ಸುಳ್ಳು ಸುದ್ದಿ ಪರಿಶೀಲನಾ ಕಾರ್ಯವಿಧಾನ ಮಾಹಿತಿ ಕೋರಿ ಅರ್ಜಿ: ಕೇಂದ್ರ ಸರ್ಕಾರ, ಟ್ವಿಟ್ಟರ್‌ಗೆ ಸುಪ್ರೀಂ ಕೋರ್ಟ್‌ ನೋಟಿಸ್‌

ನವ ದೆಹಲಿ: ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಮತ್ತು ಟ್ವಿಟರ್ಗೆ ನೋಟಿಸ್ ನೀಡಿದೆ. ನಕಲಿ ಸುದ್ದಿಗಳ ಮೂಲಕ ದ್ವೇಷ ಹರಡುವ ಮತ್ತು ನಕಲಿ ಖಾತೆಗಳ ಮೂಲಕ ಪ್ರಚೋದನೆ ಮಾಡುವ ಸಂದೇಶಗಳನ್ನು ಪರಿಶೀಲಿಸಲು ಟ್ವಿಟ್ಟರ್‌ ನಕಲಿ ಸುದ್ದಿಗಳನ್ನು ಯಾವ ರೀತಿ ಪರಿಶೀಲಿಸುವ ಕಾರ್ಯವಿಧಾನ ಎಂಬುದನ್ನು ಕೋರಿ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರ ಹಾಗೂ … Continued

ಎಲ್ಲರೂ ಲಸಿಕೆ ಪಡೆದ ನಂತರ ಬಂಗಾಳದಲ್ಲಿ ಸಿಎಎ ಜಾರಿ: ಅಮಿತ್‌ ಶಾ

ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಅನುಷ್ಠಾನಕ್ಕೆ ಸಂಬಂಧಿಸಿದ ಊಹಾಪೋಹಗಳಿಗೆ ಅಂತ್ಯ ಹಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಠಾಕೂರ್‌ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ದೇಶದ ಪ್ರತಿಯೊಬ್ಬರಿಗೂ ಕೊರೋನಾ ಲಸಿಕೆ ಹಾಕಿದ ನಂತರ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಿಎಎ ಜಾರಿಗೆ ತರಲಿದೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಮಾಟುವಾಸ್ ಮತ್ತು … Continued

ಸಂಸದ ಸುಖ್ ರಾಮ್ ಸಿಂಗ್ ಯಾದವ್ ಟ್ವಿಟ್ಟರ್‌ಗೆ ತಡೆ

ನವದೆಹಲಿ: ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಚೌಧರಿ ಸುಖ್ ರಾಮ್ ಸಿಂಗ್ ಯಾದವ್ ಅವರ ಟ್ವೀಟ್ ಖಾತೆಯನ್ನು ತಡೆಹಿಡಿಯಲಾಗಿದೆ.. ಈ ಬಗ್ಗೆ ಮಾಹಿತಿ ಉತ್ತರ ಪ್ರದೇಶ ಸಂಸದ ಸುಖ ರಾಮ್‌ ಸಿಂಗ್‌ ಅವರೇ ಹೇಳಿದ್ದಾರೆ. ಭಾರತದಲ್ಲಿ ಟ್ವಿಟರ್ ತಡೆ ಹಿಡಿದಿರುವ ಹೈ ಪ್ರೊಫೈಲ್ ಖಾತೆಗಳ ಪೈಕಿ ಇದೂ ಒಂದಾಗಿದೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು … Continued

ಮಿತಿ ಹೆಚ್ಚಳ: ವಿಮಾನ ಪ್ರಯಾಣ ಈಗ ದುಬಾರಿ

ನವ ದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಗುರುವಾರ ದೇಶೀಯ ವಿಮಾನಗಳ ಮೇಲಿನ ಮಿತಿಗಳನ್ನು ಶೇಕಡಾ 10 ರಿಂದ 30 ರಷ್ಟು ಹೆಚ್ಚಿಸಿರುವುದರಿಂದ ಪ್ರಯಾಣಿಕರು ಈಗಿನಿಂದ ವಿಮಾನ ಪ್ರಯಾಣಕ್ಕಾಗಿ ಹೆಚ್ಚಿನ ಹಣ ತೆರಬೇಕಾಗುತ್ತದೆ. ಈ ಹೊಸ ಮಿತಿಗಳು “ಮಾರ್ಚ್ 31, 2021 ರ ವರೆಗೆ ಅಥವಾ ಮುಂದಿನ ಆದೇಶದ ವರೆಗೆ” ಜಾರಿಯಲ್ಲಿರುತ್ತವೆ ಎಂದು ಸಚಿವಾಲಯ ಗುರುವಾರ ತನ್ನ … Continued

ಕೃಷಿ ಕಾನೂನಿಂದ ಮಂಡಿ ವ್ಯವಸ್ಥೆ, ರೈತರ ಹಿತಕ್ಕೆ ಧಕ್ಕೆ: ರಾಹುಲ್‌ ವಾಗ್ದಾಳಿ

ನವ ದೆಹಲಿ: ವಿವಾದಾತ್ಮಕ ಕೃಷಿ ಕಾನೂನುಗಳ ಬಗ್ಗೆ ಲೋಕಸಭೆಯಲ್ಲಿ ಕೇಂದ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಕಾನೂನುಗಳು “ರೈತರು, ಸಣ್ಣ, ಮಧ್ಯಮ ಉದ್ಯಮಿಗಳು ಮತ್ತು ಮಂಡಿಗಳನ್ನು ನಾಶ ಪಡಿಸಲು” ಉದ್ದೇಶಿಸಿದಂತಿದೆ ಎಂದು ಆರೋಪಿಸಿದರು. ಈ ಸರ್ಕಾರ ಕೇವಲ ನಾಲ್ಕು ಜನರಿಂದ ನಡೆಯುವಂತಿದೆ. ಅದು ಹಮ್‌ ದೋ, ಹಮಾರೆ … Continued

ಧಾರವಾಡ ಬೈಪಾಸ್ ಅಗಲೀಕರಣಕ್ಕೆ ಟೆಂಡರ್ ಕರೆಯಲು ಗಡ್ಕರಿ ಸೂಚನೆ

ಹುಬ್ಬಳ್ಳಿ : ಧಾರವಾಡ ಬೈಪಾಸ್ ಅಗಲೀಕರಣಕ್ಕೆ ಟೆಂಡರ್ ಕರೆಯಲು ಕೇಂದ್ರ ಸಾರಿಗೆ ಸಚಿವ ಗಡ್ಕರಿ ಸೂಚನೆ ನೀಡಿದ್ದಾರೆ. ಗುರುವಾರ ವದೆಹಲಿಯ ಹೆದ್ದಾರಿ ಮಂತ್ರ್ರಾಲಯದಲ್ಲಿ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ೩೦ ಕಿಮೀ ರಸ್ತೆಯನ್ನು ಷಟ್ಪಥ ರಸ್ತೆಯನ್ನಾಗಿ … Continued

ರಾಜ್ಯಪಾಲರ ಕಚೇರಿ ಖಚಿತ ಪಡಿಸದ ಕಾರಣ ಗೊಂದಲ

ಮುಂಬೈ: ಸರಕಾರಿ ವಿಮಾನ ಬಳಕೆಯನ್ನು ರಾಜಭವನ ಸಚಿವಾಲಯ ಖಚಿತಪಡಿಸದ ಕಾರಣದಿಂದಾಗಿಯೇ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರ ಉತ್ತರಾಖಂಡ ಪ್ರಯಾಣಕ್ಕೆ ವಿಳಂಬವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ತಿಳಿಸಿದೆ.. ಉತ್ತರಾಖಂಡದ ಡೆಹ್ರಾಡೂನ್‌ಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ ಸಂವಹನ ಕೊರತೆಯಿಂದಾಗಿ ರಾಜ್ಯಪಾಲರು ಸರಕಾರಿ ವಿಮಾನದಲ್ಲಿ ತೆರಳಲು ಸಾಧ್ಯವಾಗಲಿಲ್ಲ. ರಾಜ್ಯಪಾಲರು ವಿಮಾನ ಹತ್ತುವ ಮುನ್ನ ಅನುಮತಿಗಾಗಿ ಕೋರಲಾಗಿತ್ತು. … Continued

ರಾಜ ಭವನ ಚಲೋ ವೇಳೆ ಕೊಲ್ಕತ್ತಾದಲ್ಲಿ ಹಿಂಸಾಚಾರ

ಕೊಲ್ಕತ್ತ: ಎಡ ಪಕ್ಷಗಳ ವಿದ್ಯಾರ್ಥಿಗಳ ಸಂಘಟನೆ ಆಯೋಜಿಸಿದ್ದ ರಾಜಭವನ ಚಲೋ ಮೆರವಣಿಗೆಯಲ್ಲಿ  ಕೊಲ್ಕತ್ತಾದಲ್ಲಿ ಹಿಂಸಾಚಾರ ನಡೆದಿದೆ. ತೃಣಮೂಲ ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ವಿರೋಧಿಸಿ ಯುವಕರಿಗೆ “ಉದ್ಯೋಗ” ನೀಡುವಂತೆ ಒತ್ತಾಯಿಸಲು ರಾಜಭವನ ಚಲೋ ಹಮ್ಮಿಕೊಳ್ಳಲಾಗಿತ್ತು.ಅಲ್ಲದೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎದುರು ಕೆಂಪು ಕಾರ್ಡ್‌ ಪ್ರದರ್ಶಿಸುವುದು ಅವರ ಉದ್ದೇಶವಾಗಿತ್ತು. ಕೋಲ್ಕತ್ತದಡೊರಿನಾ ಕ್ರಾಸಿಂಗ್‌ನಲ್ಲಿ ಹಿಂಸಾಚಾರ ಆರಂಭಗೊಂಡ ನಂತರ ಪ್ರತಿಭಟನಾ ನಿರತರನ್ನು … Continued

ಸಿರಿವಂತರಿಂದ ಸಿರಿವಂತರಿಗಾಗಿ ಸಿರಿವಂತರು ಮಂಡಿಸಿದ ಬಜೆಟ್‌

ನವದೆಹಲಿ: ಇತ್ತೀಚಿಗೆ ಮಂಡಿಸಲಾದ ಆಯವ್ಯಯ ಕುರಿತು ನಿರಾಸೆ ವ್ಯಕ್ತಪಡಿಸಿದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ, ಪ್ರಸ್ತುತ ಬಜೆಟ್‌ ಸಿರಿವಂತರಿಂದ ಸಿರಿವಂತರಿಗಾಗಿ ಸಿರಿವಂತರು ಮಂಡಿಸಿದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರು ರಾಜ್ಯಸಭೆಯಲ್ಲಿ ಬಜೆಟ್‌ ಕುರಿತ ಚರ್ಚೆಯಲ್ಲಿ ಮಾತನಾಡಿ, ಪ್ರಸ್ತುತ ಬಜೆಟ್‌ ಆರ್ಥಿಕತೆಯನ್ನು ಸ್ಪರ್ಧಾತ್ಮಕವಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ದೂಷಿಸಿದರು. ಬಜೆಟ್‌ನಲ್ಲಿ ಬಡವರಿಗಾಗಿ ಏನೂ ಇಲ್ಲ. ಬಡವರು ಬಡತನದಲ್ಲಿಯೇ … Continued

ಸರ್ಕಾರಿ ವಿಮಾನದಲ್ಲಿ ರಾಜ್ಯಪಾಲರ ಪ್ರಯಾಣಕ್ಕೆ ಅನುಮತಿ ಕೊಡದ ಮಹಾ ಸರ್ಕಾರ

ಮುಂಬೈ: ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಸರ್ಕಾರಿ ವಿಮಾನದಲ್ಲಿ ತೆರಳುವುದಕ್ಕೆ ಮಹಾರಾಷ್ಟ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಫೆ.11ರಂದು ರಾಜ್ಯಪಾಲ ಕೋಶಿಯಾರಿಯವರು ಉತ್ತರಾಖಂಡ್ ನ ಡೆಹ್ರಾಡೂನ್ ಗೆ ಪ್ರಯಾಣ ಮಾಡಬೇಕಿತ್ತು, ಇದಕ್ಕಾಗಿ ಸರ್ಕಾರಿ ವಿಮಾನವನ್ನೂ ಕಾಯ್ದಿರಿಸಲಾಗಿತ್ತು. ಆದರೆ ರಾಜ್ಯಪಾಲರಿಗೆ ಅನುಮತಿ ಸಿಗದ ಕಾರಣ ವಾಣಿಜ್ಯ ಪ್ರಯಾಣಿಕರ ವಿಮಾನವನ್ನೇ ಬಳಸಿ ಪ್ರಯಾಣ ಮಾಡಿದ್ದಾರೆ. ಬಿಜೆಪಿ ಈ … Continued