ಕ್ರೈಸ್ತ, ಇಸ್ಲಾಮಿಗೆ ಮತಾಂತರವಾದ ದಲಿತರಿಗೆ ಮೀಸಲು ಸೌಲಭ್ಯವಿಲ್ಲ

ನವದೆಹಲಿ: ಕ್ರೈಸ್ತ, ಇಸ್ಲಾಮ್ ಧರ್ಮಗಳಿಗೆ ಮತಾಂತರವಾಗುವ ದಲಿತರು ಮೀಸಲು ಕ್ಷೇತ್ರಗಳಲ್ಲಿ ವಿಧಾನಸಭೆ, ಲೋಕಸಭೆ ಚುನಾವಣೆಗಳಿಗೆ ಸ್ಪರ್ಧಿಸುವಂತಿಲ್ಲ ಹಾಗೂ ಅಂತಹ ದಲಿತರಿಗೆ ಮೀಸಲಾತಿಯಡಿಯಲ್ಲಿ ಯಾವ ಸೌಲಭ್ಯವೂ ಸಿಗುವುದಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಶುಕ್ರವಾರ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಹಿಂದೂ, ಸಿಖ್, … Continued

ದಿನೇಶ ತ್ರಿವೇದಿ ಬಿಜೆಪಿಗೆ ಬಂದರೆ ಸ್ವಾಗತ

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕ ದಿನೇಶ ತ್ರಿವೇದಿ ಶುಕ್ರವಾರ ರಾಜ್ಯಸಭೆಯಲ್ಲಿ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಅವರು ಬಯಸಿದರೆ ತಮ್ಮ ಪಕ್ಷಕ್ಕೆ ಬರಬಹುದು ಎಂದು ಬಿಜೆಪಿ ಹೇಳಿದೆ. ದಿನೇಶ್ ತ್ರಿವೇದಿ ರಾಜೀನಾಮೆ ಬಗ್ಗೆ ಸುದಿಗಾರರ ಜೊತೆ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ , ದಿನೇಶ ತ್ರಿವೇದಿ ಅವರು ಇಷ್ಟವಿದ್ದರೆ ಬಿಜೆಪಿಗೆ … Continued

ಫೆ.೧೪ರಿಂದ ಮೂರು ರಾಜ್ಯಗಳ ಮಹಾಪಂಚಾಯತ್‌ನಲ್ಲಿ ಟಿಕಾಯಿತ್‌ ಭಾಗಿ

ಘಾಜಿಯಾಬಾದ್: ಕೇಂದ್ರ ಸರ್ಕಾರ ಹೊಸ ಕೃಷಿ ಕಾನೂನುಗಳ ಜಾರಿ ವಿರುದ್ಧ ಮೂರು ತಿಂಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ಮತ್ತಷ್ಟು ಬೆಂಬಲ ಪಡೆಯಲು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖಂಡ ರಾಕೇಶ್ ಟಿಕಾಯಿತ್‌ ಈಗ ದೇಶಾದ್ಯಂತ ಪ್ರವಾಸ ಆರಂಭಿಸಿದ್ದಾರೆ. ಅವರು ಹರಿಯಾಣ, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ಆಯೋಜಿಸಿರುವ ಏಳು ‘ಮಹಾಪಂಚಾಯತ್’ ಸಭೆಗಳಲ್ಲಿ ಭಾಗವಹಿಸಲಿದ್ದು. ಸಂಯುಕ್ತ ಕಿಸಾನ್ ಮೋರ್ಚಾದ ಪ್ರತಿಭಟನೆಯ ಭಾಗವಾಗಿ … Continued

ತಮಿಳುನಾಡಿನಲ್ಲಿ ಪಟಾಕಿ ಘಟಕ ಸ್ಫೋಟ:೧೩ ಸಾವು, ೨೨ ಜನರಿಗೆ ಗಾಯ

ಚೆನ್ನೈ: ತಮಿಳುನಾಡಿನಲ್ಲಿ ಪಟಾಕಿ ಘಟಕದಲ್ಲಿ ಸ್ಫೋಟಗೊಂಡ ಪರಿಣಾಮ 13 ಮಂದಿ ಮೃತಪಟ್ಟಿದ್ದು, 22 ಮಂದಿಗೆ ಗಾಯಗಳಾಗಿವೆ. ಶುಕ್ರವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ವೆಂಬಕೊಟ್ಟೈ ನ ಕೊಟ್ಟೈಪಾಟಿಯಲ್ಲಿರುವ ಅಚಂಕುಲಂ ಈ ಅವಘಡ ನಡೆದಿದ್ದು, ಮೃತಪಟ್ಟವರ 11 ಮಂದಿಯ ಪೈಕಿ 9 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಾಯಗೊಂಡ ಇಬ್ಬರನ್ನು ಸಟ್ಟೂರ್‌ ಆಸ್ಪತ್ರೆಗೆ ಸೇರಿಸಲಾಯಿತಾದರೂ ಗಂಭೀರ ಗಾಯಗಳಾಗಿದ್ದ ಾವರು ಚಿಕಿತ್ಸೆ … Continued

ಸೇನಾ ಹಿಂತೆಗೆತ ಒಪ್ಪಂದದಲ್ಲಿ ಭಾರತ ಯಾವುದೇ ಭೂಪ್ರದೇಶ ಕಳೆದುಕೊಂಡಿಲ್ಲ: ಸರ್ಕಾರ

ನವ ದೆಹಲಿ: ಪೂರ್ವ ಲಡಾಖ್‌ನ ಪಾಂಗೊಂಗ್ ಸರೋವರ ಪ್ರದೇಶಗಳಲ್ಲಿ ಚೀನಾದೊಂದಿಗೆ ಅಂತಿಮಗೊಳಿಸಿದ ಸೈನ್ಯ ಹಿಂತೆಗೆತದ ಒಪ್ಪಂದದಲ್ಲಿ ಭಾರತವು ಯಾವುದೇ ಭೂಪ್ರದೇಶವನ್ನೂ ಕಳೆದುಕೊಂಡಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸೈನ್ಯ ಹಿಂತೆಗೆತದ ಒಪ್ಪಂದದಲ್ಲಿ ಭಾರತೀಯ ಭೂಪ್ರದೇಶವನ್ನು ಚೀನಿಯರಿಗೆ ಬಿಟ್ಟುಕೊಟ್ಟಿದ್ದಾರೆ ಎಂದು ಶುಕ್ರವಾರ ರಾಹುಲ್‌ ಗಾಂಧಿ ಮಾಡಿದ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವಾಲಯವು, ದೇಶದ ರಾಷ್ಟ್ರೀಯ ಹಿತಾಸಕ್ತಿ ಹಾಗೂ … Continued

ರಾಜ್ಯಸಭೆಯಲ್ಲಿಯೇ ಸಂಸದ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ ದಿನೇಶ ತ್ರಿವೇದಿ

ನವ ದೆಹಲಿ: ಕೇಂದ್ರ ರೈಲ್ವೆ ಮಾಜಿ ಸಚಿವ ಮತ್ತು ರಾಜ್ಯಸಭಾ ಹಿರಿಯ ಸಂಸದ ದಿನೇಶ್ ತ್ರಿವೇದಿ ರಾಜ್ಯಸಭೆಗೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ. ಅವರು ಈ ನಿರ್ಧಾರವನ್ನು ರಾಜ್ಯಸಭೆಯಲ್ಲಿಯೇ ಪ್ರಕಟಿಸಿದರು. ಬಂಗಾಳದ ಮೇರು ನಾಯಕರಾದ ಸುವೇಂದು ಅಧಿಕಾರಿ, ಸಚಿವ ರಾಜೀವ್‌ ಬ್ಯಾನರ್ಜಿ ಮತ್ತು ಕೆಲವು ತೃಣಮೂಲ ಕಾಂಗ್ರೆಸ್ ಶಾಸಕರು ಪಶ್ಚಿಮ ಬಂಗಾಳದಲ್ಲಿ ಆಡಳಿತ ಪಕ್ಷ ತೃಣ ಮೂಲ … Continued

ಇಸ್ರೋ ಸೌಲಭ್ಯ ಬಳಕೆಗೆ ಖಾಸಗಿ ಸಂಸ್ಥೆಗಳಿಗೆ ಅವಕಾಶ…!

ಬೆಂಗಳೂರು: ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಈಗ ತನ್ನ ಉಪಗ್ರಹ ಕೇಂದ್ರವನ್ನು ಖಾಸಗಿ ಸಂಸ್ಥೆಗಳಿಗೆ ತೆರೆದಿದೆ. ಈಗಾಗಲೇ ಖಾಸಗಿ ಕಂಪನಿಗಳ ಎರಡು ಉಪಗ್ರಹಗಳನ್ನು ಹಾಗೂ ಅಕಾಡೆಮಿಯ ಒಂದು ಉಪಗ್ರಹವನ್ನು ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ (ಯುಆರ್‍ಎಸ್‍ಸಿ) ಪರೀಕ್ಷಿಸಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ಎರಡು ಖಾಸಗಿ ಕಂಪನಿಗಳು ತಮ್ಮ ಎಂಜಿನ್‍ಗಳನ್ನು … Continued

ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ

ನವ ದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕರ್ಜುನ್ ಖರ್ಗೆ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಲಿದ್ದಾರೆ. ಗುಲಾಂ ನಬಿ ಆಜಾದ್‌ ನಿವೃತ್ತಿಯ ನಂತರ, ರಾಜ್ಯಸಭಾ ಚೇರ್ಮನ್‌ ಎಂ.ವೆಂಕಯ್ಯ ನಾಯ್ಡು ಅವರಿಗೆ ಕಾಂಗ್ರೆಸ್‌ ಪಕ್ಷವು ಪ್ರತಿಪಕ್ಷದ ನಾಯಕರನ್ನಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಕ ಮಾಡುವಂತೆ ಪತ್ರ ಬರೆದಿತ್ತು, ಫೆಬ್ರವರಿ 15 ರಂದು ರಾಜ್ಯಸಭಾ ಸದಸ್ಯರಾಗಿ ಆಜಾದ್ ಅವರ … Continued

ಭಾರತದ ಭೂಪ್ರದೇಶ ಚೀನಾಕ್ಕೆ ನೀಡಿದ ಹೇಡಿ: ಪ್ರಧಾನಿ ಮೋದಿಗೆ ಜರೆದ ರಾಹುಲ್‌

ನವ ದೆಹಲಿ: ಪೂರ್ವ ಲಡಾಖ್‌ನ ಪಾಂಗೊಂಗ್‌ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿ ಭಾರತ ಮತ್ತು ಚೀನಾ ಸೇನಾ ಹಿಂತೆಗೆತದ ಕುರಿತು ಒಪ್ಪಂದ ಮಾಡಿಕೊಂಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಘೋಷಿಸಿದ ಒಂದು ದಿನದ ನಂತರ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭೂಪ್ರದೇಶವನ್ನು … Continued

ಸುಳ್ಳು ಸುದ್ದಿ ಪರಿಶೀಲನಾ ಕಾರ್ಯವಿಧಾನ ಮಾಹಿತಿ ಕೋರಿ ಅರ್ಜಿ: ಕೇಂದ್ರ ಸರ್ಕಾರ, ಟ್ವಿಟ್ಟರ್‌ಗೆ ಸುಪ್ರೀಂ ಕೋರ್ಟ್‌ ನೋಟಿಸ್‌

ನವ ದೆಹಲಿ: ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಮತ್ತು ಟ್ವಿಟರ್ಗೆ ನೋಟಿಸ್ ನೀಡಿದೆ. ನಕಲಿ ಸುದ್ದಿಗಳ ಮೂಲಕ ದ್ವೇಷ ಹರಡುವ ಮತ್ತು ನಕಲಿ ಖಾತೆಗಳ ಮೂಲಕ ಪ್ರಚೋದನೆ ಮಾಡುವ ಸಂದೇಶಗಳನ್ನು ಪರಿಶೀಲಿಸಲು ಟ್ವಿಟ್ಟರ್‌ ನಕಲಿ ಸುದ್ದಿಗಳನ್ನು ಯಾವ ರೀತಿ ಪರಿಶೀಲಿಸುವ ಕಾರ್ಯವಿಧಾನ ಎಂಬುದನ್ನು ಕೋರಿ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರ ಹಾಗೂ … Continued