ಹೊರಗಿನ ಕೆಲವರಿಂದ ದೇಶದ ಘನತೆಗೆ ಧಕ್ಕೆ: ಮೋದಿ

ಸೋನಿತ್‌ಪುರ (ಆಸ್ಸಾಮ್):‌ ದೇಶದ ಹೊರಗಿರುವ ಕೆಲವರು ದೇಶದ ಘನತೆಗೆ ಕಳಂಕತರುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ರಸ್ತೆ ಅಭಿವೃದ್ಧಿ ಯೋಜನೆ ಅಸೋಮ್‌ ಮಾಲಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೆಲ ವ್ಯಕ್ತಿಗಳು ನಮ್ಮ ದೇಶದ ಘನತೆಯನ್ನು ಹಾಳು ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ರಾಷ್ಟ್ರದ ಸಂಸ್ಕೃತಿಗೆ ಚ್ಯುತಿ ತರುತ್ತಿರುವ ಕುರಿತು ಕೆಲ … Continued

ಶ್ರೀಲಂಕಾ ಬಂದರು ಅಭಿವೃದ್ಧಿಗೆ ಅದಾನಿ ಹೂಡಿಕೆಗೆ ಆಸಕ್ತಿ

ನವದೆಹಲಿ: ಭಾರತದ ಹೂಡಿಕೆದಾರ ಸಂಸ್ಥೆ ಅದಾನಿ ಗ್ರೂಪ್‌ ವೆಸ್ಟ್‌ ಕಂಟೇನರ್‌ ಟರ್ಮಿನಲ್‌ ನಿರ್ಮಾಣದಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿದೆ ಎಂದು ಶ್ರೀಲಂಕಾದ ಸಚಿವರೊಬ್ಬರು ತಿಳಿಸಿದ್ದಾರೆ. ಕೊಲಂಬೊ ಬಂದರಿನ ಈಸ್ಟ್‌ ಕಂಟೇನರ್‌ ಟರ್ಮಿನಲ್‌ (ಇಸಿಟಿ) ನಿರ್ಮಾಣ ಕುರಿತು ಭಾರತ ಹಾಗೂ ಜಪಾನ್‌ ಜೊತೆಗಿನ ಒಪ್ಪಂದವನ್ನು ಶ್ರೀಲಂಕಾ ರದ್ದುಪಡಿಸಿರುವುದು ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. … Continued

ರೈತರ ಚಕ್‌ ಜಾಮ್‌ ನಂತರ ದೆಹಲಿ ಗಡಿಗಳಲ್ಲಿ ಹೆಚ್ಚಿದ ಭದ್ರತೆ

ದೆಹಲಿ: ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ರೈತರು ಶನಿವಾರ ದೇಶವ್ಯಾಪಿ ಚಕ್ಜಾಮ್ ‌ ನಡೆಸಿದ ನಂತರ ದೆಹಲಿಯ ಎಲ್ಲ ಗಡಿಗಳಲ್ಲಿ ಭದ್ರತೆ ಇನ್ನಷ್ಟು ತೀವ್ರಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯನ್ನು ಹರಿಯಾಣದೊಂದಿಗೆ ಸಂಪರ್ಕಿಸುವ ಟಿಕ್ರಿ ಗಡಿಯಲ್ಲಿ ಪೋಲಿಸ್ ಮತ್ತು ಅರೆಸೈನಿಕ ಪಡೆಗಳ ಭಾರಿ ನಿಯೋಜನೆ ಕಂಡುಬಂದಿದೆ. ಜೊತೆಗೆ ದೆಹಲಿಯನ್ನು ಉತ್ತರ ಪ್ರದೇಶಕ್ಕೆ ಸಂಪರ್ಕಿಸುವ ಗಾಜಿಪುರ ಗಡಿಯಲ್ಲಿಯೂ ಭದ್ರತೆ … Continued

ಕೇರಳ ಚುನಾವಣೆಯಲ್ಲಿ ಶಬರಿಮಲೆ ಕಾರ್ಡ್‌ ಬಳಸಲು ಕಾಂಗ್ರೆಸ್‌ ಚಿಂತನೆ

ಮುಂಬರಲಿರುವ ಕೇರಳ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶಬರಿಮಲೆ ಕಾರ್ಡ್‌ ಬಳಸಲು ಕಾಂಗ್ರೆಸ್‌ ಮುಂದಾಗಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಯುಡಿಎಫ್ ಅಧಿಕಾರಕ್ಕೆ ಬಂದರೆ ಶಬರಿಮಲೆ ದೇವಾಲಯದ ಪದ್ಧತಿಗಳ ರಕ್ಷಣೆಗೆ ಕಾನೂನನ್ನು ಜಾರಿಗೆ ತರಲಿದೆ ಎಂದು ಹೇಳಿದರು. ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ತಿರುವಂಚೂರು ರಾಧಾಕೃಷ್ಣನ್ ಬಿಡುಗಡೆ ಮಾಡಿದ ‘ಕರಡು ಪ್ರತಿಯಲ್ಲಿ ಶಬರಿಮಲೆ ದೇವಾಲಯದ … Continued

ಭಿಂದ್ರನ್‌‌ವಾಲೆಗೆ ಹೋಲುವ ಭಾವಚಿತ್ರದ ಧ್ವಜ ಪ್ರದರ್ಶನ..ನಿಜವಾದರೆ ಸರಿಯಲ್ಲ ಎಂದ ಟಿಕಾಯಿತ

ಪಂಜಾಬಿನ ಲುಧಿಯಾನದಲ್ಲಿ ನಡೆದ ‘ಚಕ್ಕಾ ಜಾಮ್’ ಪ್ರತಿಭಟನೆಯಲ್ಲಿ ಭಿಂದ್ರಾನ್‌ವಾಲೆಗೆ ಹೋಲುವ ಭಾವಚಿತ್ರವನ್ನು ಹೊಂದಿರುವ ಧ್ವಜವನ್ನು ಟ್ರ್ಯಾಕ್ಟರ್‌ನಲ್ಲಿ ನೋಡಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ಏತನ್ಮಧ್ಯೆ, ಘಟನೆ ಬಗ್ಗೆ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯಿತ್‌ ಪ್ರತಿಕ್ರಿಯಿಸಿದ್ದು, ಅಂತಹ ಕೆಲಸಗಳನ್ನು ಮಾಡಬಾರದು ಎಂದು ಹೇಳಿದ್ದಾರೆ. ಅಲ್ಲದೆ ಅಲ್ಲಿನ ಜನರೊಂದಿಗೆ ಈ ವಿಷಯದ ಬಗ್ಗೆ ಮಾತನಾಡುತ್ತೇನೆ ಎಂದು … Continued

ಕಬ್ಬಿನ ಪ್ರೋತ್ಸಾಹ ಧನ ವಿಳಂಬ: ಯುಪಿ ರೈತರ ಹೋರಾಟ ತೀವ್ರಕ್ಕೆ ಕಾರಣ

ಮುಜಫರನಗರ: ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಕಬ್ಬಿನ ಪ್ರೋತ್ಸಾಹಧನ ಪಾವತಿಯಲ್ಲಿ ವಿಳಂಬವಾಗುತ್ತಿರುವುದು ಕೂಡ ರೈತರ ಹೋರಾಟ ತೀವ್ರಗೊಳ್ಳಲು ಮತ್ತೊಂದು ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂಬುದು ರೈತರ ಆರೋಪವಾಗಿದೆ. ರೈತರ ಆಂದೋಲನ ತೀವ್ರಗೊಂಡ ನಂತರವೇ ಕೆಲ ಭಾಗದ ರೈತರಿಗೆ ಕಬ್ಬಿನ ಹಣ ಪಾವತಿಸಲಾಗಿದೆ. ಇನ್ನೂ ಹಲವು ರೈತರು ನಾಲ್ಕು ತಿಂಗಳುಗಳಿಂದ … Continued

ಡಿಸಿಸಿ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ: ಕಾಶ್ಮೀರ-ಶೋಪಿಯಾನದಲ್ಲಿ ಅಪ್ನಿ ಪಾರ್ಟಿ ಜಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಡಿಸೆಂಬರ್‌ನಲ್ಲಿ ನಡೆದ ಪ್ರಥಮ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯ (ಡಿಡಿಸಿ) ಸಂದರ್ಭದಲ್ಲಿ ಕಾಶ್ಮೀರ ವಿಭಾಗದಲ್ಲಿ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಘೋಷಣೆ (ಪಿಎಜಿಡಿ) ಭರ್ಜರಿ ಜಯ ದಾಖಲಿಸಿದರೂ, ಶನಿವಾರ ಎರಡು ಜಿಲ್ಲೆಗಳ ಅಧ್ಯಕ್ಷ ಸ್ಥಾನದ ಚುನಾವನೆಯಲ್ಲಿ ಅಪ್ನಿ ಪಾರ್ಟಿಗೆ ಅಧ್ಯಕ್ಷ ಸ್ಥಾನ ಕಳೆದುಕೊಂಡು ದೊಡ್ಡ ಹಿನ್ನಡೆ ಅನುಭವಿಸಿತು. 370ನೇ ವಿಧಿಯನ್ನು … Continued

ಕೊರೋನಾ: ೯ ತಿಂಗಳಲ್ಲೇ ಅತ್ಯಂತ ಕಡಿಮೆ ಸಾವು

ಭಾರತದ ಕೊವಿಡ್‌-19 ಪ್ರಕರಣಗಳ ಸಂಖ್ಯೆ 1,08,26,363 ಕ್ಕೆ ಏರಿಕೆಯಾಗಿದ್ದು, ಒಂದು ದಿನದಲ್ಲಿ 12,059 ಹೊಸ ಸೋಂಕುಗಳು ವರದಿಯಾಗಿವೆ. ದೈನಂದಿನ ಸಾವುಗಳು ಈ ತಿಂಗಳ ಮೂರನೇ ಬಾರಿಗೆ 100ಕ್ಕಿಂತ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಭಾನುವಾರ ತಿಳಿಸಿವೆ. 78 ದೈನಂದಿನ ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 1,54,996 ಕ್ಕೆ ಏರಿದೆ, ಇದು ಒಂಬತ್ತು … Continued

ಸೀರಮ್ ಇನ್‌ಸ್ಟಿಟ್ಯೂಟ್ ಬೆಂಕಿ ಅವಘಡ:ಮಧ್ಯಂತರ ವರದಿ ಸಲ್ಲಿಕೆ

ಪುಣೆ: ಜನವರಿ 21 ರಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಆವರಣದಲ್ಲಿ ನಡೆದ ಅಗ್ನಿಶಾಮಕ ಘಟನೆ ಕುರಿತು ನಡೆಸಿದ ತನಿಖೆಯ ಪ್ರಗತಿಯ ಬಗ್ಗೆ ಹಡಪ್ಸರ್ ಪೊಲೀಸ್ ಠಾಣೆ ಪುಣೆ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದ್ದು, ಈ ಘಟನೆಯಲ್ಲಿ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ಲಸಿಕೆ ತಯಾರಕ ಎಸ್‌ಐಐನ ಕ್ಯಾಂಪಸ್‌ಗಳಲ್ಲಿ ಒಂದರೊಳಗೆ … Continued

ಇಗ್ನೊದಿಂದ ಪರಿಸರ ಪ್ರಮಾಣಪತ್ರ ಕೋರ್ಸ್ ಆರಂಭ

ನವ ದೆಹಲಿ: ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿ (ಇಗ್ನೊ) ಪರಿಸರ ಪ್ರಮಾಣಪತ್ರ ಕೋರ್ಸ್ ಪ್ರಾರಂಭಿಸಿತು, ಇದು ಸ್ವಯಮ್ ಪ್ಲಾಟ್‌ಫಾರ್ಮ್ ಮೂಲಕ ಲಭ್ಯವಿರುತ್ತದೆ. 12 ವಾರಗಳ ಕೋರ್ಸ್ ಫೆಬ್ರವರಿ 15 ರಿಂದ ಪ್ರಾರಂಭವಾಗಲಿದೆ. ಇದು ಜೈವಿಕ ವಿಜ್ಞಾನ ಮತ್ತು ಜೈವಿಕ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಮಾಣಪತ್ರ ಮಟ್ಟದ ಕೋರ್ಸ್ ಆಗಿದೆ. ನೈಸರ್ಗಿಕ ಅಪಾಯಗಳು ಮತ್ತು ವಿಪತ್ತುಗಳು ಮತ್ತು … Continued