ಎಚ್‌ಎಎಲ್‌:ಮತ್ತೊಂದು ಯುದ್ಧವಿಮಾನ ಉತ್ಪಾದನಾ ಘಟಕ ಲೋಕಾರ್ಪಣೆ

ಬೆಂಗಳೂರು: ರಕ್ಷಣಾ ಸಚಿವ ರಾಜನಾಥ ಸಿಂಗ್‌ ಇಲ್ಲಿನ ಹಿಂದೂಸ್ಥಾನ ಏರೊನಾಟಿಕ್ಸ್‌ ಲಿಮಿಟೆಡ್‌ನಲ್ಲಿ ದ್ವಿತೀಯ ಯುದ್ಧವಿಮಾನ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಯುದ್ಧವಿಮಾನ ಉತ್ಪಾದನೆ ದ್ವಿಗುಣಗೊಳಿಸುವ ಗುರಿ ಹೊಂದಲಾಗಿದ್ದು, ಭಾರತೀಯ ಫೈಟರ್ಜೆ‌ಟ್‌ ಎಲ್‌ಸಿಎ ತೇಜಸ್‌ ಉತ್ಪಾದನೆಯನ್ನು ಪ್ರತಿ ವರ್ಷಕ್ಕೆ ೧೬ಕ್ಕೆ ಹೆಚ್ಚಿಸಲಾಗುವುದು ಎಂದರು. ನಾವು ಯುದ್ಧ ವಿಮಾನಗಳಿಗಾಗಿ ಅನ್ಯ ದೇಶಗಳನ್ನು ಅವಲಂಬಿಸುವುದಿಲ್ಲ ಎಂದು ಅವರು … Continued

ಟಿಎಂಸಿಯಿಂದ ಬಿಜೆಪಿಗೆ ಸಾಮೂಹಿಕ ವಲಸೆ ತಡೆಗೆ ನಿರ್ಧಾರ

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ನಿಂದ  ಬಿಜೆಪಿಗೆ ಸಾಮೂಹಿಕ ವಲಸೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿರು ತಮ್ಮ ಪಕ್ಷ ಆಡಳಿತ ಪಕ್ಷದ “ಬಿʼ ಟೀಮ್‌ ಆಗಲು ಇಷ್ಟಪಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಮುಂದೆ ಪಕ್ಷದ ಸ್ಥಳಿಯ  ಮುಖಂಡರ ಸಲಹೆ ಪಡೆದುಕೊಂಡು ಆಯ್ಕೆ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಬಿಜೆಪಿ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗಿಯ ತಿಳಿಸಿದ್ದಾರೆ. ತೃಣಮೂಲ ಕಾಂಗ್ರೆಸ್‌ … Continued

ಗ್ರಾಪಂಗೆ ಸತಿ ಅಧ್ಯಕ್ಷೆ ಪತಿ ಉಪಾಧ್ಯಕ್ಷ

ಹುಬ್ಬಳ್ಳಿ: ಗ್ರಾಮ ಪಂಚಾಯತ ಚುನಾವಣೆಯಲ್ಲಿ ಜಯ ಸಾಧಿಸಿದ್ದ ದಂಪತಿಗಳಿಬ್ಬರು ಒಂದೇ ಗ್ರಾಮ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಗಮನ ಸೆಳೆದಿದ್ದಾರೆ. ತಾಲೂಕಿನ ವರೂರು ಗ್ರಾಮ ಪಂಚಾಯತಿಯ ಅಧ್ಯಕ್ಷೆಯಾಗಿ ವಿಶಾಲಾಕ್ಷಿ ಚನ್ನಬಸನಗೌಡ ಚನ್ನಬಸನಗೌಡರ ಅವಿರೋಧವಾಗಿ ಆಯ್ಕೆಯಾದರೆ, ಚನ್ನಬಸನಗೌಡ ಚನ್ನಬಸನಗೌಡರ ಕೂಡ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ವಿಶೇಷ. ವಿಶಾಲಾಕ್ಷಿ ೧ನೇ ವಾರ್ಡ್‌ ನಿಂದ ಆಯ್ಕೆಯಾದರೆ, ಚನ್ನಬಸನಗೌಡ ೨ನೇ ವಾರ್ಡ್‌ನಿಂದ … Continued

ಬಾದಲ್‌ ಮೇಲೆ ದಾಳಿ: ಕಾಂಗ್ರೆಸ್‌ ಶಾಸಕ ಸೇರಿ ೬೦ ಜನರ ಮೇಲೆ ಎಫ್‌ಐಆರ್‌

ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರ ಬೆಂಗಾವಲು ಕಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ರಮಿಂದರ್ ಸಿಂಗ್ ಅವ್ಲಾ, ಅವರ ಪುತ್ರ ಮತ್ತು ಹೆಸರಿಸದ ಇತರ 60 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕಾಂಗ್ರೆಸ್ ಮತ್ತು ಎಸ್‌ಎಡಿ ಪಕ್ಷದ ಕಾರ್ಯಕರ್ತರ ನಡುವೆ ದೊಡ್ಡ ಘರ್ಷಣೆಗಳು ಸಂಭವಿಸಿದ ಕೆಲವೇ ಗಂಟೆಗಳ … Continued

ವ್ಯಾಟ್ಸಪ್‌ ನೂತನ ಖಾಸಗಿ ನೀತಿ: ಕೇಂದ್ರದ ನಿಲುವು ಕೇಳಿದ ಹೈಕೋರ್ಟ್‌

ದೆಹಲಿ: ವ್ಯಾಟ್ಸಪ್‌ನ ನೂತನ ಖಾಸಗಿ ನೀತಿ ಕುರಿತು ತನ್ನ ನಿಲುವು ತಿಳಿಸುವಂತೆ  ದೆಹಲಿ ಹೈ ಕೋರ್ಟ್‌‌   ಕೇಂದ್ರ ಸರಕಾರಕ್ಕೆ ಸೂಚಿಸಿದೆ. ವ್ಯಾಟ್ಸಪ್‌ ಬಳಕೆದಾರರು   ತಮ್ಮ ವೈಯಕ್ತಿಕ ಮಾಹಿತಿಯನ್ನು ಕಡ್ಡಾಯವಾಗಿ ಹಂಚಿಕೊಳ್ಳಬೇಕೆಂಬ ನೀತಿಯನ್ನು ಖಂಡಿಸಿ ಸಲ್ಲಿಸಲಾದ ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ನೀಡಿದೆ.  

ದೇಶದ ರಕ್ಷಣೆ ವಿಚಾರದಲ್ಲಿ ನಮ್ಮ ಸಂಕಲ್ಪ ದೃಢ:ರಾಜನಾಥ

ಬೆಂಗಳೂರು:  ಕೆಲ ನರೆಹೊರೆಯ ರಾಷ್ಟ್ರಗಳ ಗಡಿರೇಖೆ ಬದಲಿಸುವ ದುರದೃಷ್ಟಕರ ಪ್ರಯತ್ನಗಳಿಗೆ ಭಾರತ ಸಾಕ್ಷಿಯಾಗಿದೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಪೂರ್ವ ಲಡಾಕ್‌ನಲ್ಲಿ ಚೀನಾದೊಂದಿಗಿನ ದೀರ್ಘಕಾಲದ ಗಡಿರೇಖೆ ಉಲ್ಲೇಖಿಸಿ ಹೇಳಿದರು. ಬೆಂಗಳೂರಿನಲ್ಲಿ ದ್ವೈವಾರ್ಷಿಕ ಏರೋ ಇಂಡಿಯಾ-೨೦೨೧ ಉದ್ಘಾಟಿಸಿ ಅವರು ಮಾತನಾಡಿದರು. ಭಾರತವು  ಗಡಿ ವಿಚಾರದಲ್ಲಿ  ಜಾಗರೂಕವಾಗಿದೆ ಮತ್ತು ದೇಶದ ಜನರು ಹಾಗೂ ದೇಶದ  ಸಮಗ್ರತೆಯನ್ನು … Continued

ಪಿಎಸ್‌ ಬ್ಯಾಂಕುಗಳ ಖಾಸಗೀಕರಣಕ್ಕೆ ಮುನ್ನುಡಿ..?

ಮುಂಬೈ: ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್‌ಬಿ) ಖಾಸಗೀಕರಣ ಆರಂಭವಾದಂತೆ ತೊರುತ್ತಿದೆ. ಕೇಂದ್ರ ಸರ್ಕಾರವು ಒಂದು ಸಾಮಾನ್ಯ ವಿಮಾ ಕಂಪನಿಯ ಹೊರತಾಗಿ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ತನ್ನ ಪಾಲನ್ನು ತ್ಯಜಿಸಲಿದೆ ಎಂದು  ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಸೋಮವಾರ ಪ್ರಕಟಿಸಿದ್ದಾರೆ.  ಇದಲ್ಲದೆ, ಐಡಿಬಿಐ ಬ್ಯಾಂಕಿನ ಹೂಡಿಕೆ ಪ್ರಕ್ರಿಯೆ  ಮುಂದಿನ ಹಣಕಾಸು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಸರ್ಕಾರವು ಖಾಸಗೀಕರಣಗೊಳಿಸಲು … Continued

ರೈತರ ಪ್ರತಿಭಟನೆ:ರಾಜ್ಯಸಭೆಯಲ್ಲಿ ಚರ್ಚೆಗೆ ೫ ತಾಸು ನಿಗದಿ

ನವ ದೆಹಲಿ: ದೇಶದಲ್ಲಿ ನಡೆಯುತ್ತಿರುವ   ರೈತರ ಪ್ರತಿಭಟನೆ ಬಗ್ಗೆ ಸಂಬಂಧ ಪಟ್ಟ ಪಕ್ಷಗಳು ಪ್ರಸ್ತಾಪಿಸುವಂತೆ ಮತ್ತು ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಐದು ತಾಸು ಸಮಯಾವಕಾಶ ನೀಡುವುದಕ್ಕೆ ರಾಜ್ಯಸಭೆಯಲ್ಲಿ ಬುಧವಾರ ಸರ್ಕಾರ ಮತ್ತು ವಿರೋಧ ಪಕ್ಷಗಳ ಸದಸ್ಯರು ಸಹಮತಕ್ಕೆ ಬಂದಿದ್ದಾರೆ. ಆದರೂ, ರೈತರ ಪ್ರತಿಭಟನೆ, ನೂತನ ಕೃಷಿ ಕಾಯ್ದೆ ಬಗ್ಗೆ ಚರ್ಚೆ ಆರಂಭವಾಗುವ ಮುನ್ನ ಸದನದಲ್ಲಿದ್ದ … Continued

ದೇಶದಲ್ಲಿ ೧೧,೦೩೯ ಜನರಿಗೆ ಕೊರೋನಾ ಪಾಸಿಟಿವ್‌, ೧೧೦ ಸಾವು

ನವ ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ  11,039 ಹೊಸ  ಕೊರೋನಾ ವೈರಸ್ಪ್ರ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ  ಎಂದು ಕೇಂದ್ರ ಆರೋಗ್ಯ ಸಚಿವಾಲಯ  ಬುಧವಾರ ಬೆಳಿಗ್ಗೆ ತಿಳಿಸಿದೆ. ಇದರೊಂದಿಗೆ ಪ್ಯಾನ್-ಇಂಡಿಯಾ ಒಟ್ಟಾರೆ ಪ್ರಕರಣ 1,07,77, 284 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು ಇಳಿಮೂಕವಾಗುತ್ತಿದ್ದು, ದೇಶದಲ್ಲಿ ಒಟ್ಟಾರೆ   1,60,057 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದೆ. ಈ … Continued

ಸೇತುವೆ ನಿರ್ಮಿಸಬೇಕೇ ಹೊರತು ಗೋಡೆಗಳನ್ನಲ್ಲ:ರಾಹುಲ್‌

ನವ ದೆಹಲಿ: ದೆಹಲಿ ಸಿಂಗು ಗಡಿಯಲ್ಲಿ ರೈತರು ನಡೆಸುತ್ತಿರುವ ಆಂದೋಲನ ಸ್ಥಳದಲ್ಲಿ ಪೊಲೀಸರು  ಬ್ಯಾರಿಕೇಡ್‍ಗಳು ಮತ್ತು ರಸ್ತೆ ತಡೆಗಳನ್ನು ನಿರ್ಮಿಸುತ್ತಿರುವುದನ್ನು  ಕಾಂಗ್ರೆಸ್‌ ನಾಯಕ   ರಾಹುಲ್ ಗಾಂಧಿ ಖಂಡಿಸಿದ್ದಾರೆ. , ಕೇಂದ್ರ ಸರ್ಕಾರ ರೈತರ ನಡುವೆ ಸೇತುವೆಗಳನ್ನು ನಿರ್ಮಿಸಬೇಕೇ  ಹೊರತು ಈ ರೀತಿ ಗೋಡೆಗಳನ್ನು ನಿರ್ಮಿಸುವುದಲ್ಲ ಎಂದು ರಾಹುಲ್‌ ಹೇಳಿದ್ದಾರೆ. ದೆಹಲಿ ಗಡಿ ಪ್ರದೇಶಗಳಲ್ಲಿ ಪೊಲೀಸರು ಭದ್ರತೆ … Continued