ನವಜಾತ ಶಿಶು ರಕ್ಷಿಸಲು ವಾಪಸ್‌ ಬಂದ ರೈಲು…! ರೈಲ್ವೆ ಕಾರ್ಯಕ್ಕೆ ಭಾರೀ ಪ್ರಶಂಸೆ…

ಟಾಟಾನಗರ (ಜಾರ್ಖಂಡ್): ರೈಲು ಹೊರಟ ಕೆಲವೇ ಕ್ಷಣಗಳಲ್ಲಿ ರೈಲಿನಲ್ಲಿದ್ದ ಗರ್ಭಿಣಿಯೊಬ್ಬಳಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಮಹಿಳೆ ಮತ್ತು ವಜಾತ ಶಿಶು ಕಾಪಾಡಿದ  ಘಟನೆ ಜಾರ್ಖಂಡ್‌ನ ಟಾಟಾನಗರದಲ್ಲಿ ನಡೆದಿದೆ. ಈ ಕಾರ್ಯಕ್ಕೆ ರೈಲ್ವೆ ಇಲಾಖೆಗೆ ಬಾರೀ ಪ್ರಶಂಸೆ ವ್ಯಕ್ತವಾಗಿದೆ. ಗರ್ಭಿಣಿ ಮಹಿಳೆಗೆ ಹೆರಿಗೆ ಇನ್ನೂ ದಿನಗಳು ಇದ್ದುದರಿಂದ ಅವಳು ರೈಲು ಪ್ರಯಾಣ ಮಾಡಲು ನಿರ್ಧರಿಸಿದ್ದಳು. ರಾಣು … Continued

ಆರ್ಯನ್ ಖಾನ್ ಡ್ರಗ್ ಪ್ರಕರಣ: ಶಾರುಖ್ ಖಾನ್ ಮ್ಯಾನೇಜರ್, ಇತರರ ಕರೆ ಡೇಟಾ ದಾಖಲೆ ಪಡೆಯಲು ತನಗೆ 5 ಲಕ್ಷ ರೂಪಾಯಿ ಆಫರ್‌: ಪೊಲೀಸರಿಗೆ ತಿಳಿಸಿದ ಎಥಿಕಲ್ ಹ್ಯಾಕರ್

ಮುಂಬೈ: ಮುಂಬೈ ಕ್ರೂಸ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗ ಆರ್ಯನ್‌ ಖಾನ್‌ ಡ್ರಗ್ಸ್‌ಗೆ ಸಂಬಂಧಿಸಿದಂತೆ ಇತರರಿಗೆ ಮೊಬೈಲ್‌ನಲ್ಲಿ ಕಳುಹಿಸಿರುವ ಸಂದೇಶಗಳನ್ನು ಅಳಿಸಿಹಾಕಲು ಎಥಿಕಲ್ ಹ್ಯಾಕರ್ ಒಬ್ಬರಿಗೆ ಲಂಚ ನೀಡಿರುವುದಾಗಿ ಆರೋಪ ಕೇಳಿಬಂದಿದೆ. ಅಕ್ಟೋಬರ್ 27 ರಂದು, ಶಾರುಖ್ ಖಾನ್ ಅವರ … Continued

ನೀಟ್‌’ ಫಲಿತಾಂಶ ಪ್ರಕಟಿಸಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ದೇಶಾದ್ಯಂತ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ 2021ನೇ ಸಾಲಿನ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಯ ಫಲಿತಾಂಶ ಪ್ರಕಟಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ)ಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ. “ನಾವು ಹೈಕೋರ್ಟ್ ತೀರ್ಪಿಗೆ ತಡೆ ನೀಡುತ್ತೇವೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಫಲಿತಾಂಶವನ್ನು ಪ್ರಕಟಿಸಬಹುದು” ಎಂದು ಎನ್‌ಟಿಎ ಪರವಾಗಿ ವಾದಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ … Continued