ಸೇನಾ ಹಿಂತೆಗೆತ ಒಪ್ಪಂದದಲ್ಲಿ ಭಾರತ ಯಾವುದೇ ಭೂಪ್ರದೇಶ ಕಳೆದುಕೊಂಡಿಲ್ಲ: ಸರ್ಕಾರ

ನವ ದೆಹಲಿ: ಪೂರ್ವ ಲಡಾಖ್‌ನ ಪಾಂಗೊಂಗ್ ಸರೋವರ ಪ್ರದೇಶಗಳಲ್ಲಿ ಚೀನಾದೊಂದಿಗೆ ಅಂತಿಮಗೊಳಿಸಿದ ಸೈನ್ಯ ಹಿಂತೆಗೆತದ ಒಪ್ಪಂದದಲ್ಲಿ ಭಾರತವು ಯಾವುದೇ ಭೂಪ್ರದೇಶವನ್ನೂ ಕಳೆದುಕೊಂಡಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸೈನ್ಯ ಹಿಂತೆಗೆತದ ಒಪ್ಪಂದದಲ್ಲಿ ಭಾರತೀಯ ಭೂಪ್ರದೇಶವನ್ನು ಚೀನಿಯರಿಗೆ ಬಿಟ್ಟುಕೊಟ್ಟಿದ್ದಾರೆ ಎಂದು ಶುಕ್ರವಾರ ರಾಹುಲ್‌ ಗಾಂಧಿ ಮಾಡಿದ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವಾಲಯವು, ದೇಶದ ರಾಷ್ಟ್ರೀಯ ಹಿತಾಸಕ್ತಿ ಹಾಗೂ … Continued

ರಾಜ್ಯಸಭೆಯಲ್ಲಿಯೇ ಸಂಸದ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ ದಿನೇಶ ತ್ರಿವೇದಿ

ನವ ದೆಹಲಿ: ಕೇಂದ್ರ ರೈಲ್ವೆ ಮಾಜಿ ಸಚಿವ ಮತ್ತು ರಾಜ್ಯಸಭಾ ಹಿರಿಯ ಸಂಸದ ದಿನೇಶ್ ತ್ರಿವೇದಿ ರಾಜ್ಯಸಭೆಗೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ. ಅವರು ಈ ನಿರ್ಧಾರವನ್ನು ರಾಜ್ಯಸಭೆಯಲ್ಲಿಯೇ ಪ್ರಕಟಿಸಿದರು. ಬಂಗಾಳದ ಮೇರು ನಾಯಕರಾದ ಸುವೇಂದು ಅಧಿಕಾರಿ, ಸಚಿವ ರಾಜೀವ್‌ ಬ್ಯಾನರ್ಜಿ ಮತ್ತು ಕೆಲವು ತೃಣಮೂಲ ಕಾಂಗ್ರೆಸ್ ಶಾಸಕರು ಪಶ್ಚಿಮ ಬಂಗಾಳದಲ್ಲಿ ಆಡಳಿತ ಪಕ್ಷ ತೃಣ ಮೂಲ … Continued

ಇಸ್ರೋ ಸೌಲಭ್ಯ ಬಳಕೆಗೆ ಖಾಸಗಿ ಸಂಸ್ಥೆಗಳಿಗೆ ಅವಕಾಶ…!

ಬೆಂಗಳೂರು: ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಈಗ ತನ್ನ ಉಪಗ್ರಹ ಕೇಂದ್ರವನ್ನು ಖಾಸಗಿ ಸಂಸ್ಥೆಗಳಿಗೆ ತೆರೆದಿದೆ. ಈಗಾಗಲೇ ಖಾಸಗಿ ಕಂಪನಿಗಳ ಎರಡು ಉಪಗ್ರಹಗಳನ್ನು ಹಾಗೂ ಅಕಾಡೆಮಿಯ ಒಂದು ಉಪಗ್ರಹವನ್ನು ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ (ಯುಆರ್‍ಎಸ್‍ಸಿ) ಪರೀಕ್ಷಿಸಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ಎರಡು ಖಾಸಗಿ ಕಂಪನಿಗಳು ತಮ್ಮ ಎಂಜಿನ್‍ಗಳನ್ನು … Continued

ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ

ನವ ದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕರ್ಜುನ್ ಖರ್ಗೆ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಲಿದ್ದಾರೆ. ಗುಲಾಂ ನಬಿ ಆಜಾದ್‌ ನಿವೃತ್ತಿಯ ನಂತರ, ರಾಜ್ಯಸಭಾ ಚೇರ್ಮನ್‌ ಎಂ.ವೆಂಕಯ್ಯ ನಾಯ್ಡು ಅವರಿಗೆ ಕಾಂಗ್ರೆಸ್‌ ಪಕ್ಷವು ಪ್ರತಿಪಕ್ಷದ ನಾಯಕರನ್ನಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಕ ಮಾಡುವಂತೆ ಪತ್ರ ಬರೆದಿತ್ತು, ಫೆಬ್ರವರಿ 15 ರಂದು ರಾಜ್ಯಸಭಾ ಸದಸ್ಯರಾಗಿ ಆಜಾದ್ ಅವರ … Continued

ಭಾರತದ ಭೂಪ್ರದೇಶ ಚೀನಾಕ್ಕೆ ನೀಡಿದ ಹೇಡಿ: ಪ್ರಧಾನಿ ಮೋದಿಗೆ ಜರೆದ ರಾಹುಲ್‌

ನವ ದೆಹಲಿ: ಪೂರ್ವ ಲಡಾಖ್‌ನ ಪಾಂಗೊಂಗ್‌ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿ ಭಾರತ ಮತ್ತು ಚೀನಾ ಸೇನಾ ಹಿಂತೆಗೆತದ ಕುರಿತು ಒಪ್ಪಂದ ಮಾಡಿಕೊಂಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಘೋಷಿಸಿದ ಒಂದು ದಿನದ ನಂತರ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭೂಪ್ರದೇಶವನ್ನು … Continued

ಸುಳ್ಳು ಸುದ್ದಿ ಪರಿಶೀಲನಾ ಕಾರ್ಯವಿಧಾನ ಮಾಹಿತಿ ಕೋರಿ ಅರ್ಜಿ: ಕೇಂದ್ರ ಸರ್ಕಾರ, ಟ್ವಿಟ್ಟರ್‌ಗೆ ಸುಪ್ರೀಂ ಕೋರ್ಟ್‌ ನೋಟಿಸ್‌

ನವ ದೆಹಲಿ: ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಮತ್ತು ಟ್ವಿಟರ್ಗೆ ನೋಟಿಸ್ ನೀಡಿದೆ. ನಕಲಿ ಸುದ್ದಿಗಳ ಮೂಲಕ ದ್ವೇಷ ಹರಡುವ ಮತ್ತು ನಕಲಿ ಖಾತೆಗಳ ಮೂಲಕ ಪ್ರಚೋದನೆ ಮಾಡುವ ಸಂದೇಶಗಳನ್ನು ಪರಿಶೀಲಿಸಲು ಟ್ವಿಟ್ಟರ್‌ ನಕಲಿ ಸುದ್ದಿಗಳನ್ನು ಯಾವ ರೀತಿ ಪರಿಶೀಲಿಸುವ ಕಾರ್ಯವಿಧಾನ ಎಂಬುದನ್ನು ಕೋರಿ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರ ಹಾಗೂ … Continued

ಎಲ್ಲರೂ ಲಸಿಕೆ ಪಡೆದ ನಂತರ ಬಂಗಾಳದಲ್ಲಿ ಸಿಎಎ ಜಾರಿ: ಅಮಿತ್‌ ಶಾ

ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಅನುಷ್ಠಾನಕ್ಕೆ ಸಂಬಂಧಿಸಿದ ಊಹಾಪೋಹಗಳಿಗೆ ಅಂತ್ಯ ಹಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಠಾಕೂರ್‌ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ದೇಶದ ಪ್ರತಿಯೊಬ್ಬರಿಗೂ ಕೊರೋನಾ ಲಸಿಕೆ ಹಾಕಿದ ನಂತರ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಿಎಎ ಜಾರಿಗೆ ತರಲಿದೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಮಾಟುವಾಸ್ ಮತ್ತು … Continued

ಸಂಸದ ಸುಖ್ ರಾಮ್ ಸಿಂಗ್ ಯಾದವ್ ಟ್ವಿಟ್ಟರ್‌ಗೆ ತಡೆ

ನವದೆಹಲಿ: ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಚೌಧರಿ ಸುಖ್ ರಾಮ್ ಸಿಂಗ್ ಯಾದವ್ ಅವರ ಟ್ವೀಟ್ ಖಾತೆಯನ್ನು ತಡೆಹಿಡಿಯಲಾಗಿದೆ.. ಈ ಬಗ್ಗೆ ಮಾಹಿತಿ ಉತ್ತರ ಪ್ರದೇಶ ಸಂಸದ ಸುಖ ರಾಮ್‌ ಸಿಂಗ್‌ ಅವರೇ ಹೇಳಿದ್ದಾರೆ. ಭಾರತದಲ್ಲಿ ಟ್ವಿಟರ್ ತಡೆ ಹಿಡಿದಿರುವ ಹೈ ಪ್ರೊಫೈಲ್ ಖಾತೆಗಳ ಪೈಕಿ ಇದೂ ಒಂದಾಗಿದೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು … Continued

ಮಿತಿ ಹೆಚ್ಚಳ: ವಿಮಾನ ಪ್ರಯಾಣ ಈಗ ದುಬಾರಿ

ನವ ದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಗುರುವಾರ ದೇಶೀಯ ವಿಮಾನಗಳ ಮೇಲಿನ ಮಿತಿಗಳನ್ನು ಶೇಕಡಾ 10 ರಿಂದ 30 ರಷ್ಟು ಹೆಚ್ಚಿಸಿರುವುದರಿಂದ ಪ್ರಯಾಣಿಕರು ಈಗಿನಿಂದ ವಿಮಾನ ಪ್ರಯಾಣಕ್ಕಾಗಿ ಹೆಚ್ಚಿನ ಹಣ ತೆರಬೇಕಾಗುತ್ತದೆ. ಈ ಹೊಸ ಮಿತಿಗಳು “ಮಾರ್ಚ್ 31, 2021 ರ ವರೆಗೆ ಅಥವಾ ಮುಂದಿನ ಆದೇಶದ ವರೆಗೆ” ಜಾರಿಯಲ್ಲಿರುತ್ತವೆ ಎಂದು ಸಚಿವಾಲಯ ಗುರುವಾರ ತನ್ನ … Continued

ಕೃಷಿ ಕಾನೂನಿಂದ ಮಂಡಿ ವ್ಯವಸ್ಥೆ, ರೈತರ ಹಿತಕ್ಕೆ ಧಕ್ಕೆ: ರಾಹುಲ್‌ ವಾಗ್ದಾಳಿ

ನವ ದೆಹಲಿ: ವಿವಾದಾತ್ಮಕ ಕೃಷಿ ಕಾನೂನುಗಳ ಬಗ್ಗೆ ಲೋಕಸಭೆಯಲ್ಲಿ ಕೇಂದ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಕಾನೂನುಗಳು “ರೈತರು, ಸಣ್ಣ, ಮಧ್ಯಮ ಉದ್ಯಮಿಗಳು ಮತ್ತು ಮಂಡಿಗಳನ್ನು ನಾಶ ಪಡಿಸಲು” ಉದ್ದೇಶಿಸಿದಂತಿದೆ ಎಂದು ಆರೋಪಿಸಿದರು. ಈ ಸರ್ಕಾರ ಕೇವಲ ನಾಲ್ಕು ಜನರಿಂದ ನಡೆಯುವಂತಿದೆ. ಅದು ಹಮ್‌ ದೋ, ಹಮಾರೆ … Continued